Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರದಲ್ಲಿ ಹಾಲಾಡಿಯೇ ಅಂತಿಮ. ವಿರೋಧಿಸುವವರಿಗೆ ಪಕ್ಷದಲ್ಲಿಯೂ ಸ್ಥಾನವಿಲ್ಲ!
    Recent post

    ಕುಂದಾಪುರದಲ್ಲಿ ಹಾಲಾಡಿಯೇ ಅಂತಿಮ. ವಿರೋಧಿಸುವವರಿಗೆ ಪಕ್ಷದಲ್ಲಿಯೂ ಸ್ಥಾನವಿಲ್ಲ!

    Updated:13/11/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ತಾಂತ್ರಿಕ ಸಮಸ್ಯೆಗಳು ಬಗೆಹರಿದ ಬಳಿಕ ಬಿಜೆಪಿ ಸೇರ್ಪಡೆ ಖಚಿತವಾಗಿ, ಅವರ ಮರಳಿ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೊರನಡೆಯಲಿ. ಮುಂದಿನ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿಯವರೇ ಆಗಲಿದ್ದಾರೆ ಎಂದು ಕುಂದಾಪುರದಲ್ಲಿ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳುವ ಮೂಲಕ ಹಾಲಾಡಿ ವಿರೋಧಿ ಬಣಕ್ಕೆ ಚಾಟಿ ಬೀಡಿದ್ದಾರೆ.

    Click Here

    Call us

    Click Here

    ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ ಆರಂಭಗೊಳ್ಳುತಿದ್ದಂತೆಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ವಿರೋಧ ಬಣಗಳ ಮಾತಿನ ಜಟಾಪಟಿ ತಾರಕಕ್ಕೇರಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿ ಬಣದಿಂದ ಬಾವುಟ, ಬ್ಯಾನರ್ ಪ್ರದರ್ಶನ ಒಂದು ಕಡೆಯಾದರೆ ಅವರ ಪರವಾಗಿದ್ದ ಕಾರ್ಯಕರ್ತರು ಹಾಲಾಡಿ ಪರವಾಗಿ ನಿರಂತವಾಗಿ ಘೋಷಣೆ ಕೂಗಿದರು. ವೇದಿಕೆಯ ಮುಂಭಾಗದ ತನಕ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಪೊಲೀಸ ನಡುವೆ ಮಾತಿನ ಚಕಮಕಿ ನಡೆಯಿತು. ಇತ್ತ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಿಗೆ ನಿಲ್ಲುತ್ತಿದ್ದಂತೆ ತಾರಕಕ್ಕೇರಿದ ಗದ್ದಲ ಬಿಜೆಪಿಯ ಬಣ ರಾಜಕೀಯವನ್ನು ಸಂಪೂರ್ಣ ಬಯಲು ಮಾಡಿತ್ತು. ಯಡಿಯೂರಪ್ಪ ಮಾತು ಆರಂಭಿಸುತ್ತಿದ್ದಂತೆ ಹಾಲಾಡಿಯೇ ಬಿಜೆಪಿಯ ಮುಂದಿನ ಅಭ್ಯರ್ಥಿ. ನಮ್ಮ ನಿಲುವನ್ನು ವಿರೋಧಿಸುವವರು ಪಕ್ಷದಿಂದ ಹೊರನಡೆಯಲಿ ಎಂದು ತಾಕೀತು ಮಾಡಿದರು. ಇದರ ಬೆನ್ನಲ್ಲೆ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಮಧ್ಯ ಪ್ರವೇಶಿಸಿದ ಪೊಲೀಸರು ಹಾಗೂ ಪಕ್ಷದ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರೂ ನಾಯಕರುಗಳು ಸಭೆಯಿಂದ  ಹೊರಡುವೆ ವೇಳೆ ಕಾರ್ಯಕರ್ತರ ನಡುವೆ ತಲ್ಲಾಟ ಉಂಟಾಯಿತು.

    Share. Facebook Twitter Pinterest LinkedIn Tumblr Telegram Email
    Kundapra.com

    Related Posts

    ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಜಿತ್ ಎಂ. ದೇವಾಡಿಗ ಪ್ರಥಮ ಸ್ಥಾನ

    10/06/2026

    ಕುಂದಾಪುರ: ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

    10/06/2026

    ಕೋಟದಲ್ಲಿ ಆದರ್ಶ ಮಾನವ – ಕೃತಿ ಲೋಕಾರ್ಪಣೆ

    10/06/2026
    Leave A Reply Cancel Reply

    1 × one =

    Call us

    Click Here

    Call us

    Call us

    Call us
    Highest Viewed Recently
    • ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಜಿತ್ ಎಂ. ದೇವಾಡಿಗ ಪ್ರಥಮ ಸ್ಥಾನ
    • ಕುಂದಾಪುರ: ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ
    • ಕೋಟದಲ್ಲಿ ಆದರ್ಶ ಮಾನವ – ಕೃತಿ ಲೋಕಾರ್ಪಣೆ
    • ಉಡುಪಿ: ಜೂನ್‌ 12ರಂದು ನೇರ ಸಂದರ್ಶನ
    • ಸುರಕ್ಷಾ ಮಾಸಾಚರಣೆ: ಬಿದ್ಕಲ್ಕಟ್ಟೆ ಐಟಿಐಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.