ಉಪ್ಪುಂದ: ಕುಂದಾಪುರ ಹವ್ಯಕ ವಲಯೋತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: 
ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾ ಸಂಸ್ಥಾನದವರ ಆಶಯದಂತೆ ಕುಂದಾಪುರ ವಲಯದ ವಲಯೋತ್ಸವ ಕಾರ್ಯಕ್ರಮವು ಉಪ್ಪುಂದ ಶ್ರೀ ರಾಘವೇಂದ್ರ ಸ್ವಾಮೀ ಮಠದಲ್ಲಿ ಭಾನುವಾರ ದಿನ ನಡೆಯಿತು.

Call us

Click Here

ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷ ಉದಯಶಂಕರ ನಿರ್ಪಾಜೆ ವಲಯೋತ್ಸವವನ್ನು ಧ್ವಜಾರೋಹಣದೊಂದಿಗೆ ಉದ್ಘಾಟನೆ ಮಾಡಿ ಮಾತನಾಡಿ, ಶ್ರೀ ಸಂಸ್ಥಾನದವರ ಆಶಯದಂತೆ ಯುವಕರು, ಮಹಿಳೆಯರು, ವಿಷೇಶವಾಗಿ ಮಕ್ಕಳನ್ನು ಒಂದು ಕಡೆ ಸೇರಿಸುವ ಕಾರ್ಯವೇ ವಲಯೋತ್ಸವದ ಮೂಲ ಉದ್ಧೇಶ. ಯುವಕರಿಗೆ ನಮ್ಮ ಸಂಸ್ಕೃತಿ, ಭಾಷೆ, ಆಚರಣೆ ಸಂಘಟನೆಯ ಪರಿಚಯ ಮಾಡಲು ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪ್ರದರ್ಶನ ಹಾಗೂ ಎಲ್ಲಾ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವ ಉದ್ಧೇಶ ಹೊಂದಿರುತ್ತದೆ ಎಂದು ಹೇಳಿದರು.

ಕುಂದಾಪುರ ವಲಯಾಧ್ಯಕ್ಷ ಡಾ| ಎಂ.ವಿ ನಾರಾಯಣ ಸ್ವಾಮೀ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಥ್ವೀಶ ಉಡುಪಿ ಜಿಲ್ಲಾ ಪ್ರಧಾನರು ಯುವವಿಭಾಗ, ಕಾರ್ಯದರ್ಶಿ ನಾಗರಾಜ ಭಟ್, ಕಾರ್ಯಕ್ರಮದ ಸಂಯೋಜಕ ಭರತ್, ಮಂಗಳೂರು ಮಂಡಲದ ರಮೇಶ್ ಸರವೂ, ಮಂಡಲದ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ವಲಯ ಉಪಾಧ್ಯಕ್ಷ  ಸತ್ಯನಾರಾಯಣ ಪುರಾಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಷ್ಣು ಸಹಸ್ರನಾಮ ಪಠಣ, ರುಧ್ರ ಪಠಣ ಮಹಿಳೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮವು, ಎಲ್ಲಾ ಸ್ಥರದ ಮಕ್ಕಳಿಗೆ ವಿವಿಧ ಸ್ಫರ್ಧೆಗಳನ್ನು ನಡೆಸಲಾಯಿತು.

ಸಂಜೆ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಗೋಕರ್ಣ ವಿಷ್ಣುಗುಪ್ತ ವಿಶ್ವವಿದ್ಯಾಲಯದ ಪ್ರಮುಖರು ನಿವೃತ್ತ ಪ್ರಾಂಶುಪಾಲ ಉಂಡೆಮನೆ ವಿಶ್ವೇಶ್ವರ ಭಟ್ ಅವರು ಪಾರಂಪರಿಕ ಶಿಕ್ಷಣದ ಮಹತ್ವ ಮತ್ತು ಆಧುನಿಕ ಶಿಕ್ಷಣದ ಕುರಿತು ವಿಶೇಷ ಉಪನ್ಯಾಸ ನೀಡಿದರು.

Click here

Click here

Click here

Click Here

Call us

Call us

ವಲಯಾಧ್ಯಕ್ಷ ಎಮ್.ವಿ ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರು ಮಂಡಲದ ಅಧ್ಯಕ್ಷ ಉದಯಶಂಕರ ನಿರ್ಪಾಜೆ, ರಮೇಶ್ ಸರವೂ, ನಾಗರಾಜ್ ಭಟ್, ಭರತ್, ಸತ್ಯನಾರಾಯಣ ಪುರಾಣಿಕ, ರಾಜಶೇಖರ ಕಾಕುಂಜೆ, ಕೃಷ್ಣಮೂರ್ತಿ, ಕೃಷ್ಣಪ್ರಮೋದ ಶರ್ಮ, ಭಾಸ್ಕರ ಹೊಸ್ಮನೆ, ಉಪ್ರಳ್ಳಿ ಮಂಜುನಾಥ ಭಟ್ ಉಪಸ್ಥಿತರಿದ್ದರು.

ಯು. ಸಂದೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು, ಎಮ್. ವಿ. ನಾರಾಯಣ ಸ್ವಾಮಿ ಸ್ವಾಗತಿಸಿದರು, ಸತ್ಯನಾರಾಯಣ ಪುರಾಣಿಕ ವಂದಿಸಿದರು.

Leave a Reply