Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌.ಎಸ್‌.ಎಸ್‌ ನೂತನ ಘಟಕದ ಉದ್ಘಾಟನೆ
    ಕ್ಯಾಂಪಸ್ ಕಾರ್ನರ್

    ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌.ಎಸ್‌.ಎಸ್‌ ನೂತನ ಘಟಕದ ಉದ್ಘಾಟನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕಾರ್ಕಳ:
    ದೇಶಕ್ಕಾಗಿ ನಾವು, ಸೇವೆಗೆ ಸದಾ ಸಿದ್ಧ ಎಂಬ ಘೋಷವಾಕ್ಯದೊಂದಿಗೆ ಕಾರ್ಯಚರಿಸುವ ದೇಶದ ಬಹುದೊಡ್ಡ ಸ್ವಯಂ ಸೇವಕ ಸಂಘಟನೆಯಾದ “ರಾಷ್ಟ್ರೀಯ ಸೇವಾ ಯೋಜನೆ” ಯ ನೂತನ ಘಟಕದ ಉದ್ಘಾಟನೆ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನೆರವೇರಿತು.

    Click Here

    Call us

    Click Here

    ಉದ್ಘಾಟನೆ ನೆರವೇರಿಸಿ ಮಾತನಾಡಿದ ಎನ್‌.ಎಸ್‌.ಎಸ್‌ ರಾಜ್ಯ ಸಂಯೋಜನಾಧಿಕಾರಿ ಡಾ. ಗುಬ್ಬಿಗೂಡು ರಮೇಶ್‌ ಸಿ ಜಿ ಅವರು ಯುವ ಪೀಳಿಗೆಯಲ್ಲಿ ಒಂದು ಉತ್ಕೃಷ್ಟವಾದ ಚೇತನ ಶಕ್ತಿಯಿದೆ. ಸಮಾಜಕ್ಕಾಗಿ ನಾವು ಏನನ್ನಾದರೂ ಮಾಡಬೇಕು. ಅದು ಶಾಶ್ವತವಾಗಿ ಉಳಿಯುವಂತದ್ದಾಗಿರಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸೇವೆಯೆಂಬ ಮಹಾಯಜ್ಞದಲ್ಲಿ ತೊಡಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಎನ್‌.ಎಸ್‌.ಎಸ್‌ ಸ್ವಯಂ ಸೇವಕರಿಗೆ ಕರೆ ನೀಡಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ಶ್ರೀ ರಾಜು ಅವರು ರಾಷ್ಟ್ರೀಯ ಸೇವಾ ಯೋಜನೆಯಿಂದ ಗ್ರಾಮೀಣ ಪ್ರದೇಶ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ. ಇದರಿಂದ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ. ಅಂತಹ ಪುಣ್ಯಕಾರ್ಯದಲ್ಲಿ ನಾವೆಲ್ಲ ಕೈಜೋಡಿಸೋಣ, ಯಾವ ಕೆಲಸವೂ ಕೈಕಟ್ಟಿ ಕುಳಿತರೆ ಮುಂದೆ ಸಾಗುವುದಿಲ್ಲ. ಒಂದೇ ಮನಸ್ಸಿನಿಂದ ಪ್ರಯತ್ನಿಸಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ಹಿತನುಡಿಗಳನ್ನಾಡಿದರು.

    ಮಾನ್ಯತೆ ಮತ್ತು ಅನುದಾನ ವಿಭಾಗದ ಸಹಾಯಕ ನಿರ್ದೇಶಕರಾದ ಮೊಹಮ್ಮದ್‌ ಜಿಯಾಉಲ್ಲಾಖಾನ್‌ ಮಾತನಾಡಿ ಎನ್‌.ಎಸ್‌.ಎಸ್‌ ನ ಗುರಿ ಮತ್ತು ಉದ್ದೇಶಗಳಾದ ಸೇವೆ ಮತ್ತು ಅರ್ಪಣಾ ಮನೋಭಾವ ಎಲ್ಲ ವಿದ್ಯಾರ್ಥಿಗಳೂ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಸಹಾಯಕ ನಿರ್ದೇಶಕರಾದ ಆನಂದ ಪಿ ಅವರು ಜಗತ್ತಿನ ಅನೇಕ ಜಟಿಲ ಸಮಸ್ಯೆಗಳಿಗೂ ಪರಿಹಾರವಿದೆ. ವಿದ್ಯಾರ್ಥಿ ದೆಸೆಯಿಂದಲೇ ಭಿನ್ನವಾಗಿ ಆಲೋಚಿಸುವ ಮತ್ತು ನಾಯಕತ್ವಗುಣವನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.

    ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ಮಾರುತಿ, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ವಿಭಾಗಾಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್‌, ದ.ಕ ಜಿಲ್ಲಾ ಉಪನಿರ್ದೇಶಕರಾದ ಸಿ.ಡಿ.ಜಯಣ್ಣ, ಕ್ರೀಡಾ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ , ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.

    Click here

    Click here

    Click here

    Click Here

    Call us

    Call us

    ಡಾ. ಬಿ. ಗಣನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ಒಂದು ಬಹುಮುಖ್ಯ ಸಂಘಟನಾತ್ಮಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಸಂಘಟನಾ ಮನೋಭಾವ, ಪರಸ್ಪರ ಸಹಕಾರ, ಸಹಬಾಳ್ವೆಯನ್ನು ಬೆಳೆಸಲಿ ಎಂದು ಆಶಿಸಿದರು.

    ಕಾರ್ಯಕ್ರಮದಲ್ಲಿ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಉಪನ್ಯಾಸಕ ವೃಂದ, ಉಪನ್ಯಾಸಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತಿದ್ದರು. ಉಪನ್ಯಾಸಕ ಲೋಹಿತ್‌ ಎಸ್‌.ಕೆ ಕಾರ್ಯಕ್ರಮ ನಿರೂಪಿಸಿದರು, ರಾ.ಸೇ.ಯೋ ಯ ಕಾರ್ಯಕ್ರಮಾಧಿಕಾರಿ ಉಮೇಶ್‌ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು

    21/05/2026

    ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

    20/05/2026

    ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

    20/05/2026
    Leave A Reply Cancel Reply

    fourteen + seventeen =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.