Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) – ಸೋಮೇಶ್ವರ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಬೇಕಾಗಿರುವುದರಿಂದ ಮೇ 16 ರಿಂದ ಜುಲೈ 16 ರ ವರೆಗೆ ಸೋಮೇಶ್ವರ- ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನ ಹಾಗೂ ಬಸ್ಸುಗಳ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಈ ಆದೇಶದನ್ವಯ ಕುಂದಾಪುರ ಹಾಗೂ ಉಡುಪಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುವ ಬಸ್‌ಗಳು ಹಾಗೂ ಇತರೆ ವಾಹನಗಳಿಗೆ ಹಳೆ ಗೋಪಾಡಿ ಪಂಚಾಯತ್ (ಹೂವಿನಕೆರೆ ಸ್ವಾಗತ ಗೋಪುರ) ಮುಖೇನ ರಾ. ಹೆ 66 ಯಿಂದ ಪೂರ್ವ ದಿಕ್ಕಿಗೆ ಚಲಿಸಿ ಬೀಜಾಡಿ- ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ, ವಕ್ವಾಡಿಯ ಗುರುಕುಲ ಶಾಲೆಗೆ ಹೋಗುವ ಕಾಂಕ್ರೀಟ್ ರಸ್ತೆಗೆ (ರಸ್ತೆ ಎಡಕ್ಕೆ) ಚಲಿಸಿದಲ್ಲಿ ಗುರುಕುಲ ಶಾಲೆಯ ಬಳಿ 2 ರಸ್ತೆಗಳು ಕವಲೊಡೆದು ಹೋಗುತ್ತಿದ್ದು, ಈ ಎರಡು ರಸ್ತೆಗಳ ಪೈಕಿ ರಸ್ತೆಯ ಎಡಕ್ಕೆ (ಪಶ್ಚಿಮ) ಚಲಿಸಿದರೆ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಇಲ್ಲಿನ ರೋಟರಿ ಲಕ್ಷ್ಮಿನರಸಿಂಹ ಕಲಾ ಮಂದಿರದಲ್ಲಿ ಮೇ. ೧೮ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ವಿಲೇಜ್ ಲೈಫ್ ಚಿತ್ರಕಲಾ ಪ್ರದರ್ಶನ ಉದ್ಘಾಟನೆಗೊಳ್ಳಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಚಿತ್ರಕಲಾ ಪ್ರದರ್ಶನವನ್ನು ಕೋಟ ಗೀತಾನಂದ ಫೌಂಡೇಶನ್ನಿನ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಲಿದ್ದಾರೆ. ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷ ಗೋಪಾಲ್ ಶೆಟ್ಟಿ ಶೇಡಿಮನೆ ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಜಿಲ್ಲಾ ಗವರ್ನರ್ ರೋ. ಅಭಿನಂದನ್ ಶೆಟ್ಟಿ, ಚಿನ್ಮಯಿ ಆಸ್ಪತ್ರೆಯ ವೈದಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್, ಕುಂದಾಪುರ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ. ರತ್ನಾಕರ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಮಾಹಿತಿ ನೀಡಿ ಕಲೆಯನ್ನು ಪ್ರದರ್ಶಿಸುವ ವಿಧಾನ ಮತ್ತು ಹೃದಯಿಯನ್ನು ಅರಿತುಕೊಳ್ಳುವ ರೀತಿ ಸಮನಾಗಿದ್ದರೆ ಇನ್ನಷ್ಟು ಬಲಿಷ್ಟವಾಗುತ್ತದೆ ಎನ್ನುವ ಉದ್ದೇಶದಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗುತ್ತಿದೆ. ರೋಟರಿ ಕುಂದಾಪುರ ಸಾರಥ್ಯದೊಂದಿಗೆ ಕುಂದಾಪುರ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2017-18ನೇ ಸಾಲಿನ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ-1 (500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು)ರಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ ಗಳಿಸಿದೆ. ವಿ.ವಿ.ಯಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಪ್ರಭಾರ ಕುಲಪತಿ ಡಾ. ಕಿಶೋರಿ ನಾಯಕ್ ಕೆ. ಪ್ರಶಸ್ತಿಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮತ್ತು ನಿರ್ವಾಹಕ ಸಂಪಾದಕ ಚೇತನ್ ಶೆಟ್ಟಿ ಕೋವಾಡಿ, ಉಪನ್ಯಾಸ ಸಂ ಸ್ಪೂರ್ತಿ ಎಸ್. ಫೆರ್ನಾಂಡಿಸ್, ಪ್ರವೀಣ್ ಮೊಗವೀರ ಗಂಗೊಳ್ಳಿ, ಡಾ. ದೀಪಾ ರೇಷ್ಮಾ ಶೆಟ್ಟಿ, ರಕ್ಷಿತ್ ರಾವ್ ಗುಜ್ಜಾಡಿ, ನೂತನ್ ಎಸ್. ರವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮಂಗಳೂರು ವಿ.ವಿ.ಯ ಕುಲಸಚಿವ ಪ್ರೊ. ಎ. ಎಮ್. ಖಾನ್, ಪರೀಕ್ಷಾಂಗ ಕುಲಸಚಿವ ಡಾ. ವಿ. ರವೀಂದ್ರಾಚಾರಿ, ಹಣಕಾಸು ಅಧಿಕಾರಿ ಡಾ. ದಯಾನಂದ ನಾಯ್ಕ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣವನ್ನು ಅಂಕಗಳಿಕೆಯ ಸಾಧನವಾಗಿ ಮಾತ್ರ ಪರಿಗಣಿಸಲದೇ ಕಲೆ ಸಾಹಿತ್ಯ ಕ್ರೀಡೆಯನ್ನೂ ಒಳಗೊಂಡಂತೆ ನೋಡುವುದರಿಂದ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಸಾಧ್ಯವಾಗುತ್ತದೆ. ಬೈಂದೂರು ಸುತ್ತಲಿನ ಕಲಾ ಸಂಸ್ಥೆಗಳು ಪಠ್ಯಾಧಾರಿತ ಶಿಕ್ಷಣದಲ್ಲಿನ ಕೊರತೆಯನ್ನು ನೀಗಿಸುವಲ್ಲಿ ಶ್ರಮವಹಿಸುತ್ತಿದೆ ಎಂದು ನಿವೃತ್ತ ಯೋಧ ಚಂದ್ರಶೇಖರ ನಾವಡ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಬುಧವಾರ ಲಾವಣ್ಯ ರಿ. ಬೈಂದೂರು ಇದರ ಅಂಗ ಸಂಸ್ಥೆ ರಿದಂ ನೃತ್ಯ ಶಾಲೆ ಬೈಂದೂರು ಇದರ 18ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗುವ ಶಿಕ್ಷಣ ಮಾತ್ರವೇ ಉತ್ತಮ ಶಿಕ್ಷಣ ಎಂದೆನಿಸಿಕೊಳ್ಳುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಳ್ಳದ ಶಿಕ್ಷಣ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಪೂರವಾಗಿ ಇದ್ದಾಗಲೇ ಮಕ್ಕಳ ಕಲಿಕೆ ಉತ್ತಮವಾಗುತ್ತದೆ ಎಂದರು. ವೇಗದ ಹಾಗೂ ತಾಂತ್ರಿಕ ಬದುಕಿನ ನಡುವೆ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ ಹಾಗೂ ಕ್ರೀಡೆಗಳನ್ನು ಒಳಗೊಂಡ ಸಂಸ್ಕಾರಯುತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ, ಮೇ 16: ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಮೇ 16 ರಿಂದ ಲಘು ವಾಹನಗಳಾದ ಮಿನಿ ಬಸ್‌ಗಳು, ಜೀಪು, ವ್ಯಾನ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಹಾಗೂ ಕ್ಯೂರಿಂಗ್ ಸಂಪೂರ್ಣವಾಗಿ ಮುಗಿದ ನಂತದ ಜೂನ್ 1 ರಿಂದ ಮಿನಿ ಬಸ್‌ಗಳು, ಜೀಪು, ವ್ಯಾನ್, ಕಾರುಗಳು ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಎಲ್‌ಸಿವಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಅಲ್ಲಿಯವರೆಗೆ ಉಡುಪಿ-ಸಿದ್ದಾಪುರ-ಹೊಸಂಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಹಾಗೂ ಮಂಗಳೂರು-ಕಾರ್ಕಳ-ಮಾಳ ಘಾಟ್-ಶೃಂಗೇರಿ-ತೀರ್ಥಹಳ್ಳಿ ಮೂಲಕ ಸಂಚರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಹಿಂದಿನ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರ ಹಾಡಿ ವಾಸ್ತವ್ಯದಿಂದ ಬೈಂದೂರು ತಾಲೂಕಿನ ಆ ಪುಟ್ಟ ಊರು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಅಂದು ಹತ್ತಾರು ಭರವಸೆಗಳನ್ನು ನೀಡಿ ಹೋಗಿದ್ದರು. ಹೌದು, ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದ್ದ ಕೊರಗರ ಕಾಲೋನಿ ಇಂದು ಸ್ವಲ್ಪ ಬದಲಾಗಿದೆ. ಹಾಗಾದರೆ ಸಚಿವರು ಬಂದು ಹೋದ ಬಳಿಕ ಮುರೂರಿನಲ್ಲಿ ಆಗಿದ್ದೇನು? ಸಚಿವರು ಕೊಟ್ಟ ಭರವಸೆಗಳಲ್ಲವೂ ಈಡೇರಿದವೇ? ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ರಿಯಾಲಿಟಿ ಚೆಕ್ ನಡೆಸಿದೆ. ಅಂದು 2016, ಡಿ. 6ರಂದು ಸಚಿವ ಹೆಚ್. ಆಂಜನೇಯ ಹೊಸವರ್ಷದ ಮುನ್ನಾದಿನ ಮುರೂರಿನಲ್ಲಿ ವಾಸ್ತವ್ಯ ಹೂಡಿ ಅಲ್ಲಿಯೇ ಹೊಸವರ್ಷ ಆಚರಿಸುವ ಬಗ್ಗೆ ಘೋಷಿಸಿದರು. ಅದಕ್ಕೂ ಮುನ್ನಾ ಮುರೂರಿಗೆ ನೆಟ್ಟಗೆ ಒಂದು ಸಂರ್ಪಕ ರಸ್ತೆಯೂ ಇರಲಿಲ್ಲ. ಅನುದಾನದ ಕೊರತೆಯಿಂದ ಕಪ್ಪಾಡಿ ಹೊಳೆ ಸೇತುವೆ ಕಾಮಗಾರಿ ಕೂಡಾ ನಿಂತು ಹೋಗಿತ್ತು. ಎರಡು ಮನೆ ಅರ್ಧಬರ್ಧ ಆಗಿದ್ದು, ಮುಂದೆ ಕಟ್ಟಲಾಗದೆ ಕೈಚೆಲ್ಲಿದ್ದರು. ಮತ್ತಿಬ್ಬರು ಮನೆ ಕಟ್ಟುವ ಕನಸು