ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು, ಎ.11: ಪುರಾತನ ಪ್ರಸಿದ್ಧ ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಎ.14 ರಿಂದ 16ರ ವರೆಗೆ ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಗಳ ವಾರ್ಷಿಕೋತ್ಸವ ಮತ್ತು ಭಜನಾ ಕಾರ್ಯಕ್ರಮದ ನಡೆಯಲಿದೆ. ಎ.14ರಂದು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ನಾಗದೇವರ ವಾರ್ಷಿಕ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಎ.15ರಂದು ಬೆಳಗ್ಗೆ 9.05ಕ್ಕೆ ಏಕಾಹ ಅಖಂಡ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ಏ.16ರಂದು ಪ್ರದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಎ.15ರಿಂದ ಎ.16ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ಗೆಂಡ ಸೇವೆ ಹಾಗೂ ರಾತ್ರಿ ಗಂಟೆ 9.30ಕ್ಕೆ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿರುವುದು. ಮೂರು ದಿನಗಳ ಕಾಲ ಅನ್ನಸಂತರ್ಪಣೆ ಸೇವೆ ನಡೆಯಲಿದೆ ಶ್ರೀ ನಂದಿಕೇಶ್ವರ ದೈವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ:► ಮೂರ್ಗೋಳಿಹಕ್ಲು ಶ್ರೀ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮದುವೆಯ ನೆನಪನ್ನು ಶಾಶ್ವಾತವಾಗಿಸಿಸಲು ನೂರಾರು ಕಸರತ್ತು ನಡೆಸುವುದನ್ನು ನೋಡಿದ್ದೇವೆ. ಸಮುದ್ರ ಆಳದಲ್ಲಿ, ವಿಮಾನದಲ್ಲಿ ವಿವಾಹ ಆಗಿದ್ದು ಇದೆ. ಹಾಗೇ ಮಂಡ್ಯದ ಈ ಜೋಡಿ ಕುಂದಾಪುರ ಎಂ. ಕೋಡಿ ಸಮುದ್ರ ತೀರದಲ್ಲಿ ಸಪ್ತಪತಿ ತುಳಿದು ಗಮನ ಸೆಳೆದಿದ್ದಾರೆ. ಕುಂದಾಪುರದ ಎಂ.ಕೋಡಿ ಸಮೀಪ ಬೆಳಗ್ಗೆ ಸಮುದ್ರ ತೀರದಲ್ಲಿ ವಿವಾಹ ಮಂಟಪ ನಿರ್ಮಿಸಿ ವಿವಾಹವಾಗಿದ್ದಾರೆ. ಲಿಂಗಾಯಿತ ಸಮಾಜದ ಹುಡುಗಿ ಹುಡುಗ ಬ್ರಾಹ್ಮಣ ಸಂಪ್ರದಾಯ ಪುರೋಹಿತರ ಪೌರೋಹಿತ್ಯದಲ್ಲಿ ಮದುವೆ ಆಗಿದ್ದು, ಕಟ್ಕೇರಿ ಶಿವಾನಂದ ಐತಾಳ್ ಸೂತ್ರ ಧಾರಣೆ ಮಾಡಿಸಿದರು. ವಧು ವರರ ಕುಟುಂಬಿಕರು ಈ ಅಪರೂಪದ ಮದುವೆಗೆ ಸಾಕ್ಷಿಯಾದರು. ಬಳಿಕ ಕುಂಭಾಶಿ ದೇವಸ್ಥಾನದಲ್ಲಿ ಪ್ರಸಾದ ಭೋಜನ ಸೇವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.7: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ಒಟ್ಟು 17 ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, ಕನ್ನಡ ಭಾಷೆ ಓದಲು, ಬರೆಯಲು ತಿಳಿದಿರುವ ಹಾಗೂ ಲಘು ವಾಹನ ಚಾಲನಾ ಲೈಸನ್ಸ್ ಹೊಂದಿರುವ ಅರ್ಹ ಅಭ್ಯರ್ಥಿಗಳು ಮೇ 5 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕವನ್ನು ಚಲನ್ ಮೂಲಕ ಪಾವತಿಸಲು ಮೇ 7 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ https://districts.ecourts.gov.in/udupi-onlinerecruitment ಅಥವಾ ಜಿಲ್ಲಾ ನ್ಯಾಯಾಧೀಶರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.6: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ರಸ್ತೆ ಬ್ಲ್ಯಾಕ್ಸ್ಪಾಟ್ನಲ್ಲಿ ಸಂಬಂಧಪಟ್ಟ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು 15 ದಿನಗಳಲ್ಲಿ ತೆರವುಗೊಳಿಸಬೇಕು. 15 ದಿನದ ನಂತರ ಆ ಪ್ರದೇಶದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾದಲ್ಲಿ ರಸ್ತೆಯನ್ನು ನಿರ್ಮಿಸಿ, ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದ್ದಾರೆ. