Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಂಟ್ವಾಡಿ ಬಾಲ ವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘಟನೆ, ಸೇನಾಪುರ ಗ್ರಾಮಸ್ಥರ ಆಶ್ರಯದಲ್ಲಿ ಬಂಟ್ವಾಡಿ ನಿವೃತ್ತ ಅಂಗವಾಡಿ ಶಿಕ್ಷಕಿ ಲೀಲಾವತಿ ನಾರಾಯಣ ಹೆಬ್ಬಾರ್ ಅವರಿಗೆ ಇಲ್ಲಿನ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ನಡೆಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ನಿವೃತ್ತ ಬಂಟ್ವಾಡಿ ಅಂಗನವಾಡಿ ಶಿಕ್ಷಕಿ ಲೀಲಾವತಿ ನಾರಾಯಣ ಹೆಬ್ಬಾರ್, ಮಾತೃಭಾಷೆ ಹಾಗೂ ಅಂಗನವಾಡಿಯಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಎಂದೂ ಸೋಲೋದಿಲ್ಲ. ಮನೆಯ ಮಕ್ಕಳಿಗೆ ತಾಯಿಯಾಗುವ ಭಾಗ್ಯ ಎಲ್ಲರಿಗೂ ಸಿಗುತ್ತಿದ್ದು, ಸಮಾಜದ ಮಕ್ಕಳಿಗೆ ತಾಯಿಯಾಗುವ ಭಾಗ್ಯ ಅಂಗನವಾಡಿ ಕೊಡುತ್ತದೆ. ಯಾವುದೇ ಕೆಲಸವಿರಲಿ ಶ್ರದ್ಧೆ ನಿಷ್ಠೆಯಿಂದ ದುಡಿದರೆ ಸಮಾಜ ಗುರುತಿಸುತ್ತದೆ ಎಂದು ಹೇಳಿದರು. ಬಂಟ್ವಾಡಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಬಿ.ಅರುಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಾವತಿ ಜಗನ್ನಾಥ ಶ್ಯಾನುಭಾಗ್ ಸನ್ಮಾನಿಸಿದರು. ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನಿವೃತ್ತ ಅಂಗನವಾಡಿ ಶಿಕ್ಷಕಿ ಲೀಲಾವತಿ ಅವರಿಗೆ ಉಡಿ ತಂಬಿ ಬಾಗೀನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಭಯ ತಿಟ್ಟುಗಳ ಅಪ್ರತಿಮ ಸ್ತ್ರೀ ಪಾತ್ರದಾರಿ ವಂಡ್ಸೆ ನಾರಾಯಣ ಗಾಣಿಗ (84) ಅಲ್ಪಕಾಲದ ಅಸೌಖ್ಯದಿಂದ ವಂಡ್ಸೆಯ ಸ್ವಗೃಹದಲ್ಲಿ ಸೋಮವಾರ ನಿಧನರಾದರು. ಉತ್ತರ ಕನ್ನಡ, ದಕ್ಷಿಣ ಕನ್ನಡ, ತೆಂಕು ತಿಟ್ಟುಗಳಲ್ಲಿ ಮೆರೆದ ಏಕೈಕ ಕಲಾವಿದ ನಾರಾಯಣ ಗಾಣಿಗ 40 ವರ್ಷ ನಿರಂತರ ವೃತ್ತಿ ಕಲಾವಿದರಾಗಿ ಉತ್ತಂಗಕ್ಕೆ ಏರಿದ್ದರು. 12ನೇ ವಯಸ್ಸಿಗೆ ಬಣ್ಣಹಚ್ಚಿದ ಗಾಣಿಗ ಸ್ತ್ರೀ ಪಾತ್ರದ ಮೂಲಕ ಹಲವು ಪಾತ್ರಗಳಿಗೆ ರಂಗದಲ್ಲಿ ಜೀವ ತುಂಬಿದರು. ವಂಡ್ಸೆ ಶೇಷ ಗಾಣಿಗ ಹಾಗೂ ಪಣಿಯಮ್ಮ ಪುತ್ರನಾಗಿ 1937ರಲ್ಲಿ ಜನಿಸಿದ ಗಾಣಿಗರು ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಗಾಣಿಗ ಸಹೋದರ ಮುತ್ತ ಗಾಣಿಗ ಯಕ್ಷಗಾನ ಪ್ರವೇಶಕ್ಕೆ ಪ್ರೇರಣೆ. ಮಾರಣಕಟ್ಟೆ ಮೇಳದಲ್ಲಿ ಕೋಡಂಗಿ ವೇಷ ಮೂಲಕ ರಂಗಸ್ಥಳ ಪ್ರವೇಶಿಸಿದ ಗಾಣಿಗ ಮತ್ತೆ ಹಿಂದಕ್ಕೆ ತಿರುಗಿ ನೋಡಲಿಲ್ಲ. ವೀರಭದ್ರ ನಾಯ್ಕ್ ಮತ್ತು ಮಟ್ಪಾಡಿ ಶ್ರೀನಿವಾಸರಂತಹ ಮೇರು ಕಲಾವಿದರ ಶಿಷ್ಯರಾದ ಗಾಣಿಗರು ಉಭಯತಿಟ್ಟುಗಳ ಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ರಂಗದಲ್ಲಿ ಮಿಂಚು ಹರಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ಕೃಷಿ ಇಲಾಖೆ ಮತ್ತು ಬೈಂದೂರು ರೈತ ಸಂಪರ್ಕ ಕೇಂದ್ರದ ಆಶ್ರಯದಲ್ಲಿ 2020-21ನೇ ಸಾಲಿನ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ಸೋಮವಾರ ಆರಂಭವಾದ ಎರಡು ದಿನಗಳ ರೈತ ತರಬೇತಿ ಕಾರ್ಯಕ್ರಮ ಇಲ್ಲಿನ ಮರವಂತೆ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ನಡೆಯಿತು. ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ, ಕೃಷಿ ಲಾಭದಾಯಕ ಅಗಬೇಕೆಂದಿದ್ದರೆ ಮಿತವ್ಯಯದಲ್ಲಿ ಹೆಚ್ಚು ಉತ್ಪಾದನೆ ಆಗಬೇಕು. ಹಾಗಾಗಬೇಕಾದರೆ ರೈತರು ಕೃಷಿ ಸಂಬಂಧಿ ಅರಿವು ಪಡೆದು ಕೃಷಿ ಮಾಡಬೇಕು. ಜಿಲ್ಲೆಯಲ್ಲಿ ಹಿಂದಿದ್ದ ಸಾಂಪ್ರದಾಯಿಕ ಜಲ ಸಂವರ್ಧನ ಮೂಲಗಳು ನಶಿಸಿರುವುದರಿಂದ ಕೃಷಿಗೆ ಮತ್ತು ಕುಡಿಯಲು ನೀರಿನ ಅಭಾವ ಕಾಡುತ್ತಿದೆ. ಜನರು ನೀರು ಪೋಲಾಗುವುದನ್ನು ತಡೆಗಟ್ಟಿ, ಮಳೆಗಾಲದಲ್ಲಿ ನೀರು ಇಂಗಿಸುವ ಮೂಲಕ ನೀರಿನ ಕೊರತೆಯನ್ನು ನಿಭಾಯಿಸಬೇಕು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಪರಶುರಾಮ ಸ್ವಾಗತಿಸಿದರು. ಗಾಯತ್ರಿದೇವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಹ ಪ್ರಾಧ್ಯಾಪಕರಾದ ಗಣಪತಿ ಭಟ್ ಪಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಗಣಪತಿ ಭಟ್‌ವರನ್ನು ನಾನು ಹಿಂದಿನಿಂದಲೂ ಗಮನಿಸಿದಂತೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಕಷ್ಟಕರ ದಿನವಾದ ಕೊರೋನಾ ಸಂದರ್ಭದಲ್ಲಿಯೂ ಕೂಡ ತಂತ್ರಜ್ಞಾನದ ಆನ್‌ಲೈನ್ ತರಗತಿಯನ್ನು ನಿರ್ವಹಣೆ ಮಾಡಿರುವುದನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸಕನಾಗಿ ಕನ್ನಡ ಜ್ಞಾನಧಾರೆಯೆರೆಯುವಲ್ಲಿ ಪ್ರಯತ್ನಶೀಲರಾಗಿದ್ದರೆಂದು ಎಂದು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ. ವಿ. ಬನ್ನಾಡಿ ಮಾತನಾಡಿ, ಸಹೋದ್ಯೋಗಿಯಾದ ಗಣಪತಿ ಭಟ್‌ರವರು ಪ್ರತಿದಿನ ದೂರದ ಊರಿನಿಂದ ಬರುತ್ತಿದ್ದರೂ ಕೂಡ ಹಾಗೆ 20 ವರ್ಷ ನಮ್ಮ ಜೊತೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಹಕಾರ ಮನೋಭಾವವನ್ನು ತೋರಿರುವುದನ್ನು ಸ್ಮರಿಸಿಕೊಂಡರು. ಸನ್ಮಾನಿತರಾದ ಗಣಪತಿ ಭಟ್‍ ಮಾತನಾಡಿ, ತಮ್ಮ ಕಲಿಕೆಯ ಕಾಲಘಟ್ಟವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ನೆಲ್ಲಿಕಟ್ಟೆ ಕತ್ಕೊಡು ಎಂಬಲ್ಲಿ ಕರ್ನಾಟಕ ದಲಿತ ಸಂಘ ಸಮಿತಿ ಭೀಮ ಘರ್ಜನೆಯ ನೂತನ ಗ್ರಾಮ ಶಾಖೆ ಮತ್ತು ನಮ್ಮ ಭೂಮಿ ನಮ್ಮ ಹೋರಾಟದ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ಮನೆ, ಮನೆಯಲ್ಲೂಬಾಬಾ ಸಾಹೇಬ್ ಅವರ ಹೋರಾಟದ ಕ್ರಾಂತಿ ಜ್ಯೋತಿ ಬೆಳಗಬೇಕು, ಆ ಮೂಲಕ ಈ ಭಾಗದಲ್ಲಿ ಒತ್ತುವರಿಯಾದ ದಲಿತರ ಭೂಮಿಯನ್ನ ಕಾನೂನು ಮೂಲಕ ಮರಳಿ ಪಡೆಯಬೇಕು ಎಂದರು ಗ್ರಾಮ ಶಾಖೆಯ ಪದಾಧಿಕಾರಿಯನ್ನ ಆಯ್ಕೆ ಮಾಡಿ ಸಂಘಟನೆಯ ದ್ವಜವನ್ನ ಅವರಿಗೆ ಹಸ್ತಾಂತರಿಸಿ ಪ್ರಮಾಣ ವಚನ ನೀಡಲಾಯಿತು. ಮುಖ್ಯ ಅಥಿತಿಯಾಗಿ ಸಂಘಟನೆಯ ಕಲಾ ಮಂಡಳಿಯ ವಸಂತ ವಂಡ್ಸೆ ಅಂಬೇಡ್ಕರ್ ಬಾವ ಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಕ್ರಾಂತಿ ಗೀತೆಯ ಹಾಡಿ ಮಾತಾಡಿದರು. ಕಾರ್ಯಕ್ರಮದಲ್ಲಿ ಚಂದ್ರಮ ತಲ್ಲೂರು, ರತ್ನಾಕರ ಕುಂದಾಪುರ ಸುರೇಶ್ ಬಾಬು, ಗುರು ಜನ್ಸಾಲೆ ರಾಮ ಬೆಳ್ಳಾಲ ಹಾಗೂ ನೂತನ ಶಾಖೆಯ ಸಂಚಾಲಕರಾದ ಗುರುರಾಜ ಕತ್ಕೂಡು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋರ್ಗಿ ಗ್ರಾಮದಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ಕದ್ದ ನಾಲ್ವರು ಗೋ ಕಳ್ಳರನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ಧಾರೆ. ಶಂಕರ ಕುಲಾಲ್, ಅಶ್ಪಕ್ ಸಿರಾಜ್, ಸನ್ನಿ ಪೌಲೋಸ್ ಹಾಗೂ ಅಶ್ವಕ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬೈಂದೂರು ಸಮೀಪ ಚೆಕ್ ಪೋಸ್ಟ್ ಬಳಿ ಭಾನುವಾರ ಬೆಳಿಗ್ಗೆನ ಸುಮಾರಿಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಾಲೂಕಿನ ಕೊರ್ಗಿಯ ಶರತ್ ಶೆಟ್ಟಿ ಎಂಬವರ ಮನೆಯ ಮೂರು ಜಾನುವಾರುಗಳನ್ನು ಮೇಯಲು ಬಿಟ್ಟ ಸಂದರ್ಭ ಕಳವು ಮಾಡಿದ ಬಗ್ಗೆ ಜ.22ರಂದು ಕಂಡ್ಲೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಕಳವಾದ ದನಗಳಲ್ಲಿ ಎರಡು ಗಬ್ಬದ ಹಸುಗಳು ಸೇರಿ ಒಟ್ಟು ಮೂರು ಜಾನುವಾರುಗಳಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಒಂದು ವಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಕುಮಾರ್, ಸುಧಾ ಪ್ರಭು, ಸಿಬ್ಬಂದಿಗಳಾದ ಮಧು, ಆನಂದ್, ಸತೀಶ್, ನಾಗೇಶ್, ರಮೇಶ್, ಅನಿಲ್, ಶ್ರೀಕಾಂತ್, ಚಿದಾನಂದ ಮೊದಲಾದವರು ಈ…

