ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಗವಂತನ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇತಂಹ ಅತಿ ಶ್ರೇಷ್ಠವಾದ ಈ ಬ್ರಹ್ಮಕಲಶೋತ್ಸವ ಸೇವೆ ಮಾಡಲು ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಇತಂಹ ಅವಕಾಶ ಸಿಗುವುದು ಕೆಲವು ಭಕ್ತರಿಗೆ ಮಾತ್ರ. ಅಪಾಯದಂಚಿನಲ್ಲಿದ್ದ ಧ್ವಜಮರವನ್ನು ಭಕ್ತರೆಲ್ಲರ ಏಕತೆಯಿಂದ ನೂತನವಾಗಿ ಪ್ರತಿಷ್ಠಾಪಿಸುವ ಕೆಲಸದೊಂದಿಗೆ ಒಗ್ಗಟ್ಟಿನಿಂದ ದೇವರ ಸೇವೆ ಮಾಡೋಣಾ ಎಂದು ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು. ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಸಂಜೆ ಜರುಗಿದ ದೇವಳದ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ, 68 ವರ್ಷಗಳ ನಂತರ ಈ ಒಂದು ಬ್ರಹ್ಮಕಲಶೋತ್ಸವ ಮಾಡುವ ಸೌಭಾಗ್ಯ ಸಿಕ್ಕಿರುವುದು ನಮ್ಮಲ್ಲರ ಭಾಗ್ಯ. ಈ ಸೇವೆ ಮಾಡಲು ಪ್ರತಿಯೊಬ್ಬರಿಗೂ ಭಗವಂತ ಅವಕಾಶ ನೀಡಿದ್ದಾನೆ. ಕೋವಿಡ್ ಕಾರಣಗಳಿಂದ 2 ವರ್ಷಗಳಿಂದ ಮುಂದೂಡಲ್ಪಟ್ಟ ಈ ಕಾರ್ಯಕ್ರಮ ಈ ಬಾರಿ ಅತಿ ಶ್ರದ್ಧೆ ಮತ್ತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಹಾರ ಪದ್ಧತಿ, ಅತಿಯಾದ ಮೊಬೈಲ್ ಬಳಕೆಯ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದೆ ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿಯವರು ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಮಾತನಾಡಿ ದುರ್ಬಲ ಮನಸ್ಸಿನ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಇಂತಹ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಸಾಮೂಹಿಕವಾಗಿ ವಿಚಾರಿಸುವುದಕ್ಕಿಂತ ಸಾಧ್ಯವಾದಷ್ಟು ಪ್ರತ್ಯೇಕವಾಗಿ ವಿಚಾರಣೆ ಅತಿ ಅವಶ್ಯಕ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಕಾಲೇಜಿನಲ್ಲಿ ಆಯೋಜಿಸುತ್ತಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಅನೇಕ ಸೌಲಭ್ಯಗಳ ಕುರಿತಾಗಿ ಸವಿಸ್ತಾರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ.ಪಿ.ವಿ. ಭಂಡಾರಿಯವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ವಕೀಲರಾದ ಕೆ. ರಾಜಾರಾಮ್ ಶೆಟ್ಟಿ ರಕ್ಷಕ ಶಿಕ್ಷಕ ಸಂಘದ ಸಹ ಕಾರ್ಯದರ್ಶಿಯಾದ ಲಕ್ಷ್ಮಿ ಸಿ. ನಾಯಕ್ ಉಪಸ್ಥಿತರಿದ್ದರು.ರಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.1: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ರಾಜ್ಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿರುವುದರಿಂದ ಸರ್ಕಾರದ ಆದೇಶದಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ ಉಡುಪಿ ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜನವರಿ 31 ರಿಂದ ಜಾರಿಗೆ ಬರುವಂತೆ ಫೆಬ್ರವರಿ 15 ರ ವರೆಗೆ ಈ ಕೆಳಗಿನಂತೆ ಮಾರ್ಗಸೂಚಿ/ನಿಬಂಧನೆಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಯನ್ನು ದಿನಾಂಕ:31.01.2022 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ . ಪಬ್ ಗಳು/ ಕ್ಲಬ್ ಗಳು/ಹೋಟೆಲ್ ಗಳು/ರೆಸ್ಟೋರೆಂಟ್ ಗಳು/ ಬಾರ್ ಗಳು/ಹೋಟೆಲ್ ಗಳಲ್ಲಿನ ತಿನಿಸು ಕೇಂದ್ರಗಳು ಇತ್ಯಾದಿಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ. 100% ಸಾಮರ್ಥ್ಯದೊಂದಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯ ನಿರ್ವಹಿಸತಕ್ಕದ್ದು. ಸದರಿ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು 2 ಡೋಸ್ ಗಳ ಕೋವಿಡ್ ವ್ಯಾಕ್ಸಿನೇಷನ್ ಪಡೆದಿರತಕ್ಕದ್ದು ,ಈ ಸ್ಥಳಗಳಲ್ಲಿ ವ್ಯಾಕ್ಸಿನೇಷನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.1: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಸಂಸ್ಥೆಗಳ 2 ಮತ್ತು 10 ಹೊಸ ಅಧಿಸೂಚಿತ ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಹ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ ಸಿ ಸಂಸ್ಥೆಗಳು: ಬ್ರಹ್ಮಾವರ ತಾಲೂಕು ಕೆಂಜೂರು ಶ್ರೀ ವೀರೇಶ್ವರ ದೇವಸ್ಥಾನ, ಹಾರ್ಡಳ್ಳಿ ಮಂಡಳ್ಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ಹಾಗೂ ಉಡುಪಿ ತಾಲೂಕಿನ ಹೆರ್ಗ ಅಗ್ರಹಾರ ವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನ ಮತ್ತು ಉದ್ಯಾವರ ಶ್ರೀ ಪಿತ್ರೋಡಿ ಗೋಪಾಲಕೃಷ್ಣ ದೇವಸ್ಥಾನ. ಹೊಸ ಅಧಿಸೂಚಿತ ಸಂಸ್ಥೆಗಳು: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಶ್ರೀ ಸೋಮೇಶ್ವರ ದೇವಸ್ಥಾನ, ಚಿತ್ರಪಾಡಿ ಶ್ರೀ ಪುಟ್ಟನಕಟ್ಟೆ ವಿನಾಯಕ ದೇವಸ್ಥಾನ ಹಾಗೂ ಗಿಳಿಯಾರು ಶ್ರೀ ಶಂಕರನಾರಾಯಣ ದೇವಸ್ಥಾನ, ಕುಂದಾಪುರ ತಾಲೂಕಿನ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಸ್ರೂರು ಶ್ರೀ ಆಧಿನಾಥೇಶ್ವರ ದೇವಸ್ಥಾನ ಹಾಗೂ ಜಪ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ, ವಿಧ್ಯಾರ್ಥಿಗಳಿಗೆ ನೆನಪಿನ ಶಕ್ತಿ ವೃದ್ಧಿಸುವ ಹಾಗೂ ಪರಿಣಾಮಕಾರಿ ಕಲಿಕೆ ಕುರಿತಾದ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ತಮ್ಮ ಎಡ ಹಾಗೂ ಬಲ ಭಾಗದ ಮೆದುಳನ್ನು ಸಮತೋಲನದಲ್ಲಿ ಇರಿಸಿಕೊಂಡು ನೆನಪಿನ ಶಕ್ತಿ ಹೆಚ್ಚಿಸ ಬೇಕು ಎಂಬುದನ್ನು