Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಐಸಿವೈಎಂ ಸಂಘಟನೆಯ ಆಶ್ರಯದಲ್ಲಿ ಕುಂದಾಪುರ ಕ್ರೈಸ್ಟ್ ವಲಯ ಮಟ್ಟದ 30 ಗಜದ ಕ್ರಿಕೆಟ್ ಪಂದ್ಯಾಟ ಹೋಲಿ ರೋಜರಿ ಚರ್ಚ್ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಧರ್ಮಗುರು ಸ್ಟ್ಯಾನಿ ತಾವ್ರೊ ಬ್ಯಾಟಿಂಗ್ ಮಾಡಿ ಉದ್ಘಾಟಿಸಿದರು. 18 ತಂಡಗಳು ಭಾಗವಹಿಸಿದ್ದವು, ಬಸ್ರೂರು ‘ ಬಿ ‘ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಷಿಪ್ ಪಡೆಯಿತು. ಬಸ್ರೂರು ‘ ಎ ‘ ತಂಡ ದ್ವೀತಿಯ ಸ್ಥಾನ ಪಡೆದಿದೆ. ಪುರುಷರಲ್ಲಿ ಸ್ಟೀಫನ್ ಕರ್ವಾಲ್ಲೊ ಪಂದ್ಯ ಶ್ರೇಷ್ಠ, ಮಹಿಳೆಯರಲ್ಲಿ ಆಶಾ ಡಿಮೆಲ್ಲೊ ಪಂದ್ಯ ಶ್ರೇಷ್ಠ, ಜೊಯೆಲ್ ಕರ್ವಾಲ್ಲೊ ಉತ್ತಮ ದಾಂಡಿಗ, ಪ್ರವೀಣ್ ಡಿಸೋಜ ಉತ್ತಮ ಎಸೆತಗಾರ, ಸ್ಟೀಫನ್ ಕರ್ವಾಲ್ಲೊ ಉತ್ತಮ ಸರಣಿ ಆಟಗಾರನಾಗಿ ಆಯ್ಕೆಯಾದರು.ವಿಜೇತರಿಗೆ ನಗದು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕುಂದಾಪುರ ಚರ್ಚ್‍ನ ಸಹಾಯಕ ಧರ್ಮಗುರು ವಿಜಯ್ ಡಿಸೋಜ, ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಸ್ಕತ್ ಚಾಪ್ಟರ್ ಐಸಿಎಐ ಇದರ ಚೇರಮೆನ್ ಆಗಿರುವ ಸಿಎ ಎನ್. ರಮಾನಂದ ಪ್ರಭು ಅವರಿಗೆ ಇತ್ತೀಚೆಗೆ ದೆಹಲಿಯ ಲೀಲಾ ಎಂಬಿಯನ್ಸ್ ಹೋಟೆಲಿನಲ್ಲಿ ನಡೆದ ಐಸಿಎಐನ 71ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಸ್ಕತ್ ಚ್ಯಾಪ್ಟರ್ ಐಸಿಎಐನ ಎಲ್ಲಾ ಸದಸ್ಯರ ಪ್ರತಿನಿಧಿಯಾಗಿ ಬೆಸ್ಟ್ ಓವರ್ಸಿಸ್ ಚಾಪ್ಟರ್ ಅವಾರ್ಡ್ ಐಸಿಎಐ 2020 ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾರ್ಲಿಮೆಂಟ್ ನ ಗೌರವಾನ್ವಿತ ಸದಸ್ಯರಾದ ಸಿಎ ಅರುಣ್ ಸಿಂಗ್ ಹಾಗೂ ಐಸಿಎಐ ನ ಅಧ್ಯಕ್ಷರಾದ ಸಿಎ ಅತುಲ್ ಕುಮಾರ್ ಗುಪ್ತ ಉಪಸ್ಥಿತರಿದ್ದರು. ಜಾಗತಿಕ 43 ದೇಶಗಳ ಒಟ್ಟು 64 ಸಾಗರೋತ್ತರ ಐಸಿಎಐ ನ ಚ್ಯಾಪ್ಟರ್ ಗಳಲ್ಲಿ ಮಸ್ಕತ್ ಚ್ಯಾಪ್ಟರ್ ಐಸಿಎಐ ಅತ್ಯುತ್ತಮ ಚ್ಯಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮುಖೇನ ಐಸಿಎಐ 2020 ಇದರಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿಎ ರಮಾನಂದ ಪ್ರಭು ಅವರು ಮೂಲತಃ ನಾಯ್ಕನಕಟ್ಟೆಯ ಪ್ರಭುಕೇರಿಯವರಾಗಿದ್ದು , ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಎಲ್ಲಾ ಸವಲತ್ತುಗಳು ತಲುಪಿಸಲು ಒಬ್ಬ ಸರ್ಕಾರಿ ಅಧಿಕಾರಿಯಿಂದ ಸಾಧ್ಯವಾಗುತ್ತದೆ. ಇಂತಹ ಹುದ್ದೆಯನ್ನು ಏರಲು ನಾಗರಿಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ಸುನ್ನು ಪಡೆಯುವುದು ಮುಖ್ಯ ಎಂದು ನಿವೃತ್ತ ಕಂದಾಯ ಅಧಿಕಾರಿ ಜಯಪ್ರಕಾಶ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾನವಿಕ ವಿಭಾಗದಿಂದ ಆಯೋಜಿಸಲಾಗಿದ್ದ ನಾಗರಿಕ ಸೇವೆಗೆ ಆಯ್ಕೆಯಾಗುವ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯಶಸ್ಸು ಗಳಿಸಬೇಕಾದರೆ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕನಸುಗಳಿಗೆ ಭಾವನಾತ್ಮಕ ರೂಪ ನೀಡಿ ಅದನ್ನು ಭಿನ್ನವಾಗಿ ಕಾರ್ಯ ರೂಪಕ್ಕೆ ತರುವುದರ ಬಗ್ಗೆ ಯೋಚನೆಯಿರಬೇಕು. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದೃಢ ಸಂಕಲ್ಪ, ಸ್ಪಷ್ಟತೆ, ಕ್ರಿಯಾತ್ಮಕ ಅಲೋಚನೆಗಳಿಂದ ಮಾತ್ರ ಸಾಧ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಒಂದು ತಪಸ್ಸಿನ ಹಾದಿ. ಪ್ರತಿಯೊಬ್ಬರು ಕಠಿಣ ಪರಿಶ್ರಮದಿಂದ ನಡೆದರೆ ಯಶಸ್ಸು ಸಾಧ್ಯ. ಇದರೊಂದಿಗೆ ಸರಿಯಾದ ಮಾರ್ಗದರ್ಶನ ಹಾಗೂ ಸತತ ಪ್ರಯತ್ನ ಇದ್ದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ , ಉಡುಪಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ನಡೆಯಿತು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಸಮಾಜ ಕಾರ್ಯಕರ್ತೆ ಶೈಲಾ ಶ್ಯಾಮನೂರು ಮಾತನಾಡಿ, ಜೊತೆಗೆ ವಿದ್ಯಾರ್ಥಿಗಳಿಗೆ ಕೋಟ್ಪಾ-2003 ಕಾಯ್ದೆಯ ಕುರಿತು ಮಾಹಿತಿ ನೀಡಿ ತಂಬಾಕು ವರ್ಜನೆಯತ್ತ ವಿದ್ಯಾರ್ಥಿಗಳು ಹೆಜ್ಜೆಯನ್ನಿಡುವುದರ ಮೂಲಕ ತಂಬಾಕು ಮುಕ್ತ ಶೈಕ್ಷಣಿಕ ಆವರಣ ನಿಮ್ಮದಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಉಪಯೋಗದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಭಜನೆಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಜನೆ ಮೂಲಕ ಭಕ್ತಿ ಶ್ರದ್ಧೆಗೆ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಧಾರ್ಮಿಕ ಭಾವನೆಗಳನ್ನು ಮೂಡಿಸುವ ಪ್ರಯತ್ನ ಹಿರಿಯರಿಂದ ನಡೆಯಬೇಕು. ಧಾರ್ಮಿಕ ಚಿಂತನೆಗಳಿಂದ ಮನುಷ್ಯ ಸತ್ಪ್ರಜೆಯಾಗಿ ಬೆಳೆಯುತ್ತಾನೆ ಎಂದು ನೇತ್ರಾವತಿ ಶಿರೂರು ಹೇಳಿದರು. ಅವರು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಲಕ-ಬಾಲಕಿಯರ ಕುಣಿತ ಭಜನೆ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಗೌರಿ ಜಿ.ಬಿ., ಕುಸುಮ ಜಿ.ಟಿ., ಶಕುಂತಲಾ ಜಿ.ಟಿ., ಕಸ್ತೂರಿ, ಸುಗಂಧಿ ಜಿ.ಎನ್., ಜಯಂತಿ, ವಸಂತಿ ಜಿ.ಎನ್., ಸುಮಿತ್ರಾ ಜಿ., ರುದ್ರಮ್ಮ, ಸರೋಜ, ಗೌರಿ ಬಿ. ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷೆ ಸುಶೀಲಾ ಸ್ವಾಗತಿಸಿದರು. ವಸಂತಿ ಪಿ. ಕಾರ್ಯಕ್ರಮ ನಿರ್ವಹಿಸಿದರು. ನಾಗಿಣಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾಸತಿ ಫ್ರೆಂಡ್ಸ್ ಮಯ್ಯಾಡಿ ಇವರ ಆಶ್ರಯದಲ್ಲಿ 12ನೇ ವರ್ಷದ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾಟವು ಫೆ. 