ಲೈಂಗಿಕ ದೌರ್ಜನ್ಯ ಆರೋಪಿ ವೈದ್ಯ ಡಾ. ರಾಬರ್ಟ್‌ಗೆ ಜಾಮೀನು ಮಂಜೂರು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಆಸ್ಪತ್ರೆಯ ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ, ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋಗೆ ಶುಕ್ರವಾರ ರಾತ್ರಿ ಜಾಮೀನು ಮಂಜುರಾಗಿದೆ.

Call us

Click Here

ಪ್ರಕರಣ ದಾಖಲಾದ ತಕ್ಷಣ ತಲೆಮರೆಸಿಕೊಂಡಿದ್ದ ವೈದ್ಯ ಮುಂಬಯಿಯ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಇರುವುದನ್ನು ಪತ್ತೆ ಮಾಡಿದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದರು. ಆರೋಪಿಯನ್ನು ಕುಂದಾಪುರಕ್ಕೆ ಕರೆತಂದು ಶುಕ್ರವಾರ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ: ► ಪೋಕ್ಸೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಬಂಧನ – https://kundapraa.com/?p=72895 .

ಆರೋಪಿಯ ಪರ ವಾದಿಸಿದ ವಕೀಲರು, ದೂರು ನೀಡಿರುವ ವೈದ್ಯೆ ಕೆಲಸದ ವೈಷ್ಯಮ್ಯದಿಂದ ಹೀಗೆ ಮಾಡಿದ್ದಾರೆ. ಆಕೆ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ನೋಟಿಸ್ ನೀಡಿದ್ದರು. ಅದೇ ಕಾರಣಕ್ಕೆ ಡಾ. ರಾಬರ್ಟ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾಗಿದೆ.

Leave a Reply