ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೌಕೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಶ್ರೀ ಕಾಳವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಭೇಟಿ ಕೊಟ್ಟು ಶಿಬಿರಾರ್ಥಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು.
ವಿವಿಧ ಸ್ಥಳಗಳಿಂದ ಆಗಮಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ಥಳೀಯರ ಸಹಕಾರದಿಂದ ಮತ್ತು ಎಲ್ಲರ ಪರಿಶ್ರಮದಿಂದ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಶಾಸಕರನ್ನು ಸ್ಮರಣಿಕೆಯೊಂದಿಗೆ ಸ್ವಾಗತಿಸಿ, ಗೌರವಿಸಿದರು .
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕರದ ನಾಗರಾಜ ಯು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ್ ವೈದ್ಯ ಎಂ.,ಹಿರಿಯ ಪ್ರಾಧ್ಯಾಪಕರಾದ ಡಾ ಶೇಖರ್ ಬಿ., ಉಪನ್ಯಾಸಕಿಯಾದ ಶ್ರುತಿ ಆಚಾರ್ಯ ಎನ್. ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ರಕ್ಷಿತ್, ಘಟಕ 1 ಮತ್ತು 2 ರ ಸಂಯೋಜನಾಧಿಕಾರಿಗಳಾದ ರೋಹಿಣಿ ಹಾಗೂ ನಿರಂಜನ ಶರ್ಮಾ ಸ್ವಯಂ ಸೇವಕರಾದ ಗೌರೀಶ್, ವಿದ್ಯಾ ದೀಪಶ್ರೀ, ರಾಘವೇಂದ್ರ, ವೈಷ್ಣವಿ ಇನ್ನಿತರರು ಉಪಸ್ಥಿತರಿದ್ದರು.










