ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ಇವರಿಂದ ಶಾಸ್ತ್ರೀಯ ಸಂಗೀತ ತರಗತಿ ಮತ್ತು ಸುಗಮ ಸಂಗೀತ, ಭಕ್ತಿ ಸಂಗೀತ, ಕರೋಕೆ ಸಂಗೀತ ತರಗತಿಯು ಕೋಟ ಗಾಂಧಿ ಮೈದಾನದ ಸಮೀಪದ ಕೋಟ ಮಹಿಳಾ ಮಂಡಲದಲ್ಲಿ ಪ್ರಾರಂಭಗೊಂಡಿತು.
ಸಭೆಯ ಅಧ್ಯಕ್ಷತೆಯನ್ನು ಕೋಟ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಎ. ಕುಂದರ್ ವಹಿಸಿದ್ದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕೋಶಾಧಿಕಾರಿ ಸುಶೀಲ ಸೊಮಶೇಖರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಶೀಲ ಸೋಮಶೇಖರ್ ಅವರು ಪ್ರತಿ ಮನೆಯಲ್ಲಿ ಭಜನೆ, ಸಂಗೀತ ನಿರಂತರವಾಗಿ ನಡೆಯಬೇಕು. ಇದರಿಂದ ಭಗವಂತನ ಕೃಪೆಗೆ ಪ್ರಾಪ್ತಿಯಾಗುವುದಲ್ಲದೆ ಮನಶಾಂತಿ ನೆಮ್ಮದಿ ಪರಸ್ಪರ ಪ್ರೀತಿಯ ಜೀವನವನ್ನು ಹೊಂದಾಬಹುದು ಎಂದರು.
ಸಂಗೀತ ಶಿಕ್ಷಕಿ ಭಾಗೇಶ್ವರಿ ಜಿ. ಮಯ್ಯ ಅವರ ಪೋಷಕರಾದ ಜ್ಯೋತಿಷ್ಮತಿ ಉಡುಪ ಅವರು ಶಾಸ್ತ್ರೀಯವಾಗಿ ಭಜನೆ ಕಲಿಸುದಾರ ಮೂಲಕ ವಿದ್ಯುಕ್ತವಾಗಿ ತರಗತಿಗೆ ಚಾಲನೆ ನೀಡಿದರು. ಸಂಸ್ಥೆಯ ಸಂಗೀತ ಶಿಕ್ಷಕಿ ಭಾಗೇಶ್ವರಿ ಜಿ. ಮಯ್ಯ ಪ್ರಸ್ತಾವನೆಗೈದರು.
ಸಂಸ್ಥೆಯ ನಿರ್ದೇಶಕ ಜಿ. ಗೋಪಾಲಕೃಷ್ಣ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಚಿಂತಕಿ ಭಾರತಿ ವಿ. ಮಯ್ಯ ಪ್ರಾರ್ಥನೆಗೈದು, ಸಂಸ್ಥೆಯ ವಿದ್ಯಾರ್ಥಿ ಸ್ಮಿತಾ ರಾಣಿ ವಂದಿಸಿದರು.
















