ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಸ್ತೆ ಅಪಘಾತದಲ್ಲಿ ಮೃತರಾದ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ನಾಗೇಶ್ ಬಿಲ್ಲವ ಅವರಿಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ, ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಗುನಗ, ಠಾಣಾಧಿಕಾರಿ ತಿಮ್ಮೇಶ್ ಮೊದಲಾದವರು ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಷ್ಟಿತ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿಖಿಲ್ ಮಂಜೂ ಲಿಂಗಯ್ಯ ನಿರ್ದೇಶನದ ತುಳು ಕಲಾತ್ಮಕ ಚಲನಚಿತ್ರ “WHITE” (ಬೊಲ್ದು) ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಕೋಸ್ಟಲ್ವುಡ್ನ ಪ್ರಥಮ ತುಳು ಚಿತ್ರ ಇದಾಗಿರುವುದಲ್ಲದೇ, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಚಿತ್ರ ಎನಿಸಿಕೊಂಡಿದೆ. ನಟ, ನಿರ್ದೇಶಕ ಗಿರೀಶ್ ಬೈಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಹಣ- ಪಿ.ವಿ.ಆರ್.ಸ್ವಾಮಿ., ಸಂಭಾಷಣೆ-ಬಿ.ಶಿವಾನಂದ., ಸಂಕಲನ-ಆದಿತ್ಯ ಕುಣಿಗಲ್. ಚಿತ್ರದ ಸಂಭಾಷಣೆ ತುಳುವಿಗೆ ಅನುವಾದಿಸಿದ್ದಾರೆ ವಿಜೇಶ್ ದೇವಾಡಿಗ ಮಂಗಳಾದೇವಿ. ಸಿನೆಮಾ ಕಥಾ ಹಂದರ: ಅಂಗಾರ ತನ್ನ ಮಾನಸಿಕ ಅಸ್ವಸ್ಥತೆಯ ಹೆಂಡತಿ ಮತ್ತು ತಾಯಿಯೊಂದಿಗೆ ಬುದ್ಧಿಮಾಂದ್ಯ ಮಗಳ ಸಂಸಾರದ ಜವಾಬ್ದಾರಿ ಹೊತ್ತಿದ್ದ. ಮಗಳನ್ನು ಹಿಂಸಿಸುತ್ತಿದ್ದ ಸೊಸೆಯಿಂದ ಮೊಮ್ಮಗಳು ಸೂಜಿಯನ್ನು ಕಾಪಾಡಲು ಅಜ್ಜಿ ಬೇರೆ ಊರಿಗೆ ಮೊಮ್ಮಗಳೊಂದಿಗೆ ಗುಟ್ಟಾಗಿ ಹೋಗುತ್ತಾಳೆ. ಇತ್ತ ಹೆಂಡತಿಯ ಮರಣಾನಂತರ ಪ್ರೀತಿಯ ಮಗಳನ್ನು ಕಾಣದೇ ಅಂಗಾರ ಕಂಗಾಲಾಗುತ್ತಾನೆ. ಹದಿವಯಸ್ಸಿಗೆ ಬಂದ ಸೂಜಿಯನ್ನು ಸಾಕಲು ತನ್ನಿಂದ ಸಾಧ್ಯವಾಗದೇ ಓಉಔ ಒಂದರ ಸಹಾಯ ಪಡೆಯಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಳ್ವಾಸ್ ವಿದ್ಯಾರ್ಥಿಸಿರಿಯ ಅಂಗವಾಗಿ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ `ನಾವು ಮತ್ತು ನಮ್ಮ ಪರಿಸರ’ ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಗುಣೇಶ್ ಭಾರತೀಯ, ತೋಕೂರಿನ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಘ್ನೇಶ್ ಮಲ್ಯ, ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರದ್ಯುಮ್ನ ಮೂರ್ತಿ ಕಡಂದಲೆ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಭಕ್ತಿಶ್ರೀ ಸಂವಾದದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ..ಎಮ್ ಪದವಿಪೂರ್ವ ಕಾಲೇಜಿನ ಶ್ಯಾಮ್ ಪ್ರಸಾದ್ ಸಮಾಪನ ಮಾತುಗಳನ್ನಾಡಿ “ಪ್ರಕೃತಿಯನ್ನು ನಾವು ಅದರ ದೃಷ್ಟಿಯಲ್ಲಿ ನೋಡಬೇಕೇ ಹೊರತು ನಮ್ಮ ರೀತಿಯಲ್ಲಲ್ಲ. ಇದರಿಂದಲೇ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಜರುಗುತ್ತಿವೆ. ಪರಿಸರಕ್ಕೆ ನಾವು ಅವಶ್ಯಕವಲ್ಲ, ಬದಲಿಗೆ ನಮಗೆ ಅದು ಅನಿವಾರ್ಯ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು. “ನಾವೆಲ್ಲಾ ಇಂದು ಅಭಿವೃದ್ಧಿ ಎಂಬ ಮಾರಕಾಸ್ತ್ರದಿಂದ ಪ್ರಕೃತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಧುನಿಕ ಜಗತ್ತಿನಲ್ಲಿ ಮಾನವನ ದಿನಚರಿಯು ಅನಾರೋಗ್ಯ ಸ್ವರೂಪವನ್ನು ಪಡೆಯುತ್ತಿದ್ದು ಇದನ್ನು ಬದಲಿಸಿಕೊಳ್ಳಬೇಕಾದ್ದು ತುಂಬಾ ಮುಖ್ಯ ಎಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಪ್ರಭು ಅಭಿಪ್ರಾಯಿಸಿದರು. ೧೫ನೇ ಆಳ್ವಾಸ್ ನುಡಿಸಿರಿಯ ಪ್ರಯುಕ್ತ ನಡೆದ ವಿದ್ಯಾರ್ಥಿಸಿರಿಯಲ್ಲಿ `ದಿನಚರಿ: ಹಿಂದುಮುಂದು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಹುಟ್ಟು, ಜೀವನ ಹಾಗೂ ಮರಣ ನಮ್ಮ ಬದುಕಿನ ದಿನಚರಿಯಾದರೆ ಇದಕ್ಕೆ ಪೂರಕವಾಗಿ ನಮ್ಮ ನಿತ್ಯ ಚಟುವಟಿಕೆಗಳು ನಡೆಯಬೇಕು. ಅದರೆ ಇಂದು ಮಾನವನು ಸಂಪತ್ತಿನ ಜೀವನದೆಡೆಗೆ ಮುಖಮಾಡಿ ನಿಂತಿದ್ದಾನೆ. ತನ್ನ ಸುತ್ತ ನಡೆಯುವಂತಹ ಯಾವುದೇ ಘಟನೆಗಳ ಬಗ್ಗೆ ಅರಿತುಕೊಳ್ಳದಾಗದಷ್ಟು ಮಾನವ ಬದಲಾಗಿದ್ದು, ಆತನ ನಿತ್ಯದ ಜೀವನ ಶೈಲಿಯು ಮಾರ್ಪಡಾಗುತ್ತಲೇ ಹೋಗುತ್ತಿದೆ ಎಂದರು. ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ವಿಶ್ಲೇಷಿಸಿದ ಪ್ರಜ್ಞಾ ಪ್ರಭು, ಇಂದಿನ ಕೈಗಾರಿಕಾ ಕ್ರಾಂತಿ, ಯಾಂತ್ರೀಕೃತ ಬದುಕು ಮನುಷ್ಯ ಅನಾರೋಗ್ಯಕರ ಜೀವನ ವಿಧಾನವನ್ನು ಹೊಂದುವಂತೆ ಮಾಡುತ್ತಿವೆ ಎಂದು ತಿಳಿಸಿದರು. ಇಂತಹ ದಿನಚರಿಗಳು ಬದಲಾಗಬೇಕಿದ್ದು, ಓದು, ಬರಹ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗುರುವಾರ ಬೆಳಗಿನ ಜಾವ ನಾಗೂರಿನಲ್ಲಿ ನಡೆದ ಅಪಘಾತದಲ್ಲಿ ಬೈಂದೂರು ಪೊಲೀಸ್ ಠಾಣೆಯ ಪೇದೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಶಿರೂರು ಕರಾವಳಿಯ ನಾಣು ಬಿಲ್ಲವ ಅವರ ಪುತ್ರ ನಾಗೇಶ್ ಬಿಲ್ಲವ (34) ಮೃತ ದುರ್ದೈವಿ. ಬೈಂದೂರು ಪೊಲೀಸ್ ಠಾಣೆಯಲ್ಲಿಯಲ್ಲಿ ಗುಪ್ತ ಮಾಹಿತಿ ಸಿಬ್ಬಂಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ರಾತ್ರಿ ಪಾಳಿಯ ಗಸ್ತಿನಲ್ಲಿದ್ದರು. ರಸ್ತೆಯಲ್ಲಿ ಯಾವುದೇ ಸೂಚನೆಗಳಿಲ್ಲದೇ ನಿಲ್ಲಿಸಲಾಗಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ನಾಗೇಶ್ ಅವರ ಎದೆಯ ಭಾಗಕ್ಕೆ ತೀವ್ರ ಹೊಡೆದ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ. ನಾಗೇಶ್ ಅವರು ಈ ಹಿಂದೆ ಕುಂದಾಪುರ ಸಂಚಾರಿ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದು, ವರ್ಷದ ಹಿಂದಷ್ಟೆ ಬೈಂದೂರು ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರಿಗೆ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಮೃತರು ಹೆಂಡತಿ, ತಂದೆ ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಂದೆ ತಾಯಿ ಹಾಗೂ ಮಕ್ಕಳದ್ದು ಬಿಡಿಸಲಾಗದ ಭಾವನಾತ್ಮಕ ಸಂಬಂಧ. ಮಕ್ಕಳಿಗೆ ಸಂಸ್ಕಾರ ಕೊಡುವುದು ಮುಖ್ಯವಾದದ್ದು. ತಂದೆ ತಾಯಿಯರನ್ನೇ ಮಕ್ಕಳು ಅನುಸರಿಸುತ್ತಾರೆ. ನಮ್ಮ ಆಚರಣೆಗಳು ಉತ್ತಮವಾದಷ್ಟು ಮಕ್ಕಳು ಉತ್ತಮ ಸಂಸ್ಕಾರ ಹೊಂದುತ್ತಾರೆ ಆದುದರಿಂದ ತಂದೆ ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಸರಿಯಾದ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಮರೆಯಬಾರದು ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಹೇಳಿದರು. ಅವರು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದಲ್ಲಿ ನ. 8ರಂದು ಸುದ್ದಿಮನೆ ವಾರಪತ್ರಿಕೆ ದಶಮ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಮಾತೃಪಿತೃ ವಂದನಾ ಅಭಿಯಾನ 2018-19ಕ್ಕೆ ಚಾಲನೆ ನೀಡಿ ಆಶಿರ್ವಚನವಿತ್ತರು. ನಮ್ಮ ಪೂರ್ವಜರು ಸಮಾಜಕ್ಕೆ ಹಲವಾರು ಬಗೆಯ ಆಚರಣೆಗಳನ್ನು ನೀಡಿ ಹೋಗಿದ್ದಾರೆ. ಅದರಲ್ಲಿ ಈಗಿನ ದಿನಮಾನಕ್ಕೆ ಯಾವುದು ಅಗತ್ಯ ಎಂಬುದನ್ನು ವಿವೇಕಯುವಾದ ಚಿಂತನೆಯ ಮೂಲಕ ಅರಿತು ಬೆಳಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಅಳಿಲು ಸೇವೆ ಸಲ್ಲಿಸೋಣ, ಮಾತೃಪಿತೃ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2014ನೇ ಇಸವಿಯಲ್ಲಿ ದಾಖಲುಗೊಂಡ ಪೋಸ್ಕೊ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆಶನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ, ಶಿಕ್ಷೆಗೆ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಬೆಳ್ವೆ ಗ್ರಾಮದ ಮಾರಿಕೊಡ್ಲು ನಿವಾಸಿ ಸತೀಶ್ ನಾಯ್ಕ (30) ಎಂಬುವನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಆಪಾಧಿತನ್ನು ಶಂಕರನಾರಾಯಣ ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಂಗ ಬಂಧನ ವಿಸ್ತರಿಸಲಾಗಿದೆ. 2014ರಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿಯನ್ನು ಬಲವಂತವಾಗಿ ಬಾಯಿಮುಚ್ಚಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಶಂಕರನಾರಾಯಣ ಪಿ.ಎಸ್.ಐ ಪ್ರಕಾಶ್ ಕೆ ಮಾರ್ಗದರ್ಶನದಲ್ಲಿ ಎ.ಎಸ್.