ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗುರು ಜ್ಯೋತಿ ಸೆಂಟರ್ 35ನೇ ವರ್ಷದ ಸವಿನೆನಪಿನ ಕಾರ್ಯಕ್ರಮದ ಅಂಗವಾಗಿ 16 ಅಂಬ್ಯುಲೆನ್ಸ್ ಡ್ರೈವರ್‌ಗೆ ಸನ್ಮಾನ ಮತ್ತು ಸಹಾಯಹಸ್ತ, ಪುರಸಭೆಯ ಸ್ವಚ್ಚತಾ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಹಾಗೂ ಅಶಕ್ತರಿಗೆ ಸಹಾಯಹಸ್ತ ವಿತರಣೆ ಇತ್ತೀಚಿಗೆ ಪುರಸಭೆ ಎದುರು ನಡೆಯಿತು.
ಕುಂಬಾಶಿ ಶ್ರೀ ಆನೆಗುಡ್ಡೆ ದೇವಸ್ಥಾನದ ಧರ್ಮದರ್ಶಿ ರಮಣ ಉಪಾಧ್ಯಾಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಕುಂದಾಪುರ ಮುಖ್ಯಾಧಿಕಾರಿ ಆನಂದ ಜೆ., ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ನಂಜ ನಾಯ್ಕ, ಕುಂದಾಪುರ ವಕೀಲರಾದ ಶಶಿದರ ಹೆಗ್ಡೆ, ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಉಪಸ್ಥಿತರಿದ್ದರು. ಗುರು ಜ್ಯೋತಿ ಜ್ಯೂಸ್ ಸೆಂಟರ್‌ನ ಸತೀಶ್ ಪೂಜಾರಿ ಹಾಗೂ ನರಸಿಂಹ ಪೂಜಾರಿ ಇದ್ದರು.










