ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಅತ್ಯಗತ್ಯ. ಏನೇ ಸಮಸ್ಯೆಯಿದ್ದರೂ, ಯಾವುದೇ ಬಗೆಯ ಸವಾಲು- ತೊಂದರೆಗಳಿದ್ದರೂ ವಿದ್ಯಾರ್ಥಿಗಳು ಅದನ್ನು ವ್ಯಕ್ತಪಡಿಸಬೇಕು. ಭಾವನೆಗಳನ್ನು ವ್ಯಕ್ತಪಡಿಸದಿದ್ದರೆ ಮುಂದೆ ಅದು ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಸಮಸ್ಯೆಗಳಿದ್ದಾಗ ಯಾವುದೇ ಹಿಂಜರಿಕೆಯಿಲ್ಲದೆ ಸಂಬಂಧ ಪಟ್ಟವರಿಗೆ ಅದನ್ನು ತಿಳಿಸುವ ಪ್ರಯತ್ನ ಮಾಡಬೇಕು. ಆಂತರಿಕ ದೂರು ನಿರ್ವಹಣಾ ಸಮಿತಿಗಳು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ದೊಡ್ಡ ಸಹಾಯ ಮಾಡಬಲ್ಲವು. ಎಂದು ಮಂಗಳೂರಿನ ಮನ:ಶಾಂತಿ ಕೌನ್ಸಿಲಿಂಗ್ ಸಂಸ್ಥೆಯ ಮೆಂಟಲ್ ಹೆಲ್ತ್ ಪ್ರೊಫೆಶನಲ್ ಹಾಗೂ ಟ್ರೈನರ್ ಡಾ. ರಮೀಲಾ ಶೇಖರ್ ಹೇಳಿದರು. ಅವರು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಂತರಿಕ ದೂರು ನಿರ್ವಹಣಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಮಾನಸಿಕ ಒತ್ತಡದಿಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ ಡಾ.ರಮೀಲಾ, ನಿತ್ಯ ವ್ಯಾಯಾಮ, ಆತ್ಮವಿಶ್ವಾಸಪೂರ್ವಕ ನಡೆ ನುಡಿ ಮಾನಸಿಕ ಸದೃಢತೆಯನ್ನು ಒದಗಿಸುತ್ತದೆ. ಜೊತೆಗೆ ನಾವು ಮಾಡುವ ಒಳ್ಳೆಯ ಕೆಲಸಗಳು, ಇ?ದ ಜವಾಬ್ದಾರಿಗಳು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇತ್ತೀಚೆಗೆ ನಿಧನರಾದ ಪುನೀತ್ ರಾಜ್ಕುಮಾರ್ ಅವರಿಗೆ ಗಂಗೊಳ್ಳಿಯ ಮೇಲ್ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ವಿದ್ಯಾರ್ಥಿಗಳು ನೃತ್ಯರೂಪಕದ ಮೂಲಕ ಪುಷ್ಪಾಂಜಲಿ, ದೀಪಾಂಜಲಿ ಅರ್ಪಿಸಿದರು. ನೃತ್ಯಪಟು ನಟರಾಜ್ ನಿರ್ದೇಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಬೊಂಬೆ ಹೇಳುತೈತೆ ಗಾಯನಕ್ಕೆ ನೃತ್ಯದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ನೃತ್ಯದ ಕೊನೆಯಲ್ಲಿ ಬಾವಪರವಶರಾದ ಮಕ್ಕಳು ಪುನೀತ್ ಭಾವಚಿತ್ರಕ್ಕೆ ಮುತ್ತನ್ನು ನೀಡಿ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ, ಸಹಶಿಕ್ಷಕಿ ಲಲಿತಾ, ಲೈಟ್ಹೌಸ್ ಹಿಲ್ ಫ್ರೆಂಡ್ಸ್ ಸದಸ್ಯರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಸಿದ್ಧಿವಿನಾಯಕ ಚೆಸ್ ಆಕಾಡೆಮಿ ಬೈಂದೂರು ಇವರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಇಲ್ಲಿನ ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ನಡೆಯಿತು. ಬೈಂದೂರು ತಾಲೂಕಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಸಭಾಧ್ಯಕ್ಷತೆಯನ್ನು ವಹಿಸಿ, ಚೆಸ್ ಆಟ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅತ್ಯಂತ ಸಹಕಾರಿ ಎಂದರು. ಈ ಸಂದರ್ಭ ಶಿಕ್ಷಕರಾದ ರಾಘವೇಂದ್ರ, ದೈಹಿಕ ಶಿಕ್ಷಕರಾದ ಗುರುರಾಜ ಎಸ್, ಚಂದ್ರ ದೇವಾಡಿಗ ಉಪಸ್ಥಿತರಿದ್ದರು. ಚೆಸ್ ಆಕಾಡೆಮಿಯ ಅಧ್ಯಕ್ಷರಾದ ಬಾಬು ಜೆ. ಪೂಜಾರಿ ಕಾರ್ಯಕ್ರಮವನ್ನು ನಿರ್ವಸಿದರು. ಚೆಸ್ ಸ್ಪರ್ಧೆಯಲ್ಲಿ ಹನ್ನೆರಡು ವರ್ಷದ ವಿಭಾಗದ ಹುಡುಗಿಯರಲ್ಲಿ ಪ್ರಥಮ, ಮಧು ಮಯೂರಿ ಗ್ರೀನ್ ವ್ಯಾಲಿ ಆಂಗ್ಲ ಶಾಲೆ, ದ್ವಿತೀಯ, ಜೈನಿಕ್ ಸೈಂಟ್ ಥೋಮಸ್ ಸ್ಕೂಲ್ ಬೈಂದೂರು, ತ್ರತಿಯ, ಸಾನಿಕ ಮಾದರಿ ಸ್ಕೂಲ್ ಬೈಂದೂರು, ಹುಡುಗರ ವಿಭಾಗದಲ್ಲಿ ಆದ್ರಿತ್. ಸಂದೀಪನ್ ಆಂಗ್ಲ ಶಾಲೆ ನಾಗೂರು, ಶ್ರೀಚರಣ್ . ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು, ವಿಖ್ಯಾತ. ಸೈಂಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಹಾಗೂ ಪ್ರೇರಣೆ ನೀಡುವ ಉದ್ದೇಶದಿಂದ ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕ ಮತ್ತು ನಾಗೂರು ಜಾಮಿಯ ಮಸೀದಿಯ ಜಂಟಿ ಆಶ್ರಯದಲ್ಲಿ ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ ಅವರ ಅಧ್ಯಕ್ಷತೆಯಲ್ಲಿ ಮೈನಾರಿಟಿ ಎನ್.ಎಸ್.ಪಿ ಹಾಗೂ ವಿದ್ಯಾಸಿರಿ ವಿದ್ಯಾರ್ಥಿವೇತನ ಶಿಬಿರ ನಾಗೂರು ಜಾಮಿಯ ಮಸೀದಿಯ ಆವರಣದಲ್ಲಿ ನಡೆಯಿತು. ನಾಗೂರು ಜಾಮಿಯ ಮಸೀದಿಯ ಖತೀಬರು ಮೌಲಾನ ರಿಝ್ವಾನ್ ಸಾಹೇಬ್ ಅವರ ಕಿರಾತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರಾಗಿ ವಿದ್ಯಾರ್ಥಿಗಳಾದ ಝೀಶಾನ್ ಹಳಗೇರಿ, ಅಲ್ಫಾಝ್ ಹಳಗೇರಿ ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಲು ಸಹಕಾರ ನೀಡಿದರು. ಈ ಸಂದರ್ಭ ಬೈಂದೂರು ಘಟಕದ ಸಲಹೆಗಾರ ಉಸ್ಮಾನ್ ಜಾಫರ್ ಸಾಹಬ್, ಅಬ್ದುಲ್ ಮುನಾಫ್ ಸಾಹಬ್, ಸಮಾಜ ಸೇವಕ ಅಶ್ರಫ್ ನಾಗೂರು, ಅಮೀರ್ ಹುಸೈನ್ ಸಾಹಬ್, ಮಸೀದಿಯ ಮುಅಝ್ಝಿನ್ ಸಲೀಮ್ ಸಾಹಬ್, ಇರ್ಫಾನ್ ಸಾಹಬ್, ಮಸೀದಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು. ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಜಮಾತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಾಗ್ಜ್ಯೋತಿ ಬಳಗ ಬೈಂದೂರು, ಲಾವಣ್ಯ ರಿ. ಬೈಂದೂರು, ಜೇಸಿಐ ಬೈಂದೂರು ಸಿಟಿ, ಬಿಜೆಪಿ ಮಹಿಳಾ ಮೋರ್ಚಾ ಬೈಂದೂರು, ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಅಂಪಾರು- ಮೂಡುಬಗೆ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯಲ್ಲಿ ಮಕ್ಕಳ ಹಬ್ಬ 2021 ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಯೂನಿಯನ್ ಬ್ಯಾಂಕ್ ಇಂಡಿಯಾ ಕೊಲ್ಲೂರು ಶಾಖೆಯ ಪ್ರಬಂಧಕ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾವಣ್ಯ ರಿ. ಬೈಂದೂರು ಇದರ ಅಧ್ಯಕ್ಷ ಹರೆಗೋಡು ಉದಯ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಉಡುಪಿ ಸವಿರುಚಿ ಮಾಲೀಕ ವಾಸುದೇವ ದೇವಾಡಿಗ, ಜೇಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಅಂಪಾರು ಜಿ.