ಉಪ್ಪಂದ ಜೆಸಿಐನಿಂದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅವರಿಗೆ ಕಮಲಪತ್ರ ಪ್ರಶಸ್ತಿ ಪ್ರದಾನ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಜೆಸಿಐ ಉಪ್ಪಂದದ 2023ರ ಸಾಲಿನ ಅಧ್ಯಕ್ಷ ಜೆಸಿ ಸಂಸ್ಥೆಗೆ  ಹಾಗೂ ಇತರ ಸಂಘ ಸಂಸ್ಥೆಗಳಿಗೆ  ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Call us

Click Here

ಜೆಸಿಐ ಉಪ್ಪುಂದ ಮೂಲಕ ಕಳೆದ ಸಾಲಿನಲ್ಲಿ 100 ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ತನ್ನ 100ನೇ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಾದ ಹರೆಕಳ ಹಾಜಬ್ಬ ಅವರನ್ನು ಹಾಗೂ ವೃಕ್ಷಮಾತೆ ತುಳಸಿ ಗೌಡ  ಅವರನ್ನುಅತಿಥಿಯಾಗಿ ಜೆಸಿ ಆಂದೋಲನದಲ್ಲಿ ಸಂಚಲನ ಮೂಡಿಸಿದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅವರು ಕಳೆದ ವರ್ಷದ  ಜೇಸಿ ವಲಯದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಮಾರಿಕಾಂಬ ಯುತ್ ಕ್ಲಬ್, ಎಸ್‌ಡಿಎಮ್‌ ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ಕಳವಾಡಿ ಮಾರಿಕಾಂಬ ದೇವಸ್ಥಾನ, ಬಂಟರ ಯುವ ಸಂಘಟನೆ, ಬಂಟ ಯಾನೆ ನಾಡವರ ಸಂಘ, ಕುಂದಾಪುರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಕಳವಾಡಿ ಹವ್ಯಾಸಿ ಕಲಾತಂಡ, ಭಜನಾ ತಂಡ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅವರುಈ ವರ್ಷ ಜೆಸಿ ವಲಯ 15ರ ಜೇಸಿ ಸಪ್ತಾಹದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಎಲ್ಲ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಕಮಲ ಪತ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗೋವಿಂದ ಬಾಬು ಪೂಜಾರಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರಾದ ರಘುರಾಮ ದೇವಾಡಿಗ, ಬಿಇಓ ನಾಗೇಶ್ ನಾಯ್ಕ್, ಕುಂದಾಪುರ ಕನ್ನಡ ಪ್ರತಿಷ್ಠಾನದ ಮುಖ್ಯಸ್ಥರಾದ ಶರತ್ ಶೆಟ್ಟಿ, ಪ್ರಿಯದರ್ಶಿನಿ ಬೆಸ್ಕೂರು, ಲಕ್ಷ್ಮಿಕಾಂತ ಬೆಸ್ಕೂರು, ನಾಗರಾಜ್ ಆರ್ ಸುವರ್ಣ, ನರಸಿಂಹ ದೇವಾಡಿಗ, ರಾಮ ದೇವಾಡಿಗ, ಮಹೇಂದ್ರ ಪೂಜಾರಿ ಯೆಡೇರಿ, ರವೀಂದ್ರ ಎಚ್‌, ಗುರುರಾಜ ಹೆಬ್ಬಾರ್, ಮತ್ತಿತರರು ಉಪಸ್ಥಿತರಿದ್ದರು.

ಈ ವರ್ಷದ ಅಧ್ಯಕ್ಷರಾದ ಜೆಸಿ ಮಂಜುನಾಥ್ ದೇವಾಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜೆ ಸಿ ನರಸಿಂಹ ದೇವಾಡಿಗ ಧನ್ಯವಾದ ಸಮರ್ಪಿಸಿದರು

Click here

Click here

Click here

Click Here

Call us

Call us

Leave a Reply