Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಹಾಗೂ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಎಪಿಡಿ ಸಂಸ್ಥೆಯ ಜಿಲ್ಲಾ ನೋಡಲ್ ಅಧಿಕಾರಿಗಳಾದ ಹರೀಶ ಶೆಟ್ಟಿಯವರ ಮಾತನಾಡಿ, ವಿಶೇಷ ಚೇತನರಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ, ನಮ್ಮ ಸಂಸ್ಥೆಯೂ 1959 ರಲ್ಲಿ ಸ್ಥಾಪನೆಯಾಗಿ, ಸುಮಾರು 62 ವರ್ಷಗಳಿಂದ ಅತ್ಯಂತ ಹಿಂದುಳಿದ ಗ್ರಾಮೀಣ ಮಟ್ಟದಲ್ಲಿ ಯುವ ವಿಶೇಷ ಚೇತನರನ್ನ ಗುರುತಿಸಿ ಅವರ ಸ್ವಾವಲಂಬಿ ಜೀವನಕ್ಕೆ ಎಪಿಡಿ ಸಂಸ್ಥೆ ಸಹಕಾರಿಯಾಗಿದೆ ಎಂದು ಪ್ರೋತ್ಸಾಹಿಸಿದರು ಹಾಗೇ ಕೋರನಾ ಸಂದರ್ಭದಲ್ಲಿ ವಿಶೇಷ ಚೇತನರಾಗಿ ಗ್ರಾಮೀಣ ಮಟ್ಟದಲ್ಲಿ ಲಸಿಕೆ, ವೈದ್ಯಕೀಯ ಸೌಲಭ್ಯ, ಸಾಂತ್ವನ ಧೈರ್ಯ ತುಂಬಿದ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 65ನೇ ವಿಮಾ ಸಪ್ತಾಹದ ಸಮಾರೋಪ ಸಮಾರಂಭ ಇಲ್ಲಿನ ಎಲ್.ಐ.ಸಿ ಶಾಖೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕುಂದಾಪುರ ನಗರ ಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮಾತನಾಡಿ, ಮನೆ ಮನೆ ಯಲ್ಲಿ ಎಲ್.ಐ.ಸಿ ಜ್ಯೋತಿ ಪಾಲಿಸಿಗಳ ಮೂಲಕ ಬೆಳಗಲಿ ಎಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆ ಮುಖ್ಯ ಪ್ರಬಂಧಕ ನಾರಾಯಣ ಗೌಡ ವಹಿಸಿದ್ದರು. ಆಡಳಿತ ಅಧಿಕಾರಿ ಕಿರಣ್ ಕಾಮತ್, ಉಪ ಶಾಖಾಧಿಕಾರಿ ಶ್ರೀನಿವಾಸ್ ವಿಮಾ ಸಪ್ತಾಹ ದ ವರದಿ ನೀಡಿದರು. ವಿಮಾ ಸಪ್ತಾಹದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ಎಚ್ ಎಸ್ ಹತ್ವಾರ, ಶೇಷಯ್ಯ, ರಾಧಾಕ್ರಷ್ಣ, ಮತ್ತು ಸುಧಾಕರ ಅವರನ್ನು ಗೌರವಿಸಿಲಾಯಿತು. ಗೀತಾ ಸ್ವಾಗತಿಸಿದರು, ಅಭಿವೃದ್ಧಿ ಅಧಿಕಾರಿ ಗಿರಿಧರ್ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಮಮತೇಶ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪುಗೊಳ್ಳುತ್ತಿದ್ದು, ಅನೇಕ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದೆ. ಪಿಸಲಾಗುವುದು. 