ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾರಣಕಟ್ಟೆ-ಸನ್ಯಾಸಿಬೆಟ್ಟು ಸಂಪರ್ಕ ಕಿರುಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ‘ರಿವೀಟ್‌ಮೆಂಟ್’ ಕಾಮಗಾರಿ ಪೂರ್ಣಗೊಳ್ಳದೇ ಸಂಚಾರಕ್ಕೆ ತೊಡಕಾಗಿರುವುದು ನಿತ್ಯ ಪ್ರಯಾಣಿಕರ ಪಾಲಿಗೆ ಗೋಳಾಗಿದೆ. ಸುತ್ತಿ ಬಳಸಿ ಮಾರಣಕಟ್ಟೆ ಸಾಗುವ ಹಾದಿಯ ನಡುವೆ ಹರಿಯುವ ಹೊಳೆಗೆ ಮರದ ದಿಮ್ಮೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು ಆ ಮಾರ್ಗವಾಗಿ ಮಳೆಗಾಲದಲ್ಲಿ ಆ ಭಾಗದ ನಿವಾಸಿಗಳು ಸಾಗುವ ಪರಿಪಾಠ ಹೊಂದಿದ್ದರು. ಕಳೆದ ವರುಷ ಮಳೆಗಾಲದಲ್ಲಿ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರೂ. 10 ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕಿರುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಸೇತುವೆ ನಿರ್ಮಾಣವಂತೂ ಪೂರ್ಣವಾಗಿದೆ. ಆದರೆ ಅವುಗಳ ಇಕ್ಕೆಲಗಳ ರಸ್ತೆಯ ಅಂಚಿಗೆ ಮಣ್ಣು ತುಂಬಿಸಿ ರಿವೀಟ್ಮೆಂಟ್ ಕಾಮಗಾರಿ ಆರಂಭಗೊಳ್ಳದಿರುವುದು ಸಂಚಾರಕ್ಕೆ ತೊಡಕಾಗಿದೆ. ರಿಕ್ಷಾ ಸಮೇತ ದ್ವಿಚಕ್ರ ವಾಹನಗಳು ಈ ಮಾರ್ಗವಾಗಿ ಸಂಚರಿಸುವುದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ನೂರಾರು ಸಂಖ್ಯೆಯ ಕಾರ್ಯಕರ್ತರು ಮಂಗಳವಾರ ಶಾಸಕರ ನಿವಾಸ ನೆಂಪುವಿನಿಂದ ಕೊಲ್ಲೂರಿಗೆ ಪಾದಯಾತ್ರೆ ಮಾಡಿದರು. ಬೆಳಿಗ್ಗೆ ೪.೪೫ಕ್ಕೆ ಶಾಸಕರನ್ನು ಕೂಡಿಕೊಂಡು ಮಳೆಯಲ್ಲಿಯೇ ಹೊರಟ ಪಾದಯಾತ್ರೆ ಸುಮಾರು ೨೫ ಕಿಮಿ ಕ್ರಮಿಸಿ ೯.೪೫ರ ಹೊತ್ತಿಗೆ ಕೊಲ್ಲೂರು ಸ್ವಾಗತ ಗೋಪುರಕ್ಕೆ ತಲುಪಿತು. ಅಲ್ಲಿಂದ ನೇರವಾಗಿ ಸೌಪರ್ಣಿಕಾ ನದಿಯಲ್ಲಿ ತೀರ್ಥಸ್ನಾನ ಮಾಡಿದ ಯಾತ್ರಿಗಳು ದೇವಸ್ಥಾನಕ್ಕೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಈ ಮಣ್ಣಿನ ಸಂಸ್ಕಾರದಿಂದ ರಾಷ್ಟ್ರೀಯತೆ ಎದ್ದು ನಿಂತಿದೆ. ಮುಂದಿನ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಜನಾದೇಶ ದೊರೆತು ಇನ್ನೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂಬ ಸಂಕಲ್ವ ಹಾಗೂ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ಪುನಃ ಸ್ಥಾಪನೆಯಾಗಬೇಕೆಂಬ ಮೂಲ ಉದ್ದೇಶದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಭಾನ್ವಿತ ಕಲಾವಿದ, ನಿರ್ದೇಶಕ ಬೈಂದೂರಿನ ಯೊಗೀಶ್ ಬಂಕೇಶ್ವರ್ ಅವರು ಪ್ರಸಕ್ತ ಸಾಲಿನ ಸಿಜಿಕೆ ರಂಗ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ ಸಿಜಿಕೆ ಬೀದಿರಂಗದ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಿದ್ದು, ಜೂನ್ 27ರಂದು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಳೆದ 26 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯೋಗೀಶ್ ಅವರು ಪುಷ್ಪರಾಣಿ, ಬದುಕಿಲ್ಲದವನ ಭಾವಗೀತೆ, ಮುದ್ದಣ್ಣನ ಪ್ರಮೋಶನ್ ಪ್ರಸಂಗ, ನಮ್ಮನಿಮ್ಮೊಳಗೊಬ್ಬ ಸೇರಿದಂತೆ ಸುಮಾರು 12 ನಾಟಕಗಳ ನಿರ್ದೇಶನ ಮಾಡಿದ್ದಾರೆ. 3 ಬಾರಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ. ದೃಷ್ಟಿ, ಮರಣ ಮೃದಂಗ, ಪೊಲೀಸ್, ಕಾವ್ಯರಂಗ, ಕಥಾಸಂಗಮ ಸೇರಿದಂತೆ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. 13 ಧಾರಾವಾಹಿ, 6 ಕನ್ನಡ ಸಿನಿಮಾದಲ್ಲಿ ಪೋಷಕ ಹಾಗೂ ಒಂದು ತುಳು ಕಲಾತ್ಮಕ ಚಲನಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಹಂಬಲ ಥಿಯೇಟರ್‌ನ ಮೂಲಕ ಕೋಮು ಸಾಮರಸ್ಯದ ಆಶಯವನ್ನಿಟ್ಟು ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹುತಾತ್ಮ…
ಕುಂದಾಪುರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಜೇಸಿಸ್ ನ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಕುಂದಾಪುರ ಹಾಗೂ ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ವಲಯದ ರಕ್ತದಾನ ವಿಭಾಗದ ವಲಯ ಸಂಯೋಜಕರ ನೇತೃತ್ವದಲ್ಲಿ ಶಿರೂರುನಿಂದ ಪ್ರಾರಂಭವಾಗಿ ಮಂಗಳೂರಿನ ತನಕ ನಡೆದ ಬೈಕ್ ಜಾಥಾವನ್ನು ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಲಯಾಧ್ಯಕ್ಷ ಜೆ.ಎಫ್.ಪಿ. ರಾಕೇಶ್ ಕುಂಜೂರು ವಲಯ ರಕ್ತದಾನ ವಿಭಾಗ ಸಂಯೋಜಕ ಜೇಸಿ ಸುನೀಲ್ ಡಿ ಬಂಗೇರಾ ಇವರನ್ನು ಶಾಲು ಹೊದಿಸುವುದರ ಮುಖಾಂತರ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಕಾರ್ಯದರ್ಶಿ ಜೇಸಿ ಚೇತನ್ ದೇವಾಡಿಗ ವಹಿಸಿದ್ದು ವಲಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶ್ರೀನಿವಾಸ್ ಐತಾಳ್ ಜೆಸಿಐ ಕಟಪಾಡಿ ಪೂರ್ವ ಅಧ್ಯಕ್ಷ ಜೇಸಿ ಮಹೇಶ್ ಅಂಚ್‌ನ್ ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿ ಅಧ್ಯಕ್ಷ ವಿಶ್ವ ಪ್ರಸನ್ನ ಗೋಡೆ ಹಾಗೂ ಜೇಸಿಐ ಕಟಪಾಡಿಯ ಸದಸ್ಯರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಹೋಲಿ ರೋಜರಿ ಚರ್ಚ್‌ನಿಂದ ಉಡುಪಿಯ ಪೆರಂಪಳ್ಳಿ ಚರ್ಚ್‌ಗೆ ವರ್ಗಾವಣೆಗೊಂಡ ಪ್ರಯುಕ್ತ ಕುಂದಾಪುರ ಸೈಂಟ್ ಮೇರಿಸ್ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಂದಾಪುರ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ನಿಕಟಪೂರ್ವ ಸಂಚಾಲಕ ಅತೀ.ವಂ.ಫಾ.ಅನಿಲ್ ಡಿ ಸೋಜಾರವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಪಾಠ ಮಾಡಿದಾಗ ವಿದ್ಯಾರ್ಥಿಗಳು ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಂತಹ ಕೆಲಸ ಕುಂದಾಪುರದ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಶಿಸ್ತಿನ ಜತೆಗೆ ಜ್ಞಾನವನ್ನು ಸಂಪಾದಿಸುತ್ತಾರೆ ಎಂದು ಹೇಳಿದರು. ಕುಂದಾಪುರ ಕುಂದಪ್ರಭಾ ಪತ್ರಿಕೆಯ ಸಂಪಾದಕ ಯು.