ಜೆಇಇ ಮೈನ್ ಫಲಿತಾಂಶ: ಹೆಮ್ಮಾಡಿಯ ಜನತಾ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ 2ನೇ ಫೇಸ್ನ ಅಂತಿಮ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಯುಷ್ ಭೌತಶಾಸ್ತ್ರದಲ್ಲಿ 97 ಪರ್ಸನ್ಟೈಲ್ ಪಡೆದು ಒಟ್ಟು96 ಪರ್ಸನ್ಟೈಲ್ ಪಡೆದಿದ್ದಾನೆ.

Call us

Click Here

ವಿದ್ಯಾರ್ಥಿ ಸುಮಂತ್ ರಸಾಯನಶಾಸ್ತ್ರದಲ್ಲಿ 99.12ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 96ಪರ್ಸನ್ಟೈಲ್ ಹಾಗೂ ಓಂಕಾರ್ ಪ್ರಭು ಒಟ್ಟು 90.04 ,ಪರ್ಸನ್ಟೈಲ್ ಪಡೆದಿದ್ದರೇ, ಹರ್ಷಿತ್ ಖಾರ್ವಿ 88.17 ಪರ್ಸನ್ಟೈಲ್, ತನಿಷಾ 83.5 ಪರ್ಸನ್ಟೈಲ್ ಪಡೆದಿರುತ್ತಾರೆ.

ಪರೀಕ್ಷೆಗೆ ಕುಳಿತ ಕಾಲೇಜಿನ 5 ವಿದ್ಯಾರ್ಥಿಗಳು ಶೇಕಡಾ 100 ಶೇಕಡಾ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply