Author: ನ್ಯೂಸ್ ಬ್ಯೂರೋ

ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯ ಸರಕಾರದ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾಣೆಯ ಕೌನ್ಸಿಲಿಂಗ್‌ನ ಭ್ರಷ್ಟ ನಾಟಕ ನಡೆಯಿತು. ಪರಸ್ಪರ ವರ್ಗಾವಣೆ; ನಗರ ಗ್ರಾಮಾಂತರ ಪ್ರದೇಶ ಬದಲಾವಣೆ; ದಂಪತಿಗಳು ಒಂದೇ ಕಡೆ ಕೆಲಸ ನಿರ್ವಹಿಸುವ ಅವಕಾಶ; ಅನಾರೋಗ್ಯದ ನೆಲೆಯಲ್ಲಿ ವರ್ಗಾವಣೆ; ನೇರವಾಗಿ ಖಾಲಿ ಇರುವ ಸ್ಥಳಕ್ಕೆ ವರ್ಗಾವಣೆ ಹೀಗೆ ಹಲವು ಪ್ರಕಾರಗಳಿವೆ. ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆಗೆ ಅರ್ಹರಾದವರ ಪಟ್ಟಿ ಪ್ರಕಟಿಸಲಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ವರ್ಗಾವಣೆಗೆ ಅರ್ಹರಾದವರ ಪಟ್ಟಿಯಿಂದ ಹಿಡಿದು ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೌನ್ಸಿಲಿಂಗ್ ನಡೆದು ವರ್ಗಾವಣೆಯ ಅಂತಿಮ ಆದೇಶ ಹೊರಡಿಸುವ ವರೆಗೆ ಸಾಕಷ್ಟು ಗೋಲ್‌ಮಾಲ್ ನಡೆದಿದೆ. ದಂಪತಿಗಳು ಒಂದೇ ತಾಲೂಕಿನ ಒಳಗೆ ದೂರ ದೂರದ ಊರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ವರ್ಗಾವಣೆಗೆ ಅವಕಾಶ ಇದ್ದರೂ ಕೆಲವರಿಗೆ ವರ್ಗಾವಣೆ ನಿರಾಕರಿಸಲಾಗಿದೆ. ಸೇವಾ ಹಿರಿತನಕ್ಕೆ ಬೆಲೆ ಇಲ್ಲ. 10-15 ವರ್ಷ ದೂರದ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದವರಿಗೆ ಹತ್ತಿರದ ನಗರ ಪ್ರದೇಶಕ್ಕೆ ಅವಕಾಶವಿದ್ದರೂ ವರ್ಗಾವಣೆ ನಿರಾಕರಿಸಲಾಗಿದೆ. ವರ್ಗಾವಣೆ ಬಯಸಿದ 5ರಿಂದ 10 ಶೇಕಡಾ ಉಪನ್ಯಾಸಕರಿಗೆ…

