ಒಹ್! ಇದೆಲ್ಲಾ ನಿಜನಾ? ಹೀಗೂ ಇದ್ದಿತ್ತಾ…!!

Call us

Call us

Call us

ನರೇಂದ್ರ ಎಸ್. ಗಂಗೊಳ್ಳಿ.

Call us

Click Here

ದಿನದಿಂದ ದಿನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವ ರೀತಿಯ ಬಗೆಗೆ ನಾನು ವಿವರವಾಗಿ ಹೇಳುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ. ಆ ಬಗೆಗೆ ಹೆಮ್ಮೆಪಟ್ಟುಕೊಳ್ಳುತ್ತಿರುವಂತಹ ಸಂದರ್ಭದಲ್ಲೇ ಆ ರಂಗ ಸಾಗುತ್ತಿರುವ ವೇಗ ಮತ್ತು ಅದು ತಂದೊಡ್ಡಬಲ್ಲ ಅಪಾಯಗಳನ್ನು ನೆನೆಸಿಕೊಂಡರೆ ನಿಜಕ್ಕೂ ಮೈ ಜುಮ್ಮೆನ್ನುತ್ತದೆ. ವೈಜ್ಞಾನಿಕ ಸಂಶೋಧನೆಗಳು ಯಾವತ್ತೂ ಜಗತ್ತಿಗೆ ಉಪಕಾರಿಯಾಗುವಂತಿರಬೇಕು.ಹಾಗಾಗಬೇಕಾದರೆ ಸಂಶೋಧನೆಯ ಹುಡುಕಾಟ ಉದ್ದೇಶ ಮತ್ತು ಸಂಶೋಧನೆಯ ಫಲದ ಬಳಕೆ ಕೂಡ ವಿವೇಚನೆಯಿಂದ ಕೂಡಿರಬೇಕು.

ಒಂದು ಆಟಂ ಬಾಂಬ್ ಎನ್ನುವ ಭೀಕರ ಸಂಶೋಧನೆಯಿಂದಾಗಿ ಇವತ್ತು ಇಡೀ ಜಗತ್ತು ಅಣುಯುದ್ಧಧ ಬೀತಿಯ ನೆರಳಿನಲ್ಲೇ ಜೀವನ ಸಾಗಿಸಬೇಕಾಗಿಬಂದಿರುವುದು ಸತ್ಯ.ಈಗ್ಗೆ ವರುಷಗಳ ಹಿಂದೆ ಫ್ಲೋರೆನ್ಸಿಕ್ ಅಧ್ಯಯನದಲ್ಲಿ ಬಳಸಲಾಗುತ್ತಿದ್ದ ತಂತ್ರಜ್ಞಾನವನ್ನು ಬಳಸಿಕೊಂಡು ಲುಮಿನಾಲ್ ರಾಸಾಯನಿಕ ದ್ರಾವಣಕ್ಕೆ ಮನುಷ್ಯನ ರಕ್ತವನ್ನು ನೇರವಾಗಿ ಸೇರಿಸಿದಾಗ ನೀಲಿಬಣ್ಣದ ಬೆಳಕನ್ನು ಸೃಷ್ಟಿಸಲು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಡುವ ಪ್ರಯೋಗವೊಂದು ನಡೆದಿತ್ತು. ಇಂಧನ ಮತ್ತು ವಿದ್ಯುತ್ ಎಷ್ಟು ಅಮೂಲ್ಯವಾದುದು ಎನ್ನುವುದನ್ನು ಜಗತ್ತಿಗೆ ತಿಳಿಸಿಕೊಡಲು ಈ ಪರೀಕ್ಷೆ ಮಾಡಲಾಗಿತ್ತು ಎನ್ನುವ ಸಬೂಬು ಜತೆಗಿದ್ದಿತ್ತು. ಆದರೆ ಇದೇ ತಂತ್ರವನ್ನು ಬಳಸಿ ಬೆಳಕನ್ನು ಪಡೆಯಲು ಪ್ರಾರಂಭಿಸಿದರೆ ಮುಂದೆ ಪರಿಸ್ಥಿತಿ ಏನಾದೀತು ಎನ್ನುವುದನ್ನು ನೀವೆ ಯೋಚಿಸಿ.

