ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: 
ತಾಲೂಕಿನ ಕೋಟ ಮಣೂರು ಪಡುಕರೆ ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮವು ಉದ್ಭವಲಿಂಗೇಶ್ವರ ವಠಾರದಲ್ಲಿ ಎರಡು ದಿನಗಳ ಕಾಲ ವೈಭವದಿಂದ ಜರಗಿತು.

Call us

Click Here

ಮೊದಲ ದಿನ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಕಾರ್ಯಕ್ರಮವನ್ನು ಕೋಟದ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ ಸಿ. ಕುಂದರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ 6 ಭಜನಾ ತಂಡಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ನವೀನ ಕುಮಾರ್, ಗೌರವ ಅಧ್ಯಕ್ಷ ಹರೀಶ್ ಕುಮಾರ, ಕೋಟ ಮೆಸ್ಕಾಂನ ದಿನೇಶ ಪುತ್ರನ್ ವಿಠಲವಾಡಿ, ಭಜನಾ ಮಂದಿರದ ಪ್ರಮುಖರಾದ ಪ್ರಮೋದ್, ವಿಜಯ, ವಿನಯ, ಚೈತ್ರ , ಯೊಗೇಶ ಉಪಸ್ಥಿತರಿದ್ದರು.

ಎರಡನೇಯ ದಿನ ಧಾರ್ಮಿಕ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ ಕೊಡ್ಗಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ರಿ. ಪ್ರವರ್ತಕರಾದ ವಸಂತ ಗಿಳಿಯಾರ ಅವರು ಉದ್ಘಾಟಿಸಿದರು.

Click here

Click here

Click here

Call us

Call us

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿಸಾಧನೆಗೈದ ಸಾಧಕರಾದ ಕೊಲ್ಲೂರು ಠಾಣೆ ಪಿಎಸ್‍ಐ ಸುಧಾರಾಣಿ ಟಿ., ಉಡುಪಿ ಅಭಯ ಹಸ್ತ ಟ್ರಸ್ಟ್ ಅಧ್ಯಕ್ಷ ಅಭಯ ಸತೀಶ್ ಸಾಲಿಯಾನ್, ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಸೃಜನಾ ಎಸ್.ಪಿ. ವಿಠಲವಾಡಿ, ಕ್ರೀಡಾ ವಿಭಾಗದಲ್ಲಿ ಕುಮಾರ್ ಮತ್ತು ತಂಡ ನಮ್ಮೂರ ಬೆಳಕು ಮೆಸ್ಕಾಂ ನೌಕರರು ಕೋಟ ಶಾಖೆ ಅವರನ್ನು ಸನ್ಮಾನಿಸಲಾಯಿತು.

ನ್ಯಾಯವಾದಿ ಬಿ. ಎಸ್ ಕಾಳವರಕ್ಕರ್, ವಿದ್ವಾನ್ ದಾಮೋದರ್ ಶರ್ಮಾ ಉಪಸ್ಥಿತರಿದ್ದರು.

ಅಂದಿನ ರಾತ್ರಿ ಸ್ಥಳೀಯ ಮಕ್ಕಳಿಂದ ಮತ್ತು ಅರೆಹೊಳೆ ಪ್ರತಿಷ್ಠಾನ ಮಂಗಳೂರು, ಓಂಕಾರ್ ಕಲವಿದರು ಕನ್ನಕೆರೆ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply