ಶಿರೂರು: ಬೈಂದೂರು ರೋಟರಿ ಕ್ಲಬ್‌ ವತಿಯಿಂದ ಫಲಾನುಭವಿಗೆ ಮನೆ ಹಸ್ತಾಂತರ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಜನೋಪಯೋಗಿ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಅನ್ನುವುದಕ್ಕಿಂದ ಅದರಿಂದ ಯಾರಿಗೆ ಉಪಯೋಗವಾಗುತ್ತದೆ ಎಂಬುದು ಬಹುಮುಖ್ಯ. ಕೈಗೊಳ್ಳುವ ಯೋಜನೆಗಳ ಫಲ ಕಟ್ಟ ಕಡೆಯ ಜನರಿಗೂ ತಲುಪಿದಾಗಲೇ ಅದರಲ್ಲೊಂದು ಸಾರ್ಥಕ ಭಾವ ಮೂಡುತ್ತದೆ ಎಂದು ರೋಟರಿ ಕ್ಲಬ್‌ ಬೈಂದೂರು ಅಧ್ಯಕ್ಷ ಪ್ರಸಾದ್‌ ಪ್ರಭು ಹೇಳಿದರು.

Call us

Click Here

ಅವರು ಶಿರೂರು ಕರಾವಳಿಯ ಕುಟುಂಬವೊದಕ್ಕೆ ರೋಟರಿ ಕ್ಲಬ್‌ ಬೈಂದೂರು ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿಯ ಶಾಶ್ವತ ಯೋಜನೆಯಾಗಿ ಅರ್ಹ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ ಎಂದರು.

ರೋಟರಿ ಜಿಲ್ಲೆ 3182 ಝೋನ್1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ ಅವರು ನೂತನ ಗೃಹವನ್ನು ಉದ್ಘಾಟಿಸಿ ಶುಭಹಾರೈಸಿದರು.

ರೋಟರಿ ವಲಯ ಸೇನಾನಿ ರಂಜಿತ್ ಕುಮಾರ್ ಶೆಟ್ಟಿ, ಬೈಂದೂರು ರೋಟರಿ ಸದಸ್ಯರುಗಳಾದ ಐ. ನಾರಾಯಣ, ಹರೀಶ್‌ ಶೇಟ್‌, ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ‌, 2024-25 ಸಾಲಿನ ನಿಯೋಜಿತ ಅಧ್ಯಕ್ಷ ಮೋಹನ್‌ ರೇವಣ್ಕರ್‌, ನಿಯೋಜಿತ ಕಾರ್ಯದರ್ಶಿ ಸುನಿಲ್‌ ಹೆಚ್.‌ ಜಿ ಹಾಗೂ ಫಲಾನುಭವಿ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Leave a Reply