ಕೋಟೇಶ್ವರ: ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡು ಯುವಕನಿಗೆ ಗಂಭೀರ ಗಾಯ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಟೈರ್ ಪಂಕ್ಚರ್ ಶಾಪ್ ಒಂದರಲ್ಲಿ ಬಸ್ಸೊಂದರ ಟೈರ್‌ಗೆ ಗಾಳಿ ತುಂಬಿಸುತ್ತಿದ್ದ ಸಂದರ್ಭ ಟೈರ್ ಸಿಡಿದು ಯುವಕ ಗಂಭೀರ ಗಾಯಗೊಂಡ ಘಟನೆ ಕೋಟೇಶ್ವರದಲ್ಲಿ ಸಂಭವಿಸಿದೆ. ಅಬ್ದುಲ್ ರಶೀದ್ (19) ಗಂಭೀರ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.

Call us

Click Here

ಕೋಟೇಶ್ವರದಲ್ಲಿರುವ ಟೈರ್ ಪಂಕ್ಚರ್ ಶಾಪ್ ಗೆ ಖಾಸಗಿ ಶಾಲಾ ಬಸ್ಸೊಂದರ ಟೈರ್ ಪ್ಯಾಚ್ ಗೆ ಬಂದಿತ್ತು. ಈ ವೇಳೆ ಅಬ್ದುಲ್ ರಶೀದ್ ಟೈರನ್ನು ಬಸ್ಸಿನಿಂದ ಕೆಳಗಿಳಿಸಿ ಗಾಳಿ ತುಂಬಿಸಿದ್ದಾರೆ. ಗಾಳಿ ತುಂಬಿಸಿ ರಶೀದ್ ಅಲ್ಲಿಂದ ಎದ್ದೇಳುತ್ತಿದ್ದಂತೆ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಟೈರ್ ಸಿಡಿದ ರಭಸಕ್ಕೆ ರಶೀದ್ ಗಾಳಿಯಲ್ಲಿ ಹಾರಿ ಗಿರಕಿ ಹೊಡೆದು ಬಿದ್ದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ಫೋಟದ ತೀವ್ರತೆಗೆ ಟೈರ್ ಡ್ರಮ್ ಹಾರಿ ಬಸ್ಸಿನ ಮೇಲ್ಛಾವಣಿಯ ಮೇಲೆ ಬಿದ್ದು ನೆಲಕ್ಕುರುಳಿದೆ. ಘಟನೆಯ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply