ಮಂಗಳೂರು ವಿವಿ ಸಿಬ್ಬಂದಿ ಪಂದ್ಯಾಕೂಟ: ವಿವಿ ಕ್ಯಾಂಪಸ್ ಪ್ರಥಮ, ಬಿ. ಬಿ. ಹೆಗ್ಡೆ ರನ್ನರ್ ಅಪ್

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ನಗರದ ಗಾಂಧಿ ಮೈದಾನದಲ್ಲಿ ಡಾ. ಬಿ.  ಬಿ . ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ವಿ. ವಿ ವ್ಯಾಪ್ತಿಯ ಸಿಬ್ಬಂದಿ ಪಂದ್ಯಕೂಟದ ಭಾಗವಾಗಿ ಪುರುಷ ಸಿಬ್ಬಂದಿಗಳ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟ ನಡೆಯಿತು.

Click Here

Call us

Click Here

ಪಂದ್ಯಾಕೂಟದಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್‌ನಲ್ಲಿ ಕ್ರಮವಾಗಿ ವಿ.ವಿ. ಕ್ಯಾಂಪಸ್ ಪ್ರಥಮ, ಆತಿಥೇಯ ಬಿ.ಬಿ. ಹೆಗ್ಡೆ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.

ವಿ.ವಿ ಕ್ಯಾಂಪಸ್‌ನ ಶರತ್ ಕ್ರಿಕೆಟ್‌ನಲ್ಲಿ ಸರಣಿ ಶ್ರೇಷ್ಠ, ವಾಲಿಬಾಲ್ ನಲ್ಲಿ ಸಂದೀಪ್ ಬೆಸ್ಟ್ ಆಲ್ ರೌಂಡರ್ ಹಾಗೂ ಬಿ. ಬಿ. ಹೆಗ್ಡೆ  ಕಾಲೇಜಿನ ಸತೀಶ್ ಶೆಟ್ಟಿ ಕ್ರಿಕೆಟ್ ನಲ್ಲಿ ಪಂದ್ಯ ಶ್ರೇಷ್ಠ, ಪ್ರತ್ಯಕ್ಷ ಬೆಸ್ಟ್ ಬೌಲರ್, ವಾಲಿಬಾಲ್‌ನಲ್ಲಿ ಶರತ್ ಕೊಠಾರಿ ಬೆಸ್ಟ್ ಅಟೇಕರ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.

ಸಂಸ್ಥೆಯ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್ ಪಂದ್ಯಾಕೂಟ ಸಂಯೋಜಿಸಿದರು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ರಾಜೇಶ್ ಶೆಟ್ಟಿ ವಕ್ವಾಡಿ, ವಿವಿ ಕ್ಯಾಂಪಸ್ನ ಹಿರಿಯ ಸಿಬ್ಬಂದಿ ಚಂದ್ರ, ತೀರ್ಪುಗಾರ ಶ್ರೀಧರ್ ಆಚಾರ್ ಹಾಗೂ ಸೂರಜ್ ಖಾರ್ವಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸತೀಶ್ ಶೆಟ್ಟಿ ಹೆಸ್ಕತ್ತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Click here

Click here

Click here

Call us

Call us

Leave a Reply