ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಅಂಪಾರು ಗ್ರಾಮದ ಬಾಳ್ಕಟ್ಟು ಬಳಿ ಬುಧವಾರ ಕಾರು ಬೈಕ್ ಢಿಕ್ಕಿಯಾಗಿ ಗ್ರಾ. ಪಂ. ಮಾಜಿ ಸದಸ್ಯ ಮಹೇಶ ಹೆಗ್ಡೆ ಬೇಳೂರು (56) ಅವರು ಮೃತಪಟ್ಟಿದ್ದಾರೆ. ಬೇಳೂರು ಬಾಳ್ಕಟ್ಟು ಮನೆ ನಿವಾಸಿ ಮಹೇಶ ಹೆಗ್ಡೆ ಅವರು ಬೈಕ್ನಲ್ಲಿ ಸಿದ್ದಾಪುರದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದಾಗ ಕುಂದಾಪುರದಿಂದ ಸಿದ್ದಾಪುರ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ರಿಟ್ಜ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಬೈಕನ್ನು ಸುಮಾರು 15 ಮೀ. ದೂರ ಎಳೆದುಕೊಂಡು ಹೋಗಿ, ಕಾರು ಮರಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ. ಕಾರಿನಲ್ಲಿ ಚಾಲಕ ಹಾಗೂ ಇನ್ನೊಬ್ಬರು ಪ್ರಯಾಣಿಸುತ್ತಿದ್ದು, ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಾಲಕನಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಕಾರಿನ ಮಾಲಕ ಬೆಳ್ವೆ ಗ್ರಾಮದ ಶಂಕರ ಶೆಟ್ಟಿ ಸೂರೊಳಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಸರಳ ಸಜ್ಜನಿಕೆಯ ವ್ಯಕ್ತಿ ಮಹೇಶ್ ಹೆಗ್ಡೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯ ಕರ್ತರಾಗಿದ್ದು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ರುತು ಎಂ.ಗುತ್ತೇದಾರ್ (603) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಪ್ರಥ್ವಿಶ್ರೀ (592), ವಿನಾಯಕ್ ನಾಯಕ್ (575), ರೋಶಿನಿ ಪೂಜಾರಿ (566), ಜಿ.ಶಶಾಂಕ್ (558), ನಾಗಶ್ರೀ (553), ಸುಹಾಸ್ (545), ಅಕ್ಷೀತಾ (541), ಹರೀಶ ನಾಯಕ್ (539), ಶ್ರೀನಿಧಿ (538), ಸಂಜನಾ (535), ಶ್ರುತಿ (530) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಾರಿಗೆ ಕೊಂಕಣಿ ತೃತೀಯ ಭಾಷೆಯಲ್ಲಿ ಪರೀಕ್ಷೆ ಬರೆದ ಎಲ್ಲಾ 13 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಅತ್ಯುನ್ನತ ಸಾಧನೆ ಮಾಡಿದೆ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಒಟ್ಟು 903 ಮಂದಿ ಪರೀಕ್ಷೆ ಬರೆದಿದ್ದು 885 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 98.66 ಫಲಿತಾಂಶವನ್ನು ಪಡೆದುಕೊಂಡಿದೆ. ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಲಾ ಪ್ರಶಾಂತ್ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಮತ್ತು ಜಿಲ್ಲೆಗೆ ಪ್ರಥಮಸ್ಥಾನವನ್ನು ಹಾಗೂ ಲಾವಣ್ಯ ಶಹಾಪುರ 622 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸುಧನ್ವ ನಾಡಿಗೇರ 619 ಪ್ರಥಮ ಸ್ಥಾನ, ಶಶಾಂಕ 618 ದ್ವಿತೀಯ ಸ್ಥಾನ, ಸಂತೋಷ 617 ತೃತೀಯ ಸ್ಥಾನ ಹಾಗೂ ಪ್ರದೀಪ್ ರಾಮಪ್ಪ ದೇಸಾಯಿ 616 ಅಂಕ ಗಳಿಸಿ ಚತುರ್ಥಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಳ್ವಾಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಒಟ್ಟು ಫಲಿತಾಂಶದಲ್ಲಿ 600 ಅಂಕಕ್ಕಿಂತ ಮೇಲ್ಪಟ್ಟು 46 ವಿದ್ಯಾರ್ಥಿಗಳು, 95%ಕ್ಕಿಂತ ಮೇಲ್ಪಟ್ಟು 62…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷ ದೇಶಕ್ಕೆ ಉತ್ತಮ ಆಡಳಿತ ನೀಡಿದೆ. ಗರಿಷ್ಠ ಸಾಧ್ಯ ಅಭಿವೃದ್ಧಿ ನಡೆಸಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದರೆ ಇಲ್ಲಿಯೂ ಅಂತಹ ಸಾಧನೆ ಸಾಧ್ಯವಾಗುತ್ತದೆ. ಆದುದರಿಂದ ಇಲ್ಲಿನ ಜನರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಅದರ 150 ಸ್ಥಾನಗಳ ಗೆಲುವಿನ ಗುರಿ ತಲಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ರಾಜ್ಯ ಸಚಿವ ಮನೋಜ್ ಸಿಂಹ ಹೇಳಿದರು. ಬೈಂದೂರು ಬಿಜೆಪಿ ವಲಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳ್ಲಿ ವಿಫಲವಾಗಿದೆ. ಇಲ್ಲಿನ ಕಾನೂನು ಸ್ಥಿತಿ ಹದಗೆಟ್ಟಿದೆ. ಉತ್ತಮ ಅಧಿಕಾರಿಗಳು ಹೊರಾಜ್ಯಗಳಿಗೆ ಹೋಗುತ್ತಿದ್ದಾರೆ ಇಲ್ಲವೆ ರಾಜಿನಾಮೆ ನೀಡುತ್ತಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಭಿವೃದ್ಧಿಗಾಗಿ ಕೇಂದ್ರ ನೀಡಿದ ಅನುದಾನ ದುರ್ಬಳಕೆಯಾಗುತ್ತಿದೆ. ಸ್ಮಾರ್ಟ್ಸಿಟಿಯ ಕಾಮಗಾರಿಗಳು ಕುಂಟುತ್ತ ಸಾಗಿವೆ. ಇದರ ನಡುವೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮರಳಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ. ಆದರೆ ಅದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವರು ಎನ್ನುವುದು ಒಂದು ನಂಬಿಕೆಯಾಗಿದ್ದು, ಧರ್ಮ ಜೀವನದ ಒಂದು ಭಾಗವಾಗಿದೆ. ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಜನರಲ್ಲಿ ಆಡಂಬರ ರಹಿತ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕು ಎಂದು ಹಿರಿಯ ಧಾರ್ಮಿಕ ಧುರೀಣ ಬಿ. ಸಿ. ರಾವ್ ಶಿವಪುರ ಹೇಳಿದರು. ಕೆರ್ಗಾಲು ಗ್ರಾಪಂ ವ್ಯಾಪ್ತಿಯ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನಲ್ಲಿ ಕ್ಷೇತ್ರದ ನಾಗದೇವರ ಪುನರ್ಪ್ರತಿಷ್ಟಾ, ಆಶ್ಲೇಷಾ ಬಲಿ ಹಾಗೂ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಧರ್ಮದ ಮುಖಗಳು ಬೇರೆಬೇರೆಯಾಗಿದ್ದು, ಸಮಜದಲ್ಲಿ ಇದನ್ನು ವಿಭಿನ್ನ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಎಲ್ಲವೂ ಹೊಂದಿರುವ ನಾವಿಂದು ಇಲ್ಲದೆಡೆಗೆ ಸಾಗುತ್ತಿದ್ದೇವೆ. ಜೀವನದಲ್ಲಿ ಗೊತ್ತುಗುರಿ ಹಾಕಿಕೊಳ್ಳದೇ ನಾವು ಸೋತಿದ್ದೇವೆ. ಧರ್ಮದಿಂದ ಬದಲಾಗಿದ್ದೇವೆ. ನಮ್ಮ ಮೂಲ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ಇದು ನಮ್ಮ ಹಿಂದೂ ಸಮಾಜದ ದೊಡ್ಡ ದುರಂತವಾಗಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವಗಳ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರು ಕಾಂಗ್ರೆಸ್ ಪಕ್ಷದ ಮುಖಂಡ, ಉಪ್ಪುಂದದ ಉದ್ಯಮಿ ಜಿ. ಗೋಕುಲ ಶೆಟ್ಟಿ ಉಪ್ಪುಂದ ಅವರ ಮನೆಗೆ ಆದಾಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ. ಗೋಕುಲ ಶೆಟ್ಟಿಯವರನ್ನು ಮನೆಯಲ್ಲಿರಿಸಿಕೊಂಡು ಅವರ ಆಪ್ತರನ್ನು ಕೂಡ ಮನೆಗೆ ಕರೆಸಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡನನ್ನು ಕೇಂದ್ರಿಕರಿಸಿಕೊಂಡು ನಡೆಯುತ್ತಿರುವ ಈ ದಾಳಿಯ ಬಗ್ಗೆ ಅನುಮಾನ ಮೂಡತೊಡಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿ ಪ್ರೇರಿತ ದಾಳಿ: ಕೆ. ಗೋಪಾಲ ಪೂಜಾರಿ ದಾಳಿಯ ಬಗ್ಗೆ ಬೈಂದೂರು ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಪ್ರತಿಕ್ರಿಯಿಸಿ ಕೇಂದ್ರ ಸರಕಾರದ ಆದಾಯ ತೆರಿಗೆ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರ ಮನೆಯ ಮೇಲೆ ದಾಳಿ ನಡೆಸುತ್ತಿದೆ. ಇದು ಅದರ ಮುಂದುವರಿದ ಭಾಗ. ಬಂದೂರು ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಸೋಲುವುದು ಖಚಿತವಾಗಿದೆ. ಸೋಲಿನ ಭೀತಿಯಿಂದ ಹತಾಶರಾದ ಮುಖಂಡರು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಕ್ಷೇತ್ರದ ಮತದಾರರು ಪ್ರಗತಿಗೆ ಮನ್ನಣೆ ನೀಡುತ್ತಾರೆಯೇ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ರೊಜರಿ ಮಾತಾ ಇಗರ್ಜಿಯ ಆವರಣದೊಳಗೆ, ಲೂರ್ದ ಮಾತೆಯ ನೂತನ ಗ್ರೊಟ್ಟೊವನ್ನು (ಗುಹೆ) ಉದ್ಘಾಟನೆ ಮತ್ತು ಆಶಿರ್ವಚನ ಕಾರ್ಯಕ್ರಮ ಮೇರಿ ಮಾತೆಗೆ ಸಮರ್ಪಿಸಲ್ಪಟ್ಟ ಮೇ ತಿಂಗಳ ಮೊದಲನೇ ದಿನ ನಡೆಯಿತು. ಉಡುಪಿ ಧರ್ಮಕ್ಷೇತ್ರದ ಛಾನ್ಸಲರ್, ಉಡುಪಿ ವಲಯ ಹಾಗೂ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ. ವಾಲೇರಿಯನ್ ಮೆಂಡೊನ್ಸಾ, ದೀಪ ಬೆಳಗಿಸಿ ಗ್ರೋಟ್ಟೊವನ್ನು ಉದ್ಘಾಟಿಸಿದರು. ಈ ಮೊದಲು ಇದ್ದ ಗ್ರೋಟ್ಟೊವನ್ನು ಸ್ಥಳಾಂತರ ಮಾಡಿ ತಾತ್ಕಾಲಿಕವಾದ ಗ್ರೋಟ್ಟೊವನ್ನು ನಿರ್ಮಿಸಲಾಗಿತ್ತು, ಅದನ್ನು ಕೆಡವಿ ಅದೇ ಜಾಗದಲ್ಲಿ ನೂತನವಾದ ಸ್ಥಿರವಾದ ಗ್ರೋಟ್ಟೊವನ್ನು ನಿರ್ಮಿಸಲಾಗಿದೆ. ಚರ್ಚಿನ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾ, ಸಹಾಯ ಧರ್ಮಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಧರ್ಮಗುರು ವಂ.