ಬಿಲ್ಲವಾಸ್ ಕತಾರ್‌ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಪರ್ಣ ಶರತ್ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಐ. ಸಿ. ಸಿ. ಕತಾರ್, ಮುಂಬೈ ಹಾಲ್ ನಲ್ಲಿ ನಡೆದ ಬಿಲ್ಲವಾಸ್ ಕತಾರ್ ನ ಕಾರ್ಯಕಾರಿ ಮತ್ತು ಸಲಹಾ ಮಂಡಳಿಯ ಸಭೆಯಲ್ಲಿ ಪ್ರಸ್ತುತ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರ್ಣ ಅವರನ್ನು ಸರ್ವಾನುಮತದಿಂದ ಬಿಲ್ಲವಾಸ್ ಕತಾರ್ ನ  ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು ಎಂದು ಮಾಜಿ ಅಧ್ಯಕ್ಷರಾದ ರಘುನಾಥ್ ಅಂಚನ್ ಅವರು ಘೋಷಿಸಿ ಶುಭ ಹಾರೈಸಿದರು.

Call us

Click Here

ಅಪರ್ಣ ಅವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್, ಮಂಗಳೂರು ನಿವಾಸಿಯಾಗಿದ್ದು, ಎಂ.ಬಿ.ಎ. ಮಾನವ ಸಂಪನ್ಮೂಲ ಪದವಿಯನ್ನು ಹೊಂದಿದ್ದಾರೆ.

ಕತಾರ್ ನ ಸುಪ್ರಸಿದ್ದ ಕಂಪೆನಿಗಳಲ್ಲಿ ಒಂದಾದ ಗಲ್ಫಾರ್  ಅಲ್ ಮಿಸ್ನಾಡ್ ಕಂಪನಿಯಲ್ಲಿ ಮಾನವ ಸಂಪನ್ಮೂಲ  ವಿಭಾಗೀಯ ಮ್ಯಾನೇಜರ್ ಆಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಲ್ಲವಾಸ್ ಕತಾರ್ ನ ಉಪಾಧ್ಯಕ್ಷರಾಗಿ ಜಯರಾಮ ಸುವರ್ಣ ಅವರನ್ನು ನೇಮಿಸಲಾಯಿತು.  

ಪ್ರಸ್ತುತ ಕಾರ್ಯಕಾರಿ ಸಮಿತಿಯಲ್ಲಿ ಮಹೇಶ್ ಕುಮಾರ್ ಕಾರ್ಯದರ್ಶಿ, ಸಂದೀಪ್ ಕೋಟ್ಯಾನ್ ಜೊತೆ ಕಾರ್ಯದರ್ಶಿ, ಅಜಯ್ ಕೋಟ್ಯಾನ್ ಕೋಶಾಧಿಕಾರಿ, ಸೀಮಾ ಉಮೇಶ್  ಪೂಜಾರಿ ಕ್ರೀಡಾ ಕಾರ್ಯದರ್ಶಿ, ಪೂಜಾ ಜಿತಿನ್ ಸಾಂಸ್ಕ್ರತಿಕ ಕಾರ್ಯದರ್ಶಿ, ಶ್ವೇತಾ ಅನಿಲ್ ಜೊತೆ ಸಾಂಸ್ಕ್ರತಿಕ ಕಾರ್ಯದರ್ಶಿ, ನಿತಿನ್ ಸನಿಲ್  ಮಾಧ್ಯಮ ಸಂಯೋಜಕ, ಚಂಚಲಾಕ್ಷಿ ಸದಸ್ಯ ಸಂಯೋಜಕಿ ಮತ್ತು ನಿತಿನ್ ಕುಂಪಲ ಲಾಜಿಸ್ಟಿಕ್ಸ್ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave a Reply