ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಕಿ ಮಾಲಾಶ್ರೀ ಖಾರ್ವಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಗಿರೀಶ ಖಾರ್ವಿ, ಸಾರ್ಜೆಂಟ್ ಅಟ್ ಆರ್ಮ್ಸ್ ಬಿ. ಲಕ್ಷ್ಮೀಕಾಂತ ಮಡಿವಾಳ, ಚುನಾಯಿತ ಅಧ್ಯಕ್ಷ ರಾಮನಾಥ ಚಿತ್ತಾಲ್, ಉಪಾಧ್ಯಕ್ಷ ಉದಯಶಂಕರ ರಾವ್, ತರಬೇತುದಾರ ಎಚ್.ಗಣೇಶ ಕಾಮತ್, ಜೊತೆ ಕಾರ್ಯದರ್ಶಿ ಗೋಪಾಲ ಬಿಲ್ಲವ, ಖಜಾಂಚಿ ಜನಾರ್ದನ ಪೂಜಾರಿ ಪೆರಾಜೆ, ನಿರ್ದೇಶಕರಾಗಿ ರಾಮನಾಥ ಚಿತ್ತಾಲ್, ರಾಘವೇಂದ್ರ ಕುಲಾಲ್, ಕೆ.ರಾಮನಾಥ ನಾಯಕ್, ರಾಘವೇಂದ್ರ ವಿ.ಮೇಸ್ತ, ಸುಗುಣ ಆರ್.ಕೆ., ಚೇರ್‌ಮೆನ್‌ಗಳು ನಾರಾಯಣ ಈ.ನಾಯ್ಕ್, ಉಮೇಶ ಎಲ್.ಮೇಸ್ತ, ವಾಸುದೇವ ಶೇರುಗಾರ್, ಪ್ರದೀಪ್ ಡಿ.ಕೆ., ಟಿ.ದಿನಕರ ಶೆಣೈ, ಎಂ.ನಾಗೇಂದ್ರ ಪೈ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.