ಪಂ ಮಾಜಿ ಸದಸ್ಯೆ ಜ್ಯೋತಿ ಅಚ್ಯುತ್, ರಾಜ್ಯ ಯೋಜನಾ ಆಯೋಗ ಅಧಿಕಾರೇತರ ಸದಸ್ಯೆ ಪ್ರೀಯದರ್ಶಿನಿ ಬೆಸ್ಕೂರು, ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಪಿ. ಶ್ರೀಧರ್ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಾಯಿನಾಥ್ ಶೇಟ್ ಕುಂದಾಪುರ, ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರದ ಸತೀಶ್ ಖಾರ್ವಿ 66 ಕೆಜಿ ಭಾಗದಲ್ಲಿ ಒಟ್ಟು 570 ಕೆಜಿ ಭಾರ ಎತ್ತಿ ಕಂಚಿನ ಪದಕ ಪಡೆದಿದ್ದಾರೆ. ಅವರು ಕುಂದಾಪುರದ ನ್ಯೂ ಹಕ್ಯುಲೆಸ್ ಜಿಮ್ನ ವ್ಯವಸ್ಥಾಪಕರು ಹಾಗೂ ಖಾರ್ವಿ ಕೇರಿ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದಾರೆ. ನ.16ರಂದು ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಸಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಭಾಗದ ಬಡ ಮಹಿಳೆಯರು ಸಾಲವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘವು ಸಹಕಾರಿಯಾಗಿದೆ. ಸಾ ಮರುಪಾವತಿಯಲ್ಲಿ ವಿಳಂಬವಾದರೆ ಸಂಘಕ್ಕೆ ಬಹುದೊಡ್ಡ ಹೊಡೆತ ಬಿದ್ದು ಬ್ಯಾಂಕುಗಳ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಪಡೆದುಕೊಂಡ ಸಾಲವನ್ನು ಕ್ಲಪ್ತ ಸಮಯಕ್ಕೆ ಕಟ್ಟುವುದು ತಮ್ಮ ಜವಾಬ್ದಾರಿ ಎಂದು ಪ್ರತಿಯೊಬ್ಬ ಸದಸ್ಯರು ತಿಳಿದುಕೊಂಡರೆ ಮಾತ್ರ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಸಾಧು ಎಸ್ ಬಿಲ್ಲವ ಹೇಳಿದರು. ಶನಿವಾರ ಹೆಮ್ಮಾಡಿಯ ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿದ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ವಿ ಮಾತನಾಡಿ, ನೋಂದಣಿಯಾದ ದಿನದಿಂದಲೂ ಈ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಕ್ರೀಯಾಶೀಲ ನಿರ್ದೇಶಕರು, ಪ್ರಾಮಾಣಿಕ ನೌಕರರಿದ್ದರೆ ಯಾವ ಸಂಘವನ್ನಾದರೂ ಮುನ್ನಡೆಸಿಕೊಂಡು ಹೋಗಬಹುದು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ನಿಂದ ಕೊಡಮಾಡುವ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಪ್ರತಿಭಾವಂತ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಕುಂಭಾಶಿ ಇದರ ವಿದ್ಯಾರ್ಥಿನಿ ಶ್ಲಾಘ ಸಾಲಿಗ್ರಾಮ, ಯು.ಬಿ,ಎಂ.ಸಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದ ವಿದ್ಯಾರ್ಥಿನಿ ಸಿಂಚನ ಕೋಟೇಶ್ವರ, ಮಾಧವ ಕೃಪಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಣಿಪಾಲದ ವಿದ್ಯಾರ್ಥಿನಿ ಲಾವಣ್ಯ ಟಿ, ಶ್ರೀಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿ ವೈಭವ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ವಿದ್ಯಾರ್ಥಿ ಶ್ರೀನಿಧಿ, ಲಿಟ್ಲರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿ ನಕ್ಷತ್ರ ಎನ್ ಕೋಟ, ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ಪ್ರಣ್ವಿತ್ ಪಿ, ಶ್ರೀಶಾಂಭವಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಗಿಳಿಯಾರು-ಕೋಟದ ವಿದ್ಯಾರ್ಥಿನಿ ಇಂಚರ ಭಟ್, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿನಿ ಧನ್ಯ, ಶ್ರೀರಾಮ ಪ್ರಸಾದ ಅನುದಾನಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಹಿಳೆಯರು ತಮ್ಮ ಹಕ್ಕನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಮನೆಯಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರದ ಜೊತೆಗೆ ಮೌಲ್ಯಯುತವಾದ ಶಿಕ್ಷಣದ ಬೋಧನೆ ಮಾಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದರು. ಅವರು ನಗರದ ಬೋರ್ಡ್ ಹೈಸ್ಕೂಲ್ನಲ್ಲಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದೆಹಲಿ, ಭಾರತ್ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಮಹಿಳೆಯರು ಅರಿತುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಇರುವ ಅನಕ್ಷರರಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದ ಅವರು, ಮಹಿಳೆಯರು ತಮ್ಮ ಸಂಸ್ಕೃತಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಳ್ವಾಸ್ ದೂರಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರದಿಂದ ದೂರ ಶಿಕ್ಷಣದ ವಿವಿಧ ಕೋರ್ಸ್ಗಳ ದಾಖಲಾತಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳಿಗೆ ಅರ್ಹ ಅಭ್ಯರ್ಥಿಗಳು ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ದೂರ ಶಿಕ್ಷಣ ಕೇಂದ್ರದ ಮೂಲಕ ನೋಂದಾವಣಿ ಮಾಡಬಹುದಾಗಿದೆ. ಪದವಿಯಲ್ಲಿ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಲಿಬ್. ಸ್ನಾತಕೋತ್ತರ ಪದವಿಯಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಎಂ.ಲಿಬ್, ಒಂದು ವರ್ಷ ಡಿಪ್ಲೊಮಾ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಇನ್ಫೋ ಟೆಕ್ನಾಲಜಿ ಕಂಪ್ಯೂಟರ್ ಅಪ್ಲಿಕೇಶನ್, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಸಿ.ಪಿ.ಆರ್. (ಪಂಚಾಯತ್ ರಾಜ್), ಫುಡ್ ಅಂಡ್ ನ್ಯೂಟ್ರಿಷನ್, ಕಮ್ಯುನಿಕೇಷನ್ ಟೆಕ್ನಾಲಜಿ, 6 ತಿಂಗಳ ಪಿ.ಜಿ. ಸರ್ಟಿಫಿಕೇಟ್ ಕೋರ್ಸ್ (ಪಿ.ಜಿ.ಸಿ.) ಪಿಜಿಸಿ ಇಂಗ್ಲಿಷ್, ಕಮ್ಯೂನಿಕೇಟಿವ್ ಇಂಗ್ಲಿಷ್, ಮಾರ್ಕೇಟಿಂಗ್ ಮೆನೆಜ್ಮೆಂಟ್, ಎಚ್. ಆರ್. ಮ್ಯಾನೇಜ್ಮೆಂಟ್, ಬಿಸಿನೆಸ್ ಅಡ್ಮಿನಿಸ್ಟ್ರಷನ್, ಫೈನಾನ್ಸ್ ಮೆನೆಜ್ಮೆಂಟ್,…