ಪ್ಯಾಟ್ರಿಕ್ ಪಾಯ್ಸ್ ಸಹ ಭಾಗಿತ್ವದಲ್ಲಿ ಪವಿತ್ರ ಬಲಿದಾನ ನಡೆಯಿತು. ನೂತನ ಗ್ರೋಟ್ಟೊ ಮುಂದೆ ಭಕ್ತರೊಡಗೂಡಿ, ಮೇರಿ ಮಾತೆ ಕಳಿಸಿಕೊಟ್ಟ ಜಪಸರ ಪ್ರಾರ್ಥನೆಯನ್ನು ನಡೆಸಲಾಯಿತು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಬ್ರಹ್ಮಕಲಶ ಹಾಗೂ ರಥೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಬುಧವಾರ ಪೂರ್ವಾಹ್ನ ಫಲನ್ಯಾಸ,ಸಾಮೂಹಿಕ ದೇವತಾ ಪ್ರಾರ್ಥನೆ ,ಪುಣ್ಯಾಹ ನಾಂದಿ,ಋತ್ವಗ್ವರ್ಣಿ,ಮಧುಪರ್ಕ,ಗಣಹೋಮ ನವಗ್ರಹ ಹೋಮ ಚತುರ್ವೇದ ಪಾರಾಯಣ ಹಾಗೂ ಸಂಜೆ ಆಂಜನೇಯ ದೇವರಲ್ಲಿ ಪುಣ್ಯಾಹ ಸ್ಥಾನಶುದ್ಧಿ ಪ್ರಸಾದ ಶುದ್ಧಿ ರಾಕ್ಷೋಘ್ನ ಹೋಮ ವಾಸ್ತುಹೋಮ ಇನ್ನಿತರ ಹೋಮಾಧಿ ಕಾರ್ಯಕ್ರಮಗಳು ತಂತ್ರಿಗಳಾದ ವೇಧಮೂರ್ತಿ ಕೃಷ್ಣ ಸೋಮಯಾಜಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿತು.ಸಂಜೆ ನಡೆದ ಕೂಟಮಹಾಜಗತ್ತು ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ದೀಪ ಬೆಳಗಿಸಿ ಚಾಲನೆ ನೀಡಿದರು.ದೇವಳದ ಉಪಾಧ್ಯಕ್ಷ ಬಿ.ರಘುನಾಥ ಸೋಮಯಾಜಿ ,ಕಾರ್ಯದರ್ಶಿ ಜಿ.ಮಂಜುನಾಥ ಮಯ್ಯ,ಕೋಶಾಧಿಕಾರಿ ಪ್ರಸನ್ನ ತುಂಗ,ಸದಸ್ಯರಾದ ವೈ ಸದಾರಾಮ ಹೇರ್ಳೆ ,ವೇ.ಮೂ,ಜಿ.ಚಂದ್ರಶೇಖರ ಉಪಾಧ್ಯ,ಎಂ.ಕೆ ಅಶೋಕ ಕುಮಾರ್ ಹೊಳ್ಳ,ಬಿಜೂರು ಬಲರಾಮ ಮಯ್ಯ,ಪಿ.ಸುಬ್ರಹ್ಮಣ್ಯ ಹೇರ್ಳೆ ಮತ್ತಿತತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಿಂದೆ ಕುಂಭ ನೆಂಬ ರಕ್ಕಸನಿದ್ದರೆ.. ಕಲಿಯುಗದಲ್ಲಿ ಸಹಸ್ರಾರು ಕುಂಭಾಸುರರು ಇದ್ದಾರೆ. ಭೀಮ ಕುಂಭ ನೆಂಬ ರಕ್ಕಸನ ವಧಿಸಿದರೆ, ಇಂದು ತಾಯಿ ಕಲಿಯುಗದ ಕುಂಭಾಸುರರ ಮರ್ಧಿಸಲು ಪವಿತ್ರ ಭೀಮ ಕ್ಷೇತ್ರ ಕುಂಭಾಶಿಯಲ್ಲಿ ದೇವಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಮಂದಿರದಲ್ಲಿ ಪ್ರತಿಷ್ಠಾಪಿತಳಾಗಿದ್ದಾಳೆ. ಪ್ರಜೆಗಳಿಗೆ ಮಾರಕ ಕುಂಭನನ್ನು ಕತ್ತಿಯಿಂದ ವಧಿಸಿದ್ದಕ್ಕಾಗಿ ಕುಂಭ ರಕ್ಕಸ, ಅಶಿ ಎಂದರೆ ಕತ್ತಿ. ಭೀಮ ಕುಂಭನ ವಧಿಸಿದ ಹಿನ್ನೆಲೆಯೇ ಕುಂಭಾಸಿ ಹೆಸರು. ..ಹೀಗೆ ಮಹಾಭಾರತದ ಭೀಮ ಹಾಗೂ ಕುಲಿಯುಗದ ಕುಂಭನಂತಾ ರಕ್ಕಸಿರಿಗೆ ತಳಕು ಹಾಕಿದವರು ಉಡುಪಿ ಅದಮಾರು ಮಠ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ. ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸಮರ್ಪಣೆ ನಿಮಿತ್ತ ಗಂಗೊಳ್ಳಿ ಹೊಸ್ಮನೆ ದಿ.ಶ್ರೀಮತಿ ಗೌರಮ್ಮ ಮತ್ತು ದಿ.ಮಂಜುನಾಥ ಶೇರೆಗಾರ್ ವೇದಿಕೆಯಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಮಾತನಾಡುತ್ತಿದ್ದರು. ಪ್ರಸಕ್ತ ನಾಯಕರೆನಿಸಿ ಕೊಂಡವರು ತನಗಾಗಿ ಯಜ್ಞಯಾಗಾಧಿಗಳ ಮಾಡುತ್ತಾ, ಸಮಾಜಕ್ಕೆ ಎನ್ನುವಾಗ ಮೂಢನಂಬಿಕೆ ಎನ್ನುವ ಕುಂಭುನಂತ ರಕ್ಕಸರ ವಧಿಸಲು ಭೀನಮನಂತವರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: 2017-18 ನೇ ಸಾಲಿನ ರಾಷ್ಟ್ರ ಮಟ್ಟದ ಜೆಇಇ ಮೈನ್ ಪ್ರವೇಶ ಪರೀಕ್ಷೆಯಲ್ಲಿ ಕೋಟೇಶ್ವರದ ಗುರುಕುಲ ಪದವಿ ಪೂರ್ವ ಕಾಲೇಜಿನ 5 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಜೆಇಇ ಆಡ್ವಾನ್ಸ್ ಬರೆಯಲು ಅರ್ಹತೆ ಗಳಿಸಿ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ವೃಂದದವರು ಅಭಿನಂದಿಸಿರುತ್ತಾರೆ.
