ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಬಾರಕೂರು ಬಂಡೀಮಠ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ನಾಗರಡಿಯಲ್ಲಿ ಮಂಗಳವಾರ ಮತ್ತು ಬುಧವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮಕರ ಸಂಕ್ರಾಂತಿ ಉತ್ಸವ ಜರುಗಿತು.
ಮಂಗಳವಾರ ಬೆಳಿಗ್ಗೆ ಬಡಾ ಗಣಪತಿ ದೇವಸ್ಥಾನದಲ್ಲಿ ಗಣಹೋಮ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮತು ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ ಮತ್ತು ರುದ್ರಾಭಿಷೇಕ, ಕಲ್ಪೋಕ್ತ ಪೂಜೆ, ನಾಗರಡಿಯಲ್ಲಿ ಋಕ್ ಸಂಹಿತಾ ಪಾರಾಯಣ, ಮಹಾ ಪೂಜೆ ಜರುಗಿತು.

ಮಂಗಳವಾರ ಸಂಜೆ ಭಜನೆ, ರಂಗಪೂಜೆ, ನಾಗರಡಿಯಲ್ಲಿ ಕಾಯಿ ಪೂಜೆ, ನಾಗದೇವರ ಪ್ರಸನ್ನ ಪೂಜೆ, ಹಾಲಿಟ್ಟು ಸೇವೆ ಬಳಿಕ ಮಾರಿ ಹೊರಡಲಿದ್ದು ಊರಿನ 4 ಭಾಗಕ್ಕೆ ನಾಗಪಾತ್ರಿಯವರೊಂದಿಗೆ ಸಾತ್ವಿಕವಾದ ಬಲಿಯೊಂದಿಗೆ ಮಾರಿ ಪೂಜೆ ಜರುಗಿತು.
ಬುಧವಾರ ಮುಂಜಾನೆ ನಾಗಮಂಡಲ, ನಾಗದರ್ಶನ, ತುಲಾಭಾರ ಸೇವೆ, ಸ್ವರಸೇವೆ 2 ದಿನವೂ ಅನ್ನ ಸಂತರ್ಪಣೆಯಲ್ಲಿ ಮತ್ತು ಪೂಜೆ ಉತ್ಸವದಲ್ಲಿ ಸಹಸ್ರಾರು ಮಂದಿಭಾಗವಹಿಸಿದ್ದರು.










