ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಜೆಪಿ ಪಕ್ಷ ತನ್ನ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು, ಬೈಂದೂರು ಕ್ಷೇತ್ರಕ್ಕೆ ಗುರುರಾಜ ಗಂಟಿಹೊಳೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಈ ಮೂಲಕ ಬೈಂದೂರು ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ಮಿಸ್ ಆಗಿದೆ. ಬೈಂದೂರು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವು ಹೆಸರುಗಳಿದ್ದು ಭಾರಿ ಜಟಾಪಟಿ ಏರ್ಪಟ್ಟಿತ್ತು. ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಅಂತಿಮಗೊಳಿಸಲು ಸಾಧ್ಯವಾಗಿತ್ತು. ಕೊನೆಗೂ ಕಗ್ಗಂಟಾಗಿದ್ದ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆಯಾಗಿದ್ದು, ಚುನಾವಣಾ ಕಣ ರಂಗೇರಲಿದೆ.
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಬಡವರ ಮನೆ ಹುಡುಗನಿಗೆ ಟಿಕೆಟ್ ದೊರೆತಿದೆ ಎಂದು ಸಂದೇಶದೊಂದಿಗಿನ ಪೋಸ್ಟ್ ವೈರಲ್ ಆಗುತ್ತಿದೆ.
ಬೈಂದೂರು ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದಲೂ ರಾಷ್ಟ್ರೀಯ ಪಕ್ಷಗಳ ನಡುವೆ ಹಣಾಹಣಿ ನಡೆಯುತ್ತಿದ್ದು, ಈ ಭಾರಿಯೂ ಕಾಂಗ್ರೆಸ್ ಪಕ್ಷದ ಕೆ. ಗೋಪಾಲ ಪೂಜಾರಿ ಹಾಗೂ ಬಿಜೆಪಿ ಪಕ್ಷದ ಗುರುರಾಜ ಗಂಟಿಹೊಳೆ ಅವರ ನಡುವ ಸ್ಪರ್ಧೆ ಇರಲಿದೆ. ಈ ನಡುವೆ ಟಿಕೆಟ್ ವಂಚಿತ ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೇಗೆ ಚುನಾವಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಕುತೂಹಲವೂ ಇದೆ.
ಇದನ್ನೂ ಓದಿ:
► ಉಡುಪಿ ಜಿಲ್ಲೆಯ ಬೈಂದೂರು ಹೊರತುಪಡಿಸಿ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಘೋಷಣೆ – https://kundapraa.com/?p=65965
► ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ಮಿಸ್ – https://kundapraa.com/?p=65947 .
► ಬಿಜೆಪಿ ಟಿಕೆಟ್: ಕುಂದಾಪುರಕ್ಕೆ ಕೊಡ್ಗಿ ಫೈನಲ್. ಬೈಂದೂರು ಕ್ಷೇತ್ರವಿನ್ನೂ ಕಗ್ಗಂಟು – https://kundapraa.com/?p=65901 .
► ಬೈಂದೂರು ವಿಧಾನಸಭಾ ಕ್ಷೇತ್ರ: ಕಡಲು – ಶಿಖರ ಶ್ರೇಣಿ ನಡುವಿನ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಹಣಾಹಣಿ – https://kundapraa.com/?p=65777 .