ನಿಜ. ಒಂದಷ್ಟು ಅಗತ್ಯವಿಲ್ಲದ ಅಥವಾ ಅವಿವೇಕದ ಸಂಶೋಧನೆಯ ನಡುವೆಯೂ ವಿಜ್ಞಾನ ಜಗತ್ತು ನಮಗೆ ನೀಡಿದ ಕೋಟ್ಯಂತರ ಕೊಡುಗೆಗಳಿಗೆ ನಾವು ಯಾವತ್ತೂ ಆ ಕ್ಷೇತ್ರಕ್ಕೆ ಋಣಿಯಾಗಿರಲೇ ಬೇಕು.ನಮ್ಮ ಬದುಕು ಈ ಹೊತ್ತು ಸುಂದರವಾಗಿದೆಯೆಂದರೆ ಅದಕ್ಕೆ ವಿಜ್ಞಾನ ಲೋಕ ನೀಡಿರುವ ಕೊಡುಗೆ ಅಪಾರವಾದುದು.ನಿಮಗೆ ಗೊತ್ತಾ ಕೇವಲ ಮನುಷ್ಯನ ಅವಿವೇಕತನ,ಒಳಜಗಳ,ದುರಾಸೆ, ದ್ವೇಷ,ಮುನಿಸು, ಹೊಟ್ಟೆಕಿಚ್ಚು ,ಸ್ವಾರ್ಥ ಮತ್ತು ಅಹಂ ಇತ್ಯಾದಿ ಕಾರಣಗಳಿಂದಾಗಿ ವಿಜ್ಞಾನ ರಂಗದಲ್ಲಿ ಕಂಡುಹಿಡಿಯಲ್ಪಟ್ಟ ಅದೆಷ್ಟೋ ಅಮೋಘವಾದ ಸಂಶೋಧನೆಗಳು ಕಿಂಚಿತ್ತೂ ಸಾಕ್ಷ್ಯವೂ ದೊರೆಯದಂತೆ ಇತಿಹಾಸದ ಕಾಲಗರ್ಭದಲ್ಲಿ ನಾಶವಾಗಿ ಹೋಗಿವೆ. ಇವುಗಳಲ್ಲಿ ಕೆಲವೊಂದು ಸಂಶೋಧನೆಗಳು ಈ ಹೊತ್ತು ಇದ್ದಿದ್ದರೆ ಅವು ನಮ್ಮ ವೈದ್ಯಕೀಯ, ಜೀವಶಾಸ್ತ್ರ, ರಸಾಯನ ಶಾಸ್ತ್ರ ಇತ್ಯಾದಿ ಕ್ಷೇತ್ರಗಳ ಸ್ವರೂಪವನ್ನೇ ಬದಲಿಸಿಬಿಡುತ್ತಿದ್ದುದರಲ್ಲಿ ಸಂಶಯವಿಲ್ಲ.ಅಂತಹ ಕೆಲ ಸಂಶೋಧನೆಗಳನ್ನು ವಿವಿಧ ಆಕರಗಳಿಂದ ಸಂಗ್ರಹಿಸಿ ಈ ಪುಟ್ಟ ಬರಹದಲ್ಲಿ ನೀಡುವ ಪ್ರಯತ್ನ ಮಾಡಿದ್ದೇನೆ.ಓದಿದ ಬಳಿಕ ಒಹ್! ಇದೆಲ್ಲಾ ನಿಜನಾ?ಹೀಗೂ ಇದ್ದಿತ್ತಾ…?ಅಂತ ನಿಮಗೂ ಅನ್ನಿಸದೆ ಇರದು.

ಗ್ರೀಕ್ ಫೈರ್ :
ಇದು ಒಂದು ಯುದ್ಧಶಸ್ತ್ರ. ಇದನ್ನು ಬಳಸುತಿದ್ದುದು ಗ್ರೀಕ್ ದೇಶದ ಬೈಜಂಟೈನ್ ಸಮ್ರಾಜ್ಯದ ಕಾಲಘಟ್ಟದಲ್ಲಿ ( ಸುಮಾರು ಕ್ರಿ.ಪೂ.673).ಈ ಶಸ್ತ್ರದಿಂದ ಪ್ರಯೋಗಿಸಿದ ಬೆಂಕಿಯು ನೀರಿನ ಮೇಲೆ ಕೂಡ ಆರದೆ ಉರಿಯುತಿತ್ತು. ಹಾಗಾಗಿ ಗ್ರೀಕರು ಇದನ್ನು ನೌಕಾಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚಾಗಿ ಬಳಸುತ್ತಿದ್ದರು.ಈ ಅಸ್ತ್ರದಲ್ಲಿ ಬಳಸುತ್ತಿದ್ದ ರಸಾಯನಿಕ ಮಿಶ್ರಣದ ತಂತ್ರಜ್ಞಾನವನ್ನು ಅವರು ಬಹಳ ರಹಸ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಆ ಸಮ್ರಾಜ್ಯ ಪತನದೊಂದಿಗೆ ಒಂದು ಅದ್ಭುತ ಯುದ್ಧಶಸ್ತ್ರದ ತಂತ್ರಜ್ಞಾನ ಕೂಡ ನಾಶವಾಗಿ ಹೋಯಿತು.

Click here

Click here

Click here

Click Here

Call us

Call us

ಜೀವ ಶಕ್ತಿ ಚಿಕಿತ್ಸೆ :
ವಿಲ್‌ಹೆಮ್ ರಿಚ್ ಎನ್ನುವ ಮನೋವಿಜ್ಞಾನಿ 1930ರಲ್ಲಿ ವಿವಿಧೆಡೆ ಹರಿದಾಡುವ ಜೀವಶಕ್ತಿಯನ್ನು ಸಂಗ್ರಹಿಸುವ ಸಾಮರ್ಥ್ಯವುಳ್ಳ ಆರ್ಗಾನ್ ಎಕ್ಯುಮಲೇಟರ್ ಎನ್ನುವ ಪೆಟ್ಟಿಗೆಯಂತಹ ಉಪಕರಣವೊಂದನ್ನು ಲೋಹ ಮತ್ತು ಮರದಸಹಾಯದಿಂದ ತಯಾರಿಸಿದ್ದ. ಜೀವಶಕ್ತಿಯನ್ನು ಆ ಪೆಟ್ಟಿಗೆಯ ಕೇಂದ್ರ ಭಾಗಕ್ಕೆ ಆಕರ್ಷಿಸಿ ರೋಗಿಗಳನ್ನು ಪೆಟ್ಟಿಗೆಯ ಒಳಭಾಗದಲ್ಲಿ ಕೂರಿಸಿ ಅವರ ಚರ್ಮ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ಕಡಿಮೆಮಾಡಲು ಸಾಧ್ಯ ಎಂದು ಹೇಳಿದ್ದನು. ಇದರ ಚಿಕಿತ್ಸಾ ಪ್ರಯೋಗಗಳು ಕೂಡ ಯಶಸ್ಸನ್ನು ಕಂಡಿದ್ದವು. ಆದರೆ ಆ ವೇಳೆಗೆ ಅಮೇರಿಕನ್ ಮೆಡಿಕಲ್ ಅಸೋಷಿಯೇಶನ್ ನೇತ್ರತ್ವದಲ್ಲಿ ಆಗಿನ ಸಾಂಪ್ರಾದಾಯಿಕ ಚಿಕಿತ್ಸಕರು ಮತ್ತು ವೈದ್ಯರು ವಿಲ್ ಹೆಮ್ ನ ಹೊಸ ಚಿಕಿತಾ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ್ದಷ್ಟೇ ಅಲ್ಲ ಅವನ ಮೇಲೆ ಕೋರ್ಟಿನಲ್ಲಿ ಮೊಕದ್ದೊಮೆ ದಾಖಲಿಸಿದರು.ಅವನ ಚಿಕಿತ್ಸಾ ಪದ್ಧತಿ ಮತ್ತು ಉಪಕರಣಗಳ ಬಳಕೆಗೆ ತಡೆಯಾಜ್ಞೆ ಕೋರಲಾಗಿತ್ತು. ಕೋರ್ಟ್ ಅಸ್ತು ಎಂದಿತ್ತು. ಅಲ್ಲಿಗೆ ಅವನ ಅಷ್ಟೂ ಉಪಕರಣಗಳನ್ನು ವ್ಯವಸ್ಥಿತವಾಗಿ ನಾಶಮಾಡಲಾಯಿತು. ಕೋಟ್ ಆದೇಶಕ್ಕೆ ವಿರುದ್ಧವಾಗಿ ನಡೆದನೆಂಬ ಕಾರಣಕ್ಕೆ ವಿಲ್‌ಹೆಮ್‌ಗೆ ಜೈಲುಶಿಕ್ಷೆ ವಿಧಿಸಲಾಯಿತು. ಅದೇಕೋ ಗೊತ್ತಿಲ್ಲ. ವಿಲ್ ಹೆಮ್ ಕೋರ್ಟಿನಲ್ಲಿ ಮೌನ ತಾಳಿದ್ದ. 1975ರಲ್ಲಿ ಆತ ತೀರಿಕೊಂಡ. ನಿಮಗೆ ಗೊತ್ತಿರಲಿ ಆತ ಜೀವಶಕ್ತಿಯ ಬಗೆಗೆ ಬರೆದಿದ್ದ ವಿವಿಧ ರೀತಿಯ ಹತ್ತು ಪುಸ್ತಕಗಳನ್ನು ಸಾಕ್ಷೀಗೂ ಸಿಗದಂತೆ ಸಂಪೂರ್ಣವಾಗಿ ನಾಶಮಾಡಲಾಗಿತ್ತು. ಅಲ್ಲಿಗೆ ಜೀವಶಕ್ತಿ ಚಿಕಿತ್ಸೆ ಇತಿಹಾಸದ ಭಾಗವಾಗಿ ಮಾತ್ರ ಉಳಿಯಿತು.