Read More

ಉಡುಪಿ: ರಸ್ತೆ ಅಪಘಾತ ನಡೆದಾಗ ಅಲ್ಲಿ ಬಿದ್ದವರ ಪೊಟೋ ಕ್ಲಿಕ್ಕಿಸಿ ಅದನ್ನು ಫೇಸ್‌ಬುಕ್‌, ವಾಟ್ಸ್‌ಪ್‌ಗೆ  ಅಪ್‌ಲೋಡ್‌ ಮಾಡಿ ಅನಾಗರೀಕತೆ ತೋರ್ಪಡಿಸುವ ಬದಲಿಗೆ ಆ ಸಮಯದಲ್ಲಿ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆಯಬೇಕು ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಕರೆ ನೀಡಿದರು. ಅಪಘಾತ ನಡೆದ ಕೂಡಲೇ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ಕೆಲವರು ಪೊಲೀಸ್‌, ಕೋರ್ಟ್‌ ಭಯದಿಂದ ಹಿಂಜರಿಯುತ್ತಾರೆ. ಹೀಗೆ ಭಯಪಡಬೇಕಾಗಿಲ್ಲ. ಅಪಘಾತವನ್ನು ಮೊದಲು ನೋಡಿದವನನ್ನಾಗಲಿ, ಆಸ್ಪತ್ರೆಗೆ ದಾಖಲಿಸಿದವನನ್ನಾಗಲಿ ಪೊಲೀಸರು ಒತ್ತಾಯಪಡಿಸಿ ಸಾಕ್ಷಿದಾರನನ್ನಾಗಿ ಮಾಡುವಂತಿಲ್ಲ. ನ್ಯಾಯಾಲಯ ಕೂಡ ಪ್ರಶ್ನಿಸುವುದಿಲ್ಲ. ಹಾಗಾಗಿ ಯಾವುದೇ ಅಂಜಿಕೆಯಿಲ್ಲದೆ ಸಹಾಯ ಮಾಡಬಹುದು. ಒಂದು ವೇಳೆ ಅಗತ್ಯ ಬಿದ್ದಾಗ ಸಾಕ್ಷಿ ಹೇಳಿದರೆ ಅಪಘಾತದಿಂದ ನಿಜವಾಗಿ ಅನ್ಯಾಯಕ್ಕೊಳಗಾದವನಿಗೆ ವಿಮಾ ಪರಿಹಾರ ಮತ್ತಿತರ ಪರಿಹಾರ ಧನ ದೊರೆಯಲು ಸಹಾಯವಾಗುತ್ತದೆ. ಸಹಾಯ ಮಾಡಿದವರು ಬಯಸಿದರೆ ಮಾತ್ರ ಸಾಕ್ಷಿಯಾಗುತ್ತಾರೆ ಎಂದು ಅವರು ರಸ್ತೆ ಅಪಘಾತ ದೇಶದ ದೊಡ್ಡ ರೋಗದಂತಾಗಿದೆ. ನಾಲ್ಕು ನಿಮಿಷ ಕ್ಕೋರ್ವರು ರಸ್ತೆ ಅಪಘಾತದಿಂದ ಮೃತಪಡುತ್ತಿದ್ದಾರೆ. ಇಂತಹ ಅಪಘಾತಗಳಾದಾಗ ಸಾರ್ವಜನಿಕರ ತುರ್ತು ಸ್ಪಂದನದಿಂದ ಕೆಲವು ಜೀವಗಳನ್ನು ಉಳಿಸಲು…

Read More

ಕುಂದಾಪುರ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಮತ್ತು ಘಟ್ಟದಕೋರೆ) ಮೂಡಲಪಾಯ, ಯಕ್ಷಗಾನ ಗೊಂಬೆಯಾಟ (ಸೂತ್ರದ ಮತ್ತು ತೊಗಲುಗೊಂಬೆ) ಶ್ರೀಕೃಷ್ಣಪಾರಿಜಾತ, ಸಣ್ಣಾಟ, ದೊಡ್ಡಾಟ ಇತ್ಯಾದಿ ಕಲಾಪ್ರಕಾರಗಳಲ್ಲಿ 2014 ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಪುಸ್ತಕಕ್ಕೆ ರೂ 5,000/- ಬಹುಮಾನವನ್ನು ನೀಡಲಾಗುವುದ. ಯಕ್ಷಗಾನ ಮತ್ತು ಬಯಲಾಟದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಆಹಾರ್ಯ, ಅಭಿನಯ ಇತ್ಯಾದಿ) ಸಂಶೋಧನೆ, ವಿಮರ್ಶೆ ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕೆ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು. ಸಂಪಾದಿತ, ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು. ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು – 560 002 ಇವರಿಗೆ 2015 ರ…

