ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಜಿ.ಎಸ್.ವಿ.ಎಸ್ ಅಸೋಷಿಯೇಷನ್, ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರಿನ ಉದಯ್ ಉಳ್ಳಾಲ್ ಪ್ರಾಯೋಜಕತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಷನ್ ವತಿಯಿಂದ ಕೊಡಲ್ಪಡುವ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮವು ಕಳೆದ ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳ ಸಭಾಂಗಣದಲ್ಲಿ ನಡೆಯಿತು. ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸಿ ಜೀವನವನ್ನು ಸುಂದರವಾಗಿಸಿಕೊಳ್ಳುವಂತೆ ಕರೆ ನೀಡಿದರು. ಸಂದರ್ಭದಲ್ಲಿ ಪ್ರತೀ ವರುಷದಂತೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಪಿಸಿಎಮ್ಬಿ ಮತ್ತು ಪಿಸಿಎಮ್ಸಿ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದವರಿಗೆ ತಮ್ಮ ವತಿಯಿಂದ ನೀಡುವ ತಲಾ ಇಪ್ಪತೈದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಈ ಬಾರಿಯ ಟಾಪರ್ಗಳಾದ ಹಫ್ಸಾ ಮತ್ತು ವಿನಾಯಕ್ ನಾಯಕ್ ಇವರಿಗೆ ನೀಡಿದರು. ಮುಂಬೈನ ದೇವೂ ಟೂಲ್ಸ್ ಮತ್ತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟರಾಮ್ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರೂ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕರೂ ಆದ ಮೀನಾಕ್ಷಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಘವೇಂದ್ರ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ರಮ್ಯಾ ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತಿರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ. ಹೊಸತನ ಹುಡುಕಾಟದ ನಿರ್ದೇಶಕ ಹಾಗೂ ಉದಯೋನ್ಮುಖ ನಟ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿ, ನಟಿಸುತ್ತಿರುವ ಅದೇ ಮುಖ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದೂ ಸಿನಿಮಾದ ಟೈಟಲ್ ನಿಂದ. ಆಶ್ಚರ್ಯವಾದರೂ ಇದು ಸತ್ಯ. ಸಿನಿಮಾ ಸೆಟ್ ಏರುವ ಮುನ್ನವೇ ಸಾಕಷ್ಟು ಸದ್ದು ಮಾಡಿದ ಚಿತ್ರದ ಟೈಟಲ್ ”ಅದೇ ಮುಖ”. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮುಖ ಇರುತ್ತದೆ. ಹಾಗೆಂದು ಇದು ಕೇವಲ ಒಂದು ಪಾತ್ರವಲ್ಲ. ಬರೋಬ್ಬರಿ ಏಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮದ ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗಾಗಿ ಸಿದ್ಧಗೊಂಡ ಕೋಟಿ ಚೆನ್ನಯ್ಯ, ಪಂಜುರ್ಲಿ ಗರಡಿಯ ಮುಹೂರ್ತ ನಿಗದಿಯ ಪೂರ್ವಭಾವಿ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಎ.22ರಿಂದ 29ರ ವರೆಗೆ ಪ್ರತಿಷ್ಟಾ ಮಹೋತ್ಸವಕ್ಕೆ ದಿನ ನಿಗದಿಪಡಿಸಲಾಗಿದ್ದು, ಎ.25ರಂದು ಕೋಟಿ – ಚೆನ್ನಯ್ಯ ಪಂಜುರ್ಲಿ, ಬ್ರಹ್ಮಬೈದರ್ಕಳ ದೈವಗಳ ಪುನಃಪ್ರತಿಷ್ಟೆ, ಎ.26ರಂದು ಬ್ರಹ್ಮಕುಂಭಾಭಿಷೇಕ, ಎ.27ರಂದು ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ಹಾಗೂ ಎ.28ರಂದು ಪಂಜುರ್ಲಿ ದೈವದ ನೇಮೋತ್ಸವ ಮತ್ತು ಗೆಂಡಸೇವೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ತಂತ್ರಿಗಳಾದ ಕೇಂಜ ಶ್ರೀಧರ ತಂತ್ರಿ ಅವರು ಮಾತನಾಡಿ ಕೋಟಿಚೆನ್ನಯ್ಯರು ಎಲ್ಲರಿಗೂ ಆದರ್ಶ ಪುರುಷರಾದವರು. ಈ ಗರೋಡಿಯ ಜೀರ್ಣೋದ್ಧಾರಕ್ಕಾಗಿ ಶ್ರಮವಹಿಸಿ ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡಿದವರಿಗೂ ಮತ್ತು ಭಕ್ತವರ್ಗಕ್ಕೂ ದೈವ-ದೇವರ ಕೃಪೆ ದೊರೆಯುವಂತಾಗಲಿ. ಗರಡಿಯ ಮುಂದಿನ ಧಾರ್ಮಿಕ ಕಾರ್ಯವೂ ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವದಿಸಿದರು. ಈ ಸಂದರ್ಭ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಒಂದು ವರ್ಷದಿಂದ ತಾಲೂಕು ಆಸ್ಪತ್ರೆ ಕುರಿತು ಪ್ರಶ್ನೆ ಕೇಳುತ್ತಿದ್ದರೂ, ಉತ್ತರಿಸಬೇಕಾದ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಬಂದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಹಾಜರಾಗದೆ ತಾಪಂ ಸದಸ್ಯರ ಕಡೆಗಣಿಸಿದ್ದಾರೆ. ಸಭೆಗೆ ಬಾರದ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ಣಯ ಮಾಡಿ, ಜಿಲ್ಲಾಧಿಕಾರಿ, ಜಿಪಂ ಸಿಎಸ್, ಆರೋಗ್ಯ ಸಚಿವರು ಮತ್ತು ಸರ್ಕಾರಕ್ಕೆ ನಿರ್ಣಯ ಪ್ರತಿ ಕಳುಹಿಸಿಕೊಡುವಂತೆ ತಾಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು. ಕುಂದಾಪುರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ 22ನೇ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ಕರಣ್ ಪೂಜಾರಿ ಮಾತನಾಡಿ, ಕಳೆದ ಒಂದು ವರ್ಷದಿಂದ ತಾಲೂಕು ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆ ಕುರಿತು ಕೇಳಲಾದ ಪ್ರಶ್ನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಉತ್ತರಿಸುವಂತೆ 143ರ ಪ್ರಕಾರ ಕೇಳಲಾಗಿದ್ದರೂ ಸಭೆಗೆ ಬಂದಿಲ್ಲ. ಈ ಬಗ್ಗೆ ಕಾನೂನು ಕ್ರಮ ತಗೆದುಕೊಳ್ಳಲು ನಿರ್ಣಯ ಮಾಡುವಂತೆ ಒತ್ತಾಯಿಸಿದರು. ತಾಪಂ ಸದಸ್ಯೆ ಜ್ಯೂತಿ ಪುತ್ರನ್ ಮಾತನಾಡಿ, ಸಭೆಗೆ ಆರೋಗ್ಯಾಧಿಕಾರಿ ಹಾಜರಾಗಿ ಉತ್ತರಿಸಬೇಕಿದ್ದರೂ ಕಳೆದ ಒಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕ ಸಾರಥ್ಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ – ಯಡ್ತಾಡಿ ಇವರ ಸಹಯೋಗದಲ್ಲಿ ನಡೆಯುವ ಬ್ರಹ್ಮಾವರ ತಾಲೂಕು ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮಲಸಾವರಿ ದೇವಸ್ಥಾನ ಯಡ್ತಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಬಗ್ಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನರೇಂದ್ರ ಕುಮಾರ್ ವಿವರಿಸಿದರು. ಜ.24ರಂದು ಮಹಾತ್ಮಗಾಂಧಿ ಫ್ರೌಡಶಾಲೆ ಸಾಬ್ರಕಟ್ಟೆಯಲ್ಲಿ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಆನ್ ಲೈನ್ ಮೂಲಕ ನಡೆಸುವ ಬಗ್ಗೆ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾರಾಯಣ ಮಡಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪರಿಷತ್ತಿನ ಸಂಘಟನ ಕಾರ್ಯದರ್ಶಿ ಅಲ್ತಾರು ನಾಗರಾಜ್, ವಿನಾಯಕ ಯುವಕ ಮಂಡಲದ ಅಧ್ಯಕ್ಷ ರತ್ನಾಕರ ಪೂಜಾರಿ, ಕಾರ್ಯದರ್ಶಿ ಪ್ರಶಾಂತ ಸೂರ್ಯ, ಹಾಗೂ ಸದಸ್ಯರು ಉಪಸ್ಥಿರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಸಂಯೋಜಿತ ಪದವಿ ಮಟ್ಟದ ಪರೀಕ್ಷೆ – 2020 ಹುದ್ದೆಗಳಿಗೆ ಕಂಪ್ಯೂಟರ್ ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷಾ ನೇಮಕಾತಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಪದವಿ ಶಿಕ್ಷಣ ಅಥವಾ ತತ್ಸಮಾನ ಪರೀಕ್ಷೆ ಹೊಂದಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಮೂಲಕ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ https://ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ನೊಂದಣಿಗೆ ಜನವರಿ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-25502520, 0820-2574869 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಮೂರೂವರೆ ವರ್ಷಗಳಿಂದ ಸಂಚರಿಸುತ್ತಿದ್ದ ಕುಂದಾಪುರ – ಬೈಂದೂರು – ಶಿವಮೊಗ್ಗ – ಬೆಂಗಳೂರು ಮಾರ್ಗದ ಕೆಎಸ್ಆರ್ಟಿಸಿ ರಾತ್ರಿ ಬಸ್ ಸಂಚಾರ ಲಾಕ್ಡೌನ್ ಬಳಿಕ ಆರಂಭಗೊಳ್ಳದಿರುವುದು ಈ ಮಾರ್ಗದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ. ಕುಂದಾಪುರ ಡಿಪೋಗೆ ಸೇರಿದ ಬಸ್ಸು ಸಂಜೆ 6:30ಕ್ಕೆ ಕುಂದಾಪುರದಿಂದ ಹೊರಟು ಬೈಂದೂರು ಕೊಲ್ಲೂರು ಹೊಸನಗರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಅದೇ ದಿನ ರಾತ್ರಿ ಬೆಂಗಳೂರಿನಿಂದ ಹೊರಡುವ ಇನ್ನೊಂದು ಬಸ್ಸು ಬೆಳಿಗ್ಗೆ ಬೈಂದೂರು ತಲುಪುತ್ತಿತ್ತು. ಸಂಜೆಯ ವೇಳೆಗೆ ಬೈಂದೂರಿನಿಂದ ಕೊಲ್ಲೂರು, ಹೊಸನಗರ, ಶಿವಮೊಗ್ಗ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹಾಗೂ ಬೆಂಗಳೂರಿನಿಂದ ರಾತ್ರಿ ಬರುವವರಿಗೆ ಇದು ಅನುಕೂಲಕರವಾಗಿತ್ತು. ಲಾಕ್ಡೌನ್ ಸಂದರ್ಭ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಬಸ್ ಸೇವೆ ಆರಂಭಕ್ಕೆ ಕೆಎಸ್ಆರ್ಟಿಸಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ನಷ್ಟದ ಕಾರಣವೊಡುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸನ್ನು ಲಾಕ್ಡೌನ್ ಬಳಿಕ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಎಲ್ಲಾ ಮಾರ್ಗದ ಬಸ್ಸುಗಳಲ್ಲಿಯೂ ಆರಂಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಕರ್ನಾಟಕ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಮಾಜಿ ಅಧ್ಯಕ್ಷ ನೇರಂಬಳ್ಳಿಯ ಎನ್. ಆರ್ ನಾರಾಯಣ ರಾವ್(94) ಬೆಂಗಳೂರು ನಿವಾಸದಲ್ಲಿ ಜ.12ರಂದು ನಿಧನರಾದರು. ಕುಂದಾಪುರ ತಾಲೂಕಿನ ನೇರಂಬಳ್ಳಿ ಗ್ರಾಮದಲ್ಲಿ ಹುಟ್ಟಿ, ಕೋಟೇಶ್ವರದಲ್ಲಿ ವಿಧ್ಯಾಭ್ಯಾಸ ನಡೆಸಿ, ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿದರು. ಹೋಟೆಲ್ ದ್ವಾರಕ ಸಹಿತ ಪ್ರಸಿದ್ದ ಹೋಟೆಲ್ಗಳನ್ನು ಸ್ಥಾಪಿಸಿ, ಕೋಟೇಶ್ವರ ಮಾಗಣಿಯವರು ಉದ್ಯಮದಲ್ಲಿ ಮುನ್ನಡೆಯಲು ಮಾರ್ಗದರ್ಶನ ಮಾಡಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ದಾನಿಗಳಾಗಿಯೂ ಊರ ಅಭಿವೃದ್ಧಿಗೆ ನೆರವು ನೀಡಿದವರು. ಕೋಟೇಶ್ವರದ ಅಭಿವೃಧ್ದಿಯಲ್ಲಿ ಇವರ ಕೊಡುಗೆ ದೊಡ್ಡದಿದೆ. ಕುಂದಾಪುರದ ಎನ್. ಆರ್ಸ್ ನಂದಿನಿ ಹೋಟೇಲ್ ಮಾಲಕ ಎನ್. ರಾಘವೇಂದ್ರ ರಾವ್, ಬೆಂಗಳೂರಿನ ಹೋಟೆಲ್ ಉದ್ಯಮಿ ಎನ್. ಶ್ರೀನಿವಾಸ ರಾವ್ ಸೇರಿದಂತೆ ಇಬ್ಬರು ಪುತ್ರರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ ಉಡುಪಿ, ಕಾಪು, ಕುಂದಾಪುರ, ಬೈಂದೂರು ಮತ್ತು ಕಾರ್ಕಳ ವ್ಯಾಪ್ತಿಗಳಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ (ಓಐಒ) ಯೋಜನೆಯಡಿ 500 ಜಾನುವಾರುಗಳ ವಿಮೆಗಾಗಿ ಸಾಮಾನ್ಯ ವರ್ಗದ ಎ.ಪಿ.ಎಲ್./ ಬಿ.ಪಿ.ಎಲ್ ವರ್ಗದ ಫಲಾನುಭವಿಗಳಿಗೆ ವಿಮಾ ಕಂತಿನ ಮೊತ್ತವನ್ನು ಸಹಾಯಧನದಲ್ಲಿ ವಿತರಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣ ಹಿತ್ತಲ ಮೇಕೆ ಘಟಕದಡಿ 1 ಘಟಕ ಹಾಗೂ ಗ್ರಾಮೀಣ ಹಂದಿ ಘಟಕದಡಿ 2 ಘಟಕ ಸಹಾಯಧನದೊಂದಿಗೆ ನಿಗದಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ಮತ್ತು ಹೆಬ್ರಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