ನಿರಂತರ ಚಲನಶಕ್ತಿ ಉಪಕರಣ (ಪರ್‌ಪೆಚ್ಯುವಲ್ ಮೋಶನ್ ಡಿವೈಸ್)

ಇದು ನಮ್ಮ ಇಂಧನ ಕೊರತೆ ಸಮಸ್ಯೆಗೆ ಪರಿಹಾರವಾಗಿ ಒದಗಬಲ್ಲುದಾಗಿದ್ದ ದೊಡ್ಡ ಸಂಶೋಧನೆ. ಅವತ್ತು ಭೂಮಿಯ ನೈಸರ್ಗಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಅದರಲ್ಲೂ ವಿಶೇಷವಾಗಿ ನೀರಿನ ಚಲನಶಕ್ತಿಯನ್ನು ಬಳಸಿಕೊಂಡು ನಿರಂತರವಾಗಿ ಚಲಿಸಬಲ್ಲ ಉಪಕರಣಗಳನ್ನು ಆಸ್ಟ್ರಿಯಾದ ವಿಕ್ಟರ್ ಶೂಬರ್ಜರ್ ಎನ್ನುವ ವ್ಯಕ್ತಿ ಕಂಡುಹಿಡಿದಿದ್ದಾನೆ ಎಂದು ಅಂತರ್ಜಾಲಗಳಲ್ಲಿ ವರದಿಯಾಗಿತ್ತು.ಅಮೆರಿಕ ಈ ವಿಷಯವನ್ನು ಗೌಪ್ಯವಾಗಿಟ್ಟಿದೆ ಎನ್ನಲಾಗಿತ್ತು. ವಿಕ್ಟರ್ ಉಪಕರಣಗಳನ್ನು ಕಂಡುಹಿಡಿದದ್ದು ಸುಳ್ಳು ಎಂದ. ಆದರೆ ಅಂತಹ ಉಪಕರಣಗಳ ತಯಾರಿಕೆ ಸಾಧ್ಯ ಎಂದು ವಾದಿಸಿದ್ದ.ಆದರೆ ಇದು ಈಗ ಚಾಲ್ತಿಯಲ್ಲಿರುವ ಭೌತಶಾಸ್ತ್ರದ ನಿಯಮಗಳಿಗೆ ವಿರುದ್ಧವಾಗಿದ್ದುದರಿಂದ ಒಂದು ವರ್ಗ ಆತನನ್ನು ತೀವ್ರವಾಗಿ ವಿರೋಧಿಸಿತ್ತು. ಎರಡನೇ ಪ್ರಪಂಚ ಯುದ್ಧದ ಬಳಿಕ ಅಮೆರಿಕ ವಿಕ್ಟರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತನ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ವಿಕ್ಟರ್ ಜೈಲುಪಾಲಾದ. ಮುಂದೊಮ್ಮೆ ವಿಶ್ವವಿದ್ಯಾಲಯವೊಂದು ಆತನ ಸಂಶೋಧನೆಗಳಲ್ಲಿ ನಿಜ ಅಡಗಿದ್ದನ್ನು ಪತ್ತೆ ಹಚ್ಚಿತು. ಆದರೆ ಆ ವೇಳೆಗೆ ಅದರ ರಹಸ್ಯ ಗೊತ್ತಿದ್ದ ವಿಕ್ಟರ್ ಇಹಲೋಕ ತ್ಯಜಿಸಿದ್ದ.ಅಮೆರಿಕದ ನಾಜಿ ದ್ವೇಷ ಒಂದು ಅದ್ಭುತ ಸಂಶೋಧನೆಯನ್ನು ಬಲಿತೆಗೆದುಕೊಂಡಿತ್ತು.

