ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾಡದೋಣಿ ಮೀನುಗಾರರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಹಾಗೂ ಸ್ಥಗಿತಗೊಂಡಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯವನ್ನು ಪುನರಾರಂಭಿಸುವಂತೆ ರಾಜ್ಯದ ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ನೇತೃತ್ವದ ನಿಯೋಗ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಿತು. ಮಂಗಳೂರು ಸರ್ಕ್ಯೂಟ್ ಹೌಸ್ನಲ್ಲಿ ಸಚಿವ ಅಂಗಾರ ಮತ್ತು ಕಾರ್ಕಳದಲ್ಲಿ ಸಚಿವ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗದ ಸದಸ್ಯರು ನಾಡದೋಣಿ ಮೀನುಗಾರರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಹಾಗೂ ಸ್ಥಗಿತಗೊಂಡಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯವನ್ನು ಪುನರಾರಂಭಿಸುವಂತೆ ಮತ್ತು ಸಮುದ್ರ ಅಂಬುಲೆನ್ಸ್ನ್ನು ಅತೀ ಶೀಘ್ರದಲ್ಲಿ ಒದಗಿಸುವಂತೆ ಮನವಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ : ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ೬ನೇ ಪುಣ್ಯತಿಥಿ ಆರಾಧನಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ನಡೆಯಿತು. ಆರಾಧನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಸ್ತೋತ್ರ ಪಠಣ, ಶ್ರೀದೇವರಿಗೆ ಮಹಾಮಂಗಳಾರತಿ, ಗುರುಪೂಜೆ, ಪುಷ್ಪಾರ್ಚನೆ, ಪ್ರಸಾದ ವಿತರಣೆ, ರಾತ್ರಿ ಭಜನೆ, ಶ್ರೀದೇವರಿಗೆ ಪ್ರಸನ್ನಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ. ಪ್ರದೀಪ ಭಟ್ ನೇತೃತ್ವದಲ್ಲಿ ನಡೆಯಿತು. ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಮತ್ತು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜಿ.ನರಸಿಂಹ ನಾಯಕ್ ಮತ್ತು ಗೌರವಾಧ್ಯಕ್ಷ ಡಾ.ಕಾಶೀನಾಥ ಪೈ ಶ್ರೀಗಳ ಗುರುಗುಣಗಾನ ಮಾಡಿದರು. ಪುರೋಹಿತರಾದ ಜಿ.ನಾರಾಯಣ ಆಚಾರ್ಯ, ಜಿ.ಅನಂತಕೃಷ್ಣ ಭಟ್, ಜಿ.ವಸಂತ ಭಟ್, ಜಿ.ಅಜಿತ್ ಭಟ್, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎನ್ ಸಿಸಿ ನೌಕಾದಳದ ವತಿಯಿಂದ ಈಜು, ಸೆಮಫೋರ್, ರಿಗ್ಗಿಂಗ್, ರಸಪ್ರಶ್ನೆಗಳನ್ನೊಳಗೊಂಡ ಸೀಮೆನ್ಶಿಪ್ (seamanship) ಸ್ಪರ್ಧೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಸಂಯೋಜಕ ಹಾಗೂ ಎನ್ಸಿಸಿ ನೌಕಾದಳದ ಅಧಿಕಾರಿ ಸಬ್ ಲೆಫ್ಟಿನೆಂಟ್ ನಾಗರಾಜ್ ಎಂ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ನವೀನತೆ, ಕ್ರಿಯಾಶೀಲತೆ ಬೆಳೆಸುವುದು ಹಾಗೂ ದೇಶದ ನೌಕಾದಳದಲ್ಲಿ ಇರುವ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಲು ಈ ಸ್ಪರ್ಧೆಯು ಸಹಕಾರಿಯಾಗುವುದು ಎಂದು ತಿಳಿಸಿದರು . ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ವಿವೇಕ್ ಆಳ್ವರವರು ಮಾತನಾಡುತ್ತಾ ವಿದ್ಯಾರ್ಥಿಗಳು ಹೊಸತನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕದ ಆಚೆಗಿನ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿದ್ದಲ್ಲಿ ಪೂರ್ಣರೂಪದ ಕಲಿಕೆ ಸಾಧ್ಯ ಎಂದು ತಿಳಿಸಿದರು. ಕಾಲೇಜಿನ ಎಲ್ಲಾ ಫೋರಂನ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಅವರು ಮಾತನಾಡಿ, ಕಾಲೇಜಿನಲ್ಲಿ ಮೊದಲ ಬಾರಿ ಇಂತಹ ನವೀನ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ತಮ್ಮ ಯೋಚನಾ ಲಹರಿ, ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಸ್ವಾಮಿ ವಿವೇಕಾನಂದ ಜನ್ಮ ಜಯಂತಿಯನ್ನು ಬುಧವಾರ ಆಚರಿಸಲಾಯಿತು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನ ಸಂದೇಶವನ್ನು ಭೋದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ವೇದಮಂತ್ರಗಳ ಪಠಣ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಲ್ಲೂರು ಬಳಿಯ ಓಣ್ಕಣ್ ಮೋರಿ ತಿರುವಿನಲ್ಲಿ ನಡೆದಿದೆ. ಕೋಲಾರದಿಂದ ಭಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಬಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಚಾಲಕನ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪ್ರಪಂಚ ಇರುವುದು ಹೇಡಿಗಳಿಗಲ್ಲ; ಜೀವನದಲ್ಲಿ ಎದುರಾಗುವ ಸಕಲ ಸೋಲು-ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ’ ಎಂದು ಯುವಕರಿಗೆ ಕರೆಕೊಟ್ಟ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಇಂದಿಗೂ ಯುವಜನಾಂಗದ ಸ್ಫೂರ್ತಿಯ ಚಿಲುಮೆಯಾಗಿ ಉಳಿದಿದ್ದಾರೆ. ಹಿಂದು ಧರ್ಮದ ಪುನರುಜ್ಜೀವನಕ್ಕೆ ಕಾರಣೀಭೂತರಾದ ಅವರು ರಾಷ್ಟ್ರೀಯತೆಗೆ ನೀಡಿದ ಕೊಡುಗೆ ಬಹುದೊಡ್ಡದು. ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದ ವಿವೇಕಾನಂದರು, ಧರ್ಮಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ; ಜನರ ನಡುವೆ ಇದ್ದುಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನೂ ವಿನಿಯೋಗಿಸುವುದು ಎಂದು ಸಾರಿದರು. ಈ ಸಮಾಜಯಜ್ಞಕ್ಕೆ ಅವರು ವಿಶೇಷ ಆಹ್ವಾನ ನೀಡಿದ್ದು ಯುವಕರಿಗೆ. ಆದ್ದರಿಂದಲೇ ಅವರು ಇಂದಿಗೂ ಯುವಕರಿಗೆ ಆದರ್ಶ ವ್ಯಕ್ತಿ. ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ನರೇಂದ್ರನಾಥ ದತ್ತ ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಅವರ ಜೀವನವೇ ಒಂದು ಹೋರಾಟವಾಗಿತ್ತು. ಒಮ್ಮೆ ಅವರು ಜೀವನದ ಉದ್ದೇಶವೇನು ಎಂಬ ಪ್ರಶ್ನೆ ಕೇಳಿಕೊಂಡರು. ಇದೇ ವೇಳೆ ಭಾರತದ ಬಡತನ ಕಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ವನ್ನು ರದ್ದುಪಡಿಸಿದ್ದಾರೆ ತುಣುಕನ್ನು ಹರಿಯಬಿಟ್ಟಿರುವುದು, ಜನರಲ್ಲಿ ಗೊಂದಲ ಸೃಷ್ಟಿ ಮಾಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ಪಷ್ಟನೆ ನೀಡಿದ್ದು, ಜ.5ರಿಂದ ಜಾರಿಯಾದ ಆದೇಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಮುಂದುವರಿಯಲಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಸರಕಾರದ ಆದೇಶದಂತೆ ದಿನಾಂಕ 05.01.2022 ರ ಅಪರಾಹ್ನ 10.00 ರಿಂದ ದಿನಾಂಕ: 19.01.2022 ರ ಪೂರ್ವಾಹ್ನ 5.00ರ ವರೆಗೆ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರಾವಳಿ ಕರ್ನಾಟಕದ ಮೊದಲ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸಂಚಾರ ಜ.19ರಿಂದ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಕಾರವಾರದಿಂದ ಮಂಗಳೂರು ಜಂಕ್ಷನ್ ತನಕ ವಿದ್ಯುತ್ ಚಾಲಿತ ರೈಲು ಸಂಚಾರವಿರಲಿದೆ. ಈಗಾಗಲೇ ಇರುವ ಯಶವಂತಪುರ ಕಾರವಾರ (16515/16516) ಎಕ್ಸ್ಪ್ರೆಸ್ ಹಗಲು ರೈಲು ಇನ್ನು ಕಾರವಾರದಿಂದ ಮಂಗಳೂರು ಜಂಕ್ಷನ್ ತನಕ ವಿದ್ಯುತ್ ಚಾಲಿತ ರೈಲಾಗಿ ಪರಿವರ್ತನೆಗೊಳ್ಳಲಿದೆ. ಮುಂದೆ ಡಿಸೆಲ್ ಇಂಜಿನ್ ಜೋಡಿಸಿಕೊಂಡು ಯಶವಂತಪುರದ ತನಕ ಸಂಚಾರ ಮುಂದುವರಿಲಿದೆ. ಕಾರವಾರ – ಮುರುಡೇಶ್ವರ – ಬೈಂದೂರು – ಕುಂದಾಪುರ – ಉಡುಪಿ – ಮಂಗಳೂರು ಜಂಕ್ಷನ್ – ಸುಬ್ರಹ್ಮಣ್ಯ ರೋಡ್ – ಸಕಲೇಶಪುರ – ಹಾಸನ – ಯಡಿಯೂರು ಮಾರ್ಗದಲ್ಲಿ ಯಶವಂತಪುರ ಕಾರವಾರ ಎಕ್ಸ್ಪ್ರೆಸ್ ಸಂಚರಿಸಲಿದೆ. ಕಾರವಾರದಿಂದ ಮಂಗಳೂರು ಜಂಕ್ಷನ್ ತನಕದ ವಿದ್ಯುತ್ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಮಂಗಳೂರು ಜಂಕ್ಷನ್’ನಿಂದ ಯಶವಂತಪುರದ ತನಕ ಇ-ಲೋಕೋಮೋಟಿವ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಜೋಡಿಸಲಾಗುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜ.11: ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳು ಸಹ ಕೋವಿಡ್ -19 ಮುನ್ನೆಚ್ಚರಿಕಾ ಡೋಸ್ ತಪ್ಪದೇ ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟಿçÃಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಸಹಯೋಗದಲ್ಲಿ, ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಭಾಯಿಸಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ ಸೇವೆಯು ಅತ್ಯಂತ ಅಗತ್ಯವಾಗಿದ್ದು, ಇವರಿಗೆ ಕೋವಿಡ್ನಿಂದ ರಕ್ಷಣೆ ನೀಡಲು ಮತ್ತು 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೆ ಕೋವಿಡ್ನಿಂದ ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ನೀಡುವಲ್ಲಿ ಅತ್ಯಂತ ಹೆಚ್ಚಿನ ಪ್ರಗತಿ ಆಗಿದ್ದು, ಮುನ್ನೆಚ್ಚರಿಕಾ ಡೋಸ್ ನೀಡುವಲ್ಲಿ ಸಹ ಸಂಪೂರ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ಸರಕಾರ ಮೀನುಗಾರ ಮಹಿಳೆಯರ ಸಾಲ ಮನ್ನಾ ಘೋಷಣೆ ಮಾಡಿ ಈತನಕ ಸಂಪೂರ್ಣ ಸಾಲ ಮನ್ನಾ ಮಾಡದಿರುವುದರಿಂದ ಮರುಪಾವತಿಸುವಂತೆ ಬ್ಯಾಂಕುಗಳು ಒತ್ತಡ ಹೇರುತ್ತಿವೆ. ನಾಡದೋಣಿ ಮೀನುಗಾರಿಕೆಗೆ ಹೆಚ್ಚಿನ ಸೀಮೆಎಣ್ಣೆ ಒದಗಿಸುವ ಬಗ್ಗೆ ನೀಡದ ಭರವಸೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಸರಕಾರ ಘೋಷಿಸಿದಂತೆ ಮೀನುಗಾರ ಮಹಿಳೆಯರ ಸಂಪೂರ್ಣ ಮನ್ನಾ ಮಾಡಿ ಮೊದಲಿನಂತೆ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲು ಹಾಗೂ ನಾಡದೋಣಿ ಮೀನುಗಾರಿಕೆಗೆ ಭರವಸೆ ನೀಡಿದಂತೆ ಹೆಚ್ಚಿನ ಸೀಮೆಎಣ್ಣೆಯನ್ನು ನಿಗದಿತವಾಗಿ ನೀಡುವ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರ ಸಮಿತಿ ಅಧ್ಯಕ್ಷ ಬಿ. ನಾಗೇಶ್ ಖಾರ್ವಿ ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಮೀನುಗಾರ ಮಹಿಳೆಯರ ಸಾಲ ಮನ್ನಾ ಎಂದು ಘೋಷಣೆ ಮಾಡಿ ಸಂಪೂರ್ಣ ಸಾಲ ಮನ್ನಾ ಮಾಡದೇ ಇರುವುದರಿಂದ ಮೀನುಗಾರ ಮಹಿಳೆಯರಿಗೆ ಸಾಲ ಮರುಪಾವತಿಸುವಂತೆ ಬಾಂಕು ಹೇರುತ್ತಿದೆ ಆದ್ದರಿಂದ ಬಾಕಿ ಉಳಿಸಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಮೊದಲಿನಂತೆ…
