ಕುಂದಾಪುರ: ಸ್ನೇಹ, ಒಡನಾಟ, ಶಾಂತಿಗಾಗಿ ಹುಟ್ಟಿಕೊಂಡ ರೋಟರಿಗೆ 111 ವರ್ಷ ಕಳೆದರೂ 16ರ ತರುಣಿಯಂತೆ ನವ ಉತ್ಸಾಹದಿಂದ ಮುನ್ನಡೆಯುತ್ತಿದ್ದು ದಿನದಿಂದ ದಿನಕ್ಕೆ ರೋಟರಿ ಹೊಸ ಯುವಕರನ್ನು ತನ್ನೊಳಗೆ ಬರಮಾಡಿ ಕೊಳ್ಳುತ್ತಾ ಬೆಳೆಯುತ್ತಿದೆ. ನಾವೆಲ್ಲರೂ ಒಂದಡೆ ಸೇರಿ ಸಂತೋಷವನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯನ್ನು ನಿರ್ಮಿಸಿ ಕೊಟ್ಟಿದ್ದು ರೋಟರಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಆಶ್ರಯದಲ್ಲಿ ಕುಂದಾಪುರದ ಅಕ್ಷತಾ ಸಭಾಂಗಣದಲ್ಲಿ ನಡೆದ ರೋಟರಿ ದಿನವನ್ನು ಉದ್ಘಟಿಸಿ ಮಾತನಾಡಿದರು. ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ರೋಟರಿ ಜಿಲ್ಲೆ ೩೧೮೦ ಇದರ ವಲಯಗಳಲ್ಲಿ ವಲಯ೧ ಕಾರ್ಯಕ್ರಮ ಸಂಘಟನೆ, ಭಾಗವಹಿಸುವಿಕೆ, ಸಾಮಾಜಿಕ ಸೇವೆಗಳು ಮತ್ತು ರೋಟರಿ ಫೌಂಡೇಶನ್ಗೆ ನೀಡಿದ ಕೊಡುಗೆಗಳ ಮೂಲಕ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದ್ದು ರೋಟರಿ ಅಧ್ಯಕ್ಷರ, ಸದಸ್ಯರ ಸಹಕಾರ ಅನನ್ಯವಾದುದು ಎಂದರು. ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಅಧ್ಯಕ್ಷ ದಿನಕರ ಪಟೇಲ್ ಅಧ್ಯಕ್ಷತೆವಹಿಸಿದ್ದರು. ಮಾಜಿ ಅಸಿಸ್ಟೆಂಟ್ ಗವರ್ನರ್…
Author: ನ್ಯೂಸ್ ಬ್ಯೂರೋ
ಕು೦ದಾಪುರ: ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಣ ಪ್ರೆ೦ಡ್ಸ ಇದರ ವಿದ್ಯಾನಿಧಿ ಹಾಗೂ ಆರೋಗ್ಯನಿಧಿ ಸಹಾಯೂರ್ಧ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನ ವೇದಿಕೆಯಲ್ಲಿ ಕರ್ನಾಟಕ ರಾಜ್ಸೋತ್ಸವ ಪ್ರಶಸ್ತಿ ಪುರಸ್ಥತರಾದ ಹಿರಿಯ ಯಕ್ಷಗಾನ ಕಲಾವಿದರಾದ ಮಾಗೋಳಿ ಗೋವಿ೦ದ ಶೇರುಗಾರ ಇವರನ್ನು ಸನ್ಮಾನಿಸಲಾಯಿತು. ಈ ಸ೦ದರ್ಭದಲ್ಲಿ ಉದ್ಯಮಿಗಳಾದ ಚ೦ದ್ರಶೇಕರ್ ಕಲ್ಪತರು, ರಾಘವೇ೦ದ್ರ ಶೇರುಗಾರ, ವಿದ್ಯುತ್ ಗುತ್ತಿಗೆದಾರರಾದ ಕೆ. ಆರ್ ನಾಯ್ಕ ,ಗ್ರಾಮ ಪ೦ಚಾಯತ್ ಸದಸ್ಯರಾದ ರಾಮಚ೦ದ್ರ ಶೇರುಗಾರ,ಸ೦ಸ್ಥೆಯ ಅದ್ಯಕ್ಷರಾದ ಪ್ರವೀಣ ಶಟ್ಟಿಗಾರ ವೇದಿಕೆಯಲ್ಲಿ ಉಪಸ್ಥಿತರಿದರು. ಜಗದೀಶ ಮೂಡ್ಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಕೊಲ್ಲೂರು: ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಪ್ರತೀಕ್ಷಾ ಇವರನ್ನು ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಲ್ಲೂರು ಗ್ರಾಪಂ ಸದಸ್ಯ ಜಯಪ್ರಕಾಶ್ ಶೆಟ್ಟಿ, ಕೊಲ್ಲೂರು ಪೋಲಿಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಚಂದ್ರ ಎ. ಕೆ, ಕಾಲೇಜಿನ ಪ್ರಾಂಶುಪಾಲ ಎಸ್.ಅರುಣ್ ಪ್ರಕಾಶ್ ಶೆಟ್ಟಿ ಹಾಗೂ ಉಪನ್ಯಾಸಕರಾದ ಗೋಪಾಲಕೃಷ್ಣ ಜಿ. ಬಿ, ಗೋಪಾಲ ದೇವಾಡಿಗ, ವಾಸುದೇವ ಉಡುಪ, ನಾಗರಾಜ ಅಡಿಗ, ಪೂರ್ಣಿಮಾ ಎನ್ ಜೊಯಿಸ್, ಜ್ಯೋತಿ ಬಿ ಶೆಟ್ಟಿ, ರಾಮ ನಾಯ್ಕ, ಹೆಚ್. ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ಬೈಂದೂರು: ಕರಾವಳಿ ಭಾಗದಲ್ಲಿ ದೈವಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಭಗವಂತನ ಮುಂದೆ ನಮ್ಮ ಕಷ್ಟಗಳನ್ನು ನಿವೇದನೆ ಮಾಡಿಕೊಳ್ಳಬಹುದು. ಆದರೆ ದೈವಗಳು ಆವೇಶಗಳ ಮೂಲಕ ನೇರವಾಗಿ ಮಾತುಕತೆಗೆ ಸಿಗುತ್ತದೆ. ಇದು ದೈವ-ದೇವರುಗಳ ನಡುವಿನ ಭಕ್ತರ ಭಾವನೆಗಳು ಅಷ್ಟೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಶಿರೂರು ಶ್ರೀ ಜೈನ ಶೇಡಿಬೀರ ದೈವ ಪರಿವಾರ ದೇವರು ಹಾಗೂ ಶ್ರೀ ನಾಗದೇವರ ಪುನರ್ ಪ್ರತಿಷ್ಟಾಪನಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಶ್ರದ್ಧಾ, ಭಕ್ತಿಗೆ ಒಲಿಯದ ದೈವ-ದೇವರುಗಳಿಲ್ಲ. ಭಕ್ತರ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಜನರಿಗೆ ಧಾರ್ಮಿಕತೆಯ ಭಾವನೆಗಳು ಹೆಚ್ಚುತ್ತಿರುವುದರಿಂದ ಧಾರ್ಮಿಕ ಕೇಂದ್ರಗಳು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ನಮ್ಮಲ್ಲಿರುವ ದೈವೀಕ ಭಾವನೆಗಳನ್ನು ಉದ್ದೀಪನೆಗೊಳಿಸುವ ಮೂಲಕ ಶ್ರದ್ದಾ, ಭಕ್ತಿಯಿಂದ ಆರಾಧಿಸಿದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದರು. ಇಂದಿನ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸತೊಡಗಿದ್ದು, ಪ್ರತ್ಯೇಕ ಸಂಸಾರದ ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಇದರಿಂದ ಕೌಟುಂಬಿಕ ಜೀವನ ಹಾಳಾಗಿ…
ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 1994-95ರ ಅವಧಿಯಲ್ಲಿ ಪಿಯುಸಿ ವಿಜ್ಞಾನ ವಿಷಯ ಅಧ್ಯಯನ ಮಾಡಿ ಈಗ ವಿವಿಧೆಡೆ ಯಶಸ್ವಿಯಾಗಿ ಉದ್ಯೋಗ ನಿರತರಾಗಿರುವವರು ಭಾನುವಾರ ಕಾಲೇಜಿನಲ್ಲಿ ’ಪುನರ್ಮಿಲನ’ ಸಮಾರಂಭ ಏರ್ಪಡಿಸಿದ್ದರು. ಆ ಅವಧಿಯಲ್ಲಿ ಅವರಿಗೆ ಬೋಧಿಸಿ ಈಗ ನಿವೃತ್ತರಾಗಿರುವ ಒಬ್ಬ ಉಪನ್ಯಾಸಕರು, ಈಗಲೂ ಸೇವೆಯಲ್ಲಿರುವ ಇಬ್ಬರು, ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಮತ್ತು ಇಂದಿನ ವಿದ್ಯಾರ್ಥಿಗಳು ಒಂದೆಡೆ ಸೇರಿದ್ದ ಈ ಸಮಾರಂಭ ನಾಲ್ಕು ತಲೆಮಾರುಗಳ ಸಮ್ಮಿಲನವಾಗಿ ಮೂಡಿಬಂತು. ಈ ವಿಶಿಷ್ಟ ಪುನರ್ಮಿಲನ ಸೃಷ್ಟಿಸಿದ ಭಾವನಾತ್ಮಕ ಸನ್ನಿವೇಶದ ನಡುವೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಾಗಿದ ಕಾರ್ಯಕ್ರಮದಲ್ಲಿ ಹಿಂದಿನ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳಲ್ಲಿ ಸಹಾಧ್ಯಾಯಿಗಳೊಂದಿಗೆ ನಡೆಸಿದ ಒಡನಾಟವನ್ನು, ಶಿಕ್ಷಕರೊಂದಿಗಿನ ಸುಮಧುರ ಸಂಬಂಧವನ್ನು, ಅವರ ಬೋಧನಾ ವೈಖರಿಗಳನ್ನು ಮತ್ತು ಆ ಬಳಿಕದ ತಮ್ಮ ಸಾಧನೆಗಳನ್ನು ತೆರೆದಿಟ್ಟರು. ಉಪಸ್ಥಿತರಿದ್ದ ಬೋಧಕರು ಹಿಂದಿನ ವಿದ್ಯಾರ್ಥಿಗಳು ಆಯೋಜಿಸಿರುವ ಸಮಾರಂಭವು ಹೇಗೆ ಇದರಲ್ಲಿ ಪಾಲ್ಗೊಂಡ ಎಲ್ಲರಿಗೆ ಅಪೂರ್ವ ಅನುಭವ ನೀಡಿದೆ ಎನ್ನುವುದನ್ನು ನೆನೆದರು. ಆರಂಭದಲ್ಲಿ ಡಾ. ಪ್ರತಿಭಾ ರೈ ಪ್ರತಿಭಾ ಪ್ರಾರ್ಥನೆ…
ಗಂಗೊಳ್ಳಿ: ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಪರಂಪರೆಗಳನ್ನು ತಿಳಿ ಹೇಳುತ್ತಾ ಅವರಲ್ಲಿ ಶಿಸ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರವಾದ ಜವಾಬ್ದಾರಿ ಪಾಲಕರ ಮೇಲಿದೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕಿದೆ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಅವರಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಬೇಕು ಎಂದು ಗಂಗೊಳ್ಳಿಯ ಉದ್ಯಮಿ ಎಂ.ಎಂ.ಸುವರ್ಣ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 29ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೇವಾ ಸಂಗಮದ ಶಿಶು ಮಂದಿರಗಳು ಮಕ್ಕಳಿಗೆ ಬಾಲ್ಯದಲ್ಲಿ ಅಗತ್ಯವಿರುವ ನಮ್ಮ ಹಿಂದು ಪರಂಪರೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ. ಗಂಗೊಳ್ಳಿಯಲ್ಲಿ ಕಳೆದ ೨೯ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಶು ಮಂದಿರಗಳು ಮಕ್ಕಳಿಗೆ ಬದುಕಿನ ಆಶಾಕಿರಣವಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪಶು ವೈದ್ಯಾಧಿಕಾರಿ ಡಾ.ಶಿವಾನಂದ ರಾವ್ ಹಾಗೂ…