ಐ. ಪ್ರಭಾಕರ ಬಿ. ಮತ್ತು ಹೆಡ್ ಕಾನ್ಸ್’ಟೇಬಲ್ ನಾರಾಯಣ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿದ್ದಜಿದ್ದಿನ ಕಣವಾಗಿದ್ದ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರು ಮುನ್ನಡೆ ಸಾಧಿಸಿ ವಿಜಯದ ನಗೆ ಬೀರಿದ್ದಾರೆ. ರಾಘವೇಂದ್ರ 5,16415 ಮತಗಳನ್ನು, ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ 4,68,547 ಮತಗಳನ್ನು ಪಡೆದಿದ್ದು, 47868 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್, ಜಮಖಂಡಿಯಲ್ಲಿ ಕಾಂಗ್ರೆಸ್ ಜೆಡಿಎಸ್, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. <iframe width=”560″ height=”315″ src=”https://www.youtube.com/embed/HoB3NAJrykE” frameborder=”0″ allow=”accelerometer; autoplay; encrypted-media; gyroscope; picture-in-picture” allowfullscreen></iframe>
ಎಲ್ಲಾ ಮೊಬೈಲ್ ಖರೀದಿಯ ಮೇಲೂ ಡಿಸ್ಕೌಂಟ್, ವಿಶೇಷ ಆಫರ್ ಕುಂದಾಪ್ರ ಡಾಟ್ ಕಾಂ ಕುಂದಾಪುರ: ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮೊಬೈಲ್ ಉತ್ಪನ್ನಗಳ ಉತ್ಕೃಷ್ಟ ಮಳಿಗೆ ‘ಮೊಬೈಲ್ ಎಕ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಖರೀದಿಸುವ ಪ್ರತಿ ಉತ್ಪನ್ನಕ್ಕೂ ವಿಶೇಷ ಆಫರ್ ನೀಡುತ್ತಿರುವ ಮೊಬೈಲ್ ಎಕ್ಸ್ – ಕಂಪ್ಲೀಟ್ ಮೊಬೈಲ್ ಶಾಪ್ ಇದೀಗ ಕುಂದಾಪುರ ಬಹು ನಂಬುಗೆಯ, ಬಹು ಬೇಡಿಕೆಯ ಮೊಬೈಲ್ ಶೋರೂಮಂಗಳಲ್ಲಿ ಒಂದೆನಿಸಿದೆ. ದೀಪಾವಳಿಯ ಸಂದರ್ಭ ಮೊಬೈಲ್ ಎಕ್ಸ್ ನಲ್ಲಿ ಯಾವುದೇ ಮೊಬೈಲ್ ಖರೀದಿಸುವವರಿಗೆ ಕಾಂಬೋ ಆಫರ್ ನೀಡಲಾಗುತ್ತಿದೆ. ವಿವೋ ವಿ11 ಪ್ರೋ, ಒಪ್ಪೊ ಏಫ್9 ಹಾಗೂ ಏಫ್9 ಪ್ರೋ, ಆಸಸ್ ಮಾಕ್ಸ್ ಎಂ1 ಪ್ರೋ, ಐಪೋನ್ ಎಕ್ಸ್’ಎಸ್ ಮಾಕ್ಸ್, ನೋಟ್ 5 ಪ್ರೋ ಎಂಐ ಹಾಗೂ ಸ್ಯಾಮಸಂಗ್, ಎಚ್.ಟಿ.ಸಿ, ಸೋನಿ, ಮೈಕ್ರೋಮ್ಯಾಕ್ಸ್, ಮೈಕ್ರೋಸಾಫ್ಟ್, ಲಾವಾ, ಲೆನೋವಾ ಇಂಟೆಕ್ಸ್, ಐಪೋನ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಉತೃಷ್ಟ ಮೊಬೈಲ್ಗಳನ್ನು ಇಲ್ಲಿ ಲಭ್ಯವಿದೆ. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಯೋಗಪಟು ಕುಶ ಪೂಜಾರಿ ವಿಯೆಟ್ನಾಮ್ನ ಮಿಕೊ ಫಿಟ್ನೆಸ್ ಸೆಂಟರ್ನಲ್ಲಿ ಯೋಗ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಯೋಗ ವಿಜ್ಞಾನದಲ್ಲಿ ಎಮ್ ಎಸ್ಸಿ ಪದವಿ ಗಳಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಲಯೇಷ್ಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಪಡೆದಿದ್ದರು. ಮರವಂತೆಯ ರಾಮಚಂದ್ರ ಪೂಜಾರಿ-ನೀಲು ಪೂಜಾರಿಯ ಪುತ್ರರಾಗಿರುವ ಅವರು ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರವಂತೆ ಪ್ರೌಢಶಾಲೆ, ನಾವುಂದ ಪದವಿಪೂರ್ವ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಎಂ. ಎ. ಲಮಾಣಿ, ಯಶೋದಾ ಕರನಿಂಗ, ಡಾ. ಕೆ. ಕೃಷ್ಣ ಶರ್ಮ ಅವರಿಗೆ ಯೋಗ ಕಲಿಸಿದ್ದರು,. ಬಿ.ಬಿ. ಹೆಗ್ಡೆ ಕಾಲೇಜಿನ ನಿರ್ದೇಶಕ ದೋಮ ಚಂದ್ರಶೇಖರ್ ನೀಡಿದ ಪ್ರೋತ್ಸಾಹದ ಫಲವಾಗಿ ವಿಶೇಷ ಸಾಧನೆ ಸಾಧ್ಯವಾಯಿತು ಎಂದಿದ್ದಾರೆ.
