ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ನೇತೃತ್ವದಲ್ಲಿ ಕೊಡಮಾಡುವ 2025ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಸುರಭಿ ಬೈಂದೂರು ಇದರ ಬಾಲ ಕಲಾವಿದೆ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ದೀಪಾ ದಿನೇಶ ಕುಂದರ್ ಆಯ್ಕೆಯಾಗಿದ್ದಾರೆ.
ಈಕೆ ಸ್ವಾತಿ ಮತ್ತು ದಿನೇಶ ಕುಂದರ್ ಅವರ ಪುತ್ರಿ. ಅವರು ಯಕ್ಷಗಾನ, ರ೦ಗಭೂಮಿಯಲ್ಲಿ ಅಭ್ಯಾಸ ಮಾಡುತ್ತಾ, ವಿವಿಧೆಡೆ ಪ್ರದರ್ಶನವನ್ನು ನೀಡಿದ್ದಾರೆ. ಯಕ್ಷಗಾನ ಹೆಜ್ಜೆ ಅಭ್ಯಾಸ ಮಾಡುತ್ತಿರುವ ದೀಪ್ತಾ ಹಲವಾರು ವೇದಿಕೆಗಳಲ್ಲಿ ಯಕ್ಷಗಾನ ನೃತ್ಯ ಪ್ರದರ್ಶನ ನೀಡಿದ್ದಾರೆ.