27ರ ಶನಿವಾರ ರಾತ್ರಿ 8 ಘಂಟೆಗೆ ಮಯ್ಯಾಡಿ ಮಹಾಸತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಈ ಪಂದ್ಯಾಟವು ಪ್ರೋ ಮಾದರಿಯ ಮ್ಯಾಟ್ ಅಂಕಣದಲ್ಲಿ ನಡೆಯಲಿದ್ದು, ಕುಂದಾಪುರ, ಬೈಂದೂರು ಹಾಗೂ ಭಟ್ಕಳ ತಾಲೂಕಿನ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಪ್ರಥಮ ಬಹುಮಾನ 15,555 ದ್ವಿತೀಯ ಬಹುಮಾನ 10,011, ತೃತೀಯ ಬಹುಮಾನ 5555, ಚತುರ್ಥ ಬಹುಮಾನ 3333 ಹಾಗೂ ಶಾಶ್ವತ ಫಲಕಗಳೊಂದಿಗೆ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಸಾಚಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆಸಕ್ತ ತಂಡಗಳು ಫೆ.22ರ ಒಳಗೆ ತಂಡದ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ 98448270140, 8884146952 ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಸಿಎ ಫೌಂಡೇಶನ್, ಸಿಎ ಇಂಟರ್‌ಮೀಡಿಯೇಟ್ ಹಾಗೂ ಸಿಎ ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಮರ್ಸ್ ಪ್ರೊಫೆಶನಲ್ ವಿಭಾಗದ ಒಲ್ವಿಟಾ ಆನ್ಸಿಲಾ ಡಿಸೋಜ ಅಖಿಲ ಭಾರತ ಮಟ್ಟದ ಟಾಪ್ 50 ಸ್ಥಾನಗಳಲ್ಲಿ 19ನೇ ರ್ಯಾಂಕ್ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಲ್ವಿಟಾ ಆಳ್ವಾಸ್‌ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಪಿಯುಸಿ ಶಿಕ್ಷಣ ಪೂರೈಸಿದ್ದು, ಪ್ರಸ್ತುತ ದ್ವಿತೀಯ ಬಿಕಾಂ ಪದವಿ ಓದುತ್ತಿದ್ದಾರೆ. ಆಳ್ವಾಸ್‌ನಲ್ಲಿ ಪಿಯುಸಿ ಮಾಡಿರುವ ಈಕೆ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಗ್ರೂಪ್1 ಮತ್ತು ಗ್ರೂಪ್2 ಎರಡೂ ಪರೀಕ್ಷೆಗಳನ್ನು ಒಂದೇ ಪ್ರಯತ್ನದಲಿ ಉತ್ತೀರ್ಣರಾಗಿದ್ದು,800ರಲ್ಲಿ 655 ಅಂಕಗಳನ್ನು ಪಡೆದಿದ್ದಾರೆ. ಸಿಎ  – ಇಂಟರ್ ಇಂಟರ್‌ಮೀಡಿಯೇಟ್ ಫಲಿತಾಂಶ: ಸಿಎ-ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಗ್ರೂಪ್-1 ಮತ್ತು ಗ್ರೂಪ್-22ವಿಭಾಗದಲ್ಲಿ ಶೇ.23.052 ಫಲಿತಾಂಶವನ್ನು ಪಡೆದುಕೊಂಡಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪ್ರತಿಷ್ಟಿತ ಕಂಪೆನಿಯಾದ ಸಿನೋಪಿಕ್ ಸಿಸ್ಟಮ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ಸೌಜನ್ಯ ಕೆ ಆಗಮಿಸಿದ್ದರು. ‘ಕ್ಯಾಂಪಸ್ ಟು ಕಾರ್ಪೊರೇಟ್ ‘ ಈ ವಿಷಯದ ಬಗ್ಗೆ ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಕಂಪೆನಿಯಲ್ಲಿನ ವೃತ್ತಿ ಜೀವನದ ಕುರಿತು ವಿವರಿಸಿ, ಉದ್ಯೋಗ ಸಂದರ್ಶನಕ್ಕೆ ಹೇಗೆ ತಯಾರಾಗಬೇಕು ಎಂಬುದರ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ ಮಾತನಾಡಿ, ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ, ಸೋತಾಗ ಹೆದರದೆ ಅದನ್ನೇ ಗೆಲುವಿನ ಮೆಟ್ಟಿಲು ಎಂದು ತಿಳಿದು ಪರಿಶ್ರಮ ವಹಿಸಿ ಗೆಲುವಿನತ್ತ ಹೆಜ್ಜೆ ಹಾಕಬೇಕು ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು. ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿಸೋಜಾ ಮಾತನಾಡಿ, ವಿಧ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕಾಣಲು ಪೋಷಕರ ಪಾತ್ರ ಶಿಕ್ಷಕರಷ್ಟೇ ಮಹತ್ವದ್ದಾಗಿದೆ ಈ ದಿಸೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವುದು, ನಿವಾರಿಸುವಿಕೆ) ಅಧಿನಿಯಮ 2019ರಂತೆ ಎಲ್ಲಾ ಕಚೇರಿ, ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮತ್ತು ವಾರ್ಷಿಕ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ತಾಲೂಕಿನ ವಿವಿಧ ಖಾಸಗಿ ಸಂಸ್ಥೆಗಳಿಗೆ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಅಧಿನಿಯಮ 2019 ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಕಚೇರಿ /ಸಂಸ್ಥೆಯಲ್ಲಿ 10 ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಬಹುತೇಕ ಕಾರ್ಖಾನೆಗಳು/ ಆಸ್ಪತ್ರೆ/ ವಾಣಿಜ್ಯ ಸಂಸ್ಥೆಗಳಲ್ಲಿ ಸಮಿತಿ ರಚನೆ ಮಾಡದೇ ಇರುವುದು ಮತ್ತು ವಾರ್ಷಿಕ ವರದಿಯನ್ನು ಸಂಬಂದಪಟ್ಟ ಅಧಿಕಾರಿಗೆ ಸಲ್ಲಿಸದೇ ಇರುವುದು ಗಮನಕ್ಕೆ ಬಂದಿದ್ದು, ಸರ್ಕಾರಿ ಸೇರಿದಂತೆ ಎಲ್ಲಾ ಖಾಸಗಿ ಉದ್ಯೋಗದಾತರು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಸಮಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೋಬಳಿಗೆ ಸಂಬಂಧಿಸಿದಂತೆ ಕಂದಾಯ ಅದಾಲತ್/ ಪೌತಿ/ಪಿಂಚಣಿ ಅದಾಲತ್ ಕಾರ್ಯಕ್ರಮವು ಹಾಲಾಡಿ ಶಾಲಿನಿ ಜಿ ಶಂಕರ ಕನ್ವೆಂಷನ್ ಸೆಂಟರ್‌ನಲ್ಲಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಯಕ್ರಮದಲ್ಲಿ ಕಂದಾಯ ಇಲಾಖೆಯ 94ಸಿ ಯೋಜನೆಯಡಿ 42 ಫಲಾನುಭವಿಗಳಿಗೆ ಹಕ್ಕುಪತ್ರ, ಸಾಮಾಜಿಕ ಭದ್ರತೆ ಯೋಜನೆಯಡಿ 108 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶವನ್ನು ವಿತರಿಸಲಾಯಿತು. 67 ಪ್ರಕರಣಗಳಲ್ಲಿ ಪಿಂಚಣಿ ಅದಾಲತ್ ನಡೆಸಿ ಸ್ಥಳದಲ್ಲಿ ಪಿಂಚಣಿ ಮಂಜೂರಾತಿ ಮಾಡಲಾಯಿತು. 2268 ಪ್ರಕರಣಗಳಲ್ಲಿ ಪಹಣಿ ತಿದ್ದುಪಡಿಗೆ ಕ್ರಮವಹಿಸಲಾಯಿತು. 191 ಜಮೀನಿಗೆ ಸಂಬಂಧಪಟ್ಟಂತೆ ಪೌತಿ ಅದಾಲತ್ ಕಾರ್ಯಕ್ರಮದಲ್ಲಿ ಪೌತಿ ಖಾತಾ ಬದಲಾವಣೆಗೆ ಅರ್ಜಿ ಸ್ವೀಕರಿಸಲಾಯಿತು. 63 11ಇ ಪ್ರಕರಣಗಳ ಆಕಾರಬಂದ್ ಆರ್‌ಟಿಸಿ ಹೊಂದಾಣಿಕೆ ಮಾಡಿ ತಿದ್ದುಪಡಿಗೆ ಕ್ರಮ ವಹಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಸಹಾಯಕ ಕಮೀಷನರ್ ಕೆ.ರಾಜು, ತಹಶೀಲ್ದಾರ್ ಆನಂದಪ್ಪ ನಾಯಕ್ ಉಪಸ್ಥಿತರಿದ್ದರು.

Read More