Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅರೆವಾಹಕ ಚಿಪ್ಸ್ ತಯಾರಿಕೆಯಲ್ಲಿ ಭಾರತದ ಮಹತ್ವದ ಹೆಜ್ಜೆ: ಡಾ. ರವಿ ಎಂ. ಆರ್.
    alvas nudisiri

    ಅರೆವಾಹಕ ಚಿಪ್ಸ್ ತಯಾರಿಕೆಯಲ್ಲಿ ಭಾರತದ ಮಹತ್ವದ ಹೆಜ್ಜೆ: ಡಾ. ರವಿ ಎಂ. ಆರ್.

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡಬಿದಿರೆ:
    ಅರೆವಾಹಕ ಚಿಪ್‌ಗಳು (ಸೆಮಿಕಂಡಕ್ಟಡ್ ಚಿಪ್) ಅತ್ಯಂತ ಅಗತ್ಯವಾಗಿದ್ದು ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ಇಲ್ಲಿ ತಯಾರಿಸುವುದಕ್ಕಿಂತ ಅಧಿಕವಾಗುತ್ತದೆ. ಪ್ರಸ್ತುತ ಭಾರತ ಸರಕಾರ ಅರೆವಾಹಕ ಚಿಪ್‌ಗಳನ್ನು ತಯಾರಿಸಲು ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದು ಇದು ಮುಂಬರುವ ದಿನಗಳಲ್ಲಿ ಭಾರತ ತಂತ್ರಜ್ಞಾನದ ಮಹತ್ವದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಡಿಆರ್‌ಡಿಒ ಹಾಗೂ ಸಿತಾರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಎಂ. ಆರ್. ಹೇಳಿದರು.

    Click Here

    Call us

    Click Here

    ಕರ್ನಾಟಕ ಸರಕಾರದ ವಿಜನ್ ಗ್ರೂಪ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯ ಅನುದಾನದೊಂದಿಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಞ್ರಾನಿಕ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗವು ಆಯೋಜಿಸಿದ ಮೆಮ್ಸ್ ಕ್ಯಾರಕ್ಟರೈಸೇಶನ್ ಟೆಕ್ನಿಕ್ ಎಂಬ  ನಾಲ್ಕು ದಿನಗಳ ಉಪನ್ಯಾಸಕರ ಕೌಶಲ್ಯಾಭಿವೃದ್ಧಿ (ಎಫ್‌ಡಿಪಿ) ಕಾರ್ಯಾಗಾರವನ್ನು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. 

    ಭಾರತದಲ್ಲಿ ಜ್ಞಾನದ ಸಂಪತ್ತು ಹೇರಳವಾಗಿದ್ದು, ಮೇಮ್ಸ್ ಹಾಗೂ ಸೆಮಿಕಂಡಕ್ಟರ್‌ಗೆ ಸಂಬಂದಿಸಿದ ನೂರೈವತ್ತುಕ್ಕೂ ಅಧಿಕ ಸಂಸ್ಥೆಗಳು  ಬೆಂಗಳೂರಿನಲ್ಲಿವೆ. ನಾವು ಅನೇಕ ತಂತ್ರಜ್ಞಾನವನ್ನು ಕಂಡುಕೊಂಡಿದ್ದೇವೆ. ಭಾರತದಲ್ಲಿ ಉಡಾವಣೆಗೊಳ್ಳುವ ಕ್ಷಿಪಣಿಗಳು ಶೇ 99 ರಷ್ಟು ಭಾರತದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು. 

    ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಡಿಆರ್‌ಡಿಒ ವಿಜ್ಞಾನಿ ಡಾ. ಗೋಪಾಲಕೃಷ್ಣ ಅವರು ಮಾತನಾಡಿ, ಇಂತಹ ಕಾರ್ಯಗಾರಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿರುವ ಅವಕಾಶಗಳ ಸಾಧ್ಯತೆಗಳನ್ನು ತಿಳಿದುಕೊಳ್ಳಲು ಪೂರಕವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಪೈಪೋಟಿಗಳ ನಡುವೆಯೂ ಉತ್ತಮ ಸಹಯೋಗ ಅಗತ್ಯವಿದೆ. ಇಂತಹ ಸಹಯೋಗದ ಶಿಕ್ಷಣದಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಪೂರಕವಾಗಿವೆ. ಜೊತೆಗೆ ಉಪನ್ಯಾಸಕರ ನಡುವೆ ಉತ್ತಮ ಭಾಂದವ್ಯವಿದ್ದಾಗ ಶೈಕ್ಷಣಿಕ ಬೆಳವಣಿಗೆ ಸಾಧ್ಯ ಎಂದರು.

    Click here

    Click here

    Click here

    Call us

    Call us

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಡೀನ್ ಡಾ. ರಿರ್ಚಡ್ ಪಿಂಟೊ ಉಪಸ್ಥಿತರಿದ್ದರು.

    ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಅತಿಥಿಗಳನ್ನು ಪರಿಚಯಿಸಿದರು. ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಗುರುಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

    ಡಾ. ಗಣೇಶ್ ಎನ್.ವಿ. ಸ್ವಾಗತಿದರು. ಡಾ. ಡಿ. ವಿ. ಮಂಜುನಾಥ ವಂದಿಸಿದರು. ಉಪನ್ಯಾಸಕಿ ಲಿಪಿ ಮ್ಯಾಥ್ಯೂ ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಸಜ್ಜಿತ ಐಡಿಯಾ ಲ್ಯಾಬ್‌ ಲೋಕಾರ್ಪಣೆ

    05/02/2026

    70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್

    04/02/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ

    04/02/2026
    Leave A Reply Cancel Reply

    four × 4 =

    Call us

    Click Here

    Call us

    Call us

    Call us
    Highest Viewed Recently
    • ಬಾಳ್ಕುದ್ರು: ಮೀನುಗಾರಿಕೆ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ಸಾವು
    • 135 ದಿನ ಪೂರೈಸಿದ ಬೈಂದೂರು ರೈತ ಸಂಘದ ಧರಣಿ – ಉಡುಪಿ ಜಿಲ್ಲಾಧಿಕಾರಿ ಭೇಟಿ
    • ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಸಜ್ಜಿತ ಐಡಿಯಾ ಲ್ಯಾಬ್‌ ಲೋಕಾರ್ಪಣೆ
    • ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ
    • ಬ್ರಹ್ಮಾವರ: ಮಟಪಾಡಿ ದಿ. ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.