94ಸಿ, 94ಸಿಸಿ, 53 ಮತ್ತು 57ರ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ತಹಶೀಲ್ದಾರ್‌ರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗುಜ್ಜಾಡಿ ಗ್ರಾಮ ಪಂಚಾಯತ್ ಸಮೀಪ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ನೀಡುವ ಸುಮಾರು 500 ಕೋಟಿ ರೂ. ವೆಚ್ಚದ ಯೋಜನೆ ಸದ್ಯದಲ್ಲೇ ಅನುಷ್ಠಾನಗೊಳ್ಳಲಿದೆ. ವಿದ್ಯುತ್ ಸಂಪರ್ಕಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಾರಾಹಿ ನೀರಾವರಿ ಯೋಜನೆಯ ಮೂಲ ಉದ್ದೇಶದಂತೆ ಪ್ರತಿಯೊಬ್ಬ ರೈತರಿಗೆ ವಾರಾಹಿ ನೀರು ಸಿಗುವ ತನಕ ಹೋರಾಟ ಮಾಡುತ್ತೇನೆ. ತನ್ನ ಹೋರಾಟ ಹತ್ತಿಕ್ಕಲೂ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ಹೋರಾಟದಲ್ಲಿ ತನ್ನ ಬಲಿದಾನವಾದರೂ ಚಿಂತೆ ಇಲ್ಲ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಅವರು ಉಡುಪಿ ಜಿಲ್ಲಾ ರೈತ ಸಂಘದ ನೇತ್ರತ್ವದಲ್ಲಿ ಅಂಪಾರು ಶ್ರೀ ರಾಮ ಸಭಾಭವನದಲ್ಲಿ ನಡೆದ ವಾರಾಹಿ ಬಲದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಾರಾಹಿ ನೀರಾವರಿ ಯೋಜನೆ ಆರಂಭವಾಗಿ 41 ವರ್ಷ ಕಳೆದರೂ ಕೂಡಾ ಅದು ಚುರುಕು ಪಡೆದುಕೊಂಡಿದ್ದು 2000ನೇ ಇಸವಿಯ ಅನಂತರ. ಕೇವಲ ರೈತರಿಗೆ ನೀರು ಕೊಡುವ ಉದ್ದೇಶದಿಂದ ಈ ಯೋಜನೆ ಇಂದು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುದು ವಿಪರ್ಯಾಸವಾಗಿದೆ. ಮೂಲ ಯೋಜನೆಯಲ್ಲಿರುವ ಬಲ ದಂಡೆ ಕಾಮಗಾರಿ ಆರಂಭವಾಗಿಲ್ಲ. ಆದರೆ ಸೌಕೂರು ಏತನೀರಾವರಿ ಕಾಮಗಾರಿ ಆರಂಭಗೊಂಡಿದೆ. ಬಲದಂಡೆ ಕಾಮಗಾರಿ ಕೂಡಲೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿ.ಎ/ ಸಿ.ಎಸ್ ಕೋರ್ಸ್‌ಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವೈಕ್ತಿಯಾಗಿ ಆಗಮಿಸಿದ ಸಿ.ಎ.ನಾಗೇಂದ್ರ ಭಕ್ತ ಹೆಬ್ರಿ ಹಾಗೂ ಸಿ.ಎಸ್.ಸಂತೋಷ ಪ್ರಭು ಉಡುಪಿ ಅವರು ಕೋರ್ಸ್ ಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಗಣೇಶ ಮೊಗವೀರ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಬೋಧಕ, ಬೋಧಕೇತರ ವ್ರಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರು ಸ್ವಾಗತಿಸಿ, ಕನ್ನಡ ಉಪನ್ಯಾಸಕರಾದ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಅರ್ಥಶಾಸ್ತ್ರ ಉಪನ್ಯಾಸಕರಾದ ಹರ್ಷ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ‘ಸ್ಯಾಂಡ್ ಥೀಂ’ ತಂಡದ ಕಲಾವಿದರಾದ ಹರೀಶ್ ಸಾಗಾ ಹಾಗೂ ರಾಘವೇಂದ್ರ ಪ್ರಸಾದ್ ಆರ್. ಅವರಿಂದ ಕೋಟೇಶ್ವರ ಹಳೆಅಳಿವೆ ಕಡಲ ತೀರದಲ್ಲಿ ಪ್ರಕೃತಿಯೇ ದೇವರು ಎಂಬ ಸಂಕಲ್ಪದೊಂದಿಗೆ ರಚಿಸಿದ ಮರಳುಶಿಲ್ಪ – ಅರಶಿಣ ಗಣಪ ಗಮನ ಸೆಳೆಯಿತು. ಪೃಕೃತಿ ರಕ್ಷಣೆಯ ಭರವಸೆಯನ್ನು ನೀಡುವ ಪ್ರಕೃತಿಯೇ ದೇವರು ಎನ್ನುವ ಚಿಂತನೆಯಲ್ಲ್ಲಿ ಮೂ ಆನೆಯ ಮುಖ ಸ್ವರೂಪವುಳ್ಳ ಗಣಪನಿಗೆ ಪ್ರಕೃತಿಯ ದ್ಯೋತಕವಾಗಿ ಹಳ್ಳಿ ಹಾಳೆಯ ಕಿರೀಟ, ರೋಗನಿರೋಧಕ ಶಕ್ತಿಯ ಬಿಂಬವಾಗಿ ಅರಶಿನ ಬಣ್ಣ ಹಾಗೂ ಸಂಸ್ಕೃತಿಯ ದ್ಯೋತಕವಾಗಿ ಸಿಂಧೂರ ತಿಲಕವಿರಿಸಲಾಗಿದ್ದು, ಕಡಲತಡಿಯಲ್ಲಿ ನಿರ್ಮಿಸಲಾದ ಈ ಮರಳುಶಿಲ್ಪ ಸುಂದರವಾಗಿ ಮೂಡಿಬಂದಿದೆ. ಸರಕಾರದ ‘ ಅರಿಶಿನ ಗಣಪತಿ ಅಭಿಯಾನ’ದಂತೆ ಮಾಲಿನ್ಯ ರಹಿತವಾದ ವಿಗ್ರಹ ಮತ್ತು ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗನಿರೋಧಕ ಅರಿಶಿನ ಗಣಪನ ಆರಾಧನೆಯ ಸಂಕಲ್ಪ ನಮ್ಮದ್ದಾಗಲಿ ಎಂಬ ಜನಜಾಗೃತಿಯನ್ನು ಸಾರುವ ಮರಳು ಶಿಲ್ಪಾಕೃತಿ ಇದಾಗಿದೆ – ಹರೀಶ್ ಸಾಗ, ಕಲಾವಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ಮೊಂತಿ ಫೆಸ್ತ್ (ತೆನೆ ಹಬ್ಬ) ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಚರ್ಚುಗಳಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು. ರೈತರು ಬೆಳೆದ ಭತ್ತದ ತೆನೆಯನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು. ಹೊಸ ತೆನೆಯನ್ನು ಮನೆಗೆ ತಂದು ಪ್ರಾಥನೆ ಮಾಡುವುದರ ಮೂಲಕ ಹಾಲು ಅಥವಾ ಪಾಯಸದೊಂದಿಗೆ ಹೊಸ ಅಕ್ಕಿಯ ಊಟವನ್ನು ಮಾಡಲಾಗುತ್ತದೆ. ಈ ಹಬ್ಬವು ಸಸ್ಯಹಾರಿ ಭೋಜನಕ್ಕೆ ಹೆಸರಾಗಿದ್ದು, ವಿವಿಧ ಬಗೆಯ ತರಕಾರಿ ಖಾದ್ಯಗಳು ಹಬ್ಬದ ಊಟದಲ್ಲಿ ಇರುತ್ತದೆ. ಬೆಸ ಸಂಖ್ಯೆಯನ್ನು ಹೊಂದಿಕೊಂಡು ತರಕಾರಿ ಖಾದ್ಯಗಳನ್ನು ತಯಾರಿಸಲಗುತ್ತದೆ. ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆಯನ್ನು ಪವಿತ್ರ ಬಲಿದಾನದ ಮೂಲಕ ಅರ್ಪಿಸಿ ಆಚರಿಸಲಾಯಿತು. ಅತಿಥಿ ಗುರುಗಳಾದ ತ್ರಾಸಿ ಡೋನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಸುಮಾರು ಒಂದುವರೆ ವರ್ಷಗಳಿಂದ ಕೋವಿಡ್‌ನಿಂದ ವಿದ್ಯಾಕ್ಷೇತ್ರ ಬಡವಾಗಿದೆ. ಕೋವಿಡ್‌ನಿಂದ ಕಳೆಗುಂದಿರುವ ಶಿಕ್ಷಣ ಕ್ಷೇತ್ರವನ್ನು ಪುನರುತ್ಥಾನಗೊಳಿಸುವಲ್ಲಿ ಶಿಕ್ಷಕರ ಪ್ರಯತ್ನ ಬಹುಮುಖ್ಯವಾಗಿದೆ. ಇದಕ್ಕಾಗಿ ಶಿಕ್ಷಕರು ವಿಶೇಷ ಹೋರಾಟ ನಡೆಸಬೇಕಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ನಡೆಸಲು