ತಿಳಿಸಿಕೊಟ್ಟರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿ ಇವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಡ್ಲಕಟ್ಟೆ ಎಂ ಟಿ ಪಬ್ಲಿಸಿಟಿ ಅಂಡ್ ಡೆವಲಪ್ಮೆಂಟ್ ವಿಭಾಗದ ಡೀನ್ ಪ್ರೊ. ಕಿಶೋರ್ ಕುಮಾರ್ ಆರೂರ್ ಹಾಗೂ ಎಕ್ಸಲೆಂಟ್ ಕಾಲೇಜಿನ ಅನೇಕ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಹಿಂಸೆ ಎನ್ನುವ ಪದ ಹಿಂಸೆಯನ್ನೇ ನೆನಪಿಸುತ್ತೆ. ಈ ಪದಕ್ಕೆ ಪರ್ಯಾಯವಾಗಿ ಬೇರೆ ಪದಗಳು ಕನ್ನಡಕ್ಕೆ ಬೇಕು. ಈ ಕುರಿತು ಪ್ರಾಜ್ಞರು ಹುಡುಕ ಬೇಕಾಗಿದೆ. ಕರಾವಳಿ ಭಾಗದಲ್ಲಿ ರಂಗ ಚಟುವಟಿಕೆಗಳು ಹೆಚ್ಚಳವಾಗಿ ನಡೆಯುತ್ತಿರುವುದು ಸಂತಸದ ವಿಷಯ. ಕಲೆ ವ್ಯವಹಾರಿಕವಾಗಿ ಇರಬಾರದು ಎಂದು ನಾಟ್ಯ ಶಾಸ್ತ್ರದಲ್ಲಿ ಪ್ರಸ್ತಾಪವಿದೆ. ಆದರೆ ಇಂದು ಹಣ ರಂಗ ಚಟುವಟಿಕೆಗೆ ಬೇಕೇ ಬೇಕಾಗಿದೆ. ಮಾಧವಿ ನಾಟಕ ಅತೀ ಕಡಿಮೆ ಹಣ ಬಳಕೆಯಿಂದ ರಂಗ ಪ್ರಯೋಗಗೊಳ್ಳುತ್ತಿರುವುದು ಗಮನಿಸಬೇಕಾದ ಸಂಗತಿ ಎಂದು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದರು. ಅವರು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಮಕ್ಕಳ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಕೈವಲ್ಯ ಕಲಾಕೇಂದ್ರ ಪ್ರಸ್ತುತಿಯ ದ್ವಿವ್ಯಕ್ತಿ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ನಿರ್ದೇಶಕ ಶ್ರೀಪಾದ ಭಟ್ ಮಾತನಾಡಿ, ಗಾಂಧಿಯನ್ನು ಅರ್ಧ ಹೆಣ್ಣು ಅಂತ ಕರೆದರು. ಮೌನ, ಉಪವಾಸ, ಸತ್ಯಕ್ಕಾಗಿ ಮಾಡುವ ಹಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಡಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳು ಇವರು ಪ್ರಾರಂಭಿಸಿದ ” ಸ್ವಚ್ಛ ಕಡಲ ತೀರ -ಹಸಿರು ಕೋಡಿ” 2022 ರ ಅಭಿಯಾನದ ಪ್ರಥಮ ಹಂತದ ಸ್ವಚ್ಛತಾ ಕಾರ್ಯಕ್ರಮ ಕೋಡಿಯಲ್ಲಿ ಭಾನುವಾರ ಜರುಗಿತು. ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಪ್ರಾಕ್ತನ ವಿದ್ಯಾರ್ಥಿಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಸ್ವಚ್ಛ ಮನಸ್ಸುಗಳಿಂದ ನೆರೆವೇರಿಸುತ್ತಿರುವ ಈ ಸ್ವಚ್ಚತಾ ಅಭಿಯಾನ, ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಪರಿಸರದ ಸದ್ಭಳಿಕೆ ಮತ್ತು ಸಂರಕ್ಷಣೆಯ ಕುರಿತು ಕೆಲಸ ಮಾಡುವ ಪ್ರವೃತ್ತಿಯನ್ನು ಹುಟ್ಟುಹಾಕುವದೆಂಬ ನಂಬಿಕೆ ಮತ್ತು ವಿಶ್ವಾಸವನ್ನು ಬ್ಯಾರೀಸ್ ವಿದ್ಯಾ ಸಂಸ್ಥೆಗಳ ಛೇರ್ಮನ್ ಸಯ್ಯದ್ ಮಹಮದ್ ಬ್ಯಾರಿಯವರು ವ್ಯಕ್ತಪಡಿಸಿದ್ದಾರೆ. ಈ ಕಾರ್ಯದಲ್ಲಿ ನಿರಂತರವಾಗಿ ನಮಗೆ ಸಹಕಾರವನ್ನು ನೀಡುತ್ತಿರುವ ಕುಂದಾಪುರ ಪುರಸಭೆಯ ಚೀಫ್ ಆಫೀಸರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ, ಕೋಟೇಶ್ವರದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಡಿ ಸೀತಾರಾಮ ಭಜನಾ ಮಂದಿರ ಬಳಿ ಶನಿವಾರ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು, ಹ್ಯಾಚರ್ ಮೂಲಕ ರಕ್ಷಣೆ ಮಾಡಲಾಗಿದೆ. ಸೀತಾರಾಮ ಭಜನಾ ಮಂದಿರದ ಬಳಿ ಕಡಲಾಮೆ ಮೊಟ್ಟೆ ಸಿಕಿರುವುದು ಮೂರನೇ ಬಾರಿಯಾಗಿದೆ. ಮೊದಲೆರಡು ಕಡೆ ಮೊಟ್ಟೆ ಪತ್ತೆಮಾಡಿದ ಬಾಬು ಮೊಗವೀರ ಕಡಲಾಮೆ ಮೊಟ್ಟೆ ಪತ್ತೆ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಆಮೆ ಮೊಟ್ಟೆ ಸಂರಕ್ಷಣೆ ಮಾಡುವ ಎಸ್ಎಫ್ಎಲ್ ಸದಸ್ಯರಿಗೆ ಹಾಗೂ ಕ್ಷೀನ್ ಕುಂದಾಪುರ ಪ್ರೊಜೆಕ್ಟ್ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಕೋಡಿ ಅರಣ್ಯ ಇಲಾಖೆ ಫಾರೆಸ್ಟ್ ರಂಜಿತ, ಎಸ್ಎಫ್ಎಲ್ ವೆಂಕಟೇಶ್, ದಿನೇಶ್ ಸಾರಂಗ, ರಾಘು ಮೊಗವೀರ, ಭರತ್ ಬಂಗೇರ, ಸಂತೋಷ ಕೋಡಿ, ಮೊಟ್ಟೆ ದೊರತ ಸ್ಥಳದ ಸುತ್ತಾ ಬಲೆ ಕಟ್ಟಿ ಹ್ಯಾಚರ್ ನಿರ್ಮಿಸಿ ರಕ್ಷಣೆ ಮಾಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಮನಸುಗಳು ಸಂಸ್ಥೆಯಿಂದ ಹಮ್ಮಿಕೊಂಡ ‘ಸರಕಾರಿ ಶಾಲೆ ಉಳಿಸಿ ಅಭಿಯಾನ’ದ ಭಾಗವಾಗಿ ಯುವ ತಂಡವೊಂದು ಶ್ರಮದಾನದ ಮೂಲಕ ಕರ್ಕುಂಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಮಾಡಿ ಶಾಲೆಯ ಮೆರಗು ಹೆಚ್ಚಿಸಿದ್ದಾರೆ. ಜೊತೆಗೆ ಶಾಲೆಗೆ ಆಧುನಿಕ ಕಲಿಕಾ ಪರಿಕರ, ವಾಟರ್ ಫಿಲ್ಟರ್, ಫ್ಯಾನ್ ಮೊದಲಾದ ಅಗತ್ಯ ವಸ್ತುಗಳು, ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು, ಮಾಸ್ಕ್ ದೇಣಿಗೆಯಾಗಿ ನೀಡಿ ಸೇವಾ ಸಾರ್ಥಕ್ಯ ಮೆರೆದಿದ್ದಾರೆ. ವಿವಿಧೆಡೆ ನೌಕರರಾಗಿರುವ ತಂಡದ ಸದಸ್ಯರು ವೀಕೇಂಡ್ ರಜೆಯನ್ನು ಸದುಪಯೋಗಪಡಿಸಿಕೊಂಡು ಕನ್ನಡ ಶಾಲೆ ಉಳಿಸಿ ಅಭಿಯಾನ ನಡೆಸುತ್ತಿದೆ. ಅದರಂತೆ ಅದರಂತೆ ಕರ್ಕುಂಜೆ ಶಾಲೆಯ ಹಳೆ ವಿದ್ಯಾರ್ಥಿ ಗಣೇಶ್ ಕೊಡ್ಲಾಡಿ ಅವರ ಮನವಿ ಮೇರೆಗೆ ಕುಂದಾಪುರ ತಾಲೂಕಿನ ಕರ್ಕುಂಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೂಡಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬೆಂಗಳೂರಿನಿಂದ ಆಗಮಿಸಿದ 50ಕ್ಕೂ ಹೆಚ್ಚು ಮಂದಿಯ ತಂಡ ಶನಿವಾರ ಕರ್ಕುಂಜೆ ಶಾಲೆಯಲ್ಲಿ ಅಭಿಯಾನ ನಡೆಸಿತು. ಭಾನುವಾರದಂದು ಕೂಡಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜ.29: ಕರಾವಳಿ ಜಿಲ್ಲೆಗಳ ನಾನ್ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನ್ ಸಿ.ಆರ್.ಝಢ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡಿದರೆ ಜಿಲ್ಲೆಯ ಜನತೆಗೆ ಕಡಿಮೆ ದರದಲ್ಲಿ ಸಾಕಷ್ಟು ಪ್ರಮಾಣದ ಉತ್ತಮ ಗುಣಮಟ್ಟದ ಮರಳು ದೊರೆಯುವ ಜೊತೆಗೆ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಸಚಿವರ…