ಕುಂದಾಪುರ: ನಗರ, ಪಟ್ಟಣಗಳ ಮೂಲಭೂತ ಸೌಲಭ್ಯ, ವಾರಪೂರ್ತಿ ಶುದ್ಧಿ ಕುಡಿಯುವ ನೀರು ಪೂರೈಕೆ, ವೈಜ್ಞಾನಿಕ ಕಸ ವಿಲೇವಾರಿ, ಒಳ ಚರಂಡಿ ಯೋಜನೆ ಮೂಲಕ ತ್ಯಾಜ್ಯ ನೀರಿ ಪರಿಷ್ಕರಿಸಿ ಕೃಷಿ ಮತ್ತು ಕೃಷಿಯೇತರಕ್ಕ ಬಳಕೆ ಜೊತೆ ನಗರ ಪಟ್ಟಣಗಳ ರೋಗ ಮುಕ್ತವಾಗಿ ಪರಿವರ್ತಿಸುವುದು ನಮ್ಮ ರಾಜ್ಯ ಕಾಂಗ್ರೆಸ್ ಸರಕಾರದ ಗುರಿ ಎಂದು ಜಿಲ್ಲಾ ಉಸ್ತುವಾರ ಸಚಿವ ವಿನಿಯ ಕುಮಾರ್ ಸೊರಕೆ ಹೇಳಿದ್ದಾರೆ. ಶನಿವಾರ ಕುಂದಾಪುರ ಪುರಸಭೆ ಹಾಗೂ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಆರಂಭಗೊಳ್ಳಲಿರುವ ಕುಂದಾಪುರ ಪುರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ತೀರದ ನಗರ ಪಟ್ಟಣಗಳ ಕುಡಿಯುವ ನೀರು ಮತ್ತು ಕಸ ವಿಲೇವಾರಿಗೆ ಅತ್ಯಾಧುನಿಕ ಟೆಚ್ಚ್ ನೀಡಿ, ತ್ಯಾಜ್ಯದಿಂದ ಗೊಬ್ಬರ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಎಡಿಬಿ ಯೋಜನೆಯಲ್ಲಿ 27 ಕೋಟಿ ರೂ.ವೆಚ್ಚದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗುತ್ತದೆ…
ಕುಂದಾಪುರ: ರಜತದಾನದಿಂದ ಪಿತೃದೋಷ ಪರಿಹಾರ ಎಂಬುದು ಶಾಸ್ತ್ರ ವಿಧಿತ. ಮಾನವ ಜೀವನದಲ್ಲಿ ಬಿಳಿಲೋಹ ಬೆಳ್ಳಿಗೆ ಪ್ರಮುಖ ಸ್ಥಾನವಿದೆ ಈಶ್ವರ ತ್ರಿಪುರಾಸುರನನ್ನು ಸಂಹರಿಸಿದಾಗ ಈಶ್ವರನ ಮೂರನೇ ಕಣ್ಣಿನಲ್ಲಿ ಸುರಿದ ಆನಂದ ಬಾಷ್ಪವೇ ಬೆಳ್ಳಿಯಾಯಿತು ಎಂದು ಪುರಾಣದಲ್ಲಿ ಉಲ್ಲೇಖಿತವಾಗಿದೆ. ಮಾನವನ ಮಾನಸಿಕ ಆರೋಗ್ಯಕ್ಕೆ ಬೆಳ್ಳಿ ಅಗತ್ಯ, ಇಂತಹ ಶ್ರೇಷ್ಟ ಲೋಹವನ್ನು ದಾನ ಮಾಡುವುದರಿಂದ ಪಿತೃಋಣ ಮತ್ತಿತರ ಪಾಪಗಳು ಪರಿಹಾರವಾಗುತ್ತವೆ ಎಂದು ಧಾರ್ಮಿಕ ಪರಿಷತ್ನ ಮಾಜಿ ಸದಸ್ಯ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು. ಪ್ರಸಿದ್ದ ಪುಣ್ಯಕ್ಷೇತ್ರ ಗುಡ್ಡಟ್ಟು ವಿನಾಯಕ ದೇವಳದ ಗರ್ಭಗುಡಿಯ ಮುಖದ್ವಾರಕ್ಕೆ ದಾನಿಗಳ ನೆರವಿನಿಂದ ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ಆಚ್ಚಾಧಿಸಿದ ರಜತ ದ್ವಾರವನ್ನು ಶುಕ್ರವಾರ ಸಂಕಷ್ಟಹರ ಚತುರ್ಥಿಯಂದು ಶ್ರೀ ದೇವರಿಗೆ ಸಮರ್ಪ್ಪಿಸಿ ಅವರು ಮಾತನಾಡಿದರು. ಪ್ರಶಾಂತ ಪರಿಸರದಲ್ಲಿ ಗುಹಾಂತರ್ಗತವಾಗಿರುವ ಗುಡ್ಡಟ್ಟು ಕ್ಷೇತ್ರವನ್ನು ವರ್ಣಿಸಿದ ಅವರು, ವಿನಾಯಕನ ಅನುಗ್ರಹದಿಂದ ಮತ್ತು ದಾನಿಗಳ ನೆರವಿನಿಂದ ದೇವಾಲಯದ ಇತರ ಎಲ್ಲಾ ಸ್ಥಂಭಗಳೂ ಶೀಘ್ರ ರಜತ ಆಚ್ಚಾದನೆಗೊಳ್ಳಲಿ ಎಂದು ಹಾರೈಸಿದರು. ಶ್ರೀ ದೇವರ ಶಿಲಾಯಮಯ ಗರ್ಭಗುಡಿಯ ಸಮರ್ಪಣಾ…
