ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಲ್ಲಿ ಮದುವೆ ಎಲ್ಲಾ ರೀತಿಯ ತಯಾರಿ ನಡೆದಿತ್ತು. ಇನ್ನೇನು ನಾಳೆ ಎಂದರೆ ಮದುವೆ. ಆದರೆ ಮದುವೆಗಾಗಿ ಬೆಂಗಳೂರಿನಿಂದ ಬರಬೇಕಿದ್ದ ಮಧುಮಗನ ಮಾತ್ರ ನಾಟ್ ರೀಚೆಬಲ್ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಬೈಂದೂರಿನ ಜೆಎನ್‌ಆರ್ ಸಭಾಭವನದಲ್ಲಿ ನಡೆಯಬೇಕಿದ್ದ ಮದುವೆಯೂ ನಿಂತು ಹೋಗಿದೆ. ತಾಲೂಕಿನ ಬಳ್ಕೂರಿನ ಪ್ರವೀಣ ಕುಮಾರ್ ನಾಪತ್ತೆಯಾದ ವ್ಯಕ್ತಿ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಉದ್ಯೋಗಿಯಾಗಿರುವ, ಬಳ್ಕೂರು ನಡುಮನೆ ರಾಮಚಂದ್ರ ಎಂಬುವವರ ಪುತ್ರ ಪ್ರವೀಣ ಕುಮಾರನ ಮದುವೆ ನ.29ರಂದು ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವತಿಯೊಂದಿಗೆ ನಿಗದಿಯಾಗಿತ್ತು. ನಾಲ್ಕು ತಿಂಗಳ ಹಿಂದೆಯೇ ಮದುವೆ ನಿಶ್ಚಿತಾರ್ಥವೂ ನಡೆದಿತ್ತು. ಇತ್ತ ಹುಡುಗಿ ಮನೆಯವರು ಮದುವೆಗೆ ಸಂಪೂರ್ಣ ತಯಾರಿ ನಡೆಸಿದ್ದರು. ಆದರೆ ನ.26ರಂದು ಬೆಂಗಳೂರಿನಿಂದ ಬಳ್ಕೂರಿಗೆ ಬರುವುದಾಗಿ ತಿಳಿಸಿದ್ದ ಹುಡುಗ ಮಾತ್ರ ಬಂದಿರಲಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. (ಕುಂದಾಪ್ರ ಡಾಟ್ ಕಾಂ) ಈ ಮೊದಲೇ ಮದುವೆಯಾಗಿತ್ತೇ? ಮಗ ನಾಪತ್ತೆಯಾಗಿರುವ ಬಗ್ಗೆ ತಂದೆ ರಾಮಚಂದ್ರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನೂತನ ವೃತ್ತನಿರೀಕ್ಷಕರ ಕಛೇರಿಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು. ಈ ಸಂದರ್ಭ ಟ್ರಸ್ಟೀ ರಾಮ ಬಿಜೂರು, ಸದಸ್ಯರಾದ ರಾಘವೇಂದ್ರ ಪೂಜಾರಿ, ನರಸಿಂಹ ನಾಯಕ್, ನಾಗರಾಜ ಪೂಜಾರಿ, ಸ್ಥಳೀಯರಾದ ರಾಜೇಂದ್ರ ಬಿಜೂರು, ಸುಬ್ರಹ್ಮಣ್ಯ ಬಿಜೂರು ಹಾಗೂ ಠಾಣಾ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಇಲ್ಲಿ ನೋಡಿ – srivaralaxmitrust.com/
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವ್ಯಕ್ತಿಯೋರ್ವ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಗ್ರಾಮದ ಸೂರ್ಗೊಳಿ ಎಂಬಲ್ಲಿ ನಡೆದಿದೆ. ಮೃತರನ್ನು ಸೂರ್ಗೊಳಿ ಸಮೀಪದ ಸೆತ್ತೋಳಿ ನಿವಾಸಿ ಸೂರ್ಯನಾರಾಯಣ ಭಟ್ ಅಲ್ಸೆ (52), ಅವರ ಪತ್ನಿ ಮಾನಸ (50), ಪುತ್ರ ಸುಧೀಂದ್ರ (14), ಸುದೇಶ್ (8) ಎಂದು ಗುರುತಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ) ಅಡುಗೆ ಭಟ್ಟರಾಗಿದ್ದ ಸೂರ್ಯನಾರಾಯಣ ಭಟ್ ತನ್ನ ಮನೆಯಲ್ಲಿಯೇ ಪತ್ನಿ ಹಾಗೂ ಮಕ್ಕಳನ್ನು ಮಾರಕಾಯುಧದಿಂದ ಕೊಲೆಗೈದ ಬಳಿಕ ತಾನು ಅಲ್ಲಿಯೇ ನೇಣಿಗೆ ಶರಣಾಗಿರಬಹುದು. ನಿನ್ನೆ ರಾತ್ರಿ ಘಟನೆ ನಡರದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಬಗೆಗೆ ಇನ್ನಷ್ಟೇ ವಿವರ ತಿಳಿಯಬೇಕಿದೆ. ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಜನಸೇವಾ ಟ್ರಸ್ಟ್ ರಿ. ಮೂಡುಗಿಳಿಯಾರು ಇವರ ಪ್ರಸ್ತುತಿಯಲ್ಲಿ ಅಭಿಮತ ಸಂಭ್ರಮ 2020 ಕಾರ್ಯಕ್ರಮ ಫೆಬ್ರವರಿ ತಿಂಗಳ 8 ರಂದು ಮೂಡುಗಿಳಿಯಾರಿನಲ್ಲಿ ಜರುಗಲಿದ್ದು ಈ ವರ್ಷದ ಕೀರ್ತಿಕಳಶ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ರವರಿಗೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯ ಮಂದಾರ್ಥಿ ಮೂಲದವರಾದ ಯೋಗರಾಜ್ ಭಟ್ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಸಿನೇಮಾಗಳ ಸೃಷ್ಠಿಗೆ ನಾಂದಿ ಹಾಡಿ ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದವರು. ಚಿತ್ರನಿರ್ದೇಶಕರಾಗಿಯಷ್ಟೇ ಅಲ್ಲದೆ ಸಾಹಿತ್ಯ ರಚೆನೆಯಲ್ಲಿಯೂ ಯಶಸ್ಸನ್ನ ಕಂಡವರು ಭಟ್. ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಶ್ರೀಯುತರ ಜೀವಮಾನದ ಸಾಧನೆಯನ್ನು ಗುರುತಿಸಿ ಅವರ ತವರು ನೆಲದಲ್ಲಿ ಕೀರ್ತಿಕಳಶ ಪುರಸ್ಕಾರವನ್ನ ನೀಡಿ ಗೌರವಿಸಲಾಗುತ್ತಿದೆ ಎಂದು ಅಭಿಮತ ಸಂಭ್ರಮದ ಅಧ್ಯಕ್ಷರಾದ ಉಳ್ತೂರು ಅರುಣ್ ಕುಮಾರ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಈ ಸಂದರ್ಭ ಟೀಮ್ ಅಭಿಮತದ ಸಂಚಾಲಕರಾದ ಪ್ರವೀಣ್ ಯಕ್ಷಿಮಠ, ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ ಪಡುಕರೆ,ಜನಸೇವಾ ಟ್ರಸ್ಟ್ ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸ್ಯಗಾರರು ಮೊದಲು ನಮ್ಮನ್ನು ನಾವೇ ಹಾಸ್ಯ ಮಾಡಿ ಹಾಸ್ಯಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಎಲ್ಲರನ್ನೂ ನಗಿಸಲು ಸಾಧ್ಯವಿದೆ ಎಂದು ಸಾಹಿತಿ, ವಕೀಲರಾದ ಎಎಸ್‌ಎನ್ ಹೆಬ್ಬಾರ್ ಹೇಳಿದರು. ಅವರು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಜರುಗಿದ ನಾಲ್ಕು ದಿನಗಳ ಕಾರ್ಟೂನು ಹಬ್ಬದ ಕೊನೆಯ ದಿನ ಕುಂದಾಪ್ರ ಕನ್ನಡ ಕಾಮಿಡಿ ‘ನಿತ್ಕ ಕಾಮಿಡಿ ಕೂತ್ಕ ನಗಾಡಿ’ಗೆ ಚಾಲನೆ ನೀಡಿ ಮಾತನಾಡಿ ಬದುಕಿನ ಪ್ರತಿಹೆಜ್ಜೆಯಲ್ಲಿಯೂ ಹಾಸ್ಯ ಕಾಣಬಹುದಾಗಿದ್ದು ಅದನ್ನು ಗ್ರಹಿಸುವ ಗುಣವಿರಬೇಕು. ಕಾರ್ಟೂನು ದೇಶದ ಆಗು ಹೋಗುಗಳ ಬಗ್ಗೆ ತಿಳಿಸುವ ವಕ್ರರೇಖೆಗಳ ಪ್ರತಿಫಲನ. ಅಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವ ಆಶಯವಿರುತ್ತದೆ ಎಂದರು. ಸಮಾರಂಭದಲ್ಲಿ ಕುಂದಾಪುರದ ಕ್ರೀಡಾ ತರಬೇತುದಾರರಾದ ನಿತ್ಯಾನಂದ ಕೆ., ಶ್ರೀನಿವಾಸ್ ಶೆಟ್ಟಿ ಆನಗಳ್ಳಿ, ಪ್ರದೀಪ್ ವಾಜ್, ಗೌತಮ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಂದಾಪ್ರ ಕನ್ನಡ ಕಾಮಿಡಿ ಕಿಲಾಡಿಗಳಾದ ಮನು ಹಂದಾಡಿ, ಚೇತನ್ ನೈಲಾಡಿ ಅವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಕಾರ್ಟೂನು ಹಬ್ಬದ ಸಂಘಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ನ.27: ಇಲ್ಲಿನ ಅಂಕದಕಟ್ಟೆಯಲ್ಲಿ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳಿಸಲಾದ ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಟಿ ಜೇಮ್ಸ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಮೂಲಕ ಕುಂದಾಪುರ ಆಸುಪಾಸಿನ ಸಿಸಿ ಟಿವಿ ದೃಶ್ಯಾವಳಿಗಳ ಕಣ್ಗಾವಲು ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ಹಿಡಿತದಲ್ಲಿಯೇ ನಡೆಯಲಿದೆ. ಪೊಲೀಸ್ ಇಲಾಖೆಗೆ ಸಿಸಿ ಟಿವಿ ದೃಶ್ಯಾವಳಿಗಳು ತನಿಖೆಯ ಹಂತದಲ್ಲಿ ಅತ್ಯಂತ ಉಪಯೋಗಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಹೇಳಿದರು. ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ನಿಜಾಂಶಗಳನ್ನು ತಿಳಿದುಕೊಳ್ಳಲು ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು ಅತ್ಯಂತ ಉಪಯುಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಸುಳ್ಳು ಮಾಹಿತಿ ನೀಡಲು ಸಾಧ್ಯವಾಗೋದಿಲ್ಲ. ವಾಹನಗಳ ಅಪಘಾತ ಮಾಡಿ ಪರಾರಿಯಾಗುವ ವಾಹನಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಮುದ್ರಿತ ದೃಶ್ಯಾವಳಿಗಳ ಬದಲು ನೇರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಯದ ವಾತಾವರಣ ಸೃಷ್ಟಿಸಿದ್ದ ಚಿರತೆಯೊಂದು ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿದೆ. ಗುಡ್ಡಟ್ಟು ಭಾಗದಲ್ಲಿ ಚಿರತೆ ಸಾಕಷ್ಟು ಉಪಟಳ ನೀಡುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಬೋನು ಇರಿಸಿದ್ದ ಶಂಕರನಾರಾಯಣ ವಲಯದ ಅರಣ್ಯಾಧಿಕಾರಿಗಳು, ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅಭಯಾರಣ್ಯಕ್ಕೆ ರವಾನಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜ ಪ್ರಗತಿಯನ್ನು ಸಾಧಿಸಲು ಆರ್ಥಿಕ ವ್ಯವಸ್ಥೆ ಮುಂಚೂಣಿಯಲ್ಲಿ ಇರಬೇಕು. ಇಂದು ಸಹಕಾರಿ ಕ್ಷೇತ್ರವೂ ಬೆಳೆದಿದೆ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಅದರ ಉಪಯೋಗ ಪಡೆದವರ ಉನ್ನತಿಯೂ ಆಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಶಿರೂರು ಮೇಲ್‌ಪೇಟೆಯಲ್ಲಿ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೭ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರ ಕೃಷಿಕರು, ಕಾರ್ಮಿಕರ ವರ್ಗಕ್ಕೆ ರಕ್ಷಣಾ ಕವಚವಾಗಿ ಸಹಕಾರಿ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಆರ್ಥಿಕ ಮುಗ್ಗಟ್ಟಿರುವ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಗ ಮೇಲೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರ ಮತ್ತಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ್ ಕಂಪ್ಯೂಟರ್ ಉದ್ಘಾಟನೆ ಮಾಡಿದರು. ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ ಭದ್ರತಾ ಕೊಠಡಿ ಉದ್ಘಾಟಿಸಿದರು. ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸತ್ಯ, ನ್ಯಾಯಕ್ಕಾಗಿ ಹೋರಾಟ ಮಾಡಿರುವ ಕೋಟಿ ಚೆನ್ನಯರನ್ನು ದೈವವಾಗಿ ತುಳುನಾಡಿನ ಸಂಸ್ಕೃತಿಯೊಂದಿಗೆ ಆರಾಧಿಸಿಕೊಂಡು ಬರಲಾಗುತ್ತಿದ್ದು, ಅವರ ತತ್ವಾದರ್ಶಗಳಿಂದ ಭಕ್ತರ ಮನದಲ್ಲಿ ನೆಲೆಯಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾರಂಭದಲ್ಲಿಯೇ ವೀರ ಪುರುಷರಾದ ಕೋಟಿ ಚೆನ್ನಯ್ಯರ ಅದ್ಭುತ ಗರಡಿ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಬುಧವಾರ ಬೈಂದೂರು ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಭೇಟಿ ನೀಡಿ ಮಾತನಾಡಿ ಕೋಟಿ ಚೆನ್ನಯರ ಮೂಲ ಗರಡಿಗಳಲ್ಲಿ ಕಟ್ಟಕಡೆಯದಾದರೂ ಕೂಡ ಉಳಿದೆಲ್ಲಾ ಗರಡಿಗಳನ್ನು ಮೀರಿಸುವಂತೆ ಬೈಂದೂರಿನ ಗರಡಿ ನಿರ್ಮಾಣಗೊಳ್ಳುತ್ತಿದೆ. ಇದು ಇಡಿ ಊರಿಗೆ ಮೆರಗು ನೀಡುತ್ತಿದೆ ಎಂದರು. ಈ ಸಂದರ್ಭ ಖಂಬದಕೋಣೆ ರೈತರ ಸೇವಾ ಸಹಕಾರಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಯಡ್ತರೆ ಗ್ರಾಪಂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವಕ್ಕೆ ಸಹಸ್ರಾರು ಭಕ್ತರ ಸಾಕ್ಷಿಯಾದರು. ಮಂಗಳವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂಜೆ ಪ್ರಣತಿ ದೀಪ ಬೆಳಗಿಸಲು ಸಹಸ್ರಾರು ಭಕ್ತರು ಕೈಜೋಡಿಸಿದರು. ಹಣತೆಯಿಂದ ಹಣತೆಗೆ ದೀಪ ಬೆಳಗಿಸಿ ಸಂಭ್ರಮಿಸಿದರು. ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಕುಂದೇಶ್ವರ ರಾಜ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದ್ದರಿಂದ ಕುಂದೇಶ್ವರ ಎಂಬ ಹೆಸರು ಬರಲು ಕಾರಣ ಎಂಬ ನಂಬಿಕೆಯಿದೆ. ಪ್ರಾತಕಾಲ ಪೂಜೆ, ರುದ್ರಾಭಿಷೇಕ ಹಾಗೂ ಶಿವನಿಗೆ ಪ್ರಿಯವಾದ ವಿವಿಧ ಧಾರ್ಮಿಕ ಕಾರ‍್ಯಕ್ರಮ ನಡೆದಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಣೆ ಕೂಡಾ ನಡೆಯಿತು. ಕುಂದೇಶ್ವರ ದೇವಸ್ಥಾನ ಬೀದಿ ದೀಪಾಲಂಕೃತವಾಗಿದ್ದು, ದೇವಸ್ಥಾನಕ್ಕೆ ಅಳವಡಿಸಿದ ಬಣ್ಣದ ದೀಪಗಳಿಂದ ಮತ್ತಷ್ಟು ಮೆರಗು ಬಂದಿತ್ತು. ಕುಂದೇಶ್ವರ ದೇವಸ್ಥಾನ ಪುಷ್ಕ್ಕರಣಿಗೆ ವಿಶೇಷ ವಿದ್ಯುತ್ ದೀಪ ಅಲಂಕಾರ ಮಾಡಿದ್ದು, ಪುಸ್ಕರಣಿಗೊಂದು ಹೊಸ ಕಳೆ ಮೂಡಿಸಿತ್ತು. ಹಾಗೆ ದೇವಸ್ಥಾನ ಬಳಿ ಇರುವ ಅಶ್ವಥಕಟ್ಟೆ ಬಳಿ ನಿರ್ಮಿಸಿದ ಬೃಹತ್ ಆಂಜನೇಯ ಮೂರ್ತಿ ಎಲ್ಲರ ಆಕರ್ಷಿಣೀಯ…
