ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ಶಾಪಿಂಗ್ ಮಳಿಗೆ ’ರುಪೀ ಮಾಲ್’ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಭಾರತೀಯ ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ರುಪೀ ಮಾಲ್ ಉದ್ಘಾಟನೆಗೈಯಲಿದ್ದಾರೆ. ವೈವಿಧ್ಯಮಯ ಬಟ್ಟೆಗಳ ಭಂಡಾರ ’ಫ್ಯಾಶನ್ ಸ್ಟೋರ್’ನ್ನು ಮಿಸ್ ಸೌತ್ ಇಂಡಿಯಾ ನಿಖಿತಾ ಥೋಮಸ್ ಉದ್ಘಾಟಿಸಲಿದ್ದಾರೆ. 50,000 ಚದರ ಅಡಿ ವಿಸ್ತೀರ್ಣದ ಮಾಲ್‌ನ ಎರಡನೇ ಮಳಿಗೆಯಲ್ಲಿ ಅತ್ಯಾಧುನಿಕ ಕ್ರೀಡಾ ಸಾಮಾಗ್ರಿಗಳನ್ನೊಳಗೊಂಡ ’ಕಿಡ್ಸ್ ಝೋನ್’ ಆರಂಭಗೊಳ್ಳಲಿದ್ದು ಮಕ್ಕಳ ಮನೋರಂಜನಾ ಕೇಂದ್ರವಾಗಿ ಮಾರ್ಪಾಡಾಗಲಿದೆ. ಬೈಂದೂರು ಹಾಗೂ ಸುತ್ತಲಿನ ಊರುಗಳಲ್ಲಿ ಇದೇ ಮೊದಲ ಭಾರಿಗೆ ದೊಡ್ಡ ಮನೋರಂಜನಾ ತಾಣ ಆರಂಭಗೊಳ್ಳುತ್ತಿದೆ. ಮಾಲ್‌ನಲ್ಲಿ ಆರಂಭಗೊಳ್ಳಲಿರುವ ಬೃಹತ್ ’ಫ್ಯಾಶನ್ ಸ್ಟೋರ್’ನಲ್ಲಿ ಮೆಟ್ರೋ ನಗರಗಳ ಎಲ್ಲಾ ಫ್ಯಾಶನ್‌ನ ಬಟ್ಟೆಗಳು ಲಭ್ಯವಿರಲಿದೆ. ಮದುವೆ ಬಟ್ಟೆಗಳ ವಿಭಾಗದಲ್ಲಿ ವಿವಿಧ ನಮೂನೆಯ ಮದುವೆ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ. ರುಪೀ ಮಾಲ್ ’ಹೈಪರ್ ಮಾರ್ಕೆಟ್’ನ್ನು ಒಳಗೊಂಡಿದ್ದು ಮನೆಗೆ ಅಗತ್ಯವಾದ ಎಲ್ಲಾ ಸಾಮಾಗ್ರಿಗಳು, ಫ್ಯಾನ್ಸಿ ಸ್ಟೋರ್, ಪೂಟ್‌ವೇರ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿ. ಇದರ ಉತ್ಸವ ಸಮಿತಿ 2019 ಇದರ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಭಾಕರ ಮೊಗವೀರ, ನಾಗೇಂದ್ರ ಶೆಟ್ಟಿ, ಸೋಮಶೇಖರ ಆಚಾರ್ಯ, ಜೊತೆ ಕಾರ್ಯದರ್ಶಿಗಳಾಗಿ ಮಂಜುನಾಥ್ ಸಿದ್ದನಹಿತ್ಲು, ಗುರುರಾಜ ಆಚಾರ್ಯ, ಗುರುಪ್ರಸಾದ್ ಆಚಾರ್ಯ, ಮಂಜುನಾಥ ಹಕ್ಲುಮನೆ, ಸಂತೋಷ್ ಆಚಾರ್ಯ, ದಯಾನಂದ ಚಂದನ್, ಗುರುರಾಜ್ ಹಾಡಿಮನೆ, ಶ್ರೀನಿವಾಸ ಆಚಾರ್ಯ, ಗಣೇಶ್ ಚಂದನ್, ಮಂಜುನಾಥ ಆಚಾರ್ಯ, ಮಂಜುನಾಥ ಚಂದನ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರದೀಪ್ ಆಚಾರ್ಯ, ಗೋವಿಂದರಾಜ್ ಆಚಾರ್ಯ, ದೇವರಾಜ್ ಆಚಾರ್ಯ, ರವಿದಾಸ್, ನವೀನ್ ಆಚಾರ್ಯ, ಅಣ್ಣಪ್ಪ, ವಿಶ್ವನಾಥ, ಸುದೇಶ ಆಚಾರ್ಯ, ನಟರಾಜ್ ಆಚಾರ್ಯ, ನಾಗರಾಜ್ ಚಂದನ್, ಅಕ್ಷಯ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವಿಕ್ರಮ್, ಸಚಿನ್ ಆಚಾರ್ಯ, ಪ್ರವೀಣ್ ಆಚಾರ್ಯ, ಅಂಜನ್ ಕುಮಾರ್, ಅಭಿಷೇಕ್, ಕಿರಣ್ ಶೆಟ್ಟಿ, ಗಿರೀಶ್ ಎನ್., ಸಂತೋಷ್ ಜಟ್ಟಿಹಿತ್ಲು, ಸಚಿನ್ ಆಚಾರ್ಯ, ರಾಘವೇಂದ್ರ ಎಂ., ಕಾರ್ತಿಕ್ ಶೆಟ್ಟಿ, ಪ್ರಸನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2018-19ನೇ ಸಾಲಿನಲ್ಲಿ 17.64 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಭಾನುವಾರ ಬೈಂದೂರಿನ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2018-19ನೇ ಸಾಲಿನಲ್ಲಿ ರೂ. 