Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕರಾವಳಿ, ಮಲೆನಾಡಿನಲ್ಲಿ ಕುಖ್ಯಾತರಾಗಿದ್ದ ಕಳ್ಳಬೇಟೆಗಾರರ ಬಂಧನ
    ಉಡುಪಿ ಜಿಲ್ಲೆ

    ಕರಾವಳಿ, ಮಲೆನಾಡಿನಲ್ಲಿ ಕುಖ್ಯಾತರಾಗಿದ್ದ ಕಳ್ಳಬೇಟೆಗಾರರ ಬಂಧನ

    Updated:14/02/2025No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಬ್ರಹ್ಮಾವರ ತಾಲ್ಲೂಕಿನ ವಂಡಾರು ಗ್ರಾಮದ ಬೋರ್ಡ್‌ ಗಲ್ಲು ಎಂಬಲ್ಲಿ ವನ್ಯಪ್ರಾಣಿಗಳ ಹತ್ಯೆಗೈಯ್ಯಲು ವಂಡಾರು ಬ್ಲಾಕ್ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ಬಂದ ಭಟ್ಕಳ – ಶಿರೂರು ಮೂಲದ ಮೂವರು ವನ್ಯಜೀವಿ ಹಂತಕ ಆರೋಪಿಗಳನ್ನು ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿಗಳ ತಂಡ  ಬಂಧಿಸಿದೆ. ಭಟ್ಕಳದ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯಾ, ಶಿರೂರಿನವರಾದ ವಾಸೀಂ ಅಕ್ರಂ, ಆಲಿ ಬಾವು ಯಾಸಿನ್ ಬಂಧಿತರು.

    Click Here

    Call us

    Click Here

    ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆರೋಪಿಗಳಿಂದ ಒಂದು ಬಂದೂಕು, 11 ಕಾಡತೂಸು, 4 ಚಾಕುಗಳು, 01 ಮಚ್ಚು, 01 ಟಾರ್ಚ್, 03 ಮೊಬೈಲುಗಳು ಹಾಗೂ ಸಂಚಾರಕ್ಕೆ ಬಳಸಿದ ಒಂದು ಆಟೋ ರಿಕ್ಷಾವನ್ನು ವಶ ಪಡೆಯಲಾಗಿದೆ.

    ಸೆಪ್ಟೆಂಬರ್ ತಿಂಗಳಲ್ಲಿ ಅರೋಪಿಗಳು ಶಂಕರನಾರಾಯಣ ಅರಣ್ಯ ವಲಯದ ವಂಡಾರಿನ ಬಳಿ ಕಾಡು ಪ್ರಾಣಿಯನ್ನು ಹತ್ಯೆಗೈದು, ಕಾಡು ಪ್ರದೇಶದಲ್ಲಿ ಕರುಳನ್ನು ಎಸೆದಿದ್ದರು. ಇದರ ಸ್ಯಾಂಪಲ್  ಭಾರತೀಯ ವೈಡ್ ಲೈಫ್ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದು ಕಾಡುಕೋಣ ಎಂಬುದಾಗಿ ದೃಢಪಟ್ಟಿರುತ್ತದೆ. ವನ್ಯಪ್ರಾಣಿ ಹತ್ಯೆ ಮಾಡಲಾದ ಸ್ಥಳದಲ್ಲಿ ಈ ಆರೋಪಿಗಳ ಪೋನ್ ಲೋಕೇಶನ್ ಪತ್ತೆಯಾಗಿತ್ತು. ಅಲ್ಲಿಂದ ಈ ಆರೋಪಿಗಳಿಗೆ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈ ಹವ್ಯಾಸಿ ವನ್ಯಜೀವಿ ಬೇಟೆಗಾರರಾಗಿದ್ದು ಉಡುಪಿ, ಶಿವಮೊಗ್ಗ ಸೇರಿ  ಬೇರೆ ಬೇರೆ ವಲಯಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದಾರೆ.

    ಶಿವಮೊಗ ಜಿಲ್ಲೆ ಸಾಗರ ವಿಭಾಗದ ನಗರ ವಲಯದಲ್ಲಿ ವನ್ಯಜೀವಿ  ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ‌. ಖಚಿತ ಮಾಹಿತಿ ಮೇರೆಗೆ ಸರಣಿ ಕಳ್ಳಬೇಟೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳನ್ನು  ಅರಣ್ಯ ಪ್ರದೇಶದ ಒಳಗೆ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

    ಕಾರ್ಯಾಚರಣೆಯು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ಗಣಪತಿ ಕೆ. ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ ಪೂಜಾರಿ, ಸಿದ್ಧಾಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಜಿ.ಡಿ. ದಿನೇಶ ಅವರ ಮಾರ್ಗದರ್ಶನದಲ್ಲಿ  ನಡೆದಿದೆ.

    Click here

    Click here

    Click here

    Click Here

    Call us

    Call us

    ಈ‌ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಜ್ಯೋತಿ ‌ಕೆ.ಸಿ. ಹಾಗೂ ವಲಯದ ಸಿಬ್ಬಂದಿಗಳು, ಬೈಂದೂರು ವಲಯದ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ವಲಯದ ಸಿಬ್ಬಂದಿಗಳು, ಸಿದ್ಧಾಪುರ ವಲಯ ಅರಣ್ಯಾಧಿಕಾರಿ ಗಣಪತಿ ವಿ. ನಾಯ್ಕ್ ಹಾಗೂ ಸಿಬ್ಬಂದಿಗಳು, ಕುಂದಾಪುರ ವಲಯದ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ

    22/05/2026

    ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ

    22/05/2026

    ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ

    22/05/2026
    Leave A Reply Cancel Reply

    twenty − three =

    Call us

    Click Here

    Call us

    Call us

    Call us
    Highest Viewed Recently
    • ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ
    • ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.