ಕೊಠಾರಿ ಸೇವಾ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ರಕ್ತದಾನ ಶಿಬಿರ, 60 ಯೂನಿಟ್ ರಕ್ತ ಸಂಗ್ರಹ

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ
: ಜಿಲ್ಲಾ ಕೊಠಾರಿ ಸೇವಾ ಸಂಘ ರಿ. ಕರ್ಕಿ ಕನ್ಯಾನ, ಉಡುಪಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ., ಕೆಎಂಸಿ ಮಣಿಪಾಲ ರಕ್ತನಿಧಿ ವಿಭಾಗ ಇವರ ಸಹಕಾರದಲ್ಲಿ ಶ್ರೀ ಚೌಡೇಶ್ವರಿ ಕನ್ವೆನ್ಷನ್ ಸೆಂಟರ್,‌ ಕೊಠಾರಿ ಸಮುದಾಯ ಭವನ ಕರ್ಕಿ ಕನ್ಯಾನದಲ್ಲಿ‌ ನಡೆದ ರಕ್ತದಾನ ಶಿಬಿರವನ್ನು ವ್ಯವಸ್ಥಾಪನ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ‌ ಸೌಕೂರು ಇದರ ಅಧ್ಯಕ್ಷರಾದ ಕಿಶನ್ ಹೆಗ್ಡೆ ಉದ್ಘಾಟಿಸಿದರು.

Click Here

Call us

Click Here

‌ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘದ ಅಧ್ಯಕ್ಷರಾದ ಸೀತಾರಾಮ ಕೊಠಾರಿ ಸಭಾಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಯಾಗಿ ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರಂಗನಾಥ್ ವೈ., ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಮಣಿಪಾಲ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೋವನ್ ಡಿ’ ಕೋಸ್ತಾ, ಕುಂದಾಪುರ ವಿಜಯ ಕರ್ನಾಟಕ ಪತ್ರಿಕಾ ಸಂಪಾದಕರಾದ ಜಾನ್ ಡಿ’ಸೋಜ,‌ ಹಟ್ಟಿಯಂಗಡಿ ಗ್ರಾಮ‌ ಪಂಚಾಯತ್ ‌ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಕೆ. ನಾಗಪ್ಪ ಕೊಠಾರಿ, ಹೈದರಾಬಾದ್ ಉದ್ಯಮಿ ಸುರೇಂದ್ರ ‌ಕೊಠಾರಿ, ಕರ್ಕಿ ಕನ್ಯಾನ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ಹಾಗೂ‌ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ‌ ಸದಸ್ಯ ಪ್ರಶಾಂತ್ ತಲ್ಲೂರು ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ರಕ್ತದಾನಿ ಸಾಧಕರಾದ ಅಭಯಹಸ್ತ ಟ್ರಸ್ಟ್ ಉಡುಪಿ ಇದರ ಸದಸ್ಯರಾದ ಶರತ್ ಕಾಂಚನ್ ಆನಗಳ್ಳಿ ಹಾಗೂ ಸುಹಾನ್ ಷರೀಫ್ ಅವರನ್ನು ಸನ್ಮಾನಿಸಲಾಯಿತು.

ಈ ಯಶಸ್ವಿ ‌ರಕ್ತದಾನ ಶಿಬಿರದಲ್ಲಿ 60 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Click here

Click here

Click here

Call us

Call us

Leave a Reply