Read More

ಕುದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮುಖ್ಯರಸ್ತೆಯ ಮಹಿಳಾ ಕೋ-ಆಪರೇಟಿವ್ ಸೊಸೈಟಿ ಕಟ್ಟಡ ಉನ್ನತಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮನುಷ್ಯನಿಗೆ ಆರೋಗ್ಯ ಮುಖ್ಯ. ಮನುಷ್ಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ದೊರೆಯುವಂತಾಗಬೇಕು ಎಂಬ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಿದ್ದು ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲು ಸರಕಾರ ಅನುಮತಿ ನೀಡುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಗಂಗೊಳ್ಳಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶಾರದಾ ರಾಮಕೃಷ್ಣ ಶೇರುಗಾರ್, ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯರಾದ ಬಿ.ರಾಘವೇಂದ್ರ ಪೈ, ಶಾಂತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದ ಸರ್ವತೋಮುಖ ಅಭಿವೃದ್ದಿ ಸಾಮಾಜಿಕ ಧಾರ್ಮಿಕ, ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ, ಅಭಿವೃದ್ಧಿಯ ಮೂಲಕ ಸಾಧ್ಯವಿದೆ. ಮರಾಠಿ ಸಮುದಾಯ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧಿಯನ್ನು ಹೊಂದಿದ್ದರು, ಇದುವರೆಗೂ ಆರ್ಥಿಕವಾಗಿ ತನ್ನದೇ ಆದ ಸಂಸ್ಥೆಯನ್ನ ಕಟ್ಟಿಕೊಳ್ಳುವುದರಲ್ಲಿ ಹಿಂದುಳಿದಿದ್ದು, ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಜಡ್ಕಲ್ ಸಮುದಾಯದ ಅಭಿವೃದ್ದಿಗೆ ಮತ್ತು ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು. ಅವರು ಜಡ್ಕಲ್‌ನಲ್ಲಿ ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಪ್ರಥಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮಾತನಾಡಿ, ಮರಾಠಿ ಸಮುದಾಯದವರ ಕನಸಿನ ಕೂಸು, ಸುಮಾರು ಮೂವತ್ತು ವ?