Read More

ಕುಂದಾಪುರ: ಅವರಿಬ್ಬರೂ ಜೀವದ ಗೆಳೆಯರು. ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೆಮ್ಮಾಡಿಯಲ್ಲಿಯೂ ಮನೆಮಾತಾದವರು. ತಮ್ಮದೇ ಉದ್ಯೋಗ-ವ್ಯವಹಾರವನ್ನು ಮಾಡಿಕೊಂಡು ಚನ್ನಾಗಿಯೇ ಇದ್ದರು. ಆದರೆ ವಿಧಿಗೆ ಇವರು ಬದುಕುವುದು ಬೇಕಿರಲಿಲ್ಲ. ಬದುಕಿನ ನೂರಾರು ಕನಸು ಹೊತ್ತ ಈ ಸ್ನೇಹಿತರು ಸಾವುನಲ್ಲೂ ಜೊತೆಯಾದರು. ನೆಚ್ಚಿನ ಬೈಕಿನಲ್ಲಿ ಹೊರಟಿದ್ದ ಅವರು ಜೀವಂತವಾಗಿ ಮರಳಲೇ ಇಲ್ಲ. ಸಂಜೆ ಬೈಕ್ ಹಾಗೂ 407 ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಸಹಸವಾರಾಗಿದ್ದ ಸುರೇಂದ್ರ ಗಾಣಿಗ ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದಸಂಪತ್ ಪೂಜಾರಿ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ವಂದಿಸದೇ ತಡರಾತ್ರಿ ಮೃತಪಟ್ಟಿದ್ದಾರೆ. ಹೆಮ್ಮಾಡಿಯವರಾದ ಸುರೇಂದ್ರ ಗಾಣಿಗ(32) ಹಾಗೂ ಸಂಪತ್ ಪೂಜಾರಿ (26) ಹೊಸ ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿ ಕಡೆಯಿಂದ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆಗೆ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ 407 ಗೂಡ್ಸ್ ಟೆಂಪೋವು ಕಟ್ ಬೆಲ್ತೂರು ರೈಲ್ವೆ ಮೇಲ್ಸೆತುವೆ ಬಳಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸುರೇಂದ್ರ ಗಾಣಿಗರ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ…

Read More

ಬೈಂದೂರು: ಆ ಶಾಲೆಯ ಕಟ್ಟಡದ ಒಂದು ಬದಿ ಸಂಪೂರ್ಣ ಬಿದ್ದು ಹೋಗಿದೆ. ವಿದ್ಯುತ್ ಸಂಪರ್ಕದ ತಂತಿಗಳು ಕಿತ್ತು ಹೋಗಿದೆ. ಆದರೂ ಸಹ ಇಲ್ಲಿನ ಶಿಕ್ಷಕರು ಮತ್ತೊಂದು ಕಟ್ಟಡದ ಇರುವ ಎರಡು ಕೊಠಡಿಗಳಲ್ಲಿಯೇ ಮಕ್ಕಳನ್ನು ತುಂಬಿಸಿಕೊಂಡು ನಿಶ್ಚಿಂತೆಯಿಂದ ಪಾಠ ಮಾಡುತ್ತಿದ್ದಾರೆ. ದುರಸ್ತಿಗಳೊಸಬೇಕಾದ ಇಲಾಖೆ ಸುಮ್ಮನೆ ಕುಳಿತಿದೆ. ಬೈಂದೂರು ವಲಯ ಉಪ್ಪುಂದ ಗ್ರಾಮದ ಅಮ್ಮನವರ ತೊಪ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಪ್ರಸಕ್ತ ಸಾಲಿನಲ್ಲಿ 42 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 3ನೇ ತರಗತಿಯವರೆಗಿನ ಮಕ್ಕಳಿಗೆ ನಲಿಕಲಿ ಯೋಜನೆಯಡಿಯಲ್ಲಿ ಒಂದೇ ತರಗತಿಯಲ್ಲಿ ಪಾಠ ಮಾಡಬೇಕಾದುದರಿಂದ ಹೊಸ ಕಟ್ಟಡದ ಒಂದು ಕೊಠಡಿಯನ್ನು ಬಳಸಿಕೊಂಡಿದ್ದಾರೆ. ಆದರೆ ಸಮುದ್ರ ತೀರಕ್ಕೆ ಹತ್ತಿರವೇ ಇರುವ ಶಾಲೆಯ ಹಳೆಯ ಕಟ್ಟಡದ ಒಂದು ಒದಿ ಬಿದ್ದು ಹೋಗಿರುವುದರಿಂದ ಮತ್ತು ಮಳೆ-ಗಾಳಿಯ ರಭಸಕ್ಕೆ ಅದೇ ಕಟ್ಟಡದ ಇನ್ನೊಂದು ಬದಿಯಲ್ಲಿ ಮಕ್ಕಳನ್ನು ಕುರಿಸಿಕೊಂಡು ಪಾಠ ಮಾಡುವುದು ಕಷ್ಟವಾದ್ದರಿಂದ 4 ಮತ್ತು 5ನೇ ತರಗತಿಯ ಮಕ್ಕಳನ್ನು ಒಟ್ಟಾಗಿಸಿ ಹೊಸ…