ಫ್ಲೆಕ್ಸಿಬಲ್ ಗ್ಲಾಸ್ (ಒಡೆಯದ ಬಾಗುವ ಗಾಜು)

ಮಾಮೂಲಿ ಗಾಜಿನ ಲೋಟವನ್ನು ಕೆಳಕ್ಕೆ ಹಾಕಿದರೆ ಒಡೆದು ಹೋಗುತ್ತದೆ. ಬಿಸಾಡಿದರೂ ಒಡೆಯುತ್ತದೆ. ಆದರೆ ಹಾಗೆ ಒಡೆದು ಹೋಗುವ ಬದಲು ಲೋಹದ ಲೋಟದ ತೆರನಾಗಿ ನೆಗ್ಗಿದರೆ! ಕ್ರಿ.ಶ.14ರಿಂದ 37ರ ನಡುವೆ ರೋಮನ್ ಸಮ್ರಾಜ್ಯವನ್ನು ಆಳಿದ ಟೈಬೀರಿಯಸ್ ಸೀಸರ್ ಕಾಲದಲ್ಲಿ ಇಮಥಾದ್ದೊಂದು ಅದ್ಭುತ ಗುಣವುಳ್ಳ ಗಾಜು ತಯಾರಿಸದ್ದರ ಬಗೆಗೆ ಅಂದಿನ ಸ್ಪೇನ್ ದೇಶದ ಸ್ಯಾವಿಲ್ಲೇ ಪ್ರಾಂತ್ಯದ ಸಂತ ಈಸಿಡೋರ್ ತನ್ನ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ಅಂದು ಸೀಜರ್‌ನ ಆಸ್ಥಾನಕ್ಕೆ ಬಂದ ಕುಶಲಕರ್ಮಿಯೊಬ್ಬ ತಾನು ಒಡೆಯದಿರುವ ಗಾಜನ್ನು ತಯಾರಿಸಿರುವುದು ಮತ್ತು ಅದರ ತಂತ್ರಜ್ಞಾನ ತನಗೊಬ್ಬನಿಗೆ ತಿಳಿದಿರುವುದರ ಬಗೆಗೆ ಹೇಳಿಕೊಂಡು ಗಾಜಿನ ಲೋಟವೊಂಧನ್ನು ತೋರಿಸುತ್ತಾನೆ.ಸೀಸರ್ ಪರೀಕ್ಷೆಗಾಗಿ ಲೋಟವನ್ನು ದೂರಕ್ಕೆ ಎಸೆಯುತ್ತಾನೆ. ಗಾಜಿನ ಲೋಟ ಒಡೆಯದೆ ಸ್ವಲ್ಪ ನೆಗ್ಗುತ್ತದೆ. ಹಾಗೆ ನೆಗ್ಗಿದ ಭಾಗವನ್ನು ಸಣ್ಣ ಸುತ್ತಿಗೆಯ ಸಹಾಯದಿಂದ ಆ ಕುಶಲಕರ್ಮಿ ಗುದ್ದಿ ಸರಿಪಡಿಸುತ್ತಾನೆ.ಅವಿವೇಕಿ ರಾಜ ಮುಂದೆ ಈ ಸಂಶೋಧನೆ ತನ್ನ ರಾಜ್ಯದಲ್ಲಿ ಚಿನ್ನ ಬೆಳ್ಳಿಯ ಬೆಲೆ ಕುಗ್ಗಿಸಬಹುದು ಎನ್ನುವ ತೀರಾ ಕ್ಷುಲ್ಲಕ ಕಾರಣಕ್ಕೆ ಆ ಕುಶಲಕರ್ಮಿಯನ್ನು ಅಲ್ಲಿಯೇ ಕೊಲ್ಲಿಸುತ್ತಾನೆ. ಎಂತಹ ದುರಂತ ನೋಡಿ.