ಎಸ್ ಶೆಣೈ ಅಭಿನಂದನಾ ಭಾಷಣ ಮಾಡಿ ಫಾ.ಅನಿಲ್ ಡಿ ಸೋಜಾ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಕುಂದಾಪುರದ ಯಾವುದೇ ಜನಪರ ಕಾರ್ಯಕ್ರಮದಲ್ಲಿ ಅವರು ಮುಂಚೂಣಿಯಲ್ಲಿರುತ್ತಿದ್ದರು. ಎಲ್ಲರ ಜತೆಗೆ ಬೆರೆಯುವ ಗುಣವನ್ನು ಹೊಂದಿರುವ ಇವರು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಉಳ್ಳವರಾಗಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಸೈಂಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆದು ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಸಹಕಾರಿ ಎಂಬ ಕುರಿತು 2004 ರಿಂದ 2006 ರವರೆಗೆ ಉಡುಪಿ ಜಿಲ್ಲೆ, ಉತ್ತರಕನ್ನಡ ಜಿಲ್ಲೆ, ಗೋವಾ ರಾಜ್ಯದಲ್ಲಿ ನಡೆಸಿದ ಪ್ರಯೋಗದ ಸತ್ಪರಿಣಾಮವಾಗಿ ಕಳೆದೊಂದು ದಶಕಗಳಿಂದ ಕಡಲ್ಕೊರೆತ ನಿಯಂತ್ರಣಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ. ಆದುದರಿಂದ ಈಗಾಗಲೇ ಪ್ರತಿನಿತ್ಯ ಸ್ತೋತ್ರ ಪಠಣ ಮಾಡುವವರು ಹಾಗೂ ಕಾರಣಾಂತರಗಳಿಂದ ನಿಲ್ಲಿಸಿದವರೂ ಪ್ರಾಕೃತಿಕ ಸಮತೋಲನಕ್ಕಾಗಿ ಪ್ರತಿನಿತ್ಯ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣವನ್ನು ಮುಂದುವರಿಸಿಕೊಂಡು ಹೋಗುವಂತೆ ಪಶ್ಚಿಮ ಕರಾವಳಿಯ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿಯ ನಿರ್ದೇಶಕರಾದ ಡಾ.ಎಸ್.ಎನ್. ಪಡಿಯಾರ್ ಕರೆ ನೀಡಿದ್ದಾರೆ. 2005 ರಲ್ಲಿ ಪಶ್ಚಿಮ ಕರಾವಳಿಯ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ ಪಠಣ ಸಮಿತಿಯು ಉಡುಪಿ ಜಿಲ್ಲೆಯಾದ್ಯಂತ ಬೃಹತ್ ಅಭಿಯಾನವನ್ನು ಸಂಘಟಿಸಿತ್ತು. ತನ್ಮೂಲಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದ ಅವಶ್ಯಕತೆಯನ್ನು ಜನಸಾಮಾನ್ಯರಿಗೆ ಮನಗಾಣಿಸಿ, ಪ್ರತಿನಿತ್ಯ ಸ್ತೋತ್ರ ಪಠಣ ಮಾಡುವಂತೆ ಪ್ರೇರೇಪಿಸಲಾಗಿತ್ತು. ಇದರ ಸತ್ಪರಿಣಾಮವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿನೂತನ ರೀತಿಯಲ್ಲಿ ಆಯೋಜಿಸಲಾಗುತ್ತಿರುವ ಕುಸುಮ ಫೌಂಡೇಷನ್‌ನ ‘ಕುಸುಮಾಂಜಲಿ-2018’ ವಾರ್ಷಿಕ ಸಾಂಸ್ಕೃತಿಕ ಉತ್ಸವವು ಈ ಭಾರಿ ಡಿಸೆಂಬರ್ 22 ಹಾಗೂ 23ರ ಶನಿವಾರ ಮತ್ತು ಭಾನುವಾರದಂದು ನಾಗೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪ್ರತಿಭಾವಂತ ಗಾಯಕರ ಅನ್ವೇಷಣೆ ಹಾಗೂ ಗಾನಕುಸುಮ 2018ರ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಗಾಯನ ಸ್ವರ್ಧೆಯನ್ನು ಆಯೋಜಿಸಲಾಗಿದೆ. ಸಂಪೂರ್ಣ ಉಚಿತವಾಗಿರುವ ಸ್ವರ್ಧೆಗೆ ಆಸಕ್ತರು ಹೆಸರು ನೊಂದಾಯಿಸಬಹುದಾಗಿದೆ. ಗಾನಕುಸುಮಾ 2018ರ ಪ್ರತಿಭಾನ್ವೇಷಣೆ ವಿವಿಧ ಹಂತಗಳಲ್ಲಿ ನಡೆಯಲಿದ್ದು, ಪ್ರಥಮ ಸುತ್ತಿನ ಆಯ್ಕೆಯನ್ನು ಜುಲೈ 8 ಹಾಗೂ 15ರಂದು ಆದಿತ್ಯವಾರ ಬೈಂದೂರು ತಾಲೂಕು ನಾಗೂರಿನ ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಸ್ಪರ್ಧಿಗಳಿಗೆ ಯಾವುದೇ ಭಾಷೆಯ ಭಾವಗೀತೆ, ಭಕ್ತಿ ಪ್ರಧಾನ ಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿವುಳ್ಳ ಕಲಾತ್ಮಕ ಚಿತ್ರಗೀತೆಗಳನ್ನು ಆಯ್ದುಕೊಳ್ಳಲು ಅವಕಾಶವಿದೆ. ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 01-01-1997 ನಂತರ ಜನಿಸಿದವರು ಮಾತ್ರ ಭಾಗವಹಿಸಬಹುದಾಗಿದೆ. ಉಚಿತ ಸ್ವರ್ಧೆಯಲ್ಲಿ ಫೈನಲ್ ತಲುಪುವ ಎಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಶಿರೂರು ಕರಾವಳಿ ಇದರ ವತಿಯಿಂದ 20ನೇ ವರ್ಷದ ಗಣೇಶೋತ್ಸವದಲ್ಲಿ ನಿರ್ಮಿಸಲು ಉದ್ದೇಶಿಸಿದ ಸಭಾಭವನದ ಮೇಲ್ಛಾವಣೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು ಬೆಳಿಗ್ಗೆ ಸಂಘದ ಸಮ್ಮುಖದಲ್ಲಿ ನಡೆಯಿತು. ಸಂಘದ ಅದ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆಯಲ್ಲಿ ಹಾಗೂ ಅರ್ಚಕ ರವೀಂದ್ರ ಅಯ್ಯಂಗಾರ್ ರವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ನಾಣು ಬಿಲ್ಲವ ಆರ‍್ಮಾರಹಿತ್ಲು, ಮಾಧವ ಬಿಲ್ಲವ ಶೆಟ್ರಹಿತ್ಲು, ಚಿಕ್ಕು ಪೂಜಾರಿ, ಚಂದ್ರ ಮೊಗೇರ್ ಕರಾವಳಿ, ರಾಮ ಟೈಲರ್, ಸಂಘದ ಗೌರವಾಧ್ಯಕ್ಷ ವಾಸು ಬಿಲ್ಲವ, ಕಾರ್ಯದರ್ಶಿ ಮಹೇಶ್ ಮೊಗೇರ್,ಉದ್ಯಮಿ ಚಿಕ್ಕಯ್ಯ ಬಿಲ್ಲವ ತೆಂಕಮನೆ, ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಬೈಂದೂರಿನ ನೂತನ ಶಾಸಕರಾಗಿ ಆಯ್ಕೆಯಾದ ಎಮ್.ಸುಕುಮಾರ ಶೆಟ್ಟಿಯವರನ್ನು ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ. ಅಧ್ಯಕ್ಷರಾದ ಭಾಸ್ಕರ್ ಖಾರ್ವಿ, ಜಯರಾಂ ದೇವಾಡಿಗ, ರಾಜ ಶೇಖರ್ , ಮಾಧವ ಖಾರ್ವಿ, ಲಕ್ಷಣ ಖಾರ್ವಿ, ರಾಘವೇಂದ್ರ ದೇವಾಡಿಗ, ಸಂತೋಷ ಖಾರ್ವಿ , ಸತೀಶ್ ಖಾರ್ವಿ, ಗಣೇಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹತ್ತಾರು ವರ್ಷಗಳಿಂದ ಸರ್ಕಾರಿ ನಿವೇಶನದಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ಕ್ಷೇತ್ರದ 170 ಕುಟುಂಬಗಳಿಗೆ ಇಲ್ಲಿನ ಶಾಸಕರ ಕಛೇರಿಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು ಇಂದು ಹಕ್ಕುಪತ್ರ ವಿತರಿಸಿದ ನಿವೇಶನಕ್ಕೆ ಮುಂದಿನ 15 ದಿನದೊಳಗೆ ಆರ್‌ಟಿಸಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೊದಲಾದ ಪಿಂಚಣೆಗಳ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲೆನಾಡು ಹಾಗೂ ಕರಾವಳಿ ಪ್ರದೇಶಗಳನ್ನೊಳಗೊಂಡಿರುವ ಈ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ, ಕಿಂಡಿಅಣೆಕಟ್ಟು ಮೊದಲಾದ ಮೂಲಸೌಕರ್ಯ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಕಳೆದ ಐದು ದಿನಗಳ ಹಿಂದೆ ನದಿಗೆ ಬಿದ್ದು ಪ್ರಾಣ ಕಳೆದುಕೊಂಡ ಬಿಜೂರು ಗ್ರಾಮದ ಅಣ್ಣಪ್ಪ ದೇವಾಡಿಗ ಕುಟುಂಬಕ್ಕೆ ಹಾಗೂ ಸಿಡಿಲು ಬಡಿದು ಮನೆ…