ಗಂಗೊಳ್ಳಿ : ದೇವರ ಪ್ರೀತಿಗೆ ಪಾತ್ರರಾಗ ಬೇಕಾದರೆ ನಿಸ್ವಾರ್ಥ ಮನೋಧರ್ಮದಿಂದ ಸೇವೆಯಲ್ಲಿ ತೊಡಗುವುದು ಅಗತ್ಯ ಎಂದು ಗಂಗೊಳ್ಳಿಯ ಸಮಾಜ ಸೇವಕಿ ಅನಿತಾ ಶೇಟ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮದ ಬಾವಿಕಟ್ಟೆಯ ಮೇಲ್ ಗಂಗೊಳ್ಳಿ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಓಂ ಶ್ರೀ ಮಾತೃ ಮಂಡಳಿಯ ಆಶ್ರಯದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಚೇತನ ಮಾತೃಶ್ರೀ ದಿ. ರತ್ನಮ ಹೆಗ್ಗಡೆಯವರ ಪುಣ್ಯಸ್ಮೃತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಇಂದು ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾಗಿದೆ. ಜಿನೈಕರಾದ ದಿ. ರತ್ನಮ್ಮ ಹೆಗ್ಗಡಯವರ ದೂರದೃಷ್ಟಿತ್ವವೇ ಅದಕ್ಕೆ ಕಾರಣ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚೆಂದು, ಸುಶೀಲ, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಪದ್ಮಾವತಿ ಮಾತನಾಡಿದರು. ಶಾಂತಾ, ಸುಶೀಲ ಮೊದಲಾದವರು ಉಪಸ್ಥಿತರಿದ್ದರು. ಸರಸ್ವತಿ ಸ್ವಾಗತಿಸಿದರು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗಂಗೊಳ್ಳಿಯ ಕಳುವಿನ ಬಾಗಿಲು ಎಂಬಲ್ಲಿ ಮೈದುನ ಹಾಗೂ ಆತನ ಪತ್ನಿಯಿಂದ ಏಟಿಗೆ ಗಂಭೀರ ಗಾಯಗೊಂಡ ಮಹಿಳೆಯೋರ್ವಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಉಪ್ಪಿನಕುದ್ರು ನಿವಾಸಿ ವಿಜಯ ಖಾರ್ವಿಯ ಪತ್ನಿ ಜ್ಯೋತಿ ಖಾರ್ವಿ (26) ಮೃತ ಮಹಿಳೆ. ಭಾನುವಾರ ಮಧ್ಯಾಹ್ನದ ವೇಳೆಗೆ ಮನೆಯಲ್ಲಿ ಯಾವುದೋ ಕಾರಣಕ್ಕೆ ಜ್ಯೋತಿ ಖಾರ್ವಿ, ಆಕೆಯ ಮೈದುನ ಗುರುರಾಘವೇಂದ್ರ ಖಾರ್ವಿ (26) ಮತ್ತು ಆತನ ಮಡದಿ ದಿವ್ಯಾಳ(19) ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ಹೊಡೆದಾಟಕ್ಕೆ ತಿರುಗಿ ಗುರು ಹಾಗೂ ದಿವ್ಯಾ ಇಬ್ಬರೂ ಸೇರಿ ಅತ್ತಿಗೆ ಜ್ಯೋತಿಯ ಹೊಟ್ಟೆಯ ಭಾಗಕ್ಕೆ ಸತತವಾಗಿ ಹೊಡೆದಿದ್ದಾರೆನ್ನಲಾಗಿದೆ. ಘಟನೆಯಿಂದ ತೀವ್ರ ಅಸ್ವಸ್ಥರಾದ ಜ್ಯೋತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಬೆಳಿಗ್ಗೆ 3:30ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಜ್ಯೋತಿ ಸಾವನ್ನಪ್ಪಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಆಪಾದಿತ ಮೈದುನ ಹಾಗೂ ಆತನ ಪತ್ನಿಯನ್ನು ಬಂಧಿಸಿ ತನಿಕೆ ನಡೆಸಲಾಗುತ್ತಿದೆ. ಜ್ಯೋತಿ ಖಾರ್ವಿಯ ಪತಿ…
