ಭಾರಿ ಮಳೆಗೆ ನಾವುಂದ, ಸಾಲ್ಬುಡ ಭಾಗದ ಜನರಿಗೆ ಜಲ ದಿಗ್ಭಂಧನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ನಾವುಂದ, ನಾಡ, ಮರವಂತೆ ಗ್ರಾಮದ ಹಲವು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Call us

Click Here

ಬೈಂದೂರು ತಾಲೂಕಿನ ಬಡಾಕೆರೆ, ಮರವಂತೆ, ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಕಾಣಿಸಿಕೊಂಡಿದೆ.

ನೆರೆಪೀಡಿತ ಪ್ರದೇಶದಲ್ಲಿದ್ದ ಮನೆಯವರು, ಜಾನುವಾರುಗಳನ್ನು ಬೇರೆ ಪ್ರದೇಶಕ್ಕೆ ಸ್ಥಳ ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಳಿಗ್ಗೆಯಿಂದ ಕಾರ್ಯಚರಣೆಗಿಳಿದಿದ್ದರು. ಸ್ಥಳೀಯರು ದೋಣಿಗಳ ಮೂಲಕ ತೆರಳಿ ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.

ಅಧಿಕಾರಿಗಳ ಭೇಟಿ
ಬೈಂದೂರು ತಾಲೂಕು ಆಡಳಿತ ಅಧಿಕಾರಿ ಪ್ರದೀಪ್ ತಾಲೂಕು ಪಂಚಾಯತಿಯು ಭಾರತಿ, ಬೈಂದೂರು ಅಗ್ನಿಶಾಮಕದ ಸಿಬ್ಬಂದಿಗಳು, ಬೈಂದೂರು ಆರಕ್ಷಕ ಠಾಣಾ ಸಿಬ್ಬಂದಿ, ಗ್ರಾಮ ಪಂಚಾಯತ್ ನಾವುಂದ, ಗ್ರಾಮ ಪಂಚಾಯತ್ ನಾಡ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆ ಸಾರ್ವಜನಿಕ ಸೂಚಿಸಿದರು.

Leave a Reply