ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮನೋಭಾವದ ಜೊತೆ ಜೊತೆಯಲ್ಲಿ ಪರಸ್ಪರ ಗೌರವ ಸಹೋದರತ್ವ ಭಾವನೆಯನ್ನು ಬಿತ್ತುವ ಸದುದ್ದೇಶದಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕ್ಷಿಪ್ರ ಕಾರ್ಯಾಚರಣಾಪಡೆಯ (ಆರ್‌ಎಎಫ಼್) ಭದ್ರಾವತಿಯ ಸಹಾಯಕ ಕಮಾಂಡೆಂಟ್ ಅನಿಲ್ ಕುಮಾರ್ ಜಾಧವ್ ತಮ್ಮ ತುಕುಡಿಯೊಂದಿಗೆ ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳ ಜೊತೆಯಲ್ಲಿ ರಕ್ಷಾಬಂಧನವನ್ನು ಆಚರಿಸಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅಜಿತ್ ಭವ್ಯ ಭಾರತದ ಮುಂದಿನ ಸಂರಕ್ಷಕರು ನೀವು 12ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಲು ಪ್ರಯತ್ನಿಸಬೇಕು. ಸರಿಯಾದ ಗುರಿಯನ್ನು ಹೊಂದಿರಬೇಕು. ನಿರಂತರ ಪ್ರಯತ್ನ ಶೀಲರಾಗಿರಬೇಕು. ದೇಶದ ಪ್ರತಿಯೊಬ್ಬರನ್ನೂ ಸಹೋದರರಂತೆ ಗೌರವದಿಂದ ನೋಡಬೇಕು ಎಂದು ತಿಳಿಸಿದರು.
ಈ ಸಮಯದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ದೇಶದಲ್ಲಿ ಸಾವಿರಾರು ಉದ್ಯೋಗಗಳಿದ್ದರೂ, ದೇಶಪ್ರೇಮದಿಂದ ಇವರೆಲ್ಲ ಸೈನ್ಯ ಸೇರಿದರು. ಇವರೆಲ್ಲ ನಮಗೆ ಆದರ್ಶಪ್ರಾಯರಾದರು. ದೇಶ ಸೇವೆಗಾಗಿ ಸದಾ ಕಟಿಬದ್ಧರಾಗಿ ಬದುಕಲು ಇವರಿಂದ ಕಲಿಯಬೇಕು. ಎಂದರು.
ವೇದಿಕೆಯಲ್ಲಿ ಇನ್ಸ್‌ಪೆಕ್ಟರ್ ಜಿ. ಮನೋಹರ್, ಎಸ್‌ಐ ಮುನಿಯಪ್ಪ, ಎಸ್‌ಐ ದಿನೇಶ್ ಎಂ ಪಿ, ಎಸ್‌ಐ ನಳಿನಿ ಕುಮಾರಿ, ಸಾಗರ್ ಬಿಜಾಪುರೆ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
















