ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಲಯನ್ಸ್ ಕ್ಲಬ್ ತೆಕ್ಕಟ್ಟೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಕುಂಭಾಶಿಯ ಗ್ರಾಯತ್ರಿ ಸಭಾಂಗಣದಲ್ಲಿ ಬುಧವಾರ ಜರುಗಿತು.

ಪದಪ್ರದಾನ ಅಧೀಕಾರಿ MJF Ln ಹೃಷಿಕೇಶ್ ಹೆಗ್ಡೆ ಮತ್ತು ಜಿಲ್ಲಾ GAT ಆಫೀಸರ್ ಲಯನ್ ಅರುಣ್ ಹೆಗ್ಡೆ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷರಾಗಿ ವಕ್ವಾಡಿ ಸಂಪತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯಾಗಿ ಅರುಣ್ ಶೆಟ್ಟಿ ಉಳ್ತೂರು ಮತ್ತು ಖಜಾಂಚಿಯಾಗಿ ಹೆಚ್. ಚಂದ್ರಕಾಂತ್ ಶೆಟ್ಟಿ ಮತ್ತು ಪದಾಧಿಕಾರಿಗಳ ತಂಡ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಲಯ II ರ ವಲಯಾಧ್ಯಕ್ಷರಾದ ಲಯನ್ ಪ್ರವೀಣ್ ಹೆಗ್ಡೆ ಬನ್ನಾಡಿ, ಪ್ರಾಂತ್ಯ 2ರ ಪ್ರಾಂತ್ಯಾಧ್ಯಕ್ಷರಾದ ಲಯನ್ ಸರಸ್ವತಿ ಜಿ. ಪುತ್ರನ್, ಕಾರ್ಯದರ್ಶಿ ಲಯನ್ ಆಶಾ ಶಿವರಾಮ ಶೆಟ್ಟಿ, ಎಕ್ಸ್ಟೆಂಶನ್ ಚೇರ್‌ಪರ್ಸನ್ ಮಲ್ಯಾಡಿ ಸೀತಾರಾಮ ಶೆಟ್ಟಿ, ಮುಖ್ಯಅತಿಥಿಯಾಗಿ ಆಗಮಿಸಿದ ಗೌತಮ್ ಶೆಟ್ಟಿ ಟಾರ್ಪೊಡಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಕೆ. ಸೀತಾರಾಮ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಸರಕಾರಿ ಪ್ರೌಢಶಾಲೆ ಕೆದೂರಿನ ಅನುದೀಪ್ ಆಚಾರ್ಯ, ಸರಕಾರಿ ಪ್ರೌಢಶಾಲೆ ಬೇಳೂರಿನ ಕುಮಾರಿ ರೇಷ್ಮಾ ಮತ್ತು ಸರಕಾರಿ ಪ್ರೌಢಶಾಲೆ ತೆಕ್ಕಟ್ಟೆಯ ಕಿಶನ್ ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ತೆಕ್ಕಟ್ಟೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಆದ್ಯಾ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅರ್ಜುನ್ ದೇವಾಡಿಗ, ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ರಾಧಿಕಾ ಇವರನ್ನು ಲಯನ್ ಕಿಶೋರ್ ಶೆಟ್ಟಿ ಸಭೆಗೆ ಪರಿಚಯಿಸಿ, ಗಣ್ಯರ ಮೂಲಕ ಸನ್ಮಾನಿಸಿ ವಿದ್ಯಾರ್ಥಿವೇತನ ನೀಡಲಾಯಿತು.
ಕಳೆದ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯದಲ್ಲಿ 3ನೇ ರ್ಯಾಂಕ್ ಪಡೆದ ಎಕ್ಷಲೆಂಟ್ ಕಾಲೇಜು ಸುಣ್ಣಾರಿ ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಮಾನ್ಯ ಶೆಟ್ಟಿಯವರನ್ನು ಶಂಕರ್ ಶೆಟ್ಟಿ ಬವಲಾಡಿ ಸಭೆಗೆ ಪರಿಚಯಿಸಿ, ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ವಿದ್ಯಾರ್ಥಿವೇತನ ನೀಡಲಾಯಿತು.
ಕೃಷಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಕೆದೂರು ಭಾಸ್ಕರ್ ಶೆಟ್ಟಿಯವರನ್ನು ಗುರುತಿಸಿ ಸನ್ಮಾನಿಸಲಾಯಿತು, ಕೆದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟಿ.ವಿ. ವಿತರಿಸಲಾಯಿತು ಹಾಗೂ ಸರಕಾರಿ ಪ್ರೌಢಶಾಲೆ ಕೆದೂರಿನ ವಿದಾರ್ಥಿಗಳಿಗೆ ಲಯನ್ ಆಶಾ ಕೆ. ಶೆಟ್ಟಿ ಮತ್ತು ಕೆ. ಕರುಣಾಕರ್ ಶೆಟ್ಟಿ ಅವರು ಸತತ ಮೂರು ವರ್ಷದಿಂದ ನೀಡುತ್ತಿರುವ ಕ್ರೀಡಾ ಸಮವಸ್ತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಉದಯ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿರುವ ಕೆದೂರು ಶ್ರೀಮತಿ ಶೆಟ್ಟಿಯವರ ಚಿಕಿತ್ಸೆಗೆ ಕ್ಲಬ್ ನ ದಾನಿಗಳಿಂದ ಸಂಗ್ರಹಿಸಿದ ಮೊತ್ತ ಸುಮಾರು 25,000/- ರೂಪಾಯಿಗಳನ್ನು ಅವರ ಸಂಬಂಧಿಕರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಲಯನ್ ಜ್ಯೋತಿ ಶೆಟ್ಟಿ ಪ್ರಾರ್ಥಿಸಿದರು, ಲಯನ್ ರಾಜೇಂದ್ರ ಶೆಟ್ಟಿ ಧ್ವಜವಂದನೆ ಮಾಡಿದರು, ನೀತಿಸಂಹಿತೆಯನ್ನು ಲಯನ್ ಸದಾರಾಮ ಶೆಟ್ಟಿ ವಾಚಿಸಿದರು. ಅತಿಥಿಗಳ ಪರಿಚಯವನ್ನು ಲಯನ್ ಸರೋಜಿನಿ ಜೆ. ಶೆಟ್ಟಿ, ಲಯನ್ ಧರ್ಮರಾಜ ಮುದಲಿಯಾರ್, ಲಯನ್ ರಮೇಶ್ ಶೆಟ್ಟಿ ನೆರವೇರಿಸಿದರು. ಕಾರ್ಯಕ್ರಮ ನಿರೂಪಣೆಯಲ್ಲಿ ಲಯನ್ ಜಯಕರ್ ಹೆಗ್ಡೆ ಮತ್ತು ಲಯನ್ ಹರ್ಷವರ್ಧನ್ ಶೆಟ್ಟಿ ಸಹಕರಿಸಿದರು.
















