ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 118ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಡಾ. ಕಾಶೀನಾಥ್ ಪೈ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಸರಂಗ ಕೋಟ ಇದರ ಮುಖ್ಯಸ್ಥರಾದ ಸುಧಾ ಮಣೂರು, ಶ್ರೀ ಅಮೃತೇಶ್ವರಿ ಮೇಳದ ಪ್ರದಾನ ಭಾಗವತ ರಾಘವೇಂದ್ರ ಮಯ್ಯ, ಶಿಕ್ಷಕಿ ಮಾಧುರಿ ಶ್ರೀರಾಮ್, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ಧನ ಹಂದೆ ಮಂಗಳೂರು ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಧಾ ಮಣೂರು ಹಾಗೂ ಮಾಧುರಿ ಶ್ರೀರಾಮ್ ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ತದನಂತರ ರಸರಂಗ ಕೋಟ ಇದರ ಮಹಿಳಾ ಸದಸ್ಯೆಯರಿಂದ ನಡೆದ ಶಮಂತಕ ರತ್ನ ಯಕ್ಷಗಾನ ತಾಳ ಮದ್ದಳೆ ನೆರೆದ ಪ್ರೇಕ್ಷಕರನ್ನು ರಂಜಿಸಿತು. ರಾಜೇಂದ್ರ ಪೈ ಅವರು ಧನ್ಯವಾದ ಸಮರ್ಪಿಸಿದರು.










