Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ: 14ನೇ ವರ್ಷದ ಇನಿದನಿ ಸಂಗೀತ ಸಂಜೆಗೆ ತುಂಬಿದ ಜನಸಾಗರ
    ಊರ್ಮನೆ ಸಮಾಚಾರ

    ಕುಂದಾಪುರ: 14ನೇ ವರ್ಷದ ಇನಿದನಿ ಸಂಗೀತ ಸಂಜೆಗೆ ತುಂಬಿದ ಜನಸಾಗರ

    Updated:12/01/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕುಂದಾಪುರದ ಜನ ಸ್ಥಿತಪ್ರಜ್ಞರು, ಕಲಾಪ್ರಿಯರು ಎಂಬುದಕ್ಕೆ ಇಂದಿನ ಇನಿದನಿ ಸಂಗೀತ ಸಂಜೆ ಸಾಕ್ಷಿಯಾಗಿದೆ. ವರ್ಷದಿಂದ ವರ್ಷಕ್ಕೆ ಸಂಗೀತ ಪ್ರೇಮಿಗಳನ್ನು ಸಾಗರೋಪಾದಿಯಲ್ಲಿ ಸೆಳೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಈ ವರ್ಷ ಮೈದಾನ ತುಂಬಿದೆ. ಇನಿದನಿ ಕುಂದಾಪುರದ ಹೆಮ್ಮೆ ಎಂದು ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ನುಡಿದರು.

    Click Here

    Call us

    Click Here

    ಅವರು ಇಲ್ಲಿನ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಕಲಾಕ್ಷೇತ್ರ ಟ್ರಸ್ಟ್ ಭಾನುವಾರ ಹಮ್ಮಿಕೊಂಡ 14ನೇ ವರ್ಷದ ಇನಿದನಿ ಸಂಗೀತ ರಸಮಂಜರಿ ಹಳೆಯ ಚಲನಚಿತ್ರಗಳ ಗೀತಗಾಯನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕರ್ಣಾಟಕ ಬ್ಯಾಂಕ್‌ನ ಎಜಿಎಂ ರಮೇಶ್ ವೈದ್ಯ ಮಾತನಾಡಿ, ಇಡೀ ಇನಿದನಿ ರಾಜ್ಯದಲ್ಲೇ ಅತ್ಯಂತ ಗುಣಮಟ್ಟದ ಕಾರ್ಯಕ್ರಮವಿದು. ಮನತುಂಬಿ ಬಂದಿದೆ. ಜೀವನದ ಎಲ್ಲಾ ನೋವು ಮರೆಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಅತೀವ ಸಂತಸ ನೀಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಕಲಾಕ್ಷೇತ್ರದ ಜತೆಗಿರುತ್ತದೆ ಎಂದರು.

    ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಶುಭಹಾರೈಸಿ, ಒಮ್ಮೆ ಇನಿದನಿಯಲ್ಲಿ ಭಾಗವಹಿಸಿದವರು ರಸ ಘಳಿಗೆಯನ್ನು ಜೀವನದಲ್ಲಿ ಎಂದಿಗೂ ಮರೆಯಲಾರರು ಎಂದರು.

    ಪುಣೆ ಉದ್ಯಮಿ ಮಂಜುನಾಥ್ ಶೆಟ್ಟಿ, ಎಸ್‌ಬಿಎಂ ರೀಜನಲ್ ಮ್ಯಾನೇಜರ್ ಪ್ರಕಾಶ್, ಎಸ್‌.ಬಿಎಂ ಕಾರವಾರ ರೀಜನಲ್ ಮ್ಯಾನೇಜರ್ ಮುರಳೀಧರ್, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಡಿ ಕೆಎಎಸ್ ಅಧಿಕಾರಿ ಸದಾಶಿವ ಪ್ರಭು, ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜೇಶ್ ಕಾವೇರಿ, ಮಾರ್ಕೋಡು ಸುಧೀರ್‌ ಕುಮಾರ ಶೆಟ್ಟಿ, ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್‌ ಶೆಟ್ಟಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ರೋಟರಿ ಕುಂದಾಪುರ ಅಧ್ಯಕ್ಷ ನಾಗರಾಜ ಶೆಟ್ಟಿ, ಸ್ಮಾರ್ಟ್ ಬಜಾರ್ ಸಂಸ್ಥೆಯ ವೀಣಾ, ಸನ್ನಿಧಿ ಟ್ರಾವಲ್ಸ್‌ನ ಸನ್ನಿಧಿ ಶೆಟ್ಟಿ, ರಾಮಕೃಷ್ಣ ಬಿಜೂರು, ಪ್ರಶಾಂತ್ ಹವಲ್ದಾರ್, ಅಶ್ವಥ್‌ ಆರ್.‌ ಹೆಗ್ಡೆ ಅಲ್ತಾರು, ರಾಮಕೃಷ್ಣ ಬಿ.ಜಿ., ಉದ್ಯಮಿಗಳಾದ ಜಯಕರ ಶೆಟ್ಟಿ, ಸುರೇಂದ್ರ ಶೆಟ್ಟಿ, ಕಲಾಕ್ಷೇತ್ರ ಟ್ರಸ್ಟ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

    Click here

    Click here

    Click here

    Call us

    Call us

    ಕಲಾಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಕಿಶೋರ್ ಕುಂದಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್‌ ಕುಮಾರ್ ಸ್ವಾಗತಿಸಿ, ಕೆ.ವಿ. ರಮಣ್ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    56ನೇ ರೈತ ಪುರಸ್ಕಾರಕ್ಕೆ ಶೇಖರ್ ಪೂಜಾರಿ ಗುಂಡ್ಮಿ ಆಯ್ಕೆ

    20/08/2026

    ನಮ್ಮಗೆ ಸರಕಾರದ ಪ್ರೋತ್ಸಾಹಧನ ಬೇಡ ಕನಿಷ್ಟ ದಿನಗೂಲಿ ನೀಡಿ: ಹೈನುಗಾರರ ಬೇಡಿಕೆ

    20/08/2026

    ಅಗಸ್ಟ್ 23ರಂದು ಬೈಂದೂರಿನಲ್ಲಿ ʼಗಮ್ಮತ್ತ್ʼ ಕಾರ್ಯಕ್ರಮ. ದಿನವಿಡಿ ಹತ್ತಾರು ವಿಶೇಷತೆಗಳು

    20/08/2026
    Leave A Reply Cancel Reply

    thirteen − 4 =

    Call us

    Click Here

    Call us

    Call us

    Call us
    Highest Viewed Recently
    • 56ನೇ ರೈತ ಪುರಸ್ಕಾರಕ್ಕೆ ಶೇಖರ್ ಪೂಜಾರಿ ಗುಂಡ್ಮಿ ಆಯ್ಕೆ
    • ನಮ್ಮಗೆ ಸರಕಾರದ ಪ್ರೋತ್ಸಾಹಧನ ಬೇಡ ಕನಿಷ್ಟ ದಿನಗೂಲಿ ನೀಡಿ: ಹೈನುಗಾರರ ಬೇಡಿಕೆ
    • ಅಗಸ್ಟ್ 23ರಂದು ಬೈಂದೂರಿನಲ್ಲಿ ʼಗಮ್ಮತ್ತ್ʼ ಕಾರ್ಯಕ್ರಮ. ದಿನವಿಡಿ ಹತ್ತಾರು ವಿಶೇಷತೆಗಳು
    • ಸಾಸ್ತಾನದಿಂದ ಶ್ರೀ ಕ್ಷೇತ್ರ ತಿರುಪತಿಗೆ 16ನೇ ವರ್ಷದ ಬೃಹತ್ ಪಾದಯಾತ್ರೆ
    • ಮರವಂತೆ: ಅರಬ್ಬಿ ಸಮುದ್ರದಲ್ಲಿ ದೋಣಿ ಆಯತಪ್ಪಿ ಬಿದ್ದು ಮೀನುಗಾರ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.