ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಭಾರತದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಭಾಗವಾಗಿ ಜೆಸಿಐ ಉಪ್ಪುಂದ ವತಿಯಿಂದ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತ ಒಂಬತ್ತು ವರ್ಷಗಳಿಂದ ಮಯ್ಯಾಡಿ ಗ್ರಾಮದಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಶಾರದಾ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ವಲಯ ನಿರ್ದೇಶಕ ನಾಗರಾಜ್ ಪೂಜಾರಿ ಉಜ್ಜೇರಿ, ಪೂರ್ವಾಧ್ಯಕ್ಷ ಪ್ರಕಾಶ್ ಭಟ್, ಹಿರಿಯ ಸದಸ್ಯರಾದ ಮಂಜುನಾಥ್ ದೇವಾಡಿಗ, ಪೂರ್ವ ಅಧ್ಯಕ್ಷರಾದ ಮಂಗೇಶ್ ಶಾನುಭೋಗ್, ಜೆಸಿರೇಟ್ ಅಧ್ಯಕ್ಷ ರೇಖಾ ಜೂನಿಯರ್ ಜೆಸಿ ಅಧ್ಯಕ್ಷೆ ಜೆಜೆಸಿ ನಿಶಾ ಸಂತೋಷ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು. ಪೂರ್ವ ಅಧ್ಯಕ್ಷರಾದ ಸುಬ್ರಮಣ್ಯ ಜಿ. ಸ್ವಾಗತಿಸಿದರು. ಜೆಸಿ ರಮಣಿ ಪರಿಚಯ ವಾಚಿಸಿದರು. ಕಾರ್ಯದರ್ಶಿ ಪುರಂದರ ಧನ್ಯವಾದ ಸಮರ್ಪಿಸಿದರು.