ಸಹಕರಿಸಬೇಕು. ಶಾಲೆಗಳಲ್ಲಿ ಅಧ್ಯಾಪಕರು ವಿಶೇಷ ಶ್ರಮವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ೧೦ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಹೀಗಾಗಿ ಡಿಡಿಪಿಐ ಮತ್ತು ಬಿಇಒ ಸಭೆ ನಡೆಸಿ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಮತ್ತು ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಬೈಂದೂರು ಕ್ಷೇತ್ರದಲ್ಲಿ ಐದು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಸರಕಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ವಿಧಿಸಲಾಗಿರುವ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಯವರಿಗೆ, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿ. ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಪುರಂದರ ತೆಕ್ಕಟ್ಟೆ, ಮಹೇಶ್ ಪೂಜಾರಿ, ದಾಮೋದರ್ ಪೈ, ಶ್ರೀಧರ್ ಪಿ.ಎಸ್., ಪುರಸಭಾ ಅಧ್ಯಕ್ಷರಾದ ವೀಣಾ ಮೆಂಡನ್, ಪುರಸಭಾ ಉಪಾಧ್ಯಕ್ಷ ಸಂದೀಪ ಖಾರ್ವಿ, ಸದಸ್ಯರಾದ ಗಿರೀಶ್ ಜಿ.ಕೆ, ವನಿತಾ ಬಿಲ್ಲವ, ಶ್ವೇತಾ, ಕಮಲ ಇನ್ನಿತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ಛತ್ರಮಠ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ವನದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಯಾದ ನಾರಾಯಣ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮೆಕ್ಕೆ ಒಕ್ಕೂಟದ ಅಧ್ಯಕ್ಷರಾದ ಎಂ ಜೆ ಬೇಬಿ ವಹಿಸಿದ್ದರು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ಗಣೇಶ್ ಬಿ., ಕೊಲ್ಲೂರು ವಲಯದ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಸತ್ಯನಾರಾಯಣ ಅಡಿಗ ಗುಡಿಮನೆ, ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವನಜಾಕ್ಷಿ ಶೆಟ್ಟಿ, ಬೈಂದೂರು ತಾಲೂಕು ಯೋಜನಾಧಿಕಾರಿಗಳಾದ ಶಶಿರೇಖಾ ಪಿ., ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾವತಿ ಕೃಷ್ಣ ಕನ್ನಂತ, ಕೊಲ್ಲೂರು ವಲಯದ ಅಧ್ಯಕ್ಷರಾದ ಜಯರಾಮ್ ಪೂಜಾರಿ, ಚಿತ್ತೂರು ವಲಯದ ವಲಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಗೋಳಿಹೊಳೆ ವಲಯದ ವಲಯ ಅಧ್ಯಕ್ಷರಾದ ಮಂಜುನಾಥ್…

Read More