ನೀರಿನಿಂದ ಚಲಿಸಬಲ್ಲ ಕಾರು :
ಸ್ಟ್ಯಾನ್ಲಿ ಮೇಯರ್ ಎನ್ನುವ ವ್ಯಕ್ತಿ ನೀರಿನಿಂದ ಚಲಿಸುವ ಕಾರಿನ ಸಂಶೋಧನೆಗಳ ಬಗೆಗೆ ಒಂಬತ್ತು ಪೇಟೆಂಟ್ ಗಳನ್ನು ಪಡೆದಿದ್ದರು.ವಾಟರ್ ಫ್ಯುಯೆಲ್ ಸೆಲ್ ತಂತ್ರಜ್ಞಾನವನ್ನು ಬಳಸಿ ಕಾರು ಓಡಿಸುವ ಪಾತ್ಯಕ್ಷಿಕೆ ಕೂಡ ಆತ ತೋರಿಸಿದ್ದ.ಆದರೆ ಅನವಶ್ಯಕವಾಗಿ ಆತನ ಸಂಶೋಧನೆಗಳನ್ನು ಟೀಕಿಸಲಾಯಿತು. ಅವನ ಸಂಶೋಧನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು.ಸಂಶೋಧನೆಗೆ ಧನಸಹಾಯ ನೀಡಿದ್ದ ವ್ಯಕ್ತಿಗಳೇ ಕೊನೆಗೆ ಮೇಯರ್ ತಮಗೆ ಮೋಸ ಮಾಡಿದ್ದಾಗಿಯೂ ತಮಗೆ ೨೫೦೦೦ಡಾಲರ್ ಹಣವನ್ನು ಮರಳಿಸಬೇಕಾಗಿಯೂ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಅದಾಗಿ ಕೆಲ ದಿನಗಳಲ್ಲೇ ಸ್ಟ್ಯಾನ್ಲಿ ಅಕಾಲ ಮರಣವನ್ನಪ್ಪಿದ್ದ. ಆತನ ಸಾವಿನ ಹಿಂದೆ ಪೇಟ್ರೋಲ್ ಉತ್ಪಾದಿಸುವ ಅರಬ್ ದೇಶಗಳ ಅಥವಾ ಬೆಲ್ಜಿಯಮ್ ಹಂತಕರ ಕ್ಯವಾಡವಿದೆ ಎನ್ನುವ ಆರೋಪಗಳಿವೆ, ಆದರೆ ಯಾವುದೂ ಈ ಹೊತ್ತಿಗೂ ಸಾಬೀತಾಗುತ್ತಿಲ್ಲ.