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಎ ರಲ್ಲಿ ಒಟ್ಟು 33 ಅಪಘಾತ ಸಂಭವಿಸುವ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದು, ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇನ್ನು 15 ದಿನದಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಅಗತ್ಯ ದುರಸ್ಥಿ ಕಾರ್ಯ ಕೈಗೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳಲ್ಲಿ ದಿನನಿತ್ಯ ಜರುಗುವ ಚಟುವಟಿಕೆಗಳ ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಿ ಇಟ್ಟು, ದತ್ತಾಂಶ ಸಂಗ್ರಹದ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದಾಗ ಆಂತರಿಕ ಗುಣಮಟ್ಟ ಭರವಸೆ ಕೋಶವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಪಕ ಹಾಗೂ ಯೆನಪೋಯ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಕೆ.ಆರ್ ಚಂದ್ರಶೇಖರ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ಗುಣಮಟ್ಟ ಕಾಯ್ದಿರಿಸುವಲ್ಲಿ ಐಕ್ಯೂಎಸಿಯ ಪಾತ್ರ’ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಸರ್ವೋತೋಮುಖ ಬೆಳವಣಿಗೆಯ ಗುರಿಯನ್ನು ಐಕ್ಯೂಎಸಿ ಹೊಂದಿರುತ್ತದೆ. ಆ ಹಿನ್ನಲೆಯಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಶಿಕ್ಷಕರು ತಮ್ಮ ಬೆಳವಣಿಗೆಯ ಜತೆಗೆ ಸಂಸ್ಥೆಯ ಶ್ರೇಯಸ್ಸಿನಲ್ಲಿ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಐಕ್ಯುಎಸಿಯು ಸದಾ ಚಲನಶೀಲವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರತ್ತಾ ಗಮನ ಹರಿಸುವುದು ಅಗತ್ಯ. ಶಿಕ್ಷಕರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.6: ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ಣಯದಂತೆ ಉಡುಪಿ ಮತ್ತು ಕುಂದಾಪುರ ತಾಲೂಕಿನ ಆಟೋರಿಕ್ಷಾ ಚಾಲಕ ಹಾಗೂ ಮಾಲಕರು ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ವಲಯ ಸ್ಟಿಕ್ಕರ್ಗಳನ್ನು ಅಳವಡಿಸಿಕೊಳ್ಳುವಂತೆ ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದ್ದು, ವಲಯ ಸ್ಟಿಕ್ಕರ್ ಅಳವಡಿಸಲು ಬಾಕಿ ಇರುವ ಆಟೋರಿಕ್ಷಾ ಮಾಲಕರು ವಾಹನದ ಮೂಲ ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗಿ ಕೂಡಲೇ ವಲಯ ಸ್ಟಿಕ್ಕರ್ಗಳನ್ನು ಅಳವಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಿ, ಕಠಿಣ ಕಾನೂನು ಕ್ರಮ ಕೈಗೊಂಡು, ಮಾಹಿತಿಯನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಲಾವಣ್ಯ ರಿ. ಬೈಂದೂರು ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ‘ರಂಗಪಂಚಮಿ ನಾಟಕೋತ್ಸವ’ ಶಾರದಾ ವೇದಿಕೆಯಲ್ಲಿ ಎಪ್ರಿಲ್ 9ರಿಂದ 13 ತನಕ ಜರುಗಲಿದೆ. ಎ.9ರಂದು ಕಾರ್ಯಕ್ರಮವನ್ನು ಯುಥ್ ಫಾರ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಯ್ಯ ಅವರು ಉದ್ಘಾಟಿಸಲಿದ್ದಾರೆ. 5 ದಿನಗಳ ಕಾಲ ವಿವಿಧ ಅತಿಥಿಗಳು ಉಪಸ್ಥಿತರಿರಲಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಲಿದೆ. ರಂಗಪಂಚಮಿ ನಾಟಕೋತ್ಸವದಲ್ಲಿ ಎ.9ರಂದು ಹಾವೇರಿ ಶೇಷಗಿರಿ ಕಲಾತಂಡದಿಂದ ಕುವೆಂಪು ಅವರ ರಾಮಾಯಣ ದರ್ಶನಂ ಆಧಾರಿತ, ಎಂ. ಗಣೇಶ್ ಉಡುಪಿ ನಿರ್ದೇಶನದ ನಾಟಕ ‘ವಾಲಿವಧೆ’ ಪ್ರದರ್ಶನಗೊಳ್ಳಲಿದೆ. ಎ.10ರಂದು ಡ್ರಾಮಾಟ್ರಿಕ್ಸ್ ಬೆಂಗಳೂರು ಅಭಿನಯದ ಬೀಚಿ ಸಾಹಿತ್ಯಾಧಾರಿತ, ಎನ್.ಸಿ ಮಹೇಶ್ ರಚಿಸಿ, ರಾಜೇಂದ್ರ ಕಾರಂತ್ ಬೆಂಗಳೂರು ನಿರ್ದೇಶನದ ‘ಬೀಚಿ ಹೌಸ್’ ನಾಟಕ ಪ್ರದರ್ಶನಗೊಳ್ಳಲಿದೆ. ಎ.11ರಂದು ಅಭಿಯಂತರರು ಮೈಸೂರು ಅಭಿಯನಯದ ರಾಜೇಂದ್ರ ಕಾರಂತ್ ನಿರ್ದೇಶನದ ‘ಮಲ್ಲಿಗೆ ತೋಟದಲ್ಲಿ ಮರ್ಡರ್’ ನಾಟಕ, ಎ.12ರಂದು ಸಮುದಾಯ ಧಾರವಾಡ ಅಭಿನಯದ ಡಾ. ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಕುಂದಾಪುರ ವಕೀಲರ ಸಂಘದ ಚುನಾವಣೆಯಲ್ಲಿ 2022-24ನೇ ಸಾಲಿನ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಈ ಹಿಂದಿನ ಅವಧಿಗಳಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ಈಗ ಎರಡನೇ ಅವಧಿಗೆ ಸಂಘದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ವಕೀಲರ ಸಂಘದಲ್ಲಿ 264 ಜನ ಸದಸ್ಯರಿದ್ದು 252 ಮಂದಿ ಮತ ಚಲಾಯಿಸಿದ್ದರು. ಸಂಘದ ಕಾರ್ಯದರ್ಶಿಯಾಗಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾಗಿ ಬೀನಾ ಜೊಸೆಫ್, ಜತೆ ಕಾರ್ಯದರ್ಶಿಯಾ ಗಿರಿತೇಶ್ ಬಿ. ಹಾಗೂ ಕೋಶಾಧಿಕಾರಿಯಾಗಿ ದಿನಕರ್ ಕೆ.ಎಸ್. ಅವಿರೋಧ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 3 ಮಂದಿ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಕೊಡಮಾಡಲ್ಪಡುವ 2020ನೇ ಸಾಲಿನ ಕರ್ನಾಟಕ ಕ್ರೀಡಾರತ್ನಪ್ರಶಸ್ತಿ ದೊರೆತಿದೆ. ಬಾಲ್ಬ್ಯಾಡ್ಮಿಂಟನ್ನಲ್ಲಿ ಕಿರಣ್ಕುಮಾರ್, ಕುಸ್ತಿಯಲ್ಲಿ ಲಕ್ಷ್ಮೀರೇಡೇಕರ್ ಹಾಗೂ ಖೋಖೋ ದಲ್ಲಿ ದೀಕ್ಷಾ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳು. ಕಿರಣ್ಕುಮಾರ್ಪ್ರಸಕ್ತ ಕರ್ನಾಟಕ ರಾಜ್ಯ ಬಾಲ್ಬ್ಯಾಡ್ಮಿಂಟನ್ ತಂಡದ ನಾಯಕರಾಗಿರುವ ಕಿರಣ್ ಒಟ್ಟು 16 ಬಾರಿ ರಾಜ್ಯ ತಂಡವನ್ನು ರಾಷ್ಟ್ರೀಯ ಸೀನಿಯರ್ ಹಾಗೂ ಫೆಡರೇಶನ್ಕಪ್ ಚಾಂಪಿಯನ್ಶಿಪ್ಗಳಲ್ಲಿ ಪ್ರತಿನಿಧಿಸಿದ್ದು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಟ್ಟು 4 ಬಾರಿಚಿನ್ನ, 4೪ ಬಾರಿ ಬೆಳ್ಳಿ ಹಾಗೂ 8 ಬಾರಿ ಕಂಚಿನ ಪದಕ ಪಡೆದಿರುವರು. ಅಖಿಲ ಭಾರತ ಅಂತರ್ ವಿ.ವಿ ಕೂಟ ಚಾಂಪಿಯನ್ ತಂಡದ ನಾಯಕರಾಗಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದು, 4 ಬಾರಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದಾರೆ. ಲಕ್ಷ್ಮೀರೇಡೇಕರ್ಒಟ್ಟು 5 ಬಾರಿ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಇವರು ರಾಷ್ಟ್ರೀಯ ಜೂನಿಯರ್ ಕೂಟದಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. 2…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಲ್ಪೆ ಬಂದರಿನಿಂದ ಭಟ್ಕಳಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಭಟ್ಕಳ ಬಂದರು ಸಮೀಪ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೋಟಿನಲ್ಲಿದ್ದ 7 ಜನ ಮೀನುಗಾರರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ. ಮಲ್ವೆಯ ತೊಟ್ಟಂ ನಿವಾಸಿ ದೀಕ್ಷಿತ್ ಎಂಬುವರಿಗೆ ಸೇರಿದ ಸಿಹಾನ್ ಫಿಶರಿಸ್ ಎಂಬ ಬೋಟ್ ಸೋಮವಾರ ಬೆಳಿಗ್ಗೆ ಭಟ್ಕಳ ಬಂದರಿನಿಂದ 14 ನಾಟಿಕಲ್ ಮೈಲು ದೂರದಲ್ಲಿ ಕಲ್ಲು ಬಂಡೆಗೆ ತಾಗಿ ಒಳಗೆ ನೀರು ನುಗ್ಗಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ರವಿ, ನಾಗಪ್ಪ ಮೊಗೇರ ಮತ್ತು ಸಹಚರರನ್ನು, ಸ್ಥಳೀಯ ಜೈಶ್ರೀರಾಮ್ ಬೋಟಿನ ಮೀನುಗಾರರು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