ಕಾಣುತ್ತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ದಿ. ನಾರಾಯಣ ಪಡುಕೋಣೆ ಅವರ ಎರಡನೆಯ ಪುಣ್ಯತಿಥಿಯಂದು ಅವರ ’ಹಕ್ಕಿಗೂಡು’ ಮನೆಯಲ್ಲಿ ಮಂಗಳವಾರ ನಡೆದ ’ನಾರಾಯಣ ಶ್ರಮಶಕ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಶ್ರಮಜೀವಿಯಾಗಿ ಸಾರ್ಥಕ ಬದುಕು ರೂಪಿಸಿಕೊಂಡು ಕುಟುಂಬವನ್ನು ಉನ್ನತಿಗೆ ಒಯ್ದಿದ್ದ ಪಡುಕೋಣೆ ನಾರಾಯಣ ಗಾಣಿಗ ಅವರ ಪುಣ್ಯತಿಥಿಯಂದು ಅವರಂತೆ ಬದುಕಿದ್ದ ಒಬ್ಬರನ್ನು ಗುರುತಿಸಿ ಅವರಿಗೆ ಶ್ರಮಶಕ್ತಿ ಪ್ರಶಸ್ತಿ ನೀಡುತ್ತಿರುವುದು ಒಂದು ಅಪೂರ್ವದ ಮತ್ತು ಶ್ಲಾಘನೀಯ ಉಪಕ್ರಮ ಎಂದು ನಿ ಹೇಳಿದರು. ನಾರಾಯಣ ಗಾಣಿಗರು ವರ್ಷದ ಎಲ್ಲ ಕಾಲಗಳಲ್ಲೂ ಕಾಯಕವನ್ನು ಧಾರ್ಮಿಕ ಶ್ರದ್ಧೆಯಂತೆ ನಡೆಸಿದವರು. ತಮ್ಮ ಕೊನೆಗಾಲದ ವರೆಗೂ ಆರೋಗ್ಯಯುತ ಜೀವನ ನಡೆಸಿ ಕುಟುಂಬದ ಕಿರಿಯರಿಗೆ ಮೌಲ್ಯಾಧರಿತ ಜೀವನಪಥವನ್ನು ತೋರಿದವರು. ಅವರ ವಾರ್ಷಿಕ ಸ್ಮರಣೆಯನ್ನು ಕಳೆದ ವರ್ಷದಂತೆ ಈ ವರ್ಷವೂ ’ಶ್ರಮಶಕ್ತಿ ಪ್ರಶಸ್ತಿ’ ಪ್ರದಾನದ ಮೂಲಕ ನಡೆಸುತ್ತಿರುವುದರ ಹಿಂದೆ ಅವರು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಂಜಾಲು ಜನತಾ ಕಾಲೋನಿ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಈ ಹಿಂದಿನಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಗ್ರಾಪಂ ಪಿಡಿಓ ಒಪ್ಪಿಗೆ ಸೂಚಿಸಿದ್ದಾರೆ. ಸೋಮವಾರ ಬೆಳಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕಂಬದಕೋಣೆ ತಾಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ ತಾಪಂ ಇಒ ಕಿರಣ್ ಫೆಡ್ನೇಕರ್ ಜನತಾ ಕಾಲೋನಿಗೆ ಭೇಟಿ ನೀಡಿ, ಕಾಲನಿ ವಾಸಿಗಳಿಗೆ ನೀರು ಪೂರೈಕೆ ಮಾಡುವಂತೆ ಗ್ರಾಪಂ ಪಿಡಿಒ ಪೂರ್ಣಿಮಾ ಅವರಿಗೆ ತಾಕೀತು ಮಾಡಿದ್ದು, ಸೋಮವಾರ ಸಂಜೆಯಿಂದ ಟ್ಯಾಂಕರ್ ಮೂಲಕ ಜನತಾ ಕಾಲನಿಗೆ ನೀರು ಪೂರೈಕೆ ಆಗಲಿದೆ. ಶಾಸಕರು ಭೇಟಿ ಸಂದರ್ಭದಲ್ಲಿ ಕಾಲನಿ ವಾಸಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವಲತ್ತುಕೊಂಡು ಚುನಾವಣೆ ನಂತರದ ದಿನದಿಂದ ನೀರು ಪೂರೈಕೆ ಮಾಡದೆ ಸತಾಯಿಸಿದ್ದು, ನೀರು ಕೊಡುವಂತೆ ಮನವಿ ಮಾಡಿದರೂ ನಿರಾಕರಿಸಲಾಗುತ್ತಿತ್ತು ಎಂದು ತಿಳಿಸಿದ್ದರು. ಪಿಡಿಒ ಪೂರ್ಣಿಮಾ ಜತೆ ಜನತಾ ಕಾಲನಿಗೆ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜಕೀಯ ವೈಷಮ್ಯಕ್ಕಾಗಿ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತಡೆಯೊಡ್ಡಿ ಜನರೊಂದಿಗೆ ಚಲ್ಲಾಟವಾಡುತ್ತಿರುವ ಗ್ರಾಮ ಪಂಚಾಯಿತಿ. ಪಂಚಾಯತ್ ಅಧ್ಯಕ್ಷರ ರಾಜಕೀಯದಾಟಕ್ಕೆ ಹೈರಾಣಾಗಿರುವ ಕಾಲೋನಿಯ ಜನತೆ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯಿತಿ ಹೆರಂಜಾಲು ಗುಡಿ ದೇವಸ್ಥಾನದ ಬಳಿಯ ಜನತಾ ಕಾಲನಿ ನಿವಾಸಿಗಳು ಕುಡಿಯುವ ನೀರಿನಿಂದಲೂ ವಂಚಿತರಾಗಿದ್ದು, ಇರುವ ಒಂದು ಬೋರ್‌ವೆಲ್ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಸಿದ್ದಪಡಿಸಿದ್ದು, ವಿವರ ಕೆಳಗಿದೆ. ಲೋಕಸಭೆ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದರು ಎಂಬ ನೆಪವನ್ನಿಟ್ಟುಕೊಂಡು ಒಂದಿಡೀ ಕಾಲನಿಗೆ ಪೂರೈಕೆ ಮಾಡಬೇಕಿದ್ದ ನೀರನ್ನು ಕಂಬದಕೋಣೆ ಗ್ರಾಮ ಪಂಚಾಯಿತಿ ಏಕಾಏಕಿ ನಿಲ್ಲಿಸಿ ಜನಸಾಮಾನ್ಯರ ಬದುಕಿನೊಟ್ಟಿಗೆ ಚೆಲ್ಲಾಟವಾಡುತ್ತಿದೆ. ಜನತಾ ಕಾಲನಿಯಲ್ಲಿ ಎಪ್ಪತ್ತಕ್ಕೂ ಮಿಕ್ಕ ಮನೆಗಳಿದ್ದು, ಮಕ್ಕಳು ಮರಿ ಸೇರಿ ಏಳುನೂರರಷ್ಟು ಜನರಿದ್ದಾರೆ. ಪ್ರತಿದಿನ ಕುಡಿಯುವ ನೀರಿಗಾಗಿ ತಮ್ಮ ಶ್ರಮ ವ್ಯಯ ಮಾಡುತ್ತಿದ್ದಾರೆ. ಕೂಲಿಗೆ ಹೋದರೆ ನೀರಿಲ್ಲ. ನೀರು ಸಂಗ್ರಹಕ್ಕೆ ಇಳಿದರೆ ಹಿಟ್ಟಿಲ್ಲ. ಈ ಎರಡರಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲರಿಗೂ ಬದುಕಿಗಾಗಿ ದುಡಿಮೆ ಅನಿವಾರ್ಯ. ಅವರಲ್ಲಿ ಅಗತ್ಯಕ್ಕಿಂತ ಅಧಿಕ ಆದಾಯ ಇರುವವರು ಅದರ ಒಂದಂಶವನ್ನು ಸಮುದಾಯದಲ್ಲಿ ಕನಿಷ್ಠ ಸ್ಥಿತಿಯಲ್ಲಿರುವವರ ಬದುಕಿಗಾಗಿ ತ್ಯಾಗ ಮಾಡುವುದು ಮಾನವೀಯ ಔದಾರ್ಯ ಎನಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಂದನವನ ದೇವಕಿ ಬಿ. ಆರ್. ಸಭಾಭವನದಲ್ಲಿ ಗುರುವಾರ ನಡೆದ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಚತುರ್ಥ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಟ್ರ್ರಸ್ಟ್ ಗ್ರಾಮೀಣ ಭಾಗದ ಜನರ ಶಿಕ್ಷಣ, ಆರೋಗ್ಯದ ಅವಶ್ಯಕತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ. ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಟ್ರಸ್ಟ್ ಸ್ಥಾಪಿಸಿರುವ ಗೋವಿಂದ ಬಾಬು ಪೂಜಾರಿ ಬಡತನದಲ್ಲಿ ಹುಟ್ಟಿ ಬೆಳೆದರು. ಬಾಲ್ಯದಲ್ಲಿ ನೋವು ಅನುಭವಿಸಿದವರು. ಹೋಟೆಲ್ ನೌಕರನಾಗಿ ಬದುಕು ಆರಂಭಿಸಿದ ಅವರು ಸತತ ಕಠಿಣ ಶ್ರಮ, ಛಲದಿಂದ ಇಂದು ೪೫೦೦ ಜನರಿಗೆ ಉದ್ಯೋಗ…

Read More