ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ಕಲೆಯ ಸಿಡಿಲ ಮರಿ ಎಂದೇ ಖ್ಯಾತರಾಗಿರುವ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಗೋಪಾಲ ಆಚಾರ್ಯ ಅವರು ಕರಾವಳಿಯ ವಿವಿಧ ಮೇಳಗಳಲ್ಲಿ ವೇಷಕಟ್ಟಿ ಕುಣಿದಿದ್ದಾರೆ. ತಮ್ಮ ೬೩ನೇ ವಯಸ್ಸಿನಲ್ಲಿಯೂ ಅತಿಥಿ ಕಲಾವಿದರಾಗಿ ಕಲಾ ಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ನಾಗೂರಿನಲ್ಲಿ ಪ್ರತಿವರ್ಷ ಒಂದು ವಾರಗಳ ಕಾಲ ಯಕ್ಷಗಾನ ತಾಳಮದ್ದಳೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಮಲೆನಾಡಿನವರಾದ ಅವರು ಪ್ರಸ್ತುತ ನಾಯ್ಕನಕಟ್ಟೆಯಲ್ಲಿ ನೆಲೆಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಂಗಕರ್ತ, ಯಕ್ಷಗಾನ ಭಾಗವತ ಎಂ. ಎಚ್. ಪ್ರಸಾದ್ ಮೊಗೆಬೆಟ್ಟು ಅವರಿಗೆ ಈ ಭಾರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಮೊಗೆಬೆಟ್ಟು ಅವರು ಕಳೆದ 25 ವರ್ಷಗಳಿಂದ ಯಕ್ಷಗಾನ ಕಲಾಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ, ಹೊರರಾಜ್ಯ, ಅಲ್ಲದೇ ವಿದೇಶದಲ್ಲಿಯೂ ಸಹ ಯಕ್ಷಗಾನ ಕಾರ್ಯಕ್ರಮಗನ್ನು ನೀಡಿರುವ ಹೆಗ್ಗಳಿಕೆ ಅವರದ್ದು. ಈವರೆಗೆ 23 ಯಕ್ಷಗಾನ ಪ್ರಸಂಗವನ್ನು ರಚಿಸಿ ಖ್ಯಾತಿಗಳಿಸಿದ್ದಾರೆ. 2003ರಲ್ಲಿ ಸಾಂಪ್ರದಾಯಿಕ ಭಾಗವತಿಕೆ ಕಲಿಕೆಗೆ ಕೇಂದ್ರ ಸರಕಾರದಿಂದ ಸಂಸ್ಕೃತಿ ಅಕಾಡೆಮಿಯ ಸ್ಕಾಲರ್ಶಿಪ್ ಪಡೆದಿದ್ದಾರೆ. 50ಕ್ಕೂ ಹೆಚ್ಚು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನೀಡಿ ಎ ಗ್ರೇಡ್ ಮಾನ್ಯತೆಯನ್ನು ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪತ್ರಿಕೋದ್ಯಮ, ಸಂಘಟನೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡ ಕ್ರೀಯಾಶೀಲ ವ್ಯಕ್ತಿತ್ವದ ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರಿಗೆ ಈ ಭಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಮುಂಬೈ ಯುನಿವರ್ನಿಟಿಯಲ್ಲಿ ಕನ್ನಡ ಎಂ.ಎನಲ್ಲಿ ಚಿನ್ನದ ಪದಕ ಪಡೆದುಕೊಂಡ ಅವರು ಕುಂದಾಪುರದಲ್ಲಿ ತಮ್ಮ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದರು. ಕುಂದಾಪುರ, ಮುಂಬೈ, ಬೆಂಗಳೂರು, ಮೂಡುಬಿದಿರೆಯಲ್ಲಿ ಕುಂದಪ್ರಭ, ಕರ್ನಾಟಕ ಮಲ್ಲ, ಕನ್ನಡಪ್ರಭ ಸೇರಿದಂತೆ ವಿವಿಧೆಡೆ ದಿನಪತ್ರಿಕೆ, ವೆಬ್ ಪೋರ್ಟೆಲ್ಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಅಜೆಕಾರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಸಂಘಟನಾತ್ಮವಾಗಿಯೂ ತೊಡಗಿಸಿಕೊಂಡಿದ್ದ ಅವರು ಮುಂಬಯಿ ಪೊವಾ ಕನ್ನಡ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ ಹೊರನಾಡಿನಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ಸಕ್ರೀಯರಾಗಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿ ಗ್ರಾಮೋತ್ಸವ, ಮಿನಿ ಚಲನಚಿತ್ರೋತ್ಸವ, ಕವಿಗೋಷ್ಠಿ ಮುಂತಾದ ಸಮ್ಮೇಳನ, ಕಾರ್ಯಕ್ರಮಗಳ ಮೂಲಕ ನೂರಾರು ಸಾಧಕರು ಹಾಗೂ ಎಲೆಮರೆಯ ಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಹೆಗ್ಗಳಿಕೆ ಅವರದ್ದು. ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಡಿಸೆಂಬರ್ 9 ರಂದು ಪೂನಾದ ವಿಮಾನನಗರದ “ನೋವೋಟೆಲ್ ಹೋಟೆಲ್”ನಲ್ಲಿ ೨ನೇ ಅಂತರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇನ್ಫೋಸಿಸ್ ಫೌಂಡೇಶನ್ ಚೇರ್ಮನ್ ಡಾ. ಸುಧಾಮೂರ್ತಿ, ಎಐಸಿಟಿಇ ಯ ಚೇರ್ಮನ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿಯವರು ಆಗಮಿಸಲಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ ಈ ಹಿಂದೆ ಬಿ. ವಿ. ಭೂಮರೆಡ್ಡಿ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿ ಕಲಿತ ಹಲವಾರು ಹಳೆ ವಿದ್ಯಾರ್ಥಿಗಳು ಇಂದು ವಿಶ್ವದ ಪ್ರಸಿದ್ಧ ಸಂಸ್ಥೆಗಳಲ್ಲಿ, ದೇಶಗಳಲ್ಲಿ ಹೆಸರು ಗಳಿಸಿದ್ದಾರೆ. ಆ ಪೈಕಿ ಇನ್ಫೋಸಿಸ್ ಫೌಂಡೇಶನ್ನ ಡಾ. ಸುಧಾಮೂರ್ತಿ, ವಿವೇಕ್ ಕುಲಕರ್ಣಿ, ಎಸ್.ಆರ್. ಹಿರೇಮಠ ಮೊದಲಾದವರು ಪ್ರಮುಖರು. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿನ ಬೆಳವಣಿಗೆಯೊಂದರಲ್ಲಿ ಬೈಂದೂರು ಪಿಎಸ್ಐ ವರ್ಗಾವಣೆಯನ್ನು ರದ್ದುಗೊಂಡಿದ್ದು, ಅವರು ಮರಳಿ ಬೈಂದೂರು ಠಾಣೆಯಲ್ಲಿಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರು ಇತ್ತಿಚಿಗೆ ಬೈಂದೂರು ಠಾಣಾಧಿಕಾರಿ ಸೇರಿದಂತೆ ನಾಲ್ವರು ಪಿಎಸ್ಐಗಳ ವರ್ಗಾವಣೆ ಆದೇಶ ನೀಡಿದ್ದರು. ಆದರೆ ಈ ಪೈಕಿ ಮೂವರು ಅಧಿಕಾರಿಗಳ ವರ್ಗಾವಣೆ ಆದೇಶ ರದ್ದುಗೊಳಿಸಿರುವುದರಿಂದ ಮರಳಿ ಅವರು ಬೈಂದೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೈಂದೂರು ಠಾಣೆಗೆ ಪ್ರಕರಣವೊಂದರ ಇತ್ಯರ್ತಕ್ಕೆಂದು ಬಂದಿದ್ದ ಜಿ.ಪಂ ಸದಸ್ಯರೊಬ್ಬರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಬೈಂದೂರು ಬಿಜೆಪಿ ಪ್ರತಿಭಟನೆ ನಡೆಸಿ ವರ್ಗಾವಣೆಗಾಗಿ ಪಟ್ಟು ಹಿಡಿದಿತ್ತು. ಇದರ ಬೆನ್ನಲ್ಲೆ ವರ್ಗಾವಣೆಯ ಸುದ್ದಿಯೂ ಹೊರಬಿದ್ದಿತ್ತು. ಆದರೆ ಇದೊಂದು ವೃತ್ತಿಸಹಜ ವರ್ಗಾವಣೆ ಎಂದು ಹೇಳಲಾಗಿತ್ತು. ಪಿಎಸ್ಐ ವರ್ಗಾವಣೆಯನ್ನು ಕೆಲವು ಸಾರ್ವಜನಿಕರೂ ವಿರೋಧಿಸಿ, ತಿಮ್ಮೆಶ್ ಅವರ ಪರವಾಗಿ ನಿಂತಿದ್ದರು. ಈ ಪ್ರಕರಣ ರಾಜಕೀಯ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದ ಸಭಾಭವನದಲ್ಲಿ ಹೆಗ್ಗದ್ದೆ ಪ್ರಕಾಶನದ ೫ನೇ ಕೃತಿ, ಕವಿ ಶಂಕರ್ ಶೆಟ್ಟಿ ಕೊತ್ತಾಡಿಯವರು ಬರೆದ ’ಪದಕೊಂಡಿ’ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಆಧ್ಯಾತ್ಮ ಚಿಂತಕರು ಶ್ರೀ ವಿಶ್ವನಾಥ ಗುರೂಜಿ ವಹಿಸಿದ್ದರು. ಸಿನಿ ಸಾಹಿತಿ ಡಾ| ವಿ. ನಾಗೇಂದ್ರ ಪ್ರಸಾದ್ ಕೃತಿ ಬಿಡುಗಡೆಗೊಳಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕವಿ ಇರುತ್ತಾನೆ, ಹಲವರು ಪುಸ್ತಕದಲ್ಲಿ ಬರೆದರೆ, ಇನ್ನೂ ಹಲವರು ಮುಖ ಪುಸ್ತಕದಲ್ಲಿ ಬರೆಯುತ್ತಾರೆ. ಮೊದಲು ಪುಟದಲ್ಲಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ, ’ನಿನ್ನ ಅಂಗಿಯ ಬೆವರಿನಲ್ಲಿ ನಮ್ಮ ಅನ್ನ ಅಡಗಿದೆ’ ಎಂಬ ಉತ್ತಮ ಸಂದೇಶ ಭರಿತ ಸಂಕಲನದಲ್ಲಿ ಪ್ರೀತಿ, ನೋವು, ಹಾರೈಕೆ ಎಲ್ಲವೂ ಇದೆ, ಈ ರೀತಿಯ ಚುಟುಕುಗಳು ಇನ್ನೂ ಬರಲಿ. ಶಂಕರ್ ಶೆಟ್ಟಿಯವರ ಈ ಕೊಡುಗೆ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು. ಸಭೆಯ ಮಧ್ಯೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ ಮಾಡಿದ ಸಾಹಿತಿ, ಪತ್ರಕರ್ತ ಜೋಗಿ ಮಾತನಾಡಿ, ಕವಿಯು ತನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪತಂಜಲಿ ಚಿಕಿತ್ಸಾಲಯಕ್ಕೆ ಆರಂಭಿಸಲು ನೊಂದಾವಣಿಗಾಗಿ ಅರ್ಜಿ ಕುಂದಾಪುರದ ಮಹಿಳೆಯೊಬ್ಬರು 7.75ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಕೋಟೇಶ್ವರದ ಪ್ರಶಾಂತಿ ನಿಕೇತನದ ನಿವಾಸಿ ಅನುರಾಧ ಹೊಳ್ಳ (39) ವಂಚನೆಗೊಳಗಾದ ಮಹಿಳೆ. ಅನುರಾಧ ಅವರು ಪತಂಜಲಿ ಚಿಕಿತ್ಸಾಲಯ ಉದ್ಯಮ ಆರಂಭಿಸಲು ಆಗಸ್ಟ್ 9 ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇದಾದ ಎರಡು ದಿನಗಳ ನಂತರ ಅವರಿಗೊಂದು ಕರೆ ಬಂದಿದ್ದು, ಆ ಕರೆಯಲ್ಲಿ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಮುಂತಾದ ಪ್ರಮುಖ ದಾಖಲೆಗಳನ್ನು ಹಾಗೂ ಭಾವಚಿತ್ರದ ಪ್ರತಿಯನ್ನು ವಾಟ್ಸಪ್ ಮುಖಾಂತರ ಕಳುಹಿಸಲು ತಿಳಿಸಲಾಯಿತು. ನೊಂದಣಿಗಾಗಿ 50,000 ರೂ. ಹಣವನ್ನು ಪಾವತಿಸುವಂತೆ ತಿಳಿಸಲಾಯಿತು. ಅಗಸ್ಟ್ 23ರಂದು ಅನುರಾಧ ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಾವತಿಸಿದ್ದಾರೆ. ಸೆಪ್ಟೆಂಬರ್ 1 ರಂದು ಪುನಃ ಎರಡು ಲಕ್ಷದ ಮೂವತ್ತು ಸಾವಿರ ಹಣವನ್ನು ಕಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಇಷ್ಟೇ ಅಲ್ಲದೇ ಆಯುರ್ವೇದ ಉತ್ಪನ್ನಗಳನ್ನು ಖರೀದಿಸಲು 2.5 ಲಕ್ಷ ಹಣವನ್ನು ವಂಚಕರು ಕೇಳಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪಿತ ಬಂದೂರು ಹೊಸ ಬಸ್ ನಿಲ್ದಾಣದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ರೂಪುರೇಷಗಳನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ರೈತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲವು ಮಾರ್ಪಾಡುಗಳ ಮೂಲಕ ಸಾರ್ವಜನಿಕರಿಗೆ ತಕ್ಕಂತೆ ಬಸ್ ನಿಲ್ದಾಣ ರೂಪಿಸಲಾಗುವುದು. ತಾಲೂಕು ಕೇಂದ್ರವಾದ ಕಾರಣ ಹಾಗೂ ಗ್ರಾಮೀಣ ಭಾಗಗಳು ಹೆಚ್ಚಿರುವುದರಿಂದ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದ ಅವರು, ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಸೋರುವಿಕೆಯನ್ನು ತಡೆಗಟ್ಟಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದರು. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ವಿಭಾಗೀಯ ಸಂಚಲನ ಅಧಿಕಾರಿ ಜಯಶಾಂತ ಕುಮಾರ್, ವಿಭಾಗೀಯ ತಾಂತ್ರಿಕ ಶಿಲ್ಪಿ ವಿಲ್ಸ್ನ್ ಲೋಬೋ, ಇಂಜಿನೀಯರ್ ರಾಜಶೇಖರ್ ಗುಡಿಗಾರ್, ಸಿವಿಲ್ ಇಂಜಿನೀಯರ್ ಜಗದೀಶ್ಚಂದ್ರ, ಮುಖಂಡರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಧ್ಯಾತ್ಮಿಕತೆಯಿಂದ ಜೀವನದಲ್ಲಿ ಮಾನಸಿಕ ನೆಮ್ಮದಿ, ಭಗವಂತನ ಅನುಗ್ರಹ ದೊರೆತು ಜೀವನ ಪಾವನವಾಗುತ್ತದೆ. ಭಕ್ತಿ, ಶ್ರದ್ಧೆಯಿಂದ ಧಾರ್ಮಿಕ ಆಚರಣೆಗಳನ್ನು ಆಚರಿಸಿದರೆ ದೇವರು ನಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಗುರುಪ್ರಸಾದ ಭಟ್ ಕೊರಾಡಿ ಹೇಳಿದರು. ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದೂರು ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪಡುವರಿ ಎ ಮತ್ತು ಬಿ ಒಕ್ಕೂಟ ಇದರ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದೇವರ ಅನುಗ್ರಹ ಮತ್ತು ಪ್ರಾಮಾಣಿಕ ಪ್ರಯತ್ನ ಎರಡೂ ಇರಬೇಕು. ಪರಮಾತ್ಮನ ಕೃಪಾಶೀರ್ವಾದ ದೊರೆಯಬೇಕಾದರೆ ದೇವರ ಉಪಾಸನೆ, ಕರ್ತವ್ಯ ಹಾಗೂ ಧರ್ಮವನ್ನು ಸದಾ ಮಾಡುತ್ತಿರಬೇಕು. ನಾವು ಮಾಡುವ ಒಳ್ಳೆಯ ಕಾರ್ಯಗಳು ಭಗವಂತನಿಗೆ ಸದಾ ಪ್ರೀತಿದಾಯಕವಾಗಿರುತ್ತದೆ. ಧರ್ಮದ ದಾರಿಯಲ್ಲಿ ಬದುಕಿದಾಗ ಸ್ವರ್ಗ ಪ್ರಾಪ್ತಿಯಾಗುತ್ತದೆ. ದೇವರ ಬಗೆಗಿನ ಶಕ್ತಿ ಆಂತರಿಕ ಶಾಂತಿ…
ಯಜಾಸ್ ದುದ್ದಿಯಂಡ | ಕುಂದಾಪ್ರ ಡಾಟ್ ಕಾಂ ಆಳ್ವಾಸ್ ನುಡಿಸಿರಿ ಎಂದರೆ ಸಂಭ್ರಮ, ಸಡಗರ ಅದೊಂದು ಕನ್ನಡ ನಾಡುನುಡಿ ಸಂಸ್ಕೃತಿಯ ವೈಭವದ ಹಬ್ಬ. ವಿದ್ಯಾರ್ಥಿ ಶಕ್ತಿ, ಜಾನಪದದ ತಾಕತ್ತು ಮತ್ತು ಕೃಷಿಯ ಸಮೃದ್ಧಿಯ ಕನಸು ಮೇಳೈಸಿರುವ ಈ ಹಬ್ಬ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ನುಡಿಹಬ್ಬದ ಪ್ರಮುಖ ಆಕರ್ಷಣೆ ಎಂದರೆ ವಿದ್ಯುತ್ ದೀಪ ಅಲಂಕಾರ.ಈ ಕನ್ನಡ ನಾಡುನುಡಿಯ ಹಬ್ಬಕ್ಕೆ ಆಳ್ವಾಸ್ ಕಾಲೇಜಿನ ಅವರಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಕಾಲೇಜಿನ ಪ್ರತಿ ಕಟ್ಟಡದ ಗೋಡೆಗಳು ಝಗಮಗಿಸುವ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಈ ಬಣ್ಣದ ದೀಪಗಳು ನುಡಿಸಿರಿಯ ಮೆರಗನ್ನು ಮತಷ್ಟು ಹೆಚ್ಚಿಸಿವೆ. ನಾನಾ ಬಗೆಯ ಬೆಳಕನ್ನು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರಲ್ಲಿ ಹಬ್ಬದ ಸಡಗರವನ್ನು ಹುಟ್ಟಿಸಿವೆ. ಇಡೀ ಆಳ್ವಾಸ್ ಆವರಣ ಕಣ್ಣು ಕೋರೈಸುವ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಜನರನ್ನು ಆಕರ್ಷಿಸುತ್ತಿದೆ. ಕಣ್ಣು ಹಾಯಿಸಿದಷ್ಟು ಝಗಮಗಿಸುವ ದೀಪಗಳಿಂದ ಹೂಸ ಬೆಳಕಿನ ಲೋಕದಂತೆ ಅಲಂಕಾರಗೊಂಡಿದೆ. ಲಕ್ಷಾಂತರ ವಿವಿಧ ಬಣ್ಣದ ಸಣ್ಣ ಬಲ್ಬ್, ಟ್ಯೂಬ್…
