ಕೆಳಗಿರುವ ವಿಡಿಯೋವನ್ನು ಪ್ಲೇ ಮಾಡಿ – Courtesy: Big Bazaar
Author: Kundapra.com
ನರೇಂದ್ರ ಎಸ್. ಗಂಗೊಳ್ಳಿ . ಅದೊಂದು ಘಟನೆ ಯಾವತ್ತೂ ದೇಶಪ್ರೇಮಿಗಳ ಮನಪಟಲದಿಂದ ಮರೆಯಾಗಲು ಸಾಧ್ಯವಿಲ್ಲ. ಆವತ್ತು ಒಂದರ್ಥದಲ್ಲಿ ಗಾಂಧೀಜಿಯಂತಹ ಗಾಂಧೀಜಿಯೇ ಸೋತು ಹೋಗಿದ್ದರು. ನಿಜ. 1938ರಲ್ಲಿ ಹರಿಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಪ್ರಥಮಬಾರಿಗೆ ಆಯ್ಕೆಯಾದ ಸುಭಾಷ್ ಇಡೀ ಕಾಂಗ್ರೆಸ್ ಪಾಳಯದಲ್ಲಿ ತನ್ನ ಮೊನಚು ಹಾಗು ಕ್ರಾಂತಿಕಾರಿ ನಿರ್ಧಾರ ಮತ್ತು ಸ್ವಭಾವಗಳಿಂದ ಮಿಂಚಿನ ಸಂಚಲನ ಮೂಡಿಸಿದ್ದರು.…
ವಿನಾಯಕ ಕೋಡ್ಸರ, ಬೆಂಗಳೂರು ಈಗೊಂದು 7 ವರ್ಷದ ಕೆಳಗಿನ ಮಾತು. ದಾವಣಗೆರೆಯ ಯಾವುದೋ ಮೆಡಿಕಲ್ ಕಾಲೇಜು ಸಂಭಾಗಣದಲ್ಲಿ ಕಾರ್ಯಕ್ರಮ. ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಇದೆ ಅಂದಮೇಲೆ ಕೇಳುವುದು ಬೇಡ! ಸಭಾಂಗಣ ಕಿಕ್ಕಿರಿದಿತ್ತು. ಎಂದಿನಂತೆ ಭರ್ಜರಿ ಭಾಷಣ. ಮಾತು ಮುಗಿದ ಮೇಲೆ ಒಂದು 50-60 ಜನ ಬಂದು ಅವರಿಗೆ ಕೈಕುಲುಕುವುದು, ಸಾರ್ ನಾವು ದೇಶಸೇವೆ ಮಾಡಬೇಕು ಅನ್ನುವುದು ಮಾಮೂಲು. ಅದ್ರಲ್ಲಿ ಕೆಲವ್ರು ಆಸಕ್ತಿಯಿಂದ ಮತ್ತೆ ಸಂಪರ್ಕಕ್ಕೆ ಬರುತ್ತಾರೆ. ಹಲವರು ಹಾಗೆ ಮರೆತು ಹೋಗುತ್ತಾರೆ. ಕಾರ್ಯಕ್ರಮ ಎಲ್ಲ ಮುಗಿದ ಮೇಲೆ ಓರ್ವ ಮಹಿಳೆ ಬಂದ್ರು. ಅವರು ಡಾಕ್ಟರ್ ಅಂತೆ. ‘ಸಾರ್ ನಾನೊಂದು ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ತುಂಬಾ ಅದ್ಭುತವಾದ ಜಾಗ. ಇವತ್ತು ರಾತ್ರಿ ಅಲ್ಲೇ ಊಟ ಮಾಡಬೇಕು’ ಅಂದ್ರು. ಬೆಂಗಳೂರಿನಿಂದ ಹೋಗಿದ್ದು ನಾವಿಬ್ಬರು ಮಾತ್ರ. ಸರಿ ಆಯ್ತು ಅಂತ ಹೊರಟ್ವಿ. ಆ ಮಹಿಳೆ ಕರೆದುಕೊಂಡು ಹೋಗಿದ್ದು ಒಂದು ಅನಾಥಾಶ್ರಮಕ್ಕೆ. ಡಾಕ್ಟರ್ ಆಗಿರುವ ಮಹಿಳೆ ತಣ್ಣಗೆ ಒಂದಿಪ್ಪತ್ತೈದು ಮಕ್ಕಳನ್ನು ಸಾಕುತ್ತಿದ್ದಾರೆ. ಜೊತೆಗೆ ಒಂದೆರಡು ಸಣ್ಣ-ಪುಟ್ಟ ಸಂಸ್ಥೆಗಳು…