Read More

ನಾಡ: ಸಂವಿಧಾನದತ್ತ ಹಕ್ಕುಗಳನ್ನು ಪಡೆದು ಸರ್ವಾಂರ್ಗೀಣ ಅಭಿವೃದ್ಧಿಯತ್ತ ಸಾಗಲು ದಲಿತರಿಗೆ ದಲಿತರೇ ಇಂದು ಅಡ್ಡಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದಲಿತರಲ್ಲಿನ ಒಗ್ಗಟ್ಟನ್ನು ಮುರಿದು ದಲಿತ ಚಳವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಂಘರ್ಷ ಸಮಿತಿ ಎಂದರೆ ಕೇವಲ ಗಲಾಟೆ-ಗದ್ದಲ, ಕೇಸು, ಕೋರ್ಟು-ಕಚೇರಿ ಎಂದಷ್ಟೇ ತಪ್ಪುತಿಳಿಯುವಂತಾಗಿದೆ. ದಲಿತ ಸಂಘಟನೆ ಎಂದರೆ ದಲಿತರ ಸ್ವಾಭಿಮಾನ ಜಾಗೃತಿಯೇ ವಿನಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಗೊಂದಲವನ್ನು ಸೃಷ್ಟಿಸುವುದಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಉಡುಪಿ ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಹೇಳಿದರು.

Read More

ಜೀ ಟಿವಿ ಹಿಂದಿ ವಾಹಿನಿಯು ನಡೆಸುತ್ತಿದ್ದ  ಸರಿಗಮಪ ಲಿಟಲ್ ಚಾಂಪ್ಸ್-5 ರಿಯಾಲಿಟಿ ಶೋಗೆ ತೆರೆಬಿದ್ದಿದ್ದು ಈ ಬಾರಿಯ ಲಿಟಲ್ ಚಾಂಪ್ಸ್ ಪಟ್ಟವನ್ನು ಕರ್ನಾಟಕದ ಏಕೈಕ ಸ್ವರ್ಧಿಯಾಗಿದ್ದ ಉಡುಪಿಯ ಪ್ರತಿಭೆ ಗಗನ್ ಗಾಂವ್ಕರ್ ಅಲಂಕರಿಸಿದ್ದಾರೆ.

Read More

ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಹೆಸರು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜಿನ್ ಫೋರ್ಬ್ಸ್ ನಲ್ಲಿ ಪ್ರಕಟಗೊಂಡಿದ್ದು ಕುಂದಾಪುರಕ್ಕೆ ಮತ್ತೊಂದು ಗರಿ ಬಂದಂತಾಗಿದೆ.  ತನ್ನ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕವೇ ಪ್ರಸಿದ್ಧಿ ಹೊಂದಿದ್ದ ಸತೀಶ್ ಆಚಾರ್ಯ ಅವರ ಹೆಸರು ಫೋರ್ಬ್ಸ್ ನಲ್ಲಿ ಕಾಣಿಸಿಕೊಂಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಏನು ಹೇಳಿದೆ ಫೋರ್ಬ್ಸ್ ಮ್ಯಾಗಜಿನ್? ಫೋರ್ಬ್ಸ್ ಮ್ಯಾಗಜಿನ್ ನ ವೇಗದಲ್ಲಿ ಬದಲಾಗುತ್ತಿರುವ ಭಾರತವನ್ನು ಜಗತ್ತಿಗೆ ಅಸಾಧಾರಣವಾಗಿ ವರ್ಣಿಸುತ್ತಿರುವ, ಭಾರತೀಯ ಮೂಲದ ವಿಶ್ವವಿಖ್ಯಾತ ಚಿಂತಕರೆಂದು ಹೇಳಲಾಗಿರುವ 24 ಮಂದಿ ಖ್ಯಾತನಾಮರ ಪಟ್ಟಿಯಲ್ಲಿರುವ ಭಾರತದ ಸತೀಶ್ ಆಚಾರ್ಯ ಅವರ ಹೆಸರೂ ಇದೆ. ಮಂಗಳೂರು ಮೂಲದ ಚತುರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಭಾರತದ ರಾಜಕಾರಣ ಮತ್ತು ಭಾರತೀಯ ಕ್ರೀಡಾ ಲೋಕವನ್ನು ತಮ್ಮ ಅದ್ಭುತವಾದ ಕಾರ್ಟೂನ್ ಗೆರೆಗಳ ಮೂಲಕ ಸಮಗ್ರವಾಗಿ ಹಿಡಿದಿಡುತ್ತಾರೆ ಎಂದು ಹೇಳಿದೆ.

Read More