ಒಜೋನ್ ಥೆರಪಿ :
ಒಜೋನ್‌ನಲ್ಲಿ ಹಲವಾರು ರೋಗಗಳನ್ನು ಗುಣಪಡಿಸಬಲ್ಲ ಶಕ್ತಿ ಇದೆಯೆನ್ನುವುದನ್ನು ಜೈವಿಕ ತಂತ್ರಜ್ಞರು ಡಾಕ್ಟರುಗಳು ಸಂಶೋಧಕರು ನಂಬುತ್ತಾರೆ. ಒಝೋನ್ ಜೊತೆ ಕೆಲವು ರಾಸಾಯಿನಿಕಗಳನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಒಝೋನ್ ಚೇಂಬರುಗಳನ್ನು ಬಳಸಿಕೊಂಡು ಮನುಷ್ಯನ ಕ್ಯಾನ್ಸರ್ ನ್ಯುಮೋನಿಯ ಹಾಗು ವಿವಿಧ ರೀತಿಯ ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ ಎನ್ನುವುದನ್ನು ಕಂಡುಕೊಳ್ಳಲಾಗಿತ್ತು. ಜೊತೆಗೆ ಮನುಷ್ಯನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯ ಎಂದು ಹೇಳಲಾಗಿದೆ.ಆದರೆ ಈ ರೀತಿಯ ಚಿಕಿತ್ಸೆಯಲ್ಲಿ ಅಡ್ಡಪರಿಣಾಮದ ಸಾಧ್ಯತೆಗಳು ಅನೇಕವಿದ್ದವು.ಮತ್ತು ಆ ಅಂಶಗಳನ್ನೇ ಕೇಂದ್ರವಾಗಿಟ್ಟುಕೊಂಡು ಒಜೋನ್ ಚಿಕಿತ್ಸಾ ಪದ್ಧತಿಯನ್ನು ಬೆಳೆಯಲು ಬಿಡದೆ ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ.ಹೆಚ್ಚಿನ ದೇಶಗಳಲ್ಲಿ ಅದಕ್ಕೆ ಸಂಬಂಧಿಸಿದ ಉಪಕರಣಗಳ ತಯಾರಿಕೆಯನ್ನು ನಿಷೇಧಿಸಲಾಗಿದೆ.ಆದರೆ ನಿಜಕ್ಕೆಂದರೆ ಈ ಸಂಶೋಧನೆ ಪೂರ್ಣಗೊಂಡರೆ ವೈದ್ಯ ಲೋಕದ ಕೆಲಸ ಕಡಿಮೆ ಆಗಬಹುದು ಎನ್ನುವ ಪ್ರಜ್ಞೆ ಇಲ್ಲಿ ಕೆಲಸಮಾಡುತ್ತಿದೆ.( ಈ ಬಗೆಗ ಅಲ್ಲಲ್ಲಿ ಸಂಶೋಧನೆಗಳು ಇವತ್ತಿಗೂ ನಡೆಯುತ್ತಿವೆ ಎನ್ನುವುದು ಸತ್ಯ.)

ನಿಜ ಹೀಗೆ ವಿಜ್ಞಾನ ಲೋಕದಲ್ಲಿ ಹೇಳ ಹೆಸರಿಲ್ಲದೆ ಹೋದ ಅದ್ಭುತ ಎನ್ನಿಸುವಂತಹ ಸಂಶೋಧನೆಗಳ ಬಗೆಗೆ ಹೇಳ ಹೊರಟರೆ ಅದು ಅಂಕಣದ ವ್ಯಾಪ್ತಿ ಮೀರಿ ಪುಸ್ತಕವಾಗಬಹುದು. ಹೊಸವರುಷದ ಹೊಸ್ತಿಲಲ್ಲಿ ಒಂದಷ್ಟು ರೋಚಕ ವಿಚಾರಗಳೊಂದಿಗೆ ನಮ್ಮ ಮನಸ್ಸು ಮತ್ತಷ್ಟು ಹೊಸತನಗಳಿಗೆ ತೆರೆದುಕೊಳ್ಳಲಿ ವೈಜ್ಞಾನಿಕ ಮನೋಭಾವನೆ ನಮ್ಮದಾಗಲಿ ಎನ್ನುವ ಆಶಯದೊಂದಿಗೆ ಈ ಬರಹವನ್ನು ಒಪ್ಪಿಸಿದ್ದೀನಿ.

ಕೊನೆ ಮಾತು: ಹೊಸವರುಷದಲ್ಲಿ ಹೊಸತನ್ನು ಹುಡುಕಬೇಡಿ. ನಮ್ಮೊಳಗೆ ಹೊಸತನವನ್ನು ಹುಡುಕುವ ಪ್ರಯತ್ನ ಮಾಡೋಣ. ಎಲ್ಲರಿಗೂ ಶುಭವಾಗಲಿ

Leave a Reply

Your email address will not be published. Required fields are marked *

17 − 13 =