ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಫ್ಲೈಓವರ್ ಹಾಗೂ ಇತರ ಕಾಮಗಾರಿಗಳ ವಿಳಂಬ ಧೋರಣೆ ವಿರೋಧಿಸಿ ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಪ್ರತಿಭಟನಾ ಸಭೆ ನಡೆಯಿತು. ಕೇಮಾರು ಸಾಂದೀಪನಿ ಮಠದ ಈಶ ವಿಠ್ಠಲದಾಸ ಸ್ವಾಮೀಜಿ ಮಾತನಾಡಿ ಹಿಂದೆ ರಾಜರ ಆಡಳಿತ ಇದ್ದಾಗ ಆತನಿಗೆ ಮಾತ್ರ ನಮಸ್ಕಾರ ಹಾಕಿದರೆ ಬೇಡಿಕೆಗಳು ಈಡೇರುತ್ತಿದ್ದವು. ಆದರೆ, ಈಗ ಶ್ರೀಸಾಮಾನ್ಯ ತನ್ನ ಬೇಡಿಕೆ ಹಾಗೂ ಹಕ್ಕುಗಳನ್ನು ಪಡೆದುಕೊಳ್ಳಲು ಹಳ್ಳಿಯಿಂದ ದಿಲ್ಲಿವರೆಗೂ ಹಲವು ಮಂದಿಯ ಕಾಲುಗಳನ್ನು ಹಿಡಿಯುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಸ್ವಾತಂತ್ರ್ಯ ಬಂದ ನಂತರ ಅಧಿಕಾರಿ ಹಾಗೂ ಜನಪ್ರತಿನಿಧಿ ಎನ್ನುವ ಎರಡು ವರ್ಗಗಳು ಮಾತ್ರ ಉದ್ಧಾರವಾಗಿವೆ, ಜನಸಾಮಾನ್ಯರ ಪರಿಸ್ಥಿತಿ ಹಾಗೆಯೇ ಇದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನರ ಸಮಸ್ಯೆಗಳ ಕುರಿತಂತೆ ಅರಿವು ಇಲ್ಲದೇ ಇರುವುದು ನೋವಿನ ವಿಚಾರ. ಯಂತ್ರಿತ ಸೌಲಭ್ಯಗಳನ್ನು ರದ್ದು ಮಾಡಿ ಜನಸಾಮಾನ್ಯರಂತೆ ಬದುಕುವುದನ್ನು ರೂಢಿಸಿಕೊಂಡಾಗ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯಲ್ಲಿ ಭಾನುವಾರ ನಡೆದ ಆಧಾರ್ ಕಾರ್ಡ್ ಆದಾಲತ್ನಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿವಿಧ ಭಾಗಗಳ ಸಾವಿರಾರು ಜನರು ಭಾಗವಹಿಸಿದ್ದರು. ಭಾನುವಾರ ಬೆಳಿಗ್ಗೆ 7ರ ವೇಳೆಗಾಗಲೇ ಹಳ್ಳಿ ಹಾಗೂ ನಗರ ಪ್ರದೇಶಗಳಿಂದ ಸಾವಿರಾರು ಜನರು ಬಂದಿದ್ದರು. ಗಂಡ, ಹೆಂಡತಿ ಹಾಗೂ ಮಕ್ಕಳ ಸಮೇತವಾಗಿ ಸಾರ್ವಜನಿಕರು ಬಂದಿದ್ದರಿಂದ ಅಂಚೆ ಕಚೇರಿಯ ಆವರಣ ಭರ್ತಿಯಾಗಿತ್ತು. ಜನರು ತಮ್ಮ ಅವಕಾಶಕ್ಕಾಗಿ ಕಚೇರಿ ಹೊರಗಿನ ಚಿಕ್ಕನ್ಸಾಲ್ ರಸ್ತೆಯಿಂದ ಮುಖ್ಯರಸ್ತೆಯ ಪುರಸಭಾ ಕಚೇರಿಯವರೆಗೂ ಸರದಿ ಸಾಲಿನಲ್ಲಿ ನಿಂತಿದ್ದರು. ನಿರೀಕ್ಷೆಗೂ ಮೀರಿ ಜನರು ಜಮಾಯಿ ಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಹರಸಾಹಸಪಟ್ಟರು. ಆಧಾರ್ ಕಾರ್ಡ್ನಲ್ಲಿನ ದೋಷ ಸರಿಪಡಿಸಿಕೊಳ್ಳಲು ಬಯಸಿ ಬಂದಿದ್ದ ನೂರಾರು ಜನರು ಅದಾಗಲೇ ಸೇರಿದ್ದ ಜನಸ್ತೋಮವನ್ನು ಕಂಡು ಬೆದರಿ, ಹಿಂತಿರುಗಿದರು. ‘ಪ್ರಾರಂಭದಲ್ಲಿ ಐದು ಯಂತ್ರಗಳನ್ನು ಹಾಕಲಾಗಿತ್ತು. ನಂತರ ಬಂದಿರುವ ಜನಸ್ತೋಮವನ್ನು ನೋಡಿ ಇನ್ನೂ ಎರಡು ಯಂತ್ರಗಳನ್ನು ಹೆಚ್ಚುವರಿಯಾಗಿ ಹಾಕಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ: ‘ಕೃಷಿಯಲ್ಲಿ ಆದಾಯ ಹೆಚ್ಚಿಸಲು ಮಣ್ಣಿನ ಸಂರಕ್ಷಣೆ, ಮಣ್ಣಿನ ಪರಿಶೀಲನೆ, ತೇವಾಂಶ, ನೀರಿನ ಶೇಖರಣೆ ಅಗತ್ಯ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್ ಹೇಳಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಬ್ರಹ್ಮಾವರ ಉಳ್ಳಾಲದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ಕೃಷಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೃಷಿ ಮೇಳದ ‘ಲಾಭದಾಯಕ ಸಮಗ್ರ ಕೃಷಿ ಪದ್ಧತಿ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ‘ಮಣ್ಣಿನ ಫಲವತ್ತತೆ ತಿಳಿದು ಕೃಷಿ ಮಾಡಿದಲ್ಲಿ ಲಾಭ ಪಡೆಯಬಹುದು. ಇದಲ್ಲದೇ ಕೃಷಿಯೊಂದಿಗೆ ಕುರಿ, ಕೋಳಿ, ಆಡು, ಹಂದಿ ಸಾಕಣೆಗೆ ಒತ್ತು ನೀಡಬೇಕು. ಅಡಿಕೆ, ಕಾಳು ಮೆಣಸು, ನೆಲಗಡಲೆ ಬೆಳೆಗಳನ್ನೂ ಭತ್ತ, ತೆಂಗು, ಬಾಳೆ, ಅಡಿಕೆಯೊಂದಿಗೆ ಬೆಳೆಯುವ ಮೂಲಕ ರೈತರು ಸಮಗ್ರ ಕೃಷಿಯತ್ತ ಚಿತ್ತ…
ಕುಂದಾಪ್ರ ಡಾಟ್ ಕಾಂ ವರದಿ. ಉಡುಪಿ: ಯುವಕರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಾಗ ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಮುಖಿಯಾಗಿ ಬದುಕುತ್ತಾರೆ. ಅಂತಹ ದೇಶ ಕಟ್ಟುವ ರಚನಾತ್ಮಕ ಕಾರ್ಯಗಳಲ್ಲಿ ಆಸಕ್ತರಾಗಿರುವ ಯುವ ಸಮೂಹವನ್ನು ಗುರುತಿಸಿ, ಒಗ್ಗೂಡಿಸಿ, ಅವರಿಗೆ ತರಬೇತಿ ನೀಡಿ ಸಮುದಾಯವನ್ನು ಜಾಗೃತವಾಗಿಸುವ ಬಹುದೊಡ್ಡ ಕಾರ್ಯದಲ್ಲಿ ನೆಹರು ಯುವ ಕೇಂದ್ರ ನಿರತವಾಗಿದೆ. ಇದಕ್ಕೆ ಪೂರಕವಾಗಿ ಉಡುಪಿ ಬ್ರಹ್ಮಗಿರಿಯಲ್ಲಿರುವ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಎಸ್.ಹೆಚ್.ಜಿ ತರಬೇತಿ ಸಂಸ್ಥೆ – ಪ್ರಗತಿ ಸೌಧದಲ್ಲಿ ಉಡುಪಿ ನೆಹರು ಯುವ ಕೇಂದ್ರದ ಸಾರಥ್ಯದಲ್ಲಿ ಅ.10 ಗುರುವಾರದಿಂದ ಆರಂಭಗೊಂಡಿರುವ 15 ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿ (National Youth Volunteer Induction Training) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಯುವ ಶಿಬಿರಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಉಡುಪಿಯ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ಈವರೆಗೆ ಹತ್ತು ಹಲವು ವಿಚಾರಗಳ ಬಗೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಯುವ ಸಂಘಗಳ ಭೇಟಿ, ಅಧ್ಯಯನ ಪ್ರವಾಸ, ಪ್ರವಾಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ 2019-20 ನೇ ಸಾಲಿನಲ್ಲಿ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ (Innovation), ತಾರ್ಕಿಕ (Scholastic) ಸಾಧನೆಗಳು, ಕ್ರೀಡೆ, ಸಾಂಸ್ಕೃತಿಕ, ಕಲೆ, ಸಂಗೀತ ಕ್ಷೇತ್ರಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿ ಪ್ರತಿಭಾ ಕ್ಷೇತ್ರದಿಂದ ಇಬ್ಬರಂತೆ ಒಟ್ಟು 8 ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಪ್ರತಿ ಮಗುವಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಮಕ್ಕಳ ವಯಸ್ಸು 5 ರಿಂದ 18 ವರ್ಷದೊಳಗಿರಬೇಕು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಮತ್ತೆ ಪ್ರಶಸ್ತಿ ನೀಡಲು ಅವಕಾಶವಿಲ್ಲ. ಪ್ರಶಸ್ತಿಗೆ ಆಯ್ಕೆಯಾಗುವ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಸಾಧನೆ ಅಸಾಧಾರಣವೆಂದು ಸಮರ್ಥಿಸಲು ಪೂರಕ ದಾಖಲೆಗಳನ್ನು ಒದಗಿಸಬೇಕು. ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿಗೆ ಅಕ್ಟೋಬರ್ 31…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೋಡಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಸೌಹಾರ್ದ ೨೦೧೯ರ ಸಮಾರೋಪ ಸಮಾರಂಭ ಕುಂದಾಪುರದ ಗಾಂಧಿ ಮೈದಾನದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಇಂದಿನ ಕ್ರೀಡಾಕೂಟದಲ್ಲಿ ಹಲವರು ಗೆದ್ದಿದಾರೆ, ಹಲವರು ಸೋತಿದ್ದಾರೆ. ಸೋತ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮುಂದಿನ ದಿನ ತಾವೆಲ್ಲರೂ ದೊಡ್ಡ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಎನ್ನುವುದರ ಮೂಲಕ, ಸೊಲೇ ಗೆಲುವಿನ ಸೋಪಾನ ಎಂದು ಸ್ಪೂರ್ತಿಯ ಮಾತುಗಳನ್ನು ನುಡಿದರು. ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಶ್ರೀಯುತ ಕೆ.ಎಮ್. ಅಬ್ದುಲ್ ರೆಹಮಾನ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ, ಕೋಡಿ ವಹಿಸಿಕೊಂಡಿದ್ದರು. ಹಾಗೆಯೇ ಮುಖ್ಯ ಅತಿಥಿಗಳಾಗಿ ಯಶಪಾಲ್ ಸುವರ್ಣ, ಅಧ್ಯಕ್ಷರು, ಜಿಲ್ಲಾ ಮೀನುಗಾರರ ಸಹಕಾರ ಸಂಘ, ಗಣೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಡವಿನಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಪೂರ್ಣಿಮಾ ಕೆ. ಎಸ್ ಅವರು ಶಾಲೆಗೆ ನೀಡಿರುವ ಸುದೀರ್ಘ ಅವಧಿಯ ಸೇವೆಯನ್ನು ಗುರುತಿಸಿ ಗೌರವಿಸಿ ಬೀಳ್ಕೊಟ್ಟರು. ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ಸಮುದಾಯ ಮತ್ತು ಶಾಲಾ ಎಸ್.ಡಿ.ಎಮ್.ಸಿ. ಯ ಪದಾಧಿಕಾರಿಗಳೊಂದಿಗೆ ಶಾಲಾ ಹಳೆವಿದ್ಯಾರ್ಥಿ ಸಂಘ ಹಾಗೂ ಪಾಲಕ ಬಂಧುಗಳು ಮತ್ತು ಅಂಗನವಾಡಿ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳೊಂದಾಗಿ ಅರಶಿಣ ಕುಂಕುಮವಿಟ್ಟು ನೆನಪಿನ ಕಾಣಿಕೆ ನೀಡಿ ದಂಪತಿಗಳಿಗೆ ಗೌರವಿಸಿ ಅವಿಸ್ಮರಣೀಯ ಬೀಳ್ಕೋಡುಗೆ ನೀಡಿದರು. ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಯ ಅಧ್ಯಕ್ಷೆ ಸುಜಾತ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯೆ ಗೌರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಕೃಷ್ಣ ಶೇರುಗಾರ್, ಹ.ವಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೂಡಬಿದಿರೆಯ ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕ ಡಾ. ಎಂ. ಮೋಹನ ಆಳ್ವ ಅವರನ್ನು ಪ್ರಸಕ್ತ ಸಾಲಿನ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಹಾಗೂ ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಹೇಳಿದರು. ಬೈಂದೂರು ಪ್ರೆಸ್ ಕ್ಲಬ್ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. ಅ.26ರ ಸಂಜೆ 3:30ಕ್ಕೆ ಇಲ್ಲಿನ ಕೊಲ್ಲೂರು ರಸ್ತೆಯಲ್ಲಿರುವ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ. ಜಗನ್ನಾಥ ಶೆಟ್ಟಿ ಸಭಾಭವನದಲ್ಲಿ ನಡೆಯುವ ಮಂಜಯ್ಯ ಶೆಟ್ಟಿ 106ನೆ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ಗಣ್ಯರನೇಕರು ಉಪಸ್ಥಿತರಿರುವರು. ಇದೇ ಸಮಾರಂಭದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜಂಟ್ಸ್ನ ವ್ಯವಸ್ಥಾಪಕ ನಿರ್ದೇಶಕ…
ಕುಂದಾಪ್ರ ಡಾಟ್ ಕಾಂ ವರದಿ. ಕೋಟ: ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಕಾರಂತ ಟ್ರಸ್ಟ್(ರಿ) ಕೋಟ ಇವರ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯುತ್ತಿರುವ ಡಾ|| ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಡಾ|| ಕಾರಂತ ಜನ್ಮ ದಿನೋತ್ಸವ ಸಂಭ್ರಮ ಸಾಹಿತ್ಯಿಕ-ಸಾಂಸ್ಕೃತಿಕ ಸುಗ್ಗಿ ಪುನರ್ವಸು-2019 (ಮಳೆಬಿಲ್ಲಿನ ಕನವರಿಕೆ) ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ಹಾಗೂ ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ(ರಿ) ಕೋಟ ಇವರು ತರಬೇತಿ ನೀಡಿರುವ ಒಟ್ಟು 200 ವಿದ್ಯಾರ್ಥಿಗಳು ರಚಿಸಿದ ಬೇಸಿಕ್ ಆರ್ಟ್, ಈಝಿ ಫ್ರೀ ಹ್ಯಾಂಡ್ ಸ್ಕೆಚ್ ಮತ್ತು ಆರ್ಟ್, ಪೆನ್ಸಿಲ್ ಆರ್ಟ್ ಮತ್ತು ಶೇಡಿಂಗ್ ಆರ್ಟ್, ಲ್ಯಾಂಡ್ ಸ್ಕೇಪ್ (ಪ್ರಕೃತಿ ಚಿತ್ರಣ), ಕ್ರಾಫ್ಟ್ ವರ್ಕ್ಸ್ ಮತ್ತು ಮಾಡೆಲ್ ಆರ್ಟ್, ಮಾಡರ್ನ್ ಆರ್ಟ್ ಮತ್ತು ಕ್ಯಾನ್ವಾಸ್ ಪೈಂಟಿಂಗ್ ಕಲಾತ್ಮಕ ವಿವಿಧ ಕಲಾಚಿತ್ರಗಳು ಪ್ರದರ್ಶನಕ್ಕೆ ಇದೆ. ಬಣ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ನೇತೃತ್ವದಲ್ಲಿ ನಡೆದ ಪ್ರಸಕ್ತ ಬ್ಯಾಂಕುಗಳ ಸನ್ನಿವೇಶ ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸ್ತುತ ಬ್ಯಾಂಕಿನ ವ್ಯವಹಾರದ ಬಗ್ಗೆ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಬ್ಯಾಂಕುಗಳ ಸ್ಥಾಪನೆ, ಅದರ ಕಾರ್ಯನಿರ್ವಹಣೆ, ಇತ್ತೀಚೆಗೆ ಸರ್ಕಾರಿ ಬ್ಯಾಂಕುಗಳ ವಿಲೀನಗೊಳಿಸಿದ್ದರ ಬಗ್ಗೆ ಅಭಿಪ್ರಾಯವನ್ನು ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ವೆಂಕಟರಮಣ ಹೆಗ್ಡೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಾಕರ್ ಪಿ. ಸ್ವಾಗತಿಸಿದರು. ವಿದ್ಯಾರ್ಥಿನಿ ಸುಜಾತ ಖಾರ್ವಿ ಪ್ರಾರ್ಥಿಸಿ, ಆಯಿಷಾ ನಮಿರಾ ಅತಿಥಿಗಳನ್ನು ಪರಿಚಯಿಸಿ, ಮೆಲಿಟಾ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಜ್ಯೋತಿ ಮೊಗವೀರ ವಂದಿಸಿದರು.
