ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡ ಮಾಡುವ ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಉಡುಪಿ ಜಿಲ್ಲೆಯಿಂದ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರಾಂಶುಪಾಲ ವಿಶ್ವನಾಥ ಎನ್. ಕರಬ, ಕುಂದಾಪುರ ವಲಯದ ಕೋಡಿ ಬ್ಯಾರಿಸ್ ಸಂಸ್ಥೆಯ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ, ಬೈಂದೂರು ವಲಯದ ಆಲೂರು-ಕಳಿಯ ಶ್ರೀಮತಿ ಜಿ. ಹೆಗಡೆ ಬ್ರಹ್ಮಾವರ ವಲಯದ ಮುಂಡಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದರು. ಹೊಸದುರ್ಗದಲ್ಲಿ ಇತ್ತಿಚಿಗೆ ನಡೆದ ರಾಜ್ಯ ಶೈಕ್ಷಣಿಕ ಸಮಾವೇಶದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಲ್ಲಿ ಹಳೆಯ ಪುಸ್ತಕಗಳಿದ್ದವು. ಹೊಸ ಕೃತಿಗಳ ಸಂಗ್ರಹವೂ ಇತ್ತು. ಕೃತಿಗಳತ್ತ ಕಣ್ಣು ಹಾಯಿಸಿ ಸಾಗುವವರು, ಹಾಗೆ ಸಾಗುತ್ತಲೇ ಇಷ್ಟವಾದ ಪುಸ್ತಕವನ್ನು ಕೈಗೆತ್ತಿಕೊಳ್ಳುವವರೂ ಇದ್ದರು. ಮಕ್ಕಳು, ಯುವಕರು, ಮಧ್ಯವಯಸ್ಕರು ಮತ್ತು ವಯೋವೃದ್ಧರು ಪುಸ್ತಕ ಪ್ರೀತಿಯೊಂದಿಗೆ ಅಲ್ಲಿದ್ದರು. ಸಾಹಿತ್ಯ, ಧರ್ಮ ಆಧ್ಯಾತ್ಮ, ಸಂಸ್ಕೃತಿ ಸೇರಿದಂತೆ ವಿವಿಧ ಬಗೆಯ ಕೃತಿಗಳ ರಾಶಿ ಎದ್ದುಕಾಣುತ್ತಿತ್ತು. ಮೂಡುಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಪ್ರಯುಕ್ತ ಆಯೋಜಿತವಾದ ಪುಸ್ತಕ ಮೇಳದ ವಿಶೇಷ ಚಿತ್ರಣವಿದು. ಇಲ್ಲಿ 10ಕ್ಕೂ ಹೆಚ್ಚು ಪುಸ್ತಕದ ಸ್ಟಾಲ್ಗಳಿದ್ದು ಪುಸ್ತಕ ಓದುಗರನ್ನು ಸೆಳೆಯುತ್ತಿವೆ. ಹಳೆಯ ಪುಸ್ತಕಗಳನ್ನು ನೋಡುವ ಕುತೂಹಲದೊಂದಿಗೆ ಹಲವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮಿಷ್ಟದ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪುಸ್ತಕಗಳು ಬಂದಿದ್ದರೆ ಖರೀದಿಸುವ ಇರಾದೆಯೊಂದಿಗೆ ಭಾಗವಹಿಸುವವರೂ ಇದ್ದಾರೆ. ಧರ್ಮ-ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳ ಸ್ಟಾಲ್ಗಳಲ್ಲಿ ಹಿರಿಯರು ಕಾಣಿಸಿಕೊಂಡರೆ ಎಲ್ಲಾ ಬಗೆಯ ಪುಸ್ತಕಗಳು ಲಭ್ಯವಿರುವ ಸ್ಟಾಲ್ಗಳ ಕಡೆಗೆ ಎಲ್ಲಾ ವಯೋಮಾನದವರು ಧಾವಿಸುತ್ತಿದ್ದಾರೆ. ಸಪ್ನಾ ಬುಕ್ ಹೌಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ನೀವು ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆ ಸೇರಿದಂತೆ ಮನೆಯಲ್ಲಿ ಮಾಡುವ ಎಲ್ಲಾ ದೋಸೆಯ ರುಚಿ ಸವಿದಿರುತ್ತೀರಿ. ಆದ್ರೆ ಈ ದೋಸೆಯಲ್ಲಿ 99 ಪ್ರಕಾರಗಳಿರೋದು ನಿಮಗೆ ಗೊತ್ತಾ? ಹೀಗೆ 99 ಬಗೆಯ ದೋಸೆ ತಯಾರಿಸುವ ಈ ಸ್ಟಾಲ್ ಇಡೀ ಆಹಾರಮೇಳದಲ್ಲಿ ಎಲ್ಲರನ್ನೂ ಸೆಳೆಯುತ್ತಿದೆ. ಸಾರ್ವಜನಿಕರು ಪ್ರತಿದಿನ ಈ ಸ್ಟಾಲ್ಗೆ ಭೇಟಿ ನೀಡಿ ತರಹೇವಾರಿ ದೋಸೆಗಳ ರುಚಿಯನ್ನು ಹಲವರು ಸವಿಯುತ್ತಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಆಹಾರ ಮೇಳದಲ್ಲಿ ಕಾರ್ಕಳದ ಕಿರಣ್ ಶೆಟ್ಟಿ ಇಷ್ಟೊಂದು ಬಗೆಯ ದೋಸೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ಜನರಿಗೆ ವಿಭಿನ್ನ ರುಚಿಯ ದೋಸೆಗಳನ್ನ ಪರಿಚಯಿಸುವ ಉದ್ದೇಶದಿಂದ ಆಹಾರ ಮೇಳದಲ್ಲಿ ಭಾಗಿಯಾಗಿದ್ದಾರೆ ಅವರು. ಅವರು ಕಣ್ಣೆದುರಿಗೇ ಸಿದ್ಧಪಡಿಸಿಕೊಡುವ ಪಿಜ್ಜಾ ದೋಸೆ, ಚೀಸ್ ದೋಸೆ, ಪನ್ನೀರ್ ಚೀಸ್ ದೋಸೆ ಎಲ್ಲರ ಫೇವರಿಟ್ ಎನ್ನಿಸಿವೆ. ಜನರಿಗೆ ಸಾಮಾನ್ಯವಾಗಿ ಹೊರಗಿನ ಆಹಾರ ತಿನ್ನಲು ರಾಸಾಯನಿಕಗಳ ಬಳಕೆಯಾಗಿರಬಹುದು ಎನ್ನುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಡಾ. ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಿ ಮನಸೆಳೆಯಿತು. ಪುತ್ತೂರಿನ ಅನೀಶ್ ವಿ. ಭಟ್ ಮತ್ತು ಬಳಗದ ಕಲಾವಿದರು ನೆರೆದಿದ್ದವರ ಮನಗೆದ್ದರು. ಆದಿ ತಾಳದಲ್ಲಿ ನಳಿನಕಂಠಿವರ್ಣ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ಬಳಿಕ ’ಮಾರಿವೆರೆ ಷಣ್ಮುಖಪ್ರಿಯ’, ಶುದ್ಧ ಧನ್ಯಾಸಿ, ಸುಬ್ರಹ್ಮಣ್ಯೇನ ಹಾಡುಗಳು ಆದಿತಾಳದಲ್ಲಿ ಹೊರಹೊಮ್ಮಿದವು. ಶ್ರೀ ಕಾಂತೀಮತಿಮ್ ಪದ್ಯವು ಹೇಮಾವತಿರಾಗ, ಆದಿತಾಳದಲ್ಲಿ ಮೂಡಿಬಂದಿತ್ತು. ಕೊನೆಗೆ ಮಿಶ್ರಪೀಲು ರಾಗ ಮತ್ತು ಮಿಶ್ರಛಾಪು ತಾಳದಲ್ಲಿ ರಾಘವಂಕರುಣಾಕರಂ ಗೀತೆಯು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅನೀಶ್ ವಿ ಭಟ್ ಶಾಸ್ತ್ರೀಯ ಸಂಗೀತದ ಸದ್ಯದ ಸ್ಥಾನಮಾನದ ಕುರಿತು ವಿಚಾರಗಳನ್ನು ಹಂಚಿಕೊಂಡರು. ಈಗಿನ ದಿನಗಳಲ್ಲಿ ಉತ್ತರ ಭಾರತದ ಸಂಗೀತ ಪ್ರಕಾರಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ದಕ್ಷಿಣ ಭಾರತದ ಸಂಗೀತ ಪ್ರಕಾರಗಳಿಗೆ ಅದೇ ಬಗೆಯ ಆದ್ಯತೆ ಇಲ್ಲ. ಕರ್ನಾಟಕದಲ್ಲಿಯೂ ಕರ್ನಾಟಕ ಶಾಸ್ತೀಯ ಸಂಗೀತಕ್ಕೆ ಅವಕಾಶಗಳು ಕಡಿಮೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಳಗಾವಿಯಲ್ಲಿ ಜರುಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಮೀನುಗಾರರ ನಿಯೋಗದೊಂದಿಗೆ ಭೇಟಿ ಮಾಡಿ ಕರಾವಳಿ ಜಿಲ್ಲೆಗಳ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ನೆರವಾಗುವಂತೆ ಮನವಿ ಮಾಡಿಕೊಂಡರು. ಈ ವೇಳೆ ಗಂಗೊಳ್ಳಿ ನಾಡ ದೋಣಿ ವಲಯ ಸಂಘಟನೆಯ ಅಧ್ಯಕ್ಷರಾದ ಯಶವಂತ್ ಖಾರ್ವಿ, ಮೀನುಗಾರ ಮುಖಂಡರಾದ ಗೋಪಾಲ್ ಖಾರ್ವಿ, ಹರೀಶ್ ಖಾರ್ವಿ, ಗಣಪತಿ ಖಾರ್ವಿ, ಮೊಗವೀರ ಸಮುದಾಯದ ಪ್ರಮುಖರಾದ ಹರೀಶ್ ತೋಳಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ, ಮಂಜುನಾಥ ಪೂಜಾರಿ ಮುಂತಾದವರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಹಾಗೂ ಶಾಲೆಯ ಆಗುಹೋಗುಗಳ ಬಗ್ಗೆ ಶಾಲೆಯ ಶಿಕ್ಷಕರೊಂದಿಗೆ ಚರ್ಚೆ ನಡೆಸುವುದರ ಜೊತೆಗೆ ತಮ್ಮಿಂದಾಗುವ ಸಹಕಾರ ಶಾಲೆಗೆ ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ವಿದ್ಯಾಭ್ಯಾಸದ ಸಾಧನೆ ಮೂಲಕ ಗುರುತಿಸಿಕೊಂಡಿರುವ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಶಾಲೆ ಅದ್ಭುತ ಪ್ರಗತಿ ಸಾಧಿಸಿದೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಯೋಗ ನರಸಿಂಹ ಸ್ವಾಮಿ ಕೆ.ಎಂ. ಹೇಳಿದರು. ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ಟೆಲ್ಲಾ ಮಾರಿಸ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಭಗಿನಿ ಡಯಾನ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ, ಸ್ಟೆಲ್ಲಾ ಮಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಡೋರಿನ್, ಸ್ಟೆಲ್ಲಾ ಮಾರೀಸ್ ಪ್ರಿ-ಪ್ರಿಪರೇಟರಿ ಶಾಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಸಹಜ ನಟನೆ ಹಾಗೂ ಹಾಸ್ಯದ ಮೂಲಕ ಜೀವನ ಪಾಠಗಳನ್ನು ಜನರಿಗೆ ತಲುಪುವುದು ಒಂದು ಅಧ್ಬುತ ಕಲೆ. ಹೀಗೆ ವಿಭಿನ್ನ ಪಾತ್ರಗಳೊಂದಿಗೆ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರು ಒಂದಿಷ್ಟೂ ಕದಲದಂತೆ ಸೆಳೆದದ್ದು ಫ್ರೆಂಡ್ಸ್ ಮಂಗಳೂರು ಮತ್ತು ಪ್ರಶಂಸಾ ಕಾಪು ತಂಡದ ’ತುಳುಹಾಸ್ಯ’ ಕಾರ್ಯಕ್ರಮ. ಮೂಡಬಿದ್ರೆಯ ಆಳ್ವಾಸ್ ಆವರಣದ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ೨೦೨೨ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಮೊದಲ ದಿನದಂದು ಕೃಷಿಸಿರಿ ವೇದಿಕೆಯಲ್ಲಿ ನಡೆದ ’ತುಳುಹಾಸ’ ಕಾರ್ಯಕ್ರಮ ನೆರೆದ ಜನ ಸಮೂಹವನ್ನು ನಗುವಿನ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಬಾಯಿ ತುಂಬ ನಗಬೇಕು ಎಂಬ ಹಾಡಿನೊಂದಿಗೆ ಉತ್ತಮ ಆರಂಭವನ್ನು ನೀಡಿದ ಪ್ರಶಂಸಾ ಕಾಪು ತಂಡದಲ್ಲಿ ಕಲಾವಿದರ ಪರದೆಯ ಹಿಂದಿನ ನಿಜವಾದ ಪರಿಶ್ರಮದ ವಿಚಾರ ಅಡಕವಾಗಿತ್ತು. ಮಕ್ಕಳಿಗೆ ಸೋಲನ್ನು ಎದುರಿಸಲು ಕಲಿಸಬೇಕು, ಅದುವೇ ಗೆಲುವಿನ ಹಾದಿಯೆಂಬ ಉತ್ತಮ ಸಂದೇಶವನ್ನು ನೀಡಿದವರು ಫ್ರೆಂಡ್ಸ್ ಮಂಗಳೂರು ತಂಡದ ಕಲಾವಿದರು. ಕಲಾ ತಂಡವನ್ನು ಮುನ್ನಡೆಸುವ ನಾಯಕನಿಗೆ ಇತರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ’ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹುದಲ್ಲ, ದಾಸನಾಗು ವಿಶೇಷನಾಗು’ ಎಂಬ ಅಂತರಂಗ ಶುದ್ಧಿಗೊಳಿಸುವ ಅರ್ಥಗರ್ಭಿತ ದಾಸರ ಸಾಲುಗಳು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಚ್ಚೊತ್ತಿದಂತಿತ್ತು. ಈ ಸಾಲುಗಳಿಗೆ ತಬಲ, ಕೀಬೋರ್ಡ್ನ ಸಾಥ್ ಸಿಕ್ಕರೆ ವಾಹ್… ಭಕ್ತಿಯ ಕಡಲಲ್ಲಿ ಮಿಂದೇಳಲು ಇನ್ನೇನು ಬೇಕು? ಹೀಗೆ ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದವರು ಬೆಂಗಳೂರಿನ ಎಂ.ಎಸ್. ಗಿರಿಧರ್ ಮತ್ತು ಬಳಗದ ’ದಾಸ ಸಿಂಚನ’ ತಂಡ. ಮೂಡಬಿದ್ರೆಯ ಆಳ್ವಾಸ್ ಜಾಂಬೂರಿಯ ಕೃಷಿಸಿರಿ ವೇದಿಕೆ ಇಂತಹದೊಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ’ಮುಸುರೆ ತೊಳೆಯಬೇಕು ಮನಸಿನ ಮುಸುರೆ ತೊಳೆಯಬೇಕು’ ಎಂಬ ಪುರಂದರದಾಸರ ಕೀರ್ತನೆಯನ್ನು ರಾಗದೊಂದಿಗೆ ಅನುಭವಿಸುವುದೇ ಚೆಂದ. ಪ್ರೇಕ್ಷಕರು ಒಕ್ಕೊರಲಿನಿಂದ ಹಾಡುಗಾರರ ಭಕ್ತಿ ಸುಧೆಯಲ್ಲಿ ಮಿಂದು ’ರಾಮ ಕೃಷ್ಣ ಗೋವಿಂದ ನಾರಾಯಣ’ ಎಂದಾಗ ಭಗವಂತನೇ ಇಲ್ಲಿ ನೆಲೆಸಿ ಹಾಡಿಸುತ್ತಿದ್ದಾನೆ ಎಂದು ಭಾಸವಾಗುತ್ತಿತ್ತು. ತಳ ಹಿಡಿದ ಪಾತ್ರೆಗಳನ್ನು ಹಸಿರ ಹುಲ್ಲಿನಿಂದ ಸ್ವಚ್ಛಗೊಳಿಸುವಂತೆ ಮನಸಿನ ಕಲ್ಮಶಗಳನ್ನು ಕಿತ್ತೊಗೆಯಲು ದೇವರ ನಾಮ ಸ್ಮರಣೆಯೊಂದೇ ದಾರಿ ಎಂಬ ಅರ್ಥಗರ್ಭಿತ ಮಾತುಗಳನ್ನು ದಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಶುಕ್ರವಾರ ನುಡಿಸಿರಿ ವೇದಿಕೆಯಲ್ಲಿ ’ಕೊಳಲು ವಾದನ ಜುಗಲ್ಬಂದಿ’ ಕಾರ್ಯಕ್ರಮ ನಡೆಯಿತು. ಬೆಂಗಳೂರಿದ ದೀಪಕ್ ಹೆಬ್ಬಾರ್ ಮತ್ತು ಸುನೀಲ್ ಕುಮಾರ್ ಕೊಳಲಿನ ನಾದಸ್ವರದ ಮೂಲಕ ಕೇಳುಗರ ಮನಸೂರೆಗೊಳಿಸಿದರು. ಕಾರ್ಯಕ್ರಮವನ್ನು ಕರ್ನಾಟಿಕ್ ಸಂಗೀತ ಪ್ರಕಾರದ ಹಂಸಧ್ವನಿ ರಾಗದಲ್ಲಿ ’ವಾತಾಪಿ ಗಣಪತಿ’ ಗೀತೆಯನ್ನು ಆದಿತಾಳದಲ್ಲಿ ಕೊಳಲಿನ ಮೂಲಕ ಪ್ರಸ್ತುತಪಡಿಸಿ ಆರಂಭಿಸಿದರು. ನಂತರ ಆದಿತಾಳದಲ್ಲಿ ’ವಾಚಿಸ್ಪತಿ’ ಹಾಗೂ ಕೊನೆಯಲ್ಲಿ ಮಧ್ಯಮವತಿ ತಾಳದಲ್ಲಿ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಗೀತೆಗಳು ಕೊಳಲ ನಾದದಲ್ಲಿ ಇಂಪಾಗಿ ಮೂಡಿಬಂದವು. ಮೃದಂಗದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ತಬಲದಲ್ಲಿ ಸುದತ್ತ ಶ್ರೀಪಾದರವರ ತನಿಯಾ ವರ್ತನ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು. ಒಂದೂವರೆ ಗಂಟೆಗಳ ಕಾಲ ನಡೆದ ಕೊಳಲು ವಾದನ ಜುಗುಲ್ಬಂದಿ ನೆರೆದಿದ್ದವರನ್ನು ತನ್ನಡೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಕೊಳಲಿಗೆ ಸಾಥ್ ನೀಡಿದ ತಬಲಾ ಹಾಗೂ ಮೃದಂಗ ಕಾರ್ಯಕ್ರಮದ ಮೆರುಗು ಹೆಚ್ಚುವಂತೆ ಮಾಡಿತ್ತು. ವರದಿ: ಪ್ರೀತಿ ಹಡಪದ, ದ್ವಿತೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋವರ್ಸ್ ಮತ್ತು ರೇಂಜರ್ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಜ್ಯೋತಿ ಆಚಾರ್ಯ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ, ಕೋವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಷ್ಟೀಯ ಶಿಕ್ಷಣ ನೀತಿಯಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು. ರೋವರ್ಸ್ ಲೀಡರ್ ಸತೀಶ್ ಶೆಟ್ಟಿ ಹೆಸ್ಕುತ್ತೂರು ಪ್ರಸ್ತಾವಿಸಿದರು. ರೇಂಜರ್ಸ್ ಲೀಡರ್ ಶ್ರೀಮತಿ ಅರ್ಪಣಾ ಶೆಟ್ಟಿ ಸ್ವಾಗತಿಸಿದರು, ಸ್ವಯಂ ಸೇವಕಿ ಪ್ರತಿನಿಧಿ ಆದರ್ಶ ನಾಯ್ಕ್ ಮತ್ತು…
