Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ‘ಜನತಾ ನವನೀತ 2024’ ಸಂಪನ್ನ
    ಊರ್ಮನೆ ಸಮಾಚಾರ

    ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ‘ಜನತಾ ನವನೀತ 2024’ ಸಂಪನ್ನ

    Updated:23/07/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಮೊಗವೀರ ಭವನದಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ‘ಜನತಾ ನವನೀತ-2024’ ಸೋಮವಾರ ಅತ್ಯಂತ ವೈಭವದಿಂದ ಜರುಗಿತು.

    Click Here

    Call us

    Click Here

    ಸಮಾರಂಭವನ್ನು ಉದ್ಘಾಟನೆಗೈದ ಶಿಕ್ಷಕರು ಮತ್ತು ರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಕೆ.ಅವರು ಮಾತನಾಡಿ ಜೀವನದಲ್ಲಿ, ಪರೀಕ್ಷೆಯಲ್ಲಿ, ಬದುಕಿನಲ್ಲಿ ಸೋತವರ ಕಥೆಗಳು ನಮ್ಮನ್ನು ಪ್ರೇರೇಪಿಸುತ್ತಾ ಹೋಗುತ್ತವೆ. ಸೋತವರ ಕಥೆಗಳು ನಮಗೆ ಆದರ್ಶಗಳಾಗುತ್ತವೆ. ಗೆದ್ದಾಗ ಮಾತ್ರ ಸಂಭ್ರಮಿಸುವುದಲ್ಲ. ಸೋತಾಗಲೂ ಸಂಭ್ರಮಿಸಬೇಕು. ಸಣ್ಣ ಸಣ್ಣ ಸೋಲುಗಳನ್ನು ಎದುರಿಸುವುದನ್ನು ಅತ್ಯದ್ಭುತವಾಗಿ ಕಲಿಯಬೇಕು. ಅಂಕಗಳ ಜೊತೆಗೆ ಒಳ್ಳೆಯ ಮೌಲ್ಯ, ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಮನುಷ್ಯರಾಗಲು ಸಾಧ್ಯ. ಸ್ವಾಭಿಮಾನದ ಮೂಲಕ ಬದುಕುವುದು ಹೇಗೆ ಎನ್ನುವುದನ್ನು ಪೋಷಕರಿಂದ ಕಲಿತುಕೊಳ್ಳಲು ಸಾಧ್ಯವಿದೆ ಎಂದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ನಮ್ಮ ಕಾಲೇಜು ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿಕೊಂಡು ಅವರಿಂದ ಉತ್ತಮ ಫಲಿತಾಂಶವನ್ನು ಪಡೆಯುವುದು ನಮ್ಮ ಧ್ಯೇಯ. ಹೀಗಾಗಿ ಕಳೆದೆರಡು ವರ್ಷಗಳಿಂದ ನಮ್ಮ ಉಪನ್ಯಾಸಕ ವೃಂದದವರ ಅವಿರತ ಶ್ರಮದಿಂದಾಗಿ ಕಾಲೇಜು ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸುತ್ತಿರುವುದು ನಮ್ಮ ಕಾಲೇಜಿನ ಹೆಗ್ಗಳಿಕೆ ಎಂದರು.

    ಮುಖ್ಯ ಅತಿಥಿಗಳಾಗಿ ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜು ಕಾಳಾವರ, ಜನತಾ  ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಮೇಶ ಪೂಜಾರಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.

    ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಥಮ ಪಿ.ಯು.ಸಿ.ಗೆ ದಾಖಲಾದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯ ಬೋರ್ಡ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ  ಸಾಧಕ ವಿದ್ಯಾರ್ಥಿಗಳನ್ನು ಮತ್ತವರ ಪೋಷಕರನ್ನು ಸನ್ಮಾನಿಸಲಾಯಿತು.

    ನಂತರ  ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ  “ಹಿಗ್ಗಿನ-ಬುಗ್ಗೆ” ಸಾಂಸ್ಕೃತಿಕ ವೈಭವ ಜರುಗಿತು.

    ಪಾಂಶುಪಾಲರಾದ ಗಣೇಶ ಮೊಗವೀರ ಅವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಉಪ-ಪ್ರಾಂಶುಪಾಲರಾದ ರಮೇಶ ಪೂಜಾರಿ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮರಳಿ ಸಾಲಿಗ್ರಾಮ ಯಕ್ಷ ರಂಗದಂಗಳಕ್ಕೆ ಸಮಾರಂಭದಲ್ಲಿ ಕೋಟ ಶಿವಾನಂದ ಅವರಿಗೆ ಸನ್ಮಾನ

    06/07/2026

    ಗಾಳಿಯಿಂದ ಹಾನಿಗೊಂಡ ಮನೆಗಳಿಗೆ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ

    06/07/2026

    ಜೆಸಿಐ ಶಿರೂರು ಘಟಕಕ್ಕೆ ಜೆಎಸಿ ಗೋಲ್ಡನ್ ಪ್ರೆಸಿಡೆಂಟ್ ಪ್ರಶಸ್ತಿ

    06/07/2026
    Leave A Reply Cancel Reply

    eighteen − 2 =

    Call us

    Click Here

    Call us

    Call us

    Call us
    Highest Viewed Recently
    • ಮರಳಿ ಸಾಲಿಗ್ರಾಮ ಯಕ್ಷ ರಂಗದಂಗಳಕ್ಕೆ ಸಮಾರಂಭದಲ್ಲಿ ಕೋಟ ಶಿವಾನಂದ ಅವರಿಗೆ ಸನ್ಮಾನ
    • ಗಾಳಿಯಿಂದ ಹಾನಿಗೊಂಡ ಮನೆಗಳಿಗೆ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ
    • ಜೆಸಿಐ ಶಿರೂರು ಘಟಕಕ್ಕೆ ಜೆಎಸಿ ಗೋಲ್ಡನ್ ಪ್ರೆಸಿಡೆಂಟ್ ಪ್ರಶಸ್ತಿ
    • ಕೋಟ ಸಹಕಾರಿ ವ್ಯವಸಾಯಕ ಸಂಘದ ಸಂಯೋಜನೆಯಲ್ಲಿ ಪಂಚವರ್ಣದ ಹಸಿರು ಹೆಜ್ಜೆ ಆಯೋಜನೆ
    • ಅರೆಶಿರೂರು ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ಉದ್ಘಾಟನೆ ಮತ್ತು ಶ್ರೀ ದೇವಳದಿಂದ ನೀಡಿದ ವಿವಿಧ ಸವಲತ್ತುಗಳ ವಿತರಣೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.