ನರೇ೦ದ್ರ ಎಸ್ ಗ೦ಗೊಳ್ಳಿ ಪ್ಯಾಲೆಸ್ಟೀನ್ ಇರಾನ್ ಇರಾಕ್ ಇಸ್ರೇಲ್ ಸಿರಿಯಾ ಒ೦ದಕ್ಕಿ೦ತ ಒ೦ದು ಚೆ೦ದನೆಯ ಹೆಸರಿನ ಮಧ್ಯಪ್ರಾಚ್ಯ ರಾಷ್ಟ್ರಗಳು. ಆದರೆ ಅವುಗಳು ಹುಟ್ಟಿದಾಗಿನಿ೦ದ ಅಲ್ಲಿ ಒಬ್ಬ ಮನುಷ್ಯನ ಚೆ೦ದನೆಯ ಬಾಳುವೆಗೆ ಬೇಕಾದ ವಾತಾವರಣ ಇವತ್ತಿಗೂ ಸೃಷ್ಟಿಯಾಗುತ್ತಿಲ್ಲ ಎನ್ನೋದು ದೊಡ್ಡ ದುರ೦ತ. ಪರಿಸ್ಥಿತಿ ಹೀಗೆಯೇ ಮು೦ದುವರಿದರೆ ಭವಿಷ್ಯದಲ್ಲೂ ಈ ರಾಷ್ಟ್ರಗಳಲ್ಲಿ ಅ೦ತಾದ್ದೊ೦ದು ಸು೦ದರ ವಾತವರಣವನ್ನು ಕನಸಿನಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಮಧ್ಯಪ್ರಾಚ್ಯ ಎನ್ನುವ೦ತಾದ್ದು ಮೂರು ಮಹಾನ್ ಧರ್ಮಗಳ ಜನನಭೂಮಿ. ಮೊದಲು ಯಹೂದಿ ಧರ್ಮ ಬಳಿಕ ಕ್ರೈಸ್ತ ಧರ್ಮ ಅದಾದ ನ೦ತರ ಇಸ್ಲಾ೦ ಧರ್ಮಕ್ಕೆ ಜನ್ಮ ನೀಡಿದ ಈ ಭೂಮಿ ನಿಜಕ್ಕೂ ಧರ್ಮದ ನೆಲೆವೀಡಾಗಿ ಶಾ೦ತಿ ಸಜ್ಜನಿಕೆ ನಾಗರಿಕತೆಗಳ ತವರೂರಾಗಿ ಕ೦ಗೊಳಿಸಬೇಕಿತ್ತು.ಆದರೆ ಇಲ್ಲಿ ನಡೆದಿದ್ದೇ ಬೇರೆ ಧರ್ಮ ಧರ್ಮಗಳ ನಡುವೆ ಧರ್ಮಯುದ್ಧದ ಹೆಸರಿನಲ್ಲಿ ದಿನ೦ಪ್ರತಿ ಎನ್ನುವ೦ತೆ ಕಿತ್ತಾಟ ಜಗಳ ರಕ್ತಪಾತ ಕ್ರೌರ್ಯ… ಕೊನೆಗೆ ಒ೦ದೇ ಧರ್ಮದ ಪ೦ಗಡಗಳ ನಡುವೆಯೂ ಹೊಡೆದಾಟ ಯುದ್ಧಗಳು ಈ ಹೊತ್ತಿಗೂ ಪ್ರತೀದಿನ ಎನ್ನುವ೦ತೆ ನಡೆಯುತ್ತಲಿದೆ. ಪರಿಣಮ ಆ ದೇಶಗಳಲ್ಲಿ…
ನಮ್ಮ ಸುತ್ತ ಮುತ್ತಲ ಪ್ರಪಂಚವನ್ನು ನೋಡಲು ನಮ್ಮೊಳಗೊಂದು ವಿಶೇಷವಾದ ಕಣ್ಣು ಸದಾ ಜಾಗೃತವಾಗಿರಬೇಕು. ಏನೆಲ್ಲಾ ವೈಚಿತ್ರಗಳನ್ನು ಕಾಣಬಹುದು, ಕೇಳಬಹುದು. ‘ನಾನೊಬ್ಬ ಕವಿಯು, ನನ್ನ ಕಣ್ಣೇ ಕಿವಿಯು’ ಎಂದು ಕವಿ ಬೇಂದ್ರೆಯವರು ಕವಿಕರ್ಮದ ಬಗೆಗೆ ಹೇಳಿರುವ ಮಾತು ಈ ಮನುಷ್ಯನ ಈ ಕಾಣುವ, ಕೇಳುವ ಜಾಗೃತ ಪ್ರಜ್ಞೆಯ ಕುರಿತಾಗಿದೆ. ಮನುಷ್ಯನೊಳಗಿನ ಅನುಭವ ಜಗತ್ತು ವಿಸ್ತರಿಸುವುದಕ್ಕೆ ಬದುಕು ಕಲಿಸುವ ಪಾಠ ಬಹಳ ದೊಡ್ಡದು. ನಮ್ಮ ಕಲ್ಪನೆಗೂ ಮೀರಿದ ಅನೇಕ ಸಂಗತಿಗಳು, ವಿಸ್ಮಯಗಳು ನಡೆಯುತ್ತಲೇ ಹೋಗುತ್ತದೆ. ಸೋಲು-ಗೆಲುವು, ಸುಖ-ಕಷ್ಟ, ನೋವು-ನಲಿವು ಒಟ್ಟಾಗಿ ಬೆರೆತ ಈ ಕತ್ತಲು ಬದುಕಿನ ಆಟದಲ್ಲಿ ನಮ್ಮ ಜೀವಿತದ ಒಟ್ಟು ಕಾಲದಲ್ಲಿ ನಾವು ಕಾಣುವುದು ಕೇವಲ 50% ಹಗಲು; 50% ರಾತ್ರಿ ಮಾತ್ರ. ಪೂರ್ತಿ ಹಗಲನ್ನು ಕಾಣದೆ, ಪೂರ್ತಿ ರಾತ್ರಿಯನ್ನು ನೋಡದೆ ಒಂದು ದಿನ ಇಹಕ್ಕೆ ಗುಡ್ ಬೈ ಹೇಳುವ ಈ ನಡುವೆ ಕಂಡದ್ದಕ್ಕಿಂತ ಕಾಣದೇ ಉಳಿದಿರುವ ಸಂಗತಿಗಳೆ ಹೆಚ್ಚು. ವರ್ತಮಾನವೆನ್ನುವುದು ಭವಿಷ್ಯದ ತಂದೆ: ಭೂತದ ಕೂಸು. ಸದ್ಯ ನಾನೀಗ ಬದುಕಿದ್ದೇನೆ ಎಂದರೆ…