14.59 ಕೋಟಿ ಠೇವಣಿ ಹೊಂದಿದ್ದು 13.82 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸಂಸ್ಥೆ ’ಎ’ ತರಗತಿಯನ್ನು ಹೊಂದಿದೆ ಎಂದರು. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಫೆರ್ರಿ ರಸ್ತೆಯ ನಿವಾಸಿಯಾದ ಖತೀಬ್ ಅಬು ಮಹಮ್ಮದ್ ಎನ್ನುವರ ಪತ್ನಿ ಕೆ ಮೆಹರುನ್ನೀಸ ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ಇದ್ದಾಗ ಮನೆಗೆ ಬಂದ ಬುರ್ಕಾಧಾರಿ ಕಾಪು ಮಜೂರಿನ ಫಿರ್ದಾಸ್(29) ಹಾಗೂ ಕುಂಟಲಪಾಡಿ ಮಹಮ್ಮದ್ ಆಸೀಫ್ (37) ಎನ್ನುವ ಜೋಡಿ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿರುವುದಾಗಿ ನಂಬಿಸಿ ಕತ್ತಿನಲ್ಲಿ ಇದ್ದ ಚಿನ್ನವನ್ನು ಅಪಹರಿಸಲು ಯತ್ನಿಸಿದಾಗ ಕುಂದಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮನೆಯಲ್ಲಿ ಇದ್ದ 74 ವರ್ಷದ ಕೆ ಮೆಹರುನ್ನೀಸ ಅವರನ್ನು ಭೇಟಿಯಾಗಿದ್ದ ಬುರ್ಕಾ ಧರಿಸಿದ್ದ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಅಪರಿಚಿತ ವ್ಯಕ್ತಿ, ಸೊಸೆ ಸಮೀನಾ ಮನೆಯಲ್ಲಿ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ. ಆಕೆ ಮನೆಯಲ್ಲಿ ಇಲ್ಲಾ, ನೀವು ಯಾರು ಎಂದು ಮರು ಪ್ರಶ್ನಿಸಿದಾಗ ಉತ್ತರಿಸಿದ್ದ ಬುರ್ಕಾಧಾರಿ ಮಹಿಳೆ ತಾನು ಆಕೆಯ ಸ್ನೇಹಿತೆ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ. ಸೊಸೆಯ ಪರಿಚಿತರು ಇರಬೇಕು ಎಂದು ಭಾವಿಸಿ ಇಬ್ಬರನ್ನು ಮನೆಯ ಒಳಗೆ ಕುಳ್ಳಿರಿಸಿ ಸೊಸೆಗೆ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ/ಕತಾರ್: ಎಲ್ಲಾದರೂ ಇರು. ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಉದ್ಯೋಗಕ್ಕಾಗಿ ತಾನು ನೆಲೆನಿಂತ ದೇಶದಲ್ಲಿಯೇ ಕನ್ನಡದ ಕಂಪನ್ನ ಪಸರಿಸುತ್ತಾ, ಹೊರದೇಶದ ಕನ್ನಡಿಗರಲ್ಲಿನ ಭಾಷಾಭಿಮಾನವನ್ನು ಹುರಿದುಂಬಿಸುತ್ತಾ ಕನ್ನಡದ ಕಟ್ಟಾಳುವಾಗಿ ಬೆಳೆದಿದ್ದಾರೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು. ಕಳೆದ 13 ವರ್ಷಗಳಿಂದ ಇಂಜಿನಿಯರ್ ಆಗಿ ಕತಾರಿನಲ್ಲಿ ನೆಲೆಸಿರುವ ಅವರು ಪ್ರಸ್ತುತ ಇಂಡಿಯನ್ ಕಮ್ಯುನಿಟಿಬೆ ನ್ವೆಲೆಂಟ್ (ಐ.ಸಿ.ಬಿ.ಎಫ್) ಫೋರಂ ಜಾಯಿಂಟ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಾದ್ದಾರೆ. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ದಂಪತಿ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮಯ್ಯಾಡಿಯ ಧ.ಮ.ಹಿ.