ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತ್ರಾಸಿ ಕಡಲ ತೀರದ ಬಳಿ ಇಂದು ಸಂಜೆ ಬಸ್ಸುಗಳೆರಡು ಮುಖಾಮುಖಿ ಡಿಕ್ಕಿಯಾಗಿದ್ದು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸುಗಳ ಮುಂಭಾಗ ಸಂಪೂರ್ಣ ನಜ್ಜುಗುಜಾಗಿದ್ದು, ಗಾಯಗೊಂಡ ಪ್ರಯಾಣಿಕರನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 7:30ರ ವೇಳೆ ಸಾಗರದಿಂದ ಭಟ್ಕಳದ ಮಾರ್ಗವಾಗಿ ಕುಂದಾಪುರಕ್ಕೆ ಬರುತ್ತಿದ್ದ ಶ್ರೀ ದುರ್ಗಾಂಬಾ ಬಸ್ಸು ಹಾಗೂ ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಗಣೇಶ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಘಟನೆಯ ತನಿಕೆ ನಡೆಸುತ್ತಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.26 ಬುಧವಾರ ರಾತ್ರಿ 10 ಗಂಟೆಗೆ ಶ್ರೀ ಸಾಲಿಗ್ರಾಮ ಮೇಳದ ದ್ರುವ ಸಾರಿಕೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಥಾ ಸಾರಾಂಶ: * ರಾಣಿ ಪ್ರಭಾಮಣಿಯ ನ್ರತ್ಯಸೇವೆ ವೇಳೆ ಏನಾಯ್ತು ಗೊತ್ತೆ…? * ರಂಗದಲ್ಲಿ ಬಂಡೆಕಾಳಿದೇವಿ ಧರೆಗಿಳಿಯುವ ಅಪೂರ್ವ ಸನ್ನಿವೇಶ ಯಾಕೆ ಗೊತ್ತೆ…? * ಸಂಬಂಧಗಳನ್ನೆಧಿಕ್ಕರಿಸುವ ಖಳನಾಯಕ ವೀರವಲ್ಲಭನ ಕ್ರೌರ್ಯಕ್ಕೆ ಶಾಸ್ತಿಯಾಯಿತೆ…? * ದೇವರನ್ನು ದುರಂಕಾರದಿಂದ ದಿಕ್ಕರಿಸುವ ಸಾರಿಕೆಯ ಅಂತರಾಳ ಏನು…? * ಜೊಲ್ಲುಮಾಣಿ ಹಾಗೂ ಸುಬ್ಬಯ್ಯ ಭಟ್ಟರ ರಾತ್ರಿಯುದ್ದಕ್ಕು ಅಮೋಘ ಹಾಸ್ಯ ರಸದೌತಣ ಸವಿಯಬೇಕು…? * ನಿಷ್ಠಾವಂತ ಜಯಕೀರ್ತಿಯ ಸ್ವಾಮಿ ನಿಷ್ಠೆಯ ಪರಿಣಾಮ ಏನಾಯ್ತು ಗೊತ್ತೆ…? * ಅಲೆಮಾರಿ ಪ್ರೇತಾತ್ಮದ ನೋವೇನು ಗೊತ್ತೆ…? * ಹೊನ್ನಮ್ಮ ಪ್ರೇತಾತ್ಮಕ್ಕೆ ತೋರಿದ ಮಾರ್ಗ ಯಾವುದು…? * ದ್ರುವನಿಗೆ ತಂದೆ ಹಾಗೂ ಸತ್ಯದ ನಡುವಿನ ತೊಳಲಾಟಕ್ಕೆ ಉತ್ತರ ದೊರೆಯಿತು…? * ನಾಗಲಾಂಬೆಯ ಮಿಂಚಿನ ಸಂಚಾರಕ್ಕೆ ಕಾರಣ ಏನು…? * ಶಂಖದತ್ತನ ಕುತಂತ್ರಕ್ಕೆ ಫಲ ಸಿಗಬಹುದೇ…? *…
ಕುಂದಾಪ್ರ ಡಾಟ್ ಕಾಂ ಸುದ್ದಿ ಕಳೆದ ಹಲವಾರು ವರ್ಷಗಳಿಂದ ಕರಾವಳಿಯ ಜನರಿಗೆ ಕಲೆಯ ಸವಿಯನ್ನು ಬಡಿಸುತ್ತಿರುವ ರಟ್ಟೇಶ್ವರ ಕಲಾ ವೇದಿಕೆ ರಾಜ್ಯದ ರಾಜಧಾನಿಯಲ್ಲೂ ಕಲೆಯ ಕಲರವವನ್ನು ಪಸರಿಸುತ್ತಿದೆ. ಅಕ್ಟೋಬರ್ 13ನೇ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕೇತ್ರದಲ್ಲಿ ರಾತ್ರಿ 9:30 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮನೋರಂಜನೆಯ ಮಹಾಪೂರ ಹರಿಸಲು ’ಆಕರ್ಷಣೆ-2018’ ಎಂಬ ವೈವಿಧ್ಯಮಯ ಸಾಂಸ್ಕೃತಿಕಕಾರ್ಯಕ್ರಮದೊಂದಿಗೆ ಸಜ್ಜಾಗಿ ನಿಂತಿದೆ. ಕರಾವಳಿಯ ಕೋಗಿಲೆಗಳಿಂದ ಸಂಗೀತರಸಮಂಜರಿ (ಭಾವಯಾನ), ವಿವಿಧ ಟಿ.ವಿ. ಚಾನೆಲ್ಗಳಲ್ಲಿ ಹಾಸ್ಯ ಕಚಗುಳಿಯಿಡುತ್ತಿರುವ ಕರಾವಳಿಯ ಹಾಸ್ಯಕಲಾವಿದರಿಂದ ನಗೆಯ ಮಹಾಪೂರ ಹಾಗೂ ಕಾಮಿಡಿ ಸ್ಕಿಟ್ಗಳು (ಹಾಸ್ಯಯಾನ), ರಾಜ್ಯಮಟ್ಟದ ಟಿ.ವಿ. ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಕರಾವಳಿಯ ಪುಟಾಣಿಗಳಿಂದ ನೃತ್ಯ (ನೃತ್ಯಯಾನ) ಹಾಗೂ ಇತರ ಮನೋರಂಜನಾ ಕಾರ್ಯಕ್ರಮಗಳು, ಯಕ್ಷದಿಗ್ಗಜರಿಂದಯಕ್ಷಗಾನ (ಯಕ್ಷಯಾನ) ನಡೆಯಲಿದೆ.ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿತಾರಾ ಮೆರಗು ನೀಡಲು ಹಲವಾರು ಸೆಲೆಬ್ರಿಟಿಗಳು ಸೇರಿಕೊಳ್ಳಲಿದ್ದಾರೆ. ರಟ್ಟೇಶ್ವರಕಲಾವೇದಿಕೆಯುತನ್ನ ಸದಸ್ಯರ ಮುಖೇನ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ.ಇದೇ ಮೊದಲ ಬಾರಿಗೆ ಕರಾವಳಿಯ ಖ್ಯಾತಕಲಾವಿದರನ್ನುಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಬೆಂಗಳೂರಿಗರಿಗೆ ಮನೋರಂಜನೆ ನೀಡಲು ಸಿದ್ದವಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾಜರಾಜೇಶ್ವರ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬೈಂದೂರು ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ಜರುಗಿತು. ಸಭೆಯನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವುದು ಜನಸಂಪರ್ಕ ಸಭೆಯ ಉದ್ದೇಶ. ಆಡಳಿತದಿಂದ ಸಿಗಬೇಕಾದ ವೈಯಕ್ತಿಕ ಸೇವೆಯ ಜತೆಗೆ ಸಾರ್ವಜನಿಕ ಸಮಸ್ಯೆಗಳ ಕುರಿತೂ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. 94ಸಿ ನಿಯಮದನ್ವಯ ಅರ್ಜಿ ಸಲ್ಲಿಸಿದ ಹಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಮರಳಿನ ಅಲಭ್ಯತೆಯ ಕಾರಣ ವೈಯಕ್ತಿಕ ಮತ್ತು ಸಾರ್ವಜನಿಕ ನಿರ್ಮಾಣ ಕೆಲಸ ಸ್ಥಗಿತವಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಅರ್ಜಿ ಸಲ್ಲಿಸಿದವರು ಶಾಲೆಗೆ ಹೋಗಿರದಿದ್ದರೆ ವಯಸ್ಸಿನ ಪ್ರಮಾಣಪತ್ರ ಪಡೆಯುವುದು ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ’ಹಳೆಯ’ ಎಂಬ ಜಾತಿಯವರಿಗೆ ಹಿಂದುಳಿದ ವರ್ಗ ದೃಢೀಕರಣ ಸಿಗುತ್ತಿಲ್ಲ. ಈ ಸಮಸ್ಯೆಗಳಿಗೆ ಜಿಲ್ಲಾಡಳಿತ ಪರಿಹಾರ ಒದಗಿಸಬೇಕು ಎಂದರು. ವೈಯಕ್ತಿಕ ಸಮಸ್ಯೆ ಇರುವವರಿಗೆ ವೇದಿಕೆಯ ಮೇಲೆ ಹೋಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮುಂದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿ. ಇದರ ಉತ್ಸವ ಸಮಿತಿ ಅಧ್ಯಕ್ಷರಾಗಿ ಪ್ರದೀಪ ಶೆಟ್ಟಿಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಗಳಾಗಿ ಪ್ರಭಾಕರ ಮೊಗವೀರ, ದೇವರಾಜ್ ಆಚಾರ್ಯ, ಉಪಾಧ್ಯಕ್ಷರಾಗಿ ಮಂಜುನಾಥ್ ಚಂದನ್, ನಾಗೇಂದ್ರ ಶೆಟ್ಟಿ, ಸೋಮಶೇಖರ ಆಚಾರ್ಯ, ದಯಾನಂದ ಚಂದನ್, ಜೊತೆ ಕಾರ್ಯದರ್ಶಿಗಳಾಗಿ ಪ್ರದೀಪ್ ಆಚಾರ್ಯ, ಗೋವಿಂದರಾಜ್ ಆಚಾರ್ಯ, ಮಂಜುನಾಥ ಪೂಜಾರಿ ಹಾಡಿಮನೆ, ಸುಬ್ರಹ್ಮಣ್ಯ ಆಚಾರ್ಯ, ಅಕ್ಷಯ್ ಶೆಟ್ಟಿ, ಗುರುರಾಜ್ ಆಚಾರ್ಯ, ಸಂತೋಷ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಾನಂದ ಚಂದನ್, ಮಂಜುನಾಥ್ ಪೂಜಾರಿ ಹಕ್ಲುಮನೆ, ನಟರಾಜ್ ಆಚಾರ್ಯ, ನಾಗರಾಜ್ ಶೆಟ್ಟಿ, ಲಕ್ಷ್ಮಣ್ಚಂದನ್, ಗುರುಪ್ರಸಾದ್ ಆಚಾರ್ಯ, ಪ್ರಮೋದ್ ಆಚಾರ್ಯ, ಗೋಪಾಲ್ ಹಾಡಿಮನೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರವೀಣ್ ಟಿ. ಆಚಾರ್ಯ, ವಿಕ್ರಮ್, ಸಚಿನ್ ಆಚಾರ್ಯ, ಗಣೇಶ್ ಚಂದನ್, ಸಚಿನ್ ಬಿ., ಹರ್ಷಿತ್ ಆಚಾರ್ಯ, ನಿತೀಶ್ ಶೆಟ್ಟಿ, ವಿಶ್ವನಾಥ, ಪ್ರಸನ್ನ ಶೆಟ್ಟಿ, ಹರ್ಷೇಂದ್ರ ಆಚಾರ್ಯ, ನಿತೀಶ್ ಶೆಟ್ಟಿ, ವಿಶ್ವನಾಥ, ಪ್ರಸನ್ನ ಶೆಟ್ಟಿ, ಹರ್ಷೆಂದ್ರ ಆಚಾರ್ಯ, ದಯಾನಂದ ಹೇರಾಮನೆ, ಅಂಜನ್ಕುಮಾರ್, ಅಭಿಷೇಕ್, ರಾಘವೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು, ಕೋಡಿ. ಕುಂದಾಪುರ ಇದರ ಸಾಂಸ್ಕೃತಿಕ ಘಟಕ ’ಕಡಲಸಿರಿ’ ವತಿಯಿಂದ ಕುಮಾರವ್ಯಾಸ ಕಾವ್ಯದ ಗಮಕಗಾಯನ ನೆರವೇರಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತರಾದ ಕರುಣಾಕರ ಆಚಾರ್ಯ ಕೋಟೇಶ್ಯರ ಇವರ ಗಾಯನಕ್ಕೆ ಕಡಲಸಿರಿ ಸಂಘಟಕ ಹಾಗೂ ಕನ್ನಡ ಉಪನ್ಯಾಸಕರಾಗಿರುವ ಸಂದೀಪ ಕುಮಾರ ಶೆಟ್ಟಿ ಯವರ ಅರ್ಥಗಾರಿಕೆ ಮೆರುಗು ನೀಡಿತು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಮೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡಲಸಿರಿ ಘಟಕದ ವಿದ್ಯಾರ್ಥಿನಿ ಕಾರ್ಯದರ್ಶಿ ಸಂಪ್ರೀತ ಭಾಗವತರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿ ಭವ್ಯ ಸ್ವಾಗತಿಸಿದರು ಅಷ್ಪಾಕ್ ವಂದಿಸಿದರು. ವಿದ್ಯಾರ್ಥಿನಿ ಕವನ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಸಂಗೀತ ಅವಿನಾಶಿ ಪ್ರತಿಷ್ಠಾನದ ಆಶ್ರಯದಲ್ಲಿ ಕೋಟೇಶ್ವರ ಅಂಕದಕಟ್ಟೆಯ ಚಂದ್ರಮೋಹನ ಧನ್ಯರ ಮನೆ ’ಸಂಸ್ಥಾನಂ’ನಲ್ಲಿ ಸಂಗೀತ ಗುರುಗಳಾದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ದಂಪತಿಯ ಶಿಷ್ಯವೃಂದದೊಂದಿಗೆ ಸೆ.೧೫ರಂದು ನಡೆಸಿದ ಸಂಗೀತ ಕಲಿಕೆ ಕಾರ್ಯಾಗಾರ ನಡೆಯಿತು. ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್ ಬಾಲಚಂದ್ರ ನಾಕೋಡ ಮಾತನಾಡಿ ಸಂಗೀತ ಕಲಿಕೆ ಅನ್ಯ ವಿದ್ಯೆಯ ಕಲಿಕೆಯಂತಲ್ಲ. ಅದರಲ್ಲಿ ಪುಸ್ತಕದ ಓದು, ಅಧ್ಯಯನಕ್ಕೆ ಆದ್ಯತೆ ಇಲ್ಲ. ಬದಲಾಗಿ ಗುರುವಿನ ಮಾರ್ಗದರ್ಶನದಲ್ಲಿ ಗಮನ ಕೇಂದ್ರೀಕರಿಸಿ ನಡೆಸುವ ಮನನ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಅದರ ಮೇಲೆ ಹಿಡಿತ ಸಾಧಿಸಬಹುದು ಎಂದು ಹೇಳಿದರು. ಸಂಗೀತ ಅಭ್ಯಾಸದ ವಿಧಾನವನ್ನು ವಿವರಿಸಿದ ಅವರು ರಾಗದ ಆರೋಹ, ಅವರೋಹದ ವೇಳೆ ಗಮನ ಕೇಂದ್ರೀಕರಣದ ಅಗತ್ಯವನ್ನು ತಿಳಿಸಿದರು. ಸ್ವರಶುದ್ಧಿಯ ಮಹತ್ವವನ್ನು ಮನದಟ್ಟು ಮಾಡಿದರು. ಹಿಂದುಸ್ಥಾನಿ ಸಂಗೀತದಲ್ಲಿ ದಿನದ ಬೇರೆಬೇರೆ ಪ್ರಹರಗಳಲ್ಲಿ ವ್ಯಕ್ತವಾಗುವ ಪ್ರಕೃತಿಯ ಸ್ಥಿತಿಗತಿಗೆ ಹೊಂದಿಕೆಯಾಗುವಂತೆ ಹಾಡಬೇಕಾದ ರಾಗಗಳನ್ನು ನಿಗದಿಗೊಳಿಸಲಾಗಿದೆ. ಅವುಗಳನ್ನು ಉಲ್ಲಂಘಿಸಿದರೆ ರಸಾಭಾಸ ಆಗುವುದರ ಜತೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಥೆಗಾರ ಹಾಗೂ ಓದುಗ ಮುಖಾಮುಖಿಯಾಗಿ ಸಂವಾದಿಸಿದರೆ ಪ್ರಜ್ಞಾಪೂರ್ವಕ ಹಾಗೂ ಕ್ರೀಯಾಶೀಲವಗಿ ಬೆಳೆಯಲು ಸಾಧ್ಯವಿದೆ. ಕಥಾ ಓದು ಅಂತಹದ್ದೊಂದು ಅವಕಾಶ ಕಲ್ಪಿಸುತ್ತದೆ ಎಂದು ಲೇಖಕ, ಅಂಕಣಕಾರ ಸತೀಶ ಚಪ್ಪರಿಕೆ ಹೇಳಿದರು. ಸಮುದಾಯ ಕುಂದಾಪುರ, ಕನ್ನಡ ಸಾಹಿತ್ಯ ಪರಿಷತ್ತಿನ ಬೈಂದೂರು ತಾಲ್ಲೂಕು ಘಟಕ, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್ ಮತ್ತಿತರ ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಖಂಬದಕೋಣೆಯಲ್ಲಿ ನಡೆದ ತಿಂಗಳ ಕಥಾ ಓದು ಕಾರ್ಯಕ್ರಮದಲ್ಲಿ ತಮ್ಮ ಮುಂಬರುವ ಕಥಾಸಂಕಲನ ಹೈಡ್ಪಾರ್ಕ್ನ ’ಗರ್ಭ’ ಕತೆ ಓದುವ ಮೊದಲು ಮಾತನಾಡಿದರು. ಇದೇ ಪರಿಸರದಲ್ಲಿ ಹುಟ್ಟಿ, ಬಾಲ್ಯ ಕಳೆದು, ಆರಂಭಿಕ ಶಿಕ್ಷಣ ಪಡೆದ ತಮಗೆ ಇದೇ ಪರಿಸರದ ಹಿನ್ನೆಲೆಯಲ್ಲಿ ರಚಿಸಿದ ಕತೆ ಓದುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಉದಯ ಶೆಟ್ಟಿ, ಎಸ್. ಜನಾರ್ದನ, ಎಂ. ಗೋವಿಂದ ಕತೆಯ ಕುರಿತು ತಮ್ಮ ಅನ್ನಿಸಿಕೆ ವ್ಯಕ್ತಪಡಿಸಿ, ಕತೆಗಾರರೊಂದಿಗೆ ಸಂವಾದ ನಡೆಸಿದರು. ಬೈಂದೂರು ವಲಯ ಶಿಕ್ಷಣ ಸಂಯೋಜಕ ಅಬ್ದುಲ್ ರವೂಫ್ ಚದುರಂಗರ ’ನಾಲ್ಕು ಮೊಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರಿನ ಕುಸುಮಾ ಫೌಂಡೇಶನ್ ಪ್ರತಿವರ್ಷ ನೀಡುವ ‘ಕುಸುಮಶ್ರೀ’ ಪ್ರಶಸ್ತಿಗೆ ಈ ಬಾರಿ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಆಯ್ಕೆಮಾಡಲಾಗಿದೆ. ಡಿಸೆಂಬರ್ 22, 23ರಂದು ನಡೆಯುವ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೌಂಡೇಶನ್ ಸಂಸ್ಥಾಪಕ ನಳಿನಕುಮಾರ ಶೆಟ್ಟಿ ಭಾನುವಾರ ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. ಈ ಬಾರಿ ಕುಸುಮಾಂಜಲಿ ಕಾರ್ಯಕ್ರಮವನ್ನು ಎರಡು ದಿನ ನಡೆಸಲಾಗುವುದು. ಎರಡೂ ದಿನ ಬೆಳಿಗ್ಗೆ ೧೦ರಿಂದ ರಾತ್ರಿ ೧೦ರ ವರಗೆ ಅವಿರತವಾಗಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಗಾಯನ, ಸಂಗೀತ ಸಂಧ್ಯಾ, ನಾಟ್ಯಾಂಜಲಿ ಪ್ರಸ್ತುತಗೊಳ್ಳುವುವು. ಖ್ಯಾತ ಗಾಯಕಿ ಅರ್ಚನಾ ಉಡುಪ, ಪ್ರಸಿದ್ಧ ಹಿನ್ನೆಲೆ ಗಾಯಕ ಅಜಯ ವಾರಿಯರ್, ಈ ವರ್ಷದ ಗಾನಕುಸುಮ ಪ್ರಶಸ್ತಿ ವಿಜೇತರು, ಸ್ಪರ್ಧೆಯಲ್ಲಿ ಭಾಗವಹಿಸಿದ ಕಿರಿಯ ಕಲಾವಿದರು ಗಾಯನ ಪ್ರಸ್ತುತಪಡಿಸುವರು. ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಗಾನ, ಬೆಂಗಳೂರಿನ ತಂಡದಿಂದ ಭರತನಾಟ್ಯ ಪ್ರದರ್ಶನಗೊಳ್ಳುವುದು. ಮಂಗಳೂರಿನ ಸಾಯಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಶಿರೂರು: ಜೆಸಿಐ ಶಿರೂರು ಇದರ ಸಾತ್ ಸುರ್ ಪರಿಸರ ಸ್ನೇಹಿ ಜೆಸಿಐ ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಸಮಯದ ನಿರ್ವಹಣೆ ಎಂಬ ವಿಷಯದ ಕುರಿತು ಜೆಸಿಐ ವಲಯ ಹದಿನೈದರ ಉಪಾಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಪ್ರಭು ಕರ್ವಾಲೋ ಉಪನ್ಯಾಸ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಚೆ ಬರೆದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿರೂರು ಇದರ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ವಹಿಸಿಕೊಂಡರು. ಮುಖ್ಯ ಅಥಿತಿಗಳಾಗಿ ಶ್ವೇತಾ ಪಾಂಡುರಂಗ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಪ್ರಾಂಶುಪಾಲ ರಮೇಶ ನಾಯ್ಕ ಸ್ವಾಗತಿಸಿದರು. ಕೃಷ್ಣ ಎನ್. ಪೂಜಾರಿ ವಂದಿಸಿದರು.