ಗಳ ಆಶಯ, ಸಹಕಾರಿ ಸಂಸ್ಥೆಯನ್ನು ಹುಟ್ಟುಹಾಕುವುದಾಗಿತ್ತು. ಅದು ಇಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ತನ್ಮೂಲಕ ಮರಾಠಿಸಮುದಾಯದವರು ಒಗ್ಗಟ್ಟು ಮತ್ತು ಆರ್ಥಿಕ ಸ್ಥಿತಿಯ ಅರಿವಿನ ಅಭಿವೃದ್ಧಿಯ ಸಂಕೇತವನ್ನು ಇದು ಸಾರಿದೆ ಮತ್ತು ಸಮುದಾಯದ ಅಭಿವೃದ್ಧಿಗೆ ಇದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಪಾರಂಪರಿಕಾ ಔಷಧ ಭಂಡಾರ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಔಷಧ ಗಿಡ ಮೂಲಿಕಾ ಪ್ರಾಧಿಕರ ಬೆಂಗಳೂರು ಇವರ ಸಹಯೋಗದೊಂದಿಗೆ ‘ಅಶೋಕ ವನಸಿರಿ’ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದವತಿಯಿಂದ ಮೂಡುಬಿದಿರೆ ಪರಿಸರದಲ್ಲಿ 1500 ಅಶೋಕ ಗಿಡಗಳನ್ನು ಹಂಚಿ, ಜನರಲ್ಲಿ ಈ ಗಿಡದ ಪ್ರಾಮುಖ್ಯತೆಯನ್ನು ಇನ್ನು ಹೆಚ್ಚು ತಿಳಿಸಲಾಗುವುದು, ಇಂದು ಎಷ್ಟೋ ಗಿಡಮೂಲಿಕೆಗಳು ನಶಿಸಿ ಹೋಗುತ್ತಿದ್ದು, ಅವುಗಳ ಸಂರಕ್ಷಣೆ ಮಾಡಬೇಕಿದೆ. ನಮ್ಮ ದೇಶದ ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ಎಲ್ಲೆಡೆ ಪಸರಿಸಬೇಕಿದೆ ಎಂದರು. ಕರ್ನಾಟಕ ರಾಜ್ಯ ಔಷಧ ಸಸ್ಯಗಳ ಪ್ರಾಧಿಕಾರದ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ ಸುದರ್ಶನ ಜಿ.ಎ. ಮಾತನಾಡಿ, ಆತ್ಮ ನಿರ್ಭರ ಭಾರತದ ಕನಸನ್ನು ನನಸು ಮಾಡಲು ನಮ್ಮ ಪರಂಪರೆಯಲ್ಲಿ ಅಡಗಿದ ಆಯುರ್ವೇದ ವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ ನೀಡಿ ನಾವು ಆಳವಡಿಸಿಕೊಳ್ಳಬೇಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕರಾವಳಿ ಭಾಗದ ಜನರ ಭಾವನಾತ್ಮಕ ಬೆಸುಗೆ ಯಕ್ಷಗಾನವಾಗಿದ್ದು, ಪ್ರತಿಯೊಬ್ಬರ ಮನೆ-ಮನದಲ್ಲೂ ಇದು ಹಾಸು ಹೊಕ್ಕಾಗಿದೆ. ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದ ಡಾ|| ಶಿವರಾಮ ಕಾರಂತರು ದೇಶದಲ್ಲಿ ಅಲ್ಲದೇ ವಿದೇಶದಲ್ಲಿಯೂ ಯಕ್ಷಗಾನದ ಕಂಪನ್ನು ಪಸರಿಸಿದವರು. ಯಕ್ಷಗಾನಕ್ಕೆ ಕಾರಂತರ ಕೊಡುಗೆ ಅನನ್ಯವಾದುದು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರ ಆಪ್ತ ಸಹಾಯಕರಾದ ಹರೀಶ್ ಕುಮಾರ್ ಶೆಟ್ಟಿ ಅವರು ಹೇಳಿದರು. ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯಕ್ಷಸುಮನಸ ಹವ್ಯಾಸಿ ಕಲಾರಂಗ(ರಿ)ಕೋಟ ಇವರಿಂದ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಮೈಂದ ದ್ವಿವಿದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಕಲಾವಿದ ರಾಮಚಂದ್ರ ಐತಾಳ್ ಗುಂಡ್ಮಿ ಅವರು ಮಾತನಾಡಿ ಯಕ್ಷಗಾನವು ಕೇವಲ ಮನೋರಂಜನೆಯ ವಸ್ತುವಲ್ಲ ಅದು ನಮಗೆ ಬದುಕಿನ ಪಾಠ ಕಲಿಸುವ ಒಂದು ಮಾನದಂಡ, ಪ್ರಸ್ತುತ…

Read More