ಪ್ರಾ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣವನ್ನು ದಾವಣಗೆರೆ ಬಾಪೂಜಿ ಫ್ರೌಢಶಾಲೆಯಲ್ಲಿಯೂ ಬಳಿಕ ದಾವಣಗೆರೆಯಲ್ಲಿಯೇ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ-8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆಸಲ್ಲಿಸಿ ಬಳಿಕ ಪ್ರಸ್ತುತ ಕತಾರ್ ನ ಗಲ್ಪಾರ್ಆಲ್ಮಿಸ್ನಾದ್ ಕಂಪನಿಯಲ್ಲಿಅಭಿಯಂತರಾಗಿ ಸೇವೆಸಲ್ಲಿಸುತ್ತಿದ್ದಾರೆ. ಕತಾರಿನಲ್ಲಿ ಕನ್ನಡ ಸಿನೆಮಾ ಪ್ರದರ್ಶಕ: ಕನ್ನಡದ ಸಿನಿಮಾಗಳಾದ ‘ಒಂದು ಮೊಟ್ಟೆಯ ಕಥೆ, ‘ಕಾಫಿತೋಟ’, ಕೋಟಿಗೊಬ್ಬ-2, ‘ಹೆಬ್ಬುಲಿ’,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ – 66ರಲ್ಲಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಕ್ಕದಲ್ಲಿ ನ್ಯೂ ತ್ರಿಲೋಕ್ ಫ್ಯಾಮಿಲಿ ರೆಸ್ಟೋರೆಂಟ್ ಗಣಹೋಮದೊಂದಿಗೆ ಶುಕ್ರವಾರ ಶುಭಾರಂಭಗೊಂಡಿತು. ನೂತನ ಆಡಳಿತದೊಂದಿಗೆ ಆರಂಭಗೊಂಡಿರುವ ವೆಜ್ ಹಾಗೂ ನಾನ್ ವೆಚ್ ಹೋಟೆಲ್ ಹೋಟೆಲ್‌ನಲ್ಲಿ ವಿವಿಧ ಬಗೆಗೆ ಖಾದ್ಯಗಳು ಲಭ್ಯವಿರಲಿದೆ, ನುರಿತ ಅಡುಗೆ ತಯಾರಕರು, ಶೀಘ್ರ ಸೇವೆ, ಫ್ಯಾಮೀಲಿ, ಫ್ರೆಂಡ್ಸ್‌ಗೆ ಅನುಕೂಲವಾಗುವಂತೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇರಲಿದೆ. ಹೋಟೆಲ್‌ಗೆ ಬರುವ ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ಸೌಲಭ್ಯವಿದ್ದು ಶುಚಿ ರುಚಿಯಾದ ಭೋಜನ ಸವಿಯಬಹುದಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಿ.ಪ್ರಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಅವರು ಪ್ರಾಸ್ತಾವಿಕ ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನವನ್ನು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ ಗುರು ಅಷ್ಟೇ ಮುಖ್ಯ ಒಂದು ದೇಶ ಅಭಿವೃದ್ಧಿ ಹೊಂದಲು ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಎಂದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಹಿರಿಯ ಶಿಕ್ಷಕಿ ಶ್ರೀಮತಿ ಯಶೋದ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ವಾಸು ಮತ್ತು ನಿರ್ಮಲ ರಾಜೇಶ್ವರಿ ಉಷಾ ವೀಣಾ ಗೀತಾ ಉಪಸ್ಥಿತರಿದ್ದರು. ನವಶಕ್ತಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಜಾತ ಅವರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ನವಶಕ್ತಿ ಮಹಿಳಾ ವೇದಿಕೆಯ ಸದಸ್ಯೆ ಜಯಲಕ್ಷ್ಮೀ ಸ್ವಾಗತಿಸಿ ಸುಷ್ಮಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಅವರನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಶುಕ್ರವಾರ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಗೌರವಿಸಿದರು. ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ಕೆ. ಮೋಹನ ಪೂಜಾರಿ, ಈಶ್ವರ ಹಕ್ಲತೋಡು, ಗುರುರಾಜ ಹೆಬ್ಬಾರ್, ಕೊರಗ ದೇವಾಡಿಗ, ಸುರೇಶ್ ಶ್ಯಾನುಭಾಗ್, ದಿನಿತಾ ಶೆಟ್ಟಿ, ಸಿದ್ದು ದೇವಾಡಿಗ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ, ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ಮೊದಲಾದವರು ಇದ್ದರು. ho
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿ. ಸಿ. ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಕುಂದಗನ್ನಡದ ಚಲನಚಿತ್ರ ಪ್ರೊಡಕ್ಷನ್ ನಂ. 01 ಮುಹೂರ್ತ ಗುರುವಾರ ಬಸ್ರೂರಿನ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು. ಚೊಚ್ಚಲ ಚಿತ್ರದ ಮುಹೂರ್ತವನ್ನು ಬಸ್ರೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅವರು ನೆರವೇರಿಸಿದರು. ಈ ಸಂದರ್ಭ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್‌ಐ ಶ್ರೀಧರ್ ನಾಯಕ್, ಮಹಾದೇವ ಕನ್ಸಕ್ಷನ್ ಮಂಗಳೂರು ಇದರ ಪ್ರವೀಣ್ ಕಮಾರ್, ಸುರೇಶ್ ನಾಯಕ್, ಸದಾಚಂದ್ರ ಬಸ್ರೂರು, ಗೋಪಾಲ್ ಪೂಜಾರಿ ಗರಡಿಮನೆ, ಶಾಶ್ವತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರಾವಳಿಯ ವಜ್ರಮುನಿ ಖ್ಯಾತಿಯ ಓಂ ಗುರು ಬಸ್ರೂರು ಮೊದಲ ಬಾರಿಗೆ ನಿರ್ದೇಶನವನ್ನು ಕೈಗೆತ್ತಿಕೊಂಡಿದ್ದಾರೆ. ಕರಾವಳಿ ಸುಧೀರ್ ಖ್ಯಾತಿಯ ಚಂದ್ರಶೇಖರ್ ಬಸ್ರೂರು ಓಂಗುರು ಅವರಿಗೆ ಸಾಥ್ ನೀಡಿದ್ದಾರೆ. ಚಿತ್ರದ ನಾಯಕ ನಟನಾಗಿ ಕರುಣಾಕರ್, ನಾಯಕ ನಟಿಯಾಗಿ ಕವನಾ ಜಗ್ವಾರ್ ಮತ್ತು ಹರ್ಷಿತಾ ಕಾಣಿಸಿಕೊಳ್ಳಲಿದ್ದು, ಮುಖ್ಯ ಭೂಮಿಕೆಯಲ್ಲಿ ಸಂದೇಶ್ ಶೆಟ್ಟಿ ಆಜ್ರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂತನ ಡಿವೈಎಸ್ಪಿ ಆಗಿ 2012 ಬ್ಯಾಚಿನ ಐಪಿಎಸ್ ಅಧಿಕಾರಿ ಹರಿರಾಂ ಶಂಕರ್ ಗುರುವಾರ ಅಧಿಕಾರ ಸ್ವೀಕರಿಸಿದ್ದು, ಇಲ್ಲಿನ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮಿತ ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್ ಅಧಿಕಾರ ಹಸ್ತಾಂತರ ಮಾಡಿದರು. ಕೇರಳದ ತ್ರಿಶೂರ್ ಮೂಲದ ಹರಿರಾಂ ಶಂಕರ್ 2012 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು ಟ್ರೈನಿಂಗ್ ಮುಗಿಸಿ ಬೆಳಗಾಂನ ಅಥಣಿಯಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿದ್ದು ಬಳಿಕ ಎರಡು ತಿಂಗಳು ಹೈದರಬಾದಿನಲ್ಲಿ ಎರಡನೇ ಹಂತದ ತರಬೇತಿ ಮುಗಿಸಿ ಕುಂದಾಪುರ ಎಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಕ್ಯಾಲಿಕಟ್ ಎನ್.ಐ.ಟಿ.ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದರು. ಹಲವು ವರ್ಷಗಳ ಬಳಿಕ ಕುಂದಾಪುರಕ್ಕೆ ಐಪಿಎಸ್ ದರ್ಜೆ ಅಧಿಕಾರಿ ನೇಮಿಸಿದ್ದು ನಾಗರಿಕರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಮೂಡಿಸಿದೆ. ಈ ಸಂದರ್ಭ ಕುಂದಾಪುರ ಸಿಪಿಐ ಮಂಜಪ್ಪ, ಬೈಂದೂರು ಸಿಪಿಐ ಪರಮೇಶ್ವರ್ ಗುನಗ, ಕುಂದಾಪುರ ಎಸ್ಸೈ ಹರೀಶ್ ಆರ್. ನಾಯಕ್ ವಿವಿಧ ಠಾಣೆ ಪಿಎಸ